ಹಣ ಕಾಸು

ಚಿಲ್ಲರೆ ಅಭಾವ ತಪ್ಪಿಸಲು ಅತೀ ಶೀಘ್ರದಲ್ಲಿ ಬರಲಿವೆ 200 ರುಪಾಯಿ ನೋಟುಗಳು!

324

ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗಳು ಎಎನ್`ಐಗೆ ನೀಡಿರುವ ಮಾಹಿತಿ ಪ್ರಕಾರ, 200 ರೂಪಾಯಿಯ ಮುದ್ರಣಕ್ಕೆ ಈಗಾಗಲೇ ಆದೇಶ ಹೊರಬಿದ್ದಿದೆ. ಇದೀಗ ನೋಟಿನ ಹೊಸ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು, ಮುದ್ರಣಾಲಯಕ್ಕೆ ನೋಟಿನ ವಿನ್ಯಾಸವನ್ನು ನೀಡಿಲಾಗಿದೆ ಎಂದು ಹೇಳಲಾಗುತ್ತಿದೆ.

 

ನವೆಂಬರ್ 8ರಂದು ಕೇಂದ್ರ ಸರಕಾರ ಅಪನಗದೀಕರಣ ಘೋಷಿಸಿತ್ತು. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಇದರಿಂದ ಚಾಲ್ತಿಯಲ್ಲಿದ್ದ 17.9 ಲಕ್ಷ ಕೋಟಿ ಬೆಲೆಯ ಶೇಕಡಾ 86ರಷ್ಟು ನೋಟುಗಳು ಅಮಾನ್ಯವಾಗಿದ್ದವು.

ನಂತರ ಕೇಂದ್ರ ಸರಕಾರ ಹೊಸ 2000 ಮುಖಬೆಲೆಯ ಹಾಗೂ 500 ಮುಖಬೆಲೆಯ ನೋಟನ್ನು ಜಾರಿಗೆ ತಂದಿತ್ತು. 2000 ರೂ. ನೋಟಿಗೆ ವ್ಯಾಪಕ ಚಿಲ್ಲರೆ ಅಭಾವ ಎದುರಾದ ಪರಿಣಾಮ ಹೆಚ್ಚುವರಿಯಾಗಿ 100 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು.

ಹೊಸದಾಗಿ ಚಲಾವಣೆ ಬರಲಿವೆ ಎನ್ನಲಾಗುತ್ತಿರುವ 200 ರೂ. ನೋಟುಗಳು ಪ್ಲಾಸ್ಟಿಕ್ ನೋಟ್ ಆಗಿರಲಿದ್ದು, ನಕಲು ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ 200 ರೂ ನೋಟು ದೇಶಾದ್ಯಂತ ಸೃಷ್ಟಿಯಾಗಿರುವ ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡಲಿದೆ ಎನ್ನಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ, ಸ್ಪೂರ್ತಿ

    ವಿದೇಶಿ ಉದ್ಯೋಗವನ್ನ ಬಿಟ್ಟು ಬಂದು, ಈ ಒಂದು ಪ್ಲಾನ್ ನಿಂದ ಲಕ್ಷಾಧಿಪತಿಯಾದ ರೈತ, ಆ ಪ್ಲಾನ್ ಏನು ಗೊತ್ತಾ.

    ಮನುಷ್ಯ ಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದರೆ ಅದಕ್ಕೆ ಕಾರಣ ಆತನ ಸೂಕ್ಷ್ಮವಾದ ಬುದ್ದಿ ಮತ್ತು ಆತನ ಸೂಕ್ಷ್ಮ ಅವಲೋಕನೆ ಆಗಿದೆ. ಜೀವನದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಮ್ಮನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಅಥವಾ ನಮ್ಮನ್ನ ಪಾತಾಳಕ್ಕೆ ತಳ್ಳಬಹುದು, ಆದರೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ಯೋಚನೆಗಳು ನಮ್ಮ ಜೀವನವನ್ನ ಬದಲಾವಣೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ನಾವು ಹೇಳುವ ಈ ವ್ಯಕ್ತಿ 4 ಲಕ್ಷ ಸಂಬಳದ ಉದ್ಯೋಗವನ್ನ ಬಿಟ್ಟು…

  • ಸರ್ಕಾರಿ ಯೋಜನೆಗಳು

    ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಇಂದಿರಾ ಸಾರಿಗೆ ನಂತರ ಈಗ ಪಿಂಕ್ ಆಟೋಗಳು..!ತಿಳಿಯಲು ಈ ಲೇಖನ ಓದಿ..

    ಈ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶದಲ್ಲಿ ಪಿಂಕ್ ಬಸ್ ರೋಡಿಗೆ ಇಳಿದಿವೆ. ಬೆಂಗಳೂರಿನಲ್ಲಿ ಇಂದಿರಾ ಸಾರಿಗೆ ಆಯಿತು ಇದೀಗ ಪಿಂಕ್ ಆಟೋ ಮಹಿಳೆಯಾರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ.

  • govt

    ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ

    ಬೆಂಗಳೂರು:ಗೃಹಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದ್ದು,  ಒಟ್ಟು ಅಂದಾಜು ಸರಾಸರಿ 13ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. ಬೆಸ್ಕಾಂ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದ್ದು, ಗೃಹಬಳಕೆದಾರರ ಸರಾಸರಿ ಒಂದು ವರ್ಷದ ವಿದ್ಯುತ್  ಬಳಕೆಯ ಪ್ರಮಾಣವನ್ನು  ಪಡೆದುಕೊಂಡ ಬಳಿಕ ಉಚಿತವಾಗಿ ವಿದ್ಯುತ್ ಪ್ರಮಾಣವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿಒಟ್ಟು 2.16 ಕೋಟಿ ಗ್ರಾಹಕರಿದ್ದು, ಈ ಪೈಕಿ 200 ಯೂನಿಟ್‌…

  • ಆರೋಗ್ಯ

    ಕರ್ಜೂರದಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಕರ್ಜೂರ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ ….ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಪ್ರತಿನಿತ್ಯ ಎದುರಿಸುವ ಆಧುನಿಕ ಬದುಕಿನ ಗೋಜಲು ಗದ್ದಲಗಳಿಗೂ ಹುಟ್ಟಿದ ಜನ್ಮರಾಶಿಗಳಿಗೂ ಒಂದು ನಿಕಟ ಸಂಬಂಧ ಇದೆ ಎಂಬುದು ಲಕ್ಷಾಂತರ ಜನರ ನಂಬಿಕೆ. ಪ್ರಪಂಚದಾದ್ಯಂತ ನಿತ್ಯ ರಾಶಿಗಳ ಆಧಾರದ ಮೇಲೆ ದಿನವನ್ನು ಎದುರುಗೊಳ್ಳುವ ಸಂಪ್ರದಾಯವಿದೆ. ಬದುಕಿನ ಭವಿಷ್ಯವನ್ನು ಒಟ್ಟು 12 ರಾಶಿಗಳ ಆಧಾರದ ಮೇಲೆ ಹೇಳಿಕೊಂಡು ಬರಲಾಗುತ್ತಿದೆ…. ಈ ಹಿನ್ನೆಲೆಯಲ್ಲಿ ಇದು ನಿತ್ಯ ಭವಿಷ್ಯ. ನಿಮ್ಮ ನಿಮ್ಮ ರಾಶಿಯ ಫಲಾಫಲವನ್ನು ವಯೋಮಾನಕ್ಕೆ ಅನುಗುಣವಾಗಿಯೂ ಇಲ್ಲಿ ನೀಡಲಾಗಿದೆ. ದಿನ ಆರಂಭಕ್ಕೆ ಉತ್ತಮ ಮಾರ್ಗದರ್ಶಿ ಇದು. ಮೇಷ… ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…