inspirational

ತಣ್ಣೀರು ಸ್ನಾನದ ಉಪಯೋಗಗಳು ಗೊತ್ತಾದ್ರೆ, ನೀವ್ ತಣ್ಣೀರು ಸ್ನಾನ ಮಾಡೋದಕ್ಕೆ ಶುರುಮಾಡ್ತೀರಾ..!

1311

ತಣ್ಣೀರು ಸ್ನಾನದಿಂದ ಆರೋಗ್ಯದ ಮೇಲಾಗುವ ಲಾಭ ಒಂದೆರಡಲ್ಲ. ನಿತ್ಯ ತಣ್ಣೀರು ಸ್ನಾನದಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು ಇವೆ. ತಣ್ಣೀರು ಸ್ನಾನ ಅಂದಾಕ್ಷಣ ಅನೇಕರು ಮಾರು ದೂರು ಓಡುತ್ತಾರೆ. ಆಯ್ಯೋ ಆಗಲ್ಲಪ್ಪಾ ತುಂಬಾ ಚಳಿ ಅನ್ನುತ್ತಾರೆ.

ಆದರೆ,ತಣ್ಣೀರಿನಿಂದ ಸ್ನಾನ ಮಾಡಿದರೆ ಹಸಿವು ಚೆನ್ನಾಗಿ ಆಗುತ್ತದೆ. ನಿದ್ರೆ ಬಂದು ಶರೀರದ ಆಯಾಸವನ್ನು ದೂರಮಾಡುತ್ತದೆ. ಚರ್ಮದ ರೋಗಗಳು ದೂರವಾಗುತ್ತದೆ. ಪ್ರತಿನಿತ್ಯ ತಣ್ಣೀರ ನೀರಲ್ಲಿ ಈಜಾಡುವುದು ಆರೋಗ್ಯಕರ. ಪೆಟ್ಟು ಬಿದ್ದಿರುವ ಶರೀರದ ಭಾಗವನ್ನು ತಣ್ಣೀರಲ್ಲಿ ಮುಳಿಗಿಸಿ ಮಾಲೀಷ್ ಮಾಡಿದರೆ ಬೇಗನೆ ಗುಣವಾಗುವುದು.

ತಣ್ಣೀರಿನಿಂದ ಸ್ನಾನ ಮಾಡಿದರೆ ಆರೋಗ್ಯದ ಮೇಲಾಗುವ ಲಾಭಗಳು…

  • ಬೇಸಿಗೆ ಕಾಲದಲ್ಲಿ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಆರಾಮ ಅನಿಸುತ್ತದೆ. ತುಂಬಾ ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತದೆ.
  • ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.

  • ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.ವಿಪರೀತಿ ಬೆವರುತ್ತಿದ್ದರೆ ಬೆವರನ್ನು ತಡೆಗಟ್ಟಲು ಕ್ರೀಮ್ ಹೆಚ್ಚುವ ಬದಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು ಇದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.
  • ರಕ್ತ ಪರಿಚಲನೆಯ ತೊಂದರೆ ಇರುವವರು ನಿತ್ಯವು ತಣ್ಣೀರು ಸ್ನಾನ ಮಾಡುವುದು ಒಳ್ಳೆದು, ಆರ್ಗನ್ ಗಳು ಮತ್ತು ತ್ವಚೆಯ ನಡುವೆ ಇರುವ ರಕ್ತ ಪರಿಚಲನೆ ಸಮಸ್ಯೆಯನ್ನು ತಣ್ಣೀರು ಸ್ನಾನ ಮಾಡುವುದರಿಂದ ದೂರಮಾಡುತ್ತದೆ.
  • ತಣ್ಣೀರು ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ.

  • ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ಬಿಳಿ ರಕ್ತಕಣಗಳು ಹೆಚ್ಚು ಕಾರ್ಯತತ್ಪರವಾಗಿ ವೈರಸ್ ವಿರುದ್ಧ ಹೋರಾಡುತ್ತದೆ.
  • ತಣ್ಣೀರು ದೇಹ ಅಧಿಕ ಕೊಬ್ಬನ್ನು ನಿವಾರಿಸಿ ನಿಮಗೆ ಸುಂದರ ಕಾಯವನ್ನು ನೀಡುತ್ತದೆ ಮತ್ತು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
  • ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ಶ್ವಾಸಕೋಶವನ್ನು ತೆರೆದು ಒಂದು ವಿಧದ ವ್ಯಾಯಮವನ್ನು ನೀಡುತ್ತದೆ.
  • ತಣ್ಣೀರು ಸ್ನಾನ ಮಾಡುವುದರಿಂದ ಮನಸ್ಸು ಪ್ರಪುಲ್ಲವಾಗುತ್ತದೆ. ಮತ್ತು ಒತ್ತಡ ನಿವಾರಣೆಯಾಗುತ್ತದೆ. ಹಾಗೂ ದೇಹದ ಚಟುವಟಿಕೆಯಿಂದ ಕೂಡಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ