ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
 
            ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.

ಕೋಳಿಮಾಂಸದ ಅಂಗಡಿಗೆ ಹೋದಾಗ ಅಂಗಡಿಯವರು ಸ್ಕಿನ್ ಔಟ್ ಅಥವಾ ಸ್ಕಿನ್ ಬರ್ನ್ ಮಾಡಬೇಕೇ ಎಂದು ಕೇಳುತ್ತಾರೆ. ಇದರ ಅರ್ಥ ಚರ್ಮವನ್ನು ಉಳಿಸಬೇಕೇ ಬೇಡವೇ ಎಂದು. ಕೆಲವರು ಚರ್ಮವನ್ನು ಉಳಿಸಿ ಎಂದು ಹೇಳುತ್ತಾರೆ.

ಆಗ ಪುಕ್ಕವನ್ನು ನಿವಾರಿಸಿ ಚರ್ಮಸಹಿತ ಮಾಂಸವನ್ನು ನೀಡುತ್ತಾರೆ. ಚರ್ಮ ಬೇಡವೆನ್ನುವವರು ಇದರಲ್ಲಿ ಕೊಬ್ಬು ಇದೆ, ಇದರಲ್ಲಿ ಕೊಲೆಸ್ಟ್ರಾಲ್ ಇದೆ, ಇದು ಹೃದಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಗಳನ್ನು ನೀಡುತ್ತಾರೆ.

ಕೊಬ್ಬಿನ ಬಗ್ಗೆ ಅರಿಯುವುದಾದರೆ ಒಂದು ಔನ್ಸ್ ನಷ್ಟು ಚರ್ಮದಲ್ಲಿ ಕೇವಲ ಎಂಟು ಗ್ರಾಂ ಅಪರ್ಯಾಪ್ತ ಕೊಬ್ಬು ಮತ್ತು ಮೂರು ಗ್ರಾಂ ಪರ್ಯಾಪ್ತ ಕೊಬ್ಬು ಇದೆ.
ಚರ್ಮದಲ್ಲಿ ಯಾವ ಬಗೆಯ ಕೊಬ್ಬು ಇದೆ? ಚರ್ಮವನ್ನು ಪರೀಕ್ಷಿಸಿದ ತಜ್ಞರಿಗೆ ಇದರಲ್ಲಿ ಮೋನೋ ಅಪರ್ಯಾಪ್ತ ಕೊಬ್ಬು (ಅಥವಾ ಓಲಿಕ್ ಅಮ್ಲ) ಕಂಡುಬಂದಿದೆ. ಈ ಆಮ್ಲದ ಹೆಗ್ಗಳಿಕೆ ಎಂದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಅಂದರೆ ಇದುವರೆಗೆ ನಾವು ಹೆದರಿದಂತೆ ಹೃದಯ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಕಡಿಮೆಗೊಳಿಸುತ್ತದೆ. ಅಲ್ಲದೇ ದೇಹದಲ್ಲಿ ಹಾರ್ಮೋನುಗಳ ಪ್ರಮಾಣವನ್ನೂ ನಿಯಂತ್ರಿಸುತ್ತದೆ.

ಕೋಳಿಮಾಂಸ ತಿನ್ನುವವರು ಕ್ಯಾಲೋರಿಗಳ ಬಗ್ಗೆ ಭಾರೀ ಚಿಂತಾಕ್ರಾಂತರಾಗಿರುತ್ತಾರೆ. ಆದರೆ ಚರ್ಮಸಹಿತ ಮತ್ತು ಚರ್ಮರಹಿತ ಮಾಂಸದಲ್ಲಿ ಕ್ಯಾಲೋರಿಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಚರ್ಮಸಹಿತ ಮಾಂಸದಲ್ಲಿ ಕೆಲವೇ ಕ್ಯಾಲೋರಿಗಳು ಹೆಚ್ಚಿರುತ್ತವೆ ಅಷ್ಟೇ.

ಇನ್ನೊಂದು ಉತ್ತಮ ಗುಣವೆಂದರೆ ಚರ್ಮಸಹಿತ ಮಾಂಸ ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಚರ್ಮರಹಿತ ಮಾಂಸ ಎಣ್ಣೆಯನ್ನು ಹೆಚ್ಚಾಗಿ ಹೀರಿಕೊಳ್ಳುವ ಕಾರಣ ಅಡುಗೆಯ ಸಮಯದಲ್ಲಿ ಹೆಚ್ಚಿನ ಎಣ್ಣೆಯನ್ನು ಹಾಕಬೇಕಾಗುತ್ತದೆ.
ಆದರೆ ಚರ್ಮಸಹಿತ ಮಾಂಸವನ್ನು ಹೆಚ್ಚು ತಿನ್ನಬಹುದೇ? ತಜ್ಞರ ಪ್ರಕಾರ ಇಲ್ಲ! ಏಕೆಂದರೆ ಚರ್ಮದ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಚರ್ಮದ ಪ್ರಮಾಣ ಮಿತವಾಗಿರುವುದು ತುಂಬಾ ಅಗತ್ಯ.

ಚರ್ಮಸಹಿತ ಮಾಂಸ ಸೇವಿಸಿದರೆ ಕೊಂಚ ಪ್ರಮಾಣಕ್ಕೇ ತೃಪ್ತಿಯಾಗುವ ಕಾರಣ ಹೆಚ್ಚಿನ ಪ್ರಮಾಣ ಸೇವಿಸುವ ಅಗತ್ಯವಿಲ್ಲ. ಆದರೆ ಚರ್ಮರಹಿತ ಮಾಂಸ ತಿಂದರೆ ಎಷ್ಟು ತಿಂದರೂ ತೃಪ್ತಿ ಸಿಗದ ಕಾರಣ ಹೆಚ್ಚು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ.

ಒಂದು ವೇಳೆ ನೀವು ಮಾಂಸವನ್ನು ಹುರಿಯುವುದಾದರೆ ಚರ್ಮ ಗರಿಗರಿಯಾಗುವಷ್ಟು ಹುರಿಯಬೇಡಿ. ಏಕೆಂದರೆ ಕಪ್ಪಗಾದ ಚರ್ಮ ಎಲ್ಲಾ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳುತ್ತದೆ ಹಾಗೂ ಕಪ್ಪಗಾದ ಭಾಗ ಇಂಗಾಲಕ್ಕೆ ಪರಿವರ್ತನೆಗೊಂಡು ಆರೋಗ್ಯಕ್ಕೆ ಮಾರಕವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ : ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್ ಸಿ, ಬಿ6, ಕ್ಯಾಲ್ಷಿಯಂ, ಐರನ್ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ. ಕಲ್ಲಂಗಡಿ ಸಿಪ್ಪೆ : ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್ ಎಂಬ ಅಮಿನೊ…
ಡಾಕ್ಟರ್ ಆಗಬೇಕು ಎಂದು ಅಂದುಕೊಂಡಿದ್ದ ದಕ್ಷಿಣ ಭಾರತದ ಟಾಪ್ ನಟಿ ಸೌಂದರ್ಯ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಭಾರತದ ಚಿತ್ರರಂಗದಲ್ಲಿ ತನ್ನದೇ ಸಾಧನೆಯನ್ನ ಮಾಡಿದ್ದ ನಟಿ ಅಂದರೆ ಅದೂ ಸೌಂದರ್ಯ ಎಂದು ಹೇಳಿದರೆ ತಪ್ಪಾಗಲ್ಲ. ಡಾಕ್ಟರ್ ಆಗಬೇಕು ಅಂದುಕೊಂಡಿದ್ದ ಒಬ್ಬ ಹುಡಗುಗಿ ದಕ್ಷಿಣ ಭಾರತದ ಟಾಪ್ ನಟಿಯಾಗಿ ಬೆಳೆದರು, ಇನ್ನು ನಟಿ ಸೌಂದರ್ಯ ಅವರು ಅಭಿನಯ ಮಾಡಿರುವ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದ್ದವು ಆಗಿನ ಕಾಲದಲ್ಲಿ. ನಟಿ ಸೌಂದರ್ಯ ಅವರು ಕನ್ನಡ ಮಾತ್ರವಲ್ಲದೆ…
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…
ಇಂದು ಬುಧವಾರ 07/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ನರೇಂದ್ರ ಮೋದಿ ಭಾರತದ ನಾಯಕರಾದ ನಂತರ ಬೇರೆ ದೇಶಗಳು ಭಾರತವನ್ನು ನೋಡುವ ರೀತಿ ಈಗ ಬದಲಾಗಿದೆ. ಭಾರತವನ್ನು ತಿರುಕರ ದೇಶ, ಹಾವಾಡಿಗರ ದೇಶ ಎಂದೆಲ್ಲಾ ಹೀಯಾಳಿಸುತ್ತಿದ್ದ ಕಾಲವೊಂದಿತ್ತು. ಆದ್ರೆ ಈಗ ಹಾಗಿಲ್ಲ. ಏಕೆಂದ್ರೆ ಹಿಗಂತೂ ಭಾರತ ಅಭಿವೃದ್ದಿಯತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಭಾರತದ ನಾಯಕನ ಮಾತಿಗೆ ಬೇರೆ ದೇಶಗಳು ಕೇಳುವ ಹಾಗಿದೆ.
ಇದೆಲ್ಲಾ ಕೇವಲ ನಮ್ಮ ದೇಶದಲ್ಲಿ ಮಾತ್ರ ನಡೆಯುತ್ತೆ. ಇದನ್ನೆಲ್ಲಾ ಓದಿದರೆ ನಾವು ಮಾಡುತ್ತಿರುವುದೆಲ್ಲ ನಿಜವೆನಿಸುತ್ತದೆ!!!