ಸ್ಪೂರ್ತಿ

ಜನರ ಮನ ಗೆದ್ದಿರುವ ಸರಿಗಪಮ ಲಕ್ಷ್ಮಿ ರಾಮಪ್ಪರವರ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸತ್ಯ ಏನು ಗೊತ್ತಾ..?

1059

ಹೌದು, ಬಡತನದಲ್ಲಿ ಅರಳಿದ ಪ್ರತಿಭೆಗಳು ನಮ್ಮ ರಾಜ್ಯದಲ್ಲಿ ಹಾಗು ದೇಶದಲ್ಲಿ ತುಂಬಾನೇ ಜನ ಇದ್ದಾರೆ ಅವರಲ್ಲಿ ಈ ಲಕ್ಷಿ ಕೂಡ ಒಬ್ಬರು ಅನ್ನಬಹುದು. ನಮ್ಮ ನೆಲದ ಸೊಗಡು ಅಥವಾ ನಮ್ಮ ನೆಲದ ಸಂಸ್ಕೃತಿಯ ಮೂಲ ಅಂದರೆ ಅದುವೇ ಜಾನಪದ ಎಂಬುದಾಗಿ ಹೇಳಲಾಗುತ್ತದೆ. ಅಂತಹ ಜಾನಪದ ಸೊಗಡು ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗು ಹಳ್ಳಿಗಳಲ್ಲಿ ಕಾಣಬಹುದು.

ಹಾಡುಗಾರಿಕೆಯ ಪ್ರತಿಭೆಗಳನ್ನು ಗುರಿತಿಸುವಲ್ಲಿ ಅದೆಷ್ಟೋ ಖಾಸಗಿ ಚಾನಲ್ ಗಳು ವೇದಿಕೆಯನ್ನು ಮಾಡಿ ಕೊಟ್ಟಿವೆ. ಅಂತಹ ಚಾನಲ್ಗಳಲ್ಲಿ ಕನ್ನಡದ ಜೀ ಕನ್ನಡ ವಾಹಿನಿ ಕೂಡ ಒಂದು. ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸೀಸನ್ 14 ಸ್ಪರ್ಧೆಯಲ್ಲಿ ಲಕ್ಷ್ಮಿ ಜನಪದ ಗೀತೆ ಹಾಡುವ ಮೂಲಕ ತೀರ್ಪುಗಾರರ, ಹಾಗು ಜನರ ಮನ ಗೆದ್ದಿದ್ದಾಳೆ.

ಯಾರೂ ಈ ಲಕ್ಷ್ಮಿ…

ಲಕ್ಷ್ಮಿಯ ಹುಟ್ಟೂರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ. ತಂದೆ ರಾಮಪ್ಪ ಮತ್ತು ತಾಯಿ ಸಂಗೀತಾ. ಕೂಲಿಯೇ ಕುಟುಂಬಕ್ಕೆ ಜೀವನಾಧಾರ. ಸ್ವಂತ ಜಮೀನು ಇಲ್ಲ. ಆಕೆ ತನ್ನ ಊರಿನಲ್ಲಿರುವ ಎಸ್‌.ಎಂ.ಎಸ್. ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ. ಆಕೆ ಹಾಡುವುದರಲ್ಲಷ್ಟೇ ಮುಂದಿಲ್ಲ. ಓದಿನಲ್ಲಿಯೂ ಮುಂದಿದ್ದಾಳೆ. ಚಿತ್ರಕಲೆಯಲ್ಲಿಯೂ ಆಕೆಗೆ ಆಸಕ್ತಿ ಇದೆ.

ತನ್ನ ಮಗಳು ಸರಿಗಮಪ ಸ್ಪರ್ಧೆಯಲ್ಲಿ ಹಾಡಬೇಕು ಅನ್ನೋದು ತಂದೆ ತಾಯಿಯರ ಕನಸು ಕೂಡ ಆಗಿತ್ತು. ಇದರ ಸಲುವಾಗಲಿ ಬೆಂಗಳೂರಿಗೆ ಬಂದಿದ್ದರು ಆದರೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಟುಡಿಯೋದ ಸ್ಥಳ ಅವರಿಗೆ ಗೊತ್ತಾಗಲಿಲ್ಲದ ಕಾರಣ ಮರಳಿ ವಾಪಸ್ ಹೋಗುತ್ತಾರೆ.

ತನ್ನ ಪ್ರತಿಭೆಯನ್ನು ಗುರುತಿಸಿ ಕೊಳ್ಳಲು ಒಂದು ಒಳ್ಳೆ ಅವಕಾಶವನ್ನು ಜೀ ವಾಹಿನಿ ಮಾಡಿದೆ. ಲಕ್ಷ್ಮಿ ಹಾಡಿದಂತ ಹಾಡು ಯಾವ ದೇಶದ ಗಂಡು ಇವನು ರಂಗಿಲಾಲಾ ಜನಪದ ಗೀತೆ ಕೆಲವೇ ಸೆಕೆಂಡ್‌ಗಳಲ್ಲಿ ತೀರ್ಪುಗಾರರ ಕಣ್ಣು ತೆರೆಸಿತು. ಅಲ್ಲದೆ ಜನರ ಮನದಲ್ಲಿ ಲಕ್ಷ್ಮಿ ಉಳಿಯುವಂತೆ ಮಾಡಿತು.

ಕಲಿತಿದ್ದು ಹೇಗೆ..?

ಲಕ್ಷ್ಮಿ ತಾನು ಮೂಲ ಸಂಗೀತದ ಹಿನ್ನಲೆಯಿಂದ ಬಂದಿದವಳಲ್ಲ ಆದರೂ ತಾನು ಮೊಬೈಲ್ನಲ್ಲಿ ಈ ಹಾಡುಗಳನ್ನು ಕೇಳಿ ಹಾಡೋದನ್ನ ಕಲಿತಿದ್ದಾಳೆ. ಹಾಗು ಇದರ ಕುರಿತು ಲಕ್ಷ್ಮಿ ಹೇಳುವುದು ಹೀಗೆ…

ನಾನು ಟಿವಿ ವಾಹಿನಿಯಲ್ಲಿ ಹಾಡುತ್ತಿರುವುದು ನನಗೆ ತುಂಬಾನೇ ಖುಷಿ ಕೊಟ್ಟಿದೆ ಹಾಗು ನಮ್ಮ ಅಪ್ಪ ಅಮ್ಮ ನವರ ಕನಸು ನನಸಾಗಿದಿದೆ ಎಲ್ಲರ ಕಡೆಯಿಂದಲ್ಲೂ ನನಗೆ ಉತ್ತಮ ಪ್ರೋತ್ಸಾಗಳು ಬರುತ್ತಿವೆ ಅನ್ನುತ್ತಾಳೆ ಲಕ್ಷ್ಮಿ. ಅದೇನೇ ಇರಲಿ ಬಡತನದಲ್ಲಿ ಇಂತಹ ಒಂದು ಪ್ರತಿಭೆ ಹರಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯೇ ಅನ್ನಬಹದು.

ಈ ಲಕ್ಷಣಗಳಿರೋ ಹುಡುಗ ಸಿಕ್ಕಿದ್ರೆ ಬಿಗಬಾಸ್ ಡಾಲ್ ನಿವೇದಿತಾ ಗೌಡ ಮದುವೆ ಆಗ್ತಾರಂತೆ..!ತಿಳಿಯಲು ಈ ವಿಡಿಯೋ ನೋಡಿ…

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವವರಿಗೆ ಎಚ್ಚ್ಚರಿಕೆ, ನಿಮ್ಮ ಜೀವಕ್ಕೆ ದೊಡ್ಡ ಅಪಾಯ.

    ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಿಂದಿನ ಕಾಲದಲಿ ಮೊಬೈಲ್ ಫೋನ್ ಗಳು ಇರಲಿಲ್ಲ ಮತ್ತು ಜನರು ಯಾರ ಬಳಿ ಆದರೂ ಮಾತನಾಡಬೇಕು ಅಂದರೆ ಲ್ಯಾಂಡ್ ಲೈನ್ ಅಥವಾ ಅಂಚೆ ಕಚೇರಿಯ ಮೊರೆ ಹೋಗುತ್ತಿದ್ದರು, ಆದರೆ ಈಗ ಒಬ್ಬ ವ್ಯಕ್ತಿ ಎಷ್ಟೇ ದೂರ ಇದ್ದರು ಆತನ ಜೊತೆ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ. ಇನ್ನು ಕೆಲವು ಮೊಬೈಲ್…

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ ಕಾರಣಗಳಿಗಾಗಿ ಪ್ರತೀದಿನ ತಪ್ಪದೇ ಬಾಳೆಹಣ್ಣು ತಿನ್ನಲೇಬೇಕು…

    ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ. ಬೊಜ್ಜು ನಿಯಂತ್ರಿಸುತ್ತದೆ :- ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , 5000 ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರುಢಪಟ್ಟಿದೆ….

  • ಆರೋಗ್ಯ

    ನೀವು ತಿನ್ನುವ ಆಹಾರ ಹೇಗೆ ವಿಷವಾಗಿ ಪರಿವರ್ತನೆ ಆಗುತ್ತದೆ ಗೊತ್ತಾ?ಅದಕ್ಕೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರಗಳು…

    ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ. ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಆಹಾರವು ವಿಷವಾಗುವ ಪರಿಣಾಮ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಆಹಾರ ವಿಷವಾಗುವುದು ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ….

  • ಸುದ್ದಿ

    ಮಹಾಮಳೆಯ ಆರ್ಭಟಕ್ಕೆ ಉತ್ತರ ತತ್ತರ ..!

    ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ. ಮನೆ, ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಕ್ಕುರುಳುತ್ತಿವೆ. ರಸ್ತೆಗಳು ಬಿರುಕು ಬಿಡುತ್ತಿದ್ದು, ಗುಡ್ಡಗಳು ಹೊರಳಿ ಬೀಳುತ್ತಿವೆ. ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವವರ ಕಣ್ಣೀರು, ಗೋಳಾಟ ಕೇಳಿದರೆ ಹೊಟ್ಟೆ ಉರಿಯುತ್ತದೆ. ಪ್ರವಾಹದ ಎದುರು ಈಜಲಾಗದು,…

  • ಸುದ್ದಿ

    ‘ಕಾರ್ಗಿಲ್‌’ ಮೀನುಗಳ ಕಾಟ ; ಗಗನಕ್ಕೇರಿದ ಮೀನಿನ ಬೆಲೆ,.!!

    ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ವಿಷಯವೂ  ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರ್ಗಿಲ್‌ ಮೀನಿನ ಕಾಟವು  ಮುಂದುವರೆದಿದೆ ಇದರಿಂದ  ಮಂಗಳೂರಿನ ಕಡಲ ತೀರದಲ್ಲಿ ಕಂಡಿದ್ದ ಕಾರ್ಗಿಲ್ ಮೀನುಗಳು, ಕಳೆದೊಂದು ವಾರದಿಂದ ಗಂಗೊಳ್ಳಿ ಮೀನುಗಾರರಿಗೂ ಬಾಧಿಸಿದ್ದು, ಈ ಭಾಗದ ಮೀನುಗಾರರಲ್ಲಿ ಆತಂಕ ಉಂಟು  ಮಾಡಿದೆ. ಗಂಗೊಳ್ಳಿ ಬಂದರಿಗೂ ಕಾರ್ಗಿಲ್ ಮೀನುಗಳು ವ್ಯಾಪಿಸುತ್ತಿವೆ. ಹೀಗಾಗಿ, ಮೀನುಗಾರರು ಕಾರ್ಗಿಲ್‌ ಮೀನುಗಳನ್ನು ಬೇರ್ಪಡಿಸುವಲ್ಲಿ ತೊಡಗಿಕೊಂಡಿದ್ದು, ಬಂಗುಡೆ, ಬೂತಾಯಿ ಹಾಗೂ ಇತರೆ ಮೀನುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಲಕ್ಷದ್ವೀಪ, ಹವಳದ ದಿಬ್ಬಗಳಲ್ಲಿ ಹೆಚ್ಚು ವಾಸಿಸುವ…

  • ಉಪಯುಕ್ತ ಮಾಹಿತಿ

    ಹಾವು,ಚೇಳು ಕಚ್ಚಿದ್ರೆ, ತಕ್ಷಣ ಮನೆಯಲ್ಲಿರುವ ಇದನ್ನು ಕುಡಿಯಿರಿ..!ಉಪಯುಕ್ತ ಮಾಹಿತಿ ತಿಳಿಯಿರಿ, ಮತ್ತೆ ನಿಮ್ಮವರಿಗೂ ಶೇರ್ ಮಾಡಿ ಉಪಯೋಗವಾಗಲಿ…

    ಹಾವು, ಚೇಳು ಕಚ್ಚಿದರೆ ಏನು ಮಾಡಬೇಕು ಎಂಬುದೇ ನಮಗೆ ಗೊತ್ತಾಗಲ್ಲ. ಯಾಕೆಂದರೆ ಅಂತಹ ಸಂದರ್ಭಗಳಲ್ಲಿ ಯಾರೇ ಆದರೂ ಗಾಬರಿ ಬೀಳುವುದು ಸಾಮಾನ್ಯ.ಆದರೆ ನೀವು ಗಾಬರಿ ಬೀಳುವ ಆಗಿಲ್ಲ.ಆದರೆ ಇದಕ್ಕೆ ಮನೆಯಲ್ಲೇ ಪರಿಹಾರ ಇದೆ.