ಜೀವನಶೈಲಿ

ಚಾಣಕ್ಯನ ಪ್ರಕಾರ ಇಂತಹ ಸಮಯಗಳಲ್ಲಿ ಸ್ನಾನ ಮಾಡಲೆಬೇಕಂತೆ! ಏಕೆ ಗೊತ್ತಾ?ಮುಂದೆ ಓದಿ…

5106

ಸ್ನಾನ ಮಾಡುವ ವಿಷಯಕ್ಕೆ ಬಂದ್ರೆ ಕೆಲವರು ದಿನಾ ಮತ್ತೆ ಕೆಲವರು ಅವರವರ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ನಮಗೆ ಕೆಲಸಗಲಿರಲಿ ಬೇರೆ ಏನಾದ್ರೂ ಇರಲಿ ಪ್ರತಿನಿತ್ಯ ಸ್ನಾನ ಮಾಡುವುದು ಒಳಿತು.

ಆಚಾರ್ಯ ಚಾಣಕ್ಯ ಹೇಳಿರುವ ಪ್ರಕಾರ ಪ್ರತಿ ನಿತ್ಯ ಸ್ನಾನ ಮಾಡುವುದರಿಂದ ಶರೀರ ಶುದ್ಧವಾಗುವುದರ ಜೊತೆಗೆ ಅನೇಕ ರೀತಿಯ ರೋಗಗಳು ಹತ್ತಿರ ಸುಳಿಯದೆ ಇರುತ್ತವೆ. ಹಾಗೂ ಶರೀರದ ಆರೋಗ್ಯದ ಜೊತೆಗೆ ಮನಸ್ಸು ಸಹ ಉಲ್ಲಾಸದಿಂದಿದ್ದು ನೆಮ್ಮದಿ ದೊರೆಯುತ್ತದೆ.

ಆಚಾರ್ಯ ಚಾಣಕ್ಯ ಹೇಳಿರುವ ಪ್ರಕಾರ ತೊಂದರೆ ಏನೇ ಇದ್ದರೂ ಕೆಲವು ಸಂದರ್ಭಗಳಲ್ಲಿ ಸ್ನಾನ ಮಾಡಲೇಬೇಕು.

ಕಟ್ಟಿಂಗ್ ಮಾಡಿಸಿಕೊಂಡ ನಂತರ :-

ಕೂದಲು ಕತ್ತರಿಸಿಕೊಂಡನಂತರ ಶರೀರದ ಮೇಲೆ ಅಂಟಿಕೊಂಡಿರುವ ಸಣ್ಣ ಕೂದಲುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಆದುದರಿಂದ ಕಟ್ಟಿಂಗ್ ಮಾಡಿಸಿಕೊಂಡ ಒಡನೆಯೇ ಸ್ನಾನ ಮಾಡಬೇಕು.

ಸ್ಮಶಾನದಿಂದ ಬಂದ ಮೇಲೆ
ಯಾರಾದರು ಮರಣ ಹೊಂದಿದಾಗ ಅವರ ಮತದ ಸಂಪ್ರದಾಯದಂತೆ ದಹನ ಅಥವ ಖನನ ಮಾಡುತ್ತಾರೆ. ನಾವು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇ ಬೇಕು. ಯಾಕೆಂದರೆ, ಸತ್ತ ವ್ಯಕ್ತಿ ನಮಗೆ ಎಷ್ಟೇ ಹತ್ತಿರದವರಾದರೂ ಅದು ಮೃತ ದೇಹವೇ. ಅದರಲ್ಲಿ ಕೆಲವು ಕ್ರಿಮಿ ಕೀಟಗಳು ಇದ್ದೇ ಇರುತ್ತವೆ. ಅವು ನಮ್ಮ ಶರೀರಕ್ಕೂ ಅಂಟಿಕೊಂಡಿರಬಹುದು. ಆದುದರಿಂದ ಸ್ನಾನ ಮಾಡಲೇಬೇಕು.

ರತಿಕ್ರಿಯೆ ನಂತರ:-
ದಂಪತಿಗಳು ರತಿಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಮರೆಯದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯಾಕೆಂದರೆ ಅದು ಒಂದು ಪವಿತ್ರ ದೈವ ಕಾರ್ಯವಾದುದರಿಂದ,ತಪ್ಪದೆ ಸ್ನಾನ ಮಾಡಲೇಬೇಕು. ಸ್ನಾನ ಮಾಡದೆ ಮನೆಯಿಂದ ಹೊರಗೆ ಹೋಗಬಾರದಂತೆ.

ಅಭ್ಯಂಜನ ನಂತರ:-
ಪ್ರತಿಯೊಬ್ಬರೂ ವಾರಕ್ಕೆ ಒಮ್ಮೆಯಾದರೂ ಶರೀರಕ್ಕೆ ಎಣ್ಣೆ ಬಳಿದುಕೊಂಡು, ಮಸಾಜ್ ಮಾಡಿಕೊಂಡ ನಂತರ ತಪ್ಪದೆ ಸ್ನಾನ ಮಾಡಬೇಕು. ಮಸಾಜ್ ಮಾಡಿಕೊಂಡ ನಂತರ ತಡಮಾಡದೆ ಸ್ನಾನ ಮಾಡಬೇಕು . ಯಾಕೆಂದರೆ ಎಣ್ಣೆ ಮಸಾಜ್ ಮಾಡಿದರೆ ಚರ್ಮದ ಸೂಕ್ಷ್ಮ ರಂದ್ರಗಳು ತೆರೆದುಕೊಂಡು ವಿಷಪದಾರ್ಥಗಳು ಹೊರಗೆ ಬಂದಿರುತ್ತವೆ. ಆದುದರಿಂದ ತಡಮಾಡದೆ ಸ್ನಾನ ಮಾಡಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ