ವಿಜ್ಞಾನ

ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆ 15 ನಿಮಿಷ,..!

37

ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ.

ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಸಿಗ್ನಲ್‌ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿ. ಮೀ.ವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆ ಎಂದು ಘೋಷಿಸಿದರು.

ಮೋದಿ ವೀಕ್ಷಣೆ:  ಇಸ್ರೋದ ಕೌತುಕ ಕ್ಷಣವನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದರು. ವಿಜ್ಞಾನಿಗಳ ಜತೆ ಕೂತು ವೀಕ್ಷಿಸಿದರು. ಸಿಗ್ನಲ್ ಕಡಿತಗೊಂಡ ಬಳಿಕ ವಿಜ್ಞಾನಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ನಮ್ಮ ವಿಜ್ಞಾನಿಗಳು ದೇಶದ ಹೆಮ್ಮೆ. ನಿಮ್ಮೊಂದಿಗೆ ನಾವಿದ್ದೇವೆ. ಮುಂದೆ ಹೆಜ್ಜೆ ಹಾಕೋಣ ಎಂದು ಹೇಳಿದರು. ಬಳಿಕ ಚಂದ್ರಯಾನ ವೀಕ್ಷಿಸಲು ಆಗಮಿಸಿದ್ದ ಮಕ್ಕಳ ಜತೆ ಸಂವಾದ ನಡೆಸಿದರು.ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಮೇಲೆ ಸಾಫ್ಟ್‌ಲ್ಯಾಂಡಿಂಗ್ ಮಾಡುವುದು ರೋಚಕ ಮತ್ತು ಭಯಾನಕ ಕ್ಷಣವಾಗಿದ್ದು, ಇದೊಂದು ರೀತಿ ಮಗುವನ್ನು ತೊಟ್ಟಿಲಿನಲ್ಲಿ ಹಾಕುವ ರೀತಿಯ ಪ್ರಕ್ರಿಯೆಯಾಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದರು. ಹೀಗಾಗಿ ವಿಜ್ಞಾನಿಗಳಲ್ಲಿ ವಿಶ್ವಾಸವಿದ್ದರೂ ಎಲ್ಲೋ ಒಂದು ಕಡೆ ಆತಂಕವೂ ಇತ್ತು.

ಏನಾಯ್ತು? :ಚಂದ್ರನ ಮೇಲ್ಮೈನಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡುತ್ತಿದ್ದ ಲ್ಯಾಂಡರ್ ಅನ್ನು ತಡರಾತ್ರಿ 1.35ಕ್ಕೆ ಇಳಿಸುವ ರಫ್ ಬ್ರೇಕಿಂಗ್ ಹಂತವನ್ನು ನೆರವೇರಿಸಲಾಯಿತು. ನಂತರ 10 ನಿಮಿಷಗಳ ನಂತರ 7 ಕಿ.ಮೀ. ಎತ್ತರಕ್ಕೆ ಇಳಿಸುವ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಡೆಯಿತು. ನಂತರ ಲೋಕಲ್ ನೇವಿಗೇಶನ್ ಆರಂಭವಾಗಿ, ಲ್ಯಾಂಡರ್ ಪೋಟೋವನ್ನು ಇಸ್ರೋಗೆ ಕಳುಹಿಸುವ ಪ್ರಕ್ರಿಯೆ ನಡೆಯಬೇಕಿತ್ತು. ಬಳಿಕ ಲ್ಯಾಂಡರ್ ಚಂದ್ರನ ಮೇಲೆ ನಿಧಾನವಾಗಿ ಇಳಿಯಬೇಕಿತ್ತು. ಆದರೆ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಂತರ ಲ್ಯಾಂಡರ್ ಸಂಪರ್ಕ ಕಡಿದುಹೋಯಿತು. ಇಸ್ರೋ ಟಿವಿ ಮಾನಿಟರ್‌ಗಳಲ್ಲಿ ಲ್ಯಾಂಡರ್ ನಿರ್ದಿಷ್ಟ ಪಥ ಬಿಟ್ಟು ಬೇರೆಡೆ ಚಲಿಸಿದ ಬಗ್ಗೆ ಕಾಣಿಸುತ್ತಿತ್ತು. ಈ ವೇಳೆ ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ಕೆಲ ಹೊತ್ತು ಕಾದರೂ ಸಂಪರ್ಕ ಸಿಗಲಿಲ್ಲ. ಆಗ ಇಸ್ರೋ ಅಧ್ಯಕ್ಷ ಶಿವನ್ ಅವರು ಸಿಗ್ನಲ್ ಕಡಿತಗೊಂಡಿದೆ. ಡೇಟಾ ವಿಶ್ಲೇಷಿಸುತ್ತೇವೆ ಎಂದು ಹೇಳಿದರು.

ಜು.22ರಂದು ಆಂಧ್ರದ ಶ್ರೀಹರಿಕೋಟ ನೆಲೆಯಿಂದ ಜಿಎಸ್ ಎಲ್‌ವಿ ರಾಕೆಟ್ ಮೂಲಕ ಚಂದ್ರಯಾನ-2 ನೌಕೆ ಉಡಾವಣೆಯಾಗಿತ್ತು. ಈ ನೌಕೆಯಲ್ಲಿ ಆರ್ಬಿಟರ್, ರೋವರ್ ಅನ್ನು ಒಡಲಲ್ಲಿಟ್ಟುಕೊಂಡ ಲ್ಯಾಂಡರ್ ಇದ್ದವು. ಸೆ.2ರಂದು ಗಣೇಶ ಹಬ್ಬದ ದಿನದಂದು ಆರ್ಬಿಟರ್ ಹಾಗೂ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು

ಸಾಫ್ಟ್ ಲ್ಯಾಂಡಿಂಗ್ ಆಗ ಹುಟ್ಟಿದ ಮಗುವಿದ್ದಂತೆ: ಸಾಫ್ಟ್‌ಲ್ಯಾಂಡಿಂಗ್ ನಮಗೆ ಹೊಸದಾದ ಹಾಗೂ ಸಂಕೀರ್ಣತೆಯ ಪ್ರಕ್ರಿಯೆ. 15 ನಿಮಿಷವು ನಮಗೆ ಭಯಾನಕ. ಇದೊಂದು ರೀತಿ ಯಾರೋ ಒಬ್ಬರು ಆಗಷ್ಟೇ ಹುಟ್ಟಿದ ಮಗುವನ್ನು ಅನಿರೀಕ್ಷಿತವಾಗಿ ನಿಮ್ಮ ಕೈಗೆ ಇಟ್ಟಂತೆ. ಅಗತ್ಯದ ಸಹಾಯವಿಲ್ಲದೆ ಮಗುವನ್ನು ಎತ್ತಿಕೊಳ್ಳಲು ನಿಮ್ಮಿಂದ ಸಾಧ್ಯವೇ? ಸಹಾಯವಿಲ್ಲದೆ ಮಗುವನ್ನು ಎತ್ತಿಕೊಂಡರೆ, ಆ ಕಡೆಯಿಂದ ಈ ಕಡೆಗೆ ಮಗು ಅಲ್ಲಾಡುತ್ತದೆ. ಅದಕ್ಕಾಗಿ ಮಗುವನ್ನು ನಾವು ಹಿಡಿದಿಟ್ಟುಕೊಳ್ಳಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಸರ್ಕಾರಿ ಯೋಜನೆಗಳು

    ಇಂದಿರಾ ಕ್ಯಾಂಟೀನ್ ಆಯ್ತು. ಈಗ “ಇಂದಿರಾ ಕ್ಲಿನಿಕ್” ಶುರು!ಇಲ್ಲಿ ಏನೆಲ್ಲಾ ಉಚಿತ ಸೇವೆ ಸಿಗಲಿದೆ ಗೂತ್ತಾ..?

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಇಂದು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಯ ಬಳಿಕ, ಗಾರ್ಮೆಂಟ್ಸ್ ಮಹಿಳೆಯರಿಗೆ, ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದರು. ಈ ಬಳಿಕ ಇದೀಗ, ಇಂದಿರಾ ಕ್ಲಿನಿಕ್ ಆರಂಭಗೊಂಡಿದೆ. ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿವೆ.

  • corona

    ಕೋಲಾರ ಜಿಲ್ಲೆ ಯಲ್ಲಿ ವಾರದೊಳಗೆ 78ಸಾವಿರ ಮಕ್ಕಳಿಗೆ ಉಚಿತ ಲಸಿಕೆ

    ಜಿಲ್ಲೆಯಾದ್ಯಂತ 15ರಿಂದ18ವರ್ಷದ 78,357 ಮಕ್ಕಳಿದ್ದು ಒಂದು ವಾರದೊಳಗೆ ಉಚಿತ ಲಸಿಕೆ ಹಾಕುವ ಮೂಲಕ ಅಭಿಯಾನ ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜ.3ರಿಂದ 15ರಿಂದ18 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಮೊದಲ ದಿನ 2600ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆ ಯಲ್ಲಿ 15ರಿಂದ18 ವರ್ಷದ ಮಕ್ಕಳ ಸಂಖ್ಯೆ ಕೋಲಾರ:- 23,381 ಬಂಗಾರಪೇಟೆ:-10,662 ಕೆಜಿಎಫ್:- 11,231 ಮಾಲೂರು:- 11,743…

    Loading

  • ಆಯುರ್ವೇದ, ಆರೋಗ್ಯ

    ಜೇನುತುಪ್ಪದ ಆರೋಗ್ಯಕರ ಗುಣಗಳು

    ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್…

  • ವೀಡಿಯೊ ಗ್ಯಾಲರಿ

    ಕಾಲೇಜು ದಾರಿಯಲ್ಲಿ ಆ ಹುಡುಗ ಹುಡುಗಿ ಮಾಡಿದ್ದೇನು..?ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…

    ಅದು ಕಾಲೇಜಿಗೆ ಹೋಗುವ ರಸ್ತೆ.ಆ ರಸ್ತೆಯ ತುಂಬಾ ಕಾಲೇಜು ಹುಡುಗ ಹುಡುಗಿಯರೇ ಓಡಾಡುತ್ತಿರುತ್ತಾರೆ.ಇದ್ದಕ್ಕಿದ್ದಂತೆ ಯುವಕನೋರ್ವ ಬಂದು ಕಾಲೇಜು ಯುವತಿಗೆ ತಾಳಿ ಕಟ್ಟುತ್ತಾನೆ.ಆ ರಸ್ತೆಯಲ್ಲಿ ಓಡಾಡುತ್ತಿರುವ ಎಲ್ಲ್ಲಾ ಕಾಲೇಜು ಹುಡುಗ ಹುಡುಗಿಯರು ನೋಡುತ್ತಿರುವನ್ತಯೇ ತಾಳಿ ಕಟ್ಟುತ್ತಾನೆ. ಆದರೆ ಅಚ್ಚರಿ ಏನಂದ್ರೆ ಆ ಹುಡುಗಿ ಇದಕ್ಕೆ ಯಾವುದೇ ಪ್ರತಿರೋದ ಮಾಡೋದಿಲ್ಲ. ಹೀಗಾಗಿ ಅವರಿಬ್ಬರೂ ಪ್ರೇಮಿಗಳೇ ಆಗಿರಬಹುದು ಎಂದು ಹೇಳಲಾಗಿದೆ.ಈ ವಿಡಿಯೋದಲ್ಲಿ ತಮಿಳು ಭಾಷೆ ಕೇಳುತ್ತಿರುವ ಕಾರಣ ಇದು ತಮಿಳುನಾಡಿನಲ್ಲಿ ನಡೆದಿದೆ ಎಂದು ಹೇಳಬಹುದು.. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್…

  • ಸುದ್ದಿ

    ನಾವು ಸಹ ಮಂಗಳ ಗ್ರಹಕ್ಕೆ ಹೋಗಬಹುದು ; ಇಲ್ಲಿದೆ ನೋಡಿ ಪೂರ್ತಿ ಮಾಹಿತಿ,.!!

    ಮಂಗಳಗ್ರಹಕ್ಕೆ ನೀವು ಹೋಗಲು ಇಚ್ಚಿಸುವಿರಾ..? ಅಂತರಿಕ್ಷಕ್ಕೆ ತೆರಳಲು ತುಂಬಾ ಸಿದ್ಧತೆ ಮತ್ತು ಭಾರೀ ಹಣ ಬೇಕು. ಸಾಮಾನ್ಯ ಜನರು ಅಲ್ಲಿಗೆ ಹೋಗುವುದು ಕನಸಿನ ಮಾತು…! ಆದರೆ ಕೆಂಪುಗ್ರಹವನ್ನು ಹೋಲುವಂತೆ ಸ್ಥಳವೊಂದು ಈ ಭೂಮಂಡಲದಲ್ಲಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಉತ್ತರ ಸ್ಪೇನ್‍ನ ಗುಹೆಯೊಂದರಲ್ಲಿ ಮಂಗಳಗ್ರಹದ ಪರಿಸರವನ್ನು ಹೋಲುವ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಆಸ್ಟ್ರೋಲ್ಯಾಂಡ್ಸ್ ಎಂಬ ಸಂಸ್ಥೆ ನಿರ್ಮಿಸಿರುವ ಏರ್ ಸ್ಟೇಷನ್ ಎಂಬ ಈ ಸ್ಥಳವು ಕೆಂಪು ಗ್ರಹಕ್ಕೆ ಅಂತರಿಕ್ಷಯಾನ ಕೈಗೊಂಡ ಅನುಭವ ನೀಡುತ್ತದೆ. ಕಾಂಟಾಬ್ರಿಯಾದಲ್ಲಿನ ಅರ್ರೆದೊಂಡೊ ಎಂಬಲ್ಲಿ 1.5 ಕಿಲೋಮೀಟರ್…

  • ಆರೋಗ್ಯ

    ಧೂಮಪಾನದಿಂದ ದೂರ ಸರಿಯಲು ಮನೆ ಮದ್ದು ತಯಾರಿಸುವುದು ಹೇಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಸಿಗರೇಟ್ ಪ್ಯಾಕ್‍ಗಳ ಮೇಲೆ ಬರೆದುಕೊಂಡು ಇದ್ದರೂ ಜನರು ಲೆಕ್ಕಿಸುವುದಿಲ್ಲ. ಅದನ್ನು ನೋಡಿಯೇ ಸಿಗರೇಟನ್ನು ಸೇದುತ್ತಾರೆ. ನಿಧಾನವಾಗಿಯೇ ಶ್ವಾಸಕೋಶಗಳನ್ನು ದುರ್ಬಲಗೊಳಿಸುವ ಧೂಮ ಪಾನ ವ್ಯಸನಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಂತರಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುವುದು