Law

ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ 10 ವರ್ಷ ಜೈಲು ಶಿಕ್ಷೆ..!

242

ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆಯಾಗಿದೆ.

ಭದ್ರತಾ ಕಾರಣಗಳಿಗಾಗಿ ಬಾಬಾ ಬಂಧಿಯಾಗಿರುವ ರೋಹ್ಟಕ್ ಜೈಲಿನಲ್ಲೇ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು. ಶಿಕ್ಷೆಯ ಪ್ರಮಾಣ ವಿಚಾರದಲ್ಲಿ ತಮ್ಮ ತಮ್ಮ ವಾದ ಮಂಡಿಸಲು ಎರಡೂ ಕಡೆಯ ವಕೀಲರಿಗೆ ಅವಕಾಶ ನೀಡಲಾಯಿತು.

ರೋಹ್ತಕ್ ಜೈಲಿನಿಂದಲೇ ಸಂಜೆ 3.20ರ ವೇಳೆಗೆ ಬಾಬಾ ರಾಮ್ ರಹೀಂಗೆ ಶಿಕ್ಷೆ ಪ್ರಮಾಣವನ್ನು ನ್ಯಾಯಾಧೀಶ ಜಗದೀಪ್ ಸಿಂಗ್ ಪ್ರಕಟಿಸಿದರು.

ಬಾಬಾನಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಪಂಚಕುಲಾದ ಸಿಬಿಐ ಕೋರ್ಟ್, 250 ಕಿಲೋಮೀಟರ್ ದೂರದ ರೋಹ್ಟಕ್‍ನ ಸೊನಾರಿಯಾ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಆಗಿತ್ತು. ನ್ಯಾಯಾಧೀಶ ಜಗದೀಪ್ ಸಿಂಗ್ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ ಜೈಲಿಗೆ ಆಗಮಿಸಿದ್ದರು.

ತಮ್ಮ ವಾದ ಮಂಡಿಸಿದ ಸರ್ಕಾರಿ ವಕೀಲರು, ಬಾಬಾಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಅತ್ತ, ಬಾಬಾ ಪರ ವಕೀಲರು ಬಾಬಾ ಮಾಡಿರುವ ಸಮಾಜ ಕಲ್ಯಾಣ ಕಾರ್ಯಗಳನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಮನವಿ ಸಲ್ಲಿಸಿದರು.

ನ್ಯಾಯಮೂರ್ತಿಗಳಿಂದ ಶಿಕ್ಷೆ ಪ್ರಕಟ :-

ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರು, ಐಪಿಸಿ ಸೆಕ್ಷನ್ 376, 506, 511ರ ಪ್ರಕಾರ, ಶಿಕ್ಷೆಯನ್ನು ಪ್ರಕಟಿಸಿದರು. ಐಪಿಸಿ ಸೆಕ್ಷನ್ 376ರ ಪ್ರಕಾರ ಅತ್ಯಾಚಾರ, ಸೆಕ್ಷನ್ 506ರ ಪ್ರಕಾರ ಜೀವ ಬೆದರಿಕೆ ಹಿನ್ನೆಲೆಯಲ್ಲಿ 10 ವರ್ಷ ಜೈಲು ವಾಸವನ್ನು ವಿಧಿಸಲಾಯಿತು.

ತೀರ್ಪಿನ ಹಿನ್ನಲೆಯಲ್ಲಿ ಜೈಲಿನ ಸುತ್ತ ಮುತ್ತಾ  ಭದ್ರತಾ ವ್ಯವಸ್ಥೆ:-                                    
ತೀರ್ಪಿನ ಹಿನ್ನಲೆಯಲ್ಲಿ ರೋಹ್ಟಕ್ ಜೈಲಿನ ಸುತ್ತ ಏಳು ಸುತ್ತಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಜೈಲಿನಿಂದ 10 ಕಿಲೋ ಮೀಟರ್ ದೂರದವರೆಗೂ 17 ಸಾವಿರಕ್ಕೂ ಹೆಚ್ಚು ಸೇನಾ ಹಾಗೂ ಅರೆಸೇನಾ ಭದ್ರತಾ ಸಿಬ್ಬಂದಿ, ಪೊಲೀಸರನ್ನು ನೇಮಿಸಲಾಗಿತ್ತು. ಜೈಲಿನ ಸುತ್ತಮುತ್ತಾ ನಿಷೇಧಾಜ್ಞೆ ಜಾರಿಯಾಗಿದ್ದು, ಜಿಲ್ಲಾಧಿಕಾರಿ ಅವರು ಕಂಡಲ್ಲಿ ಗುಂಡಿಗೆ ಆದೇಶ ನೀಡಿದ್ದರು.

ಹರಿಯಾಣದಾದ್ಯಂತ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಸೋನೆಪತ್ ಬಳಿ ಬಾಬಾ ಬೆಂಬಲಿಗರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಬಡಿಗೆ, ಕಬ್ಬಿಣದ ಸರಳು, ಚೈನು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಇದೂವರೆಗೂ 150ಕ್ಕೂ ಹೆಚ್ಚು ಬಾಬಾನ ಪುಂಡ ಭಕ್ತರನ್ನು ಬಂಧಿಸಿರುವ ಪೊಲೀಸರು ಸಿರ್ಸಾ ಆಶ್ರಮದೊಳಗೆ ಇನ್ನೂ 10 ಸಾವಿರ ಬಾಬಾ ಬೆಂಬಲಿಗರಿದ್ದು, 24 ಗಂಟೆಯೊಳಗೆ ಖಾಲಿ ಮಾಡುವಂತೆ ಖಡಕ್ ಸೂಚನೆ ಕೂಡ ನೀಡಲಾಗಿದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ