ಕರ್ನಾಟಕ

ಗೋವಾ ನಿರಾಶ್ರಿತ ಕನ್ನಡಿಗರಿಗೆ, ರಾಜ್ಯದಿಂದ ಸಿಕ್ಕ ಭಾಗ್ಯ ಏನು ಗೊತ್ತಾ..?

124

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ‌ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬೈನಾ ಬೀಚ್‌ನಲ್ಲಿ  ಜೆಸಿಬಿ, ಟಿಪ್ಪರ್‌ಗಳೊಂದಿಗೆ  ಸ್ಥಳೀಯಾಡಳಿತದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 55 ಮನೆ ಹಾಗೂ ಗುಡಿಸಲುಗಳನ್ನು ತೆರವು ಮಾಡಿದ್ದರು, ಗೋವಾ ಸರ್ಕಾರದ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕನ್ನಡಿಗರನ್ನು ರಕ್ಷಿಸುವಂತೆ ಮನವಿ ಮಾಡಿದ್ದವು.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರ ಸಂಖ್ಯೆ ಎಷ್ಟು, ಎಲ್ಲರಿಗೂ ನಿವೇಶನ ಒದಗಿಸಲು ಬೇಕಾದ ಭೂಮಿ ಮತ್ತಿತರ ವಿಷಯಗಳನ್ನು ಒಳಗೊಂಡಂತೆ ಮೂರು ದಿನದಲ್ಲಿ ವರದಿ ನೀಡಲು ಗಡಿ ಅಭಿವೃದ್ಧಿ  ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ಮರು ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮೊದಲ ಹಂತದಲ್ಲಿ ಅವರಿಗೆ ನಿವೇಶನದ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಅ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸೇತುವೆ ಮೇಲಿಂದ ಬಸ್ ಪಲ್ಟಿ…..29 ಪ್ರಯಾಣಿಕರ ಮರಣ…..!

    ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಚಾಲಕ ನಿದ್ದೆ…

  • ಉಪಯುಕ್ತ ಮಾಹಿತಿ

    ನಮ್ಮ ಅಡುಗೆ ಮನೆಯ ವೇಸ್ಟ್ – ನಮ್ಮ ಮಣ್ಣಿಗೆ ಬೆಸ್ಟ್

    1. ಬಳಸಿದ ನಂತರ ಬಿಸಾಡುವ ಮೊಟ್ಟೆಯ ಕವಚ ಮಣ್ಣಲ್ಲಿ ಬೆರೆತರೆ ಗಿಡದ ಬೆಳವಣಿಗೆಯನ್ನು ಪ್ರಚೋದಿಸುವ ಹಾಗೂ ತರಕಾರಿ ಬೆಳೆಗಳಿಗೆ ತಗುಲುವ ಕೊಳೆರೋಗಗಳನ್ನು ತಡೆಗಟ್ಟುವ ಕ್ಯಾಲ್ಸಿಯಂ ಆಂಶ ಸಿಗುತ್ತದೆ. 2. ಕಾಫೀ ಗಸಿಯನ್ನು ಮಣ್ಣಿಗೆ ಸೇರಿಸಿ ಮಣ್ಣಲ್ಲಿ ಖನಿಜಾಂಶ – ಸಾರಜನಕ – ವಿಟಮಿನ್ನುಗಳನ್ನು ಹೆಚ್ಚಿಸಬಹುದು 3. ಟೀ ಗಸಿಯನ್ನೂ ಸಹ ಕಾಂಪೋಸ್ಟ್ ಮೂಲಕ ಮಣ್ಣಿಗೆ ಸೇರಿಸಿ ಮಣ್ಣಿನ ಗುಣಮಟ್ಟ ಹೆಚ್ಚಿಸಬಹುದು 4. ಬಾಳೇಹಣ್ಣಿನ ಸಿಪ್ಪೆಯನ್ನು ನೇರವಾಗಿ ಮಣ್ಣ ಮೇಲೆ ಹಾಕಿ, ಮಣ್ಣಿಗೆ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಷ್…

  • ಆಧ್ಯಾತ್ಮ, ಜ್ಯೋತಿಷ್ಯ

    ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಇಟ್ಟುಕೊಳ್ಳಬೇಕಾ?ಬಿಸಾಡಬೇಕಾ?

    ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ನಂತರ ಸಾಮಾನ್ಯವಾಗಿ ಪ್ರಸಾದವನ್ನು ಕೊಡುತ್ತಾರೆ. ಜೊತೆಗೆ ಹೂ ಅಥವಾ ಹೂವಿನ ಮಾಲೆಯನ್ನು ಸಹ ಕೊಡುತ್ತಾರೆ. ಪೂಜಾರಿಗಳು ಪ್ರಸಾದದ ರೂಪದಲ್ಲಿ ಕೊಟ್ಟ ಹೂವನ್ನು ಭಕ್ತರು ಸ್ವಿಕಾರ ಮಾಡುತ್ತಾರೆ. ಆದರೆ ಹೀಗೆ ಕೊಟ್ಟ ಹೂವನ್ನು ಏನು ಮಾಡಬೇಕೆಂದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹಾಗಾದ್ರೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಏನು ಮಾಡಬೇಕು..? ದೂರದ ಊರುಗಳಿಗೆ ಹೋಗಿದ್ದರೆ, ಅಲ್ಲಿನ ದೇವಸ್ಥಾನದಲ್ಲಿ ಸಿಕ್ಕ ಹೂಗಳು ಮನೆಗೆ ಬರುವ ಮೊದಲೇ ಬಾಡಿರುತ್ತದೆ. ಸಾಮಾನ್ಯವಾಗಿ ಬಾಡಿದ ಹೂಗಳನ್ನು ಮನೆಯಲ್ಲಿ…

  • ಉಪಯುಕ್ತ ಮಾಹಿತಿ

    ನಿಮ್ಮ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ

    ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ ವಿಫಲವಾಗೋದೇ ಹೆಚ್ಚು. ನಾವು ಹೇಳುವ ಸುಲಭ ಉಪಾಯ ಮೂರೇ ದಿನದಲ್ಲಿ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ. ಒಮ್ಮೆ ಪ್ರಯತ್ನಿಸಿ ನೋಡಿ ಎನ್ನುತ್ತಾರೆ ತಜ್ಞರು. ಬೇಕಾಗುವ ಸಾಮಗ್ರಿ : ಒಂದು ಇಂಚು ತುರಿದ ಶುಂಠಿ, ಕತ್ತರಿಸಿದ ನಿಂಬೆ ಹೋಳು,ಒಂದು ಕಪ್ ನೀರು,ಒಂದು ಚಮಚ ಜೇನುತುಪ್ಪ ಮಾಡುವ ವಿಧಾನ : ಒಂದು ಪಾತ್ರೆಗೆ ನೀರನ್ನು…