ಗ್ಯಾಜೆಟ್

ಟೆಲಿಕಾಂ ಕಂಪನಿಗಳಲ್ಲಿ ಮತ್ತೆ ಶುರುವಾಯ್ತು ನಡುಕ !!! ಏನಿದು ಜಿಯೋ ಬಂಪರ್ ಆಫರ್ ???

123

ರಿಲಾಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಅತೀ ಶೀಘ್ರದಲ್ಲೇ ಸಂಚಲನ ಮೂಡಿಸಲಿದೆ. ಮಾಧ್ಯಮಗಳ ವರದಿಯನ್ವಯ ಇನ್ನು ಕೆಲವೇ ತಿಂಗಳಲ್ಲಿ ಜಿಯೋ ಫೈಬರ್ ಮೂಲಕ 100 ಜಿಬಿ ಡೇಟಾವನ್ನು ನೀಡಲಿದೆ ಎಂದು ತಿಳಿದು ಬಂದಿದ್ದು, ಇದಕ್ಕೆ ಕೇವಲ 500 ರೂಪಾಯಿ ಪಾವತಿಸಬೇಕಲಾಗುತ್ತದೆ.

 

ಸದ್ಯ ಕಂಪೆನಿ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಆದರೆ ಮಾಧ್ಯಮಗಳು ಇಂತಹುದ್ದೊಂದು ವರದಿ ಪ್ರಸಾರ ಮಾಡಿದ್ದು ದೀಪಾವಳಿಗೂ ಮೊದಲು ಈ ಆಫರ್’ನ್ನು ಬಿಡುಗಡೆ ಮಾಡಲಿರುವುದಾಗಿಯೂ ತಿಳಿಸಿದೆ.

 

ಕಳೆದ ವರ್ಷ ಸೆಪ್ಟೆಂಬರ್’ನಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ತನ್ನ ಆಫರ್’ನಿಂದ ಬಿರುಗಾಳಿ ಎಬ್ಬಿಸಿತ್ತು. ಉಚಿತ 4ಜಿ ಸಿಮ್ ನೀಡುವುದರೊಂದಿಗೆ ಉಚಿತ ಕರೆ ಹಾಗೂ ಇಂಟರ್ನೆಟ್ ಸೇವೆಯ ಆಕರ್ಷಕ ಆಫರ್ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯ ರೂಪು ರೇಷೆಯನ್ನೇ ಬದಲಾಯಿಸಿತ್ತು. ಇಲ್ಲಿ ಓದಿ :-ಈ ಸಲದ ಐಸಿಸಿ ಚಾಂಪಿಯನ್ಸ್ ಬಹುಮಾನದ ಮೊತ್ತ ಎಷ್ಟು ಕೋಟಿ ಗೊತ್ತಾ ???

ಹೀಗಾಗಿ ಇತರ ಟೆಲಿಕಾಂ ಕಂಪೆನಿಗಳು ಕೂಡಾ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹಲವಾರು ಬಗೆಯ ಡೇಟಾ ಇಂಟರ್ನೆಟ್ ಸೇವೆಯೊಂದಿಗೆ ಉಚಿತ ಕರೆಗಳ ಆಫರ್ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.

 

 

ಸದ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಜಿಯೋ ಈ ಕೆಳಗಿನ ಆಫರ್ ನೀಡಲಿದೆ :-

  • ರಿಲಾಯನ್ಸ್ ಜಿಯೋ ಇನ್ಫೋಕಾಮ್ ದೀಪಾವಳಿ ಸಂದರ್ಭದಲ್ಲಿ ತನ್ನ ಹೋಂ ಬ್ರಾಡ್ ಬ್ಯಾಂಡ್ ಸರ್ವಿಸ್- ಜಿಯೋ ಫೈಬರ್’ನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ.
  • ಸದ್ಯ ಕೆಲ ಸ್ಥಳಗಳಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದಾರೆ.
  • ಕಂಪೆನಿ ಕೇವಲ 500 ರೂಪಾಯಿಗೆ 100 ಜಿಬಿ ಡೇಟಾ ನೀಡುವ ಸಾಧ್ಯತೆಗಳಿವೆ.
  • ಮುಂದಿನ ತಿಂಗಳು ಪ್ರಯೋಗ ನಡೆಸುವ ಪಟ್ಟಣಗಳ ಸಂಖ್ಯೆ ಹೆಚ್ಚಿಸಲಿದೆ.
  • ದೀಪಾವಳಿಗೂ ಕೆಲ ದಿನಗಳ ಮೊದಲು ಇದನ್ನು ಬಿಡುಗಡೆಗೊಳಿಸಲಾಗುತ್ತದೆ.
  • ಈ ಮೂಲಕ 100 ಪಟ್ಟಣಗಳನ್ನು ಒಂದುಗೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ