ವಿಸ್ಮಯ ಜಗತ್ತು

ಗಂಡು ಮೀನಾಗಿ ಹುಟ್ಟಿ ಬಳಿಕ ಹೆಣ್ಣು ಮೀನಾಗಿ ಬದಲಾಗುವ ಈ ಮೀನಿನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

347

ಮೀನು ಹುಟ್ಟಿನಿಂದ ಗಂಡು ಮೀನಾಗಿ ಹುಟ್ಟಿ ಎರಡು ವರ್ಷಗಳ ಬಳಿಕ ಹೆಣ್ಣು ಮೀನಾಗಿ ಬದಲಾಗುತ್ತದೆ. ಇದು ಕೇಳಲು ನಿಮ್ಗೆ ಅಚ್ಚರಿ ಅನ್ನಿಸಿದರೂ ನಿಜ. ಬರ್ರಮುಂಡಿ ಎಂಬ ಮೀನು ಈ ವಿಧವಾಗಿ ಗಂಡಿನಿಂದ ಹೆಣ್ಣಾಗಿ ರೂಪಾಂತರ ಹೊಂದುತ್ತದೆ.

ಇದಕ್ಕೆ ಇರುವ ಅಸಲಿ ಕಾರಣಗಳನ್ನು ಇದುವರೆಗೆ ವಿಜ್ಞಾನಿಗಳು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅದೇ ರೀತಿ ಪ್ಯಾರೆಟ್ ಫಿಷ್ ಹೆಣ್ಣಿನಿಂದ ಗಂಡಾಗಿ ಬದಲಾಗುತ್ತದೆ.

ಬರ್ರಮುಂಡಿ ಮೀನು  ವಿಷಯಕ್ಕೆ ಬಂದರೆ,ಬಹಳಷ್ಟು ಬರ್ರಮುಂಡಿ (ಶೇ.90) ಜನ್ಮತಃ ಗಂಡಾಗಿಯೇ ಹುಟ್ಟುತ್ತವೆ… ಎರಡು ವರ್ಷ ವಯಸ್ಸಾಗುವ ತನಕ ವೀರ್ಯಾಣುಗಳನ್ನು ಉತ್ಪಾದನೆ ಮಾಡುತ್ತಾ ತಮ್ಮ ಸಂತಾನಾಭಿವೃದ್ಧಿಗೆ ಶ್ರಮಿಸುತ್ತಿರುತ್ತವೆ. ಎರಡು ವರ್ಷ ಪೂರ್ಣವಾಗುತ್ತಲೇ…ವೀರ್ಯಾಣುಗಳ ಬದಲಾಗಿ ಅಂಡಾಣು ಉತ್ಪತ್ತಿ ಮಾಡಲು ಆರಂಭಿಸುತ್ತವೆ.!


ಮೀನುಗಳು ಹೆಚ್ಚಾಗಿ ಹೆಣ್ಣಾಗಿ ಬದಲಾಗುವುದರಿಂದ ಅಧಿಕ ಸಂತಾನೋತ್ಪತ್ತಿ ಆಗುತ್ತದೆ. ಇದರಿಂದ ಮಾನವರಿಗೆ ಅಧಿಕ ಮೀನುಗಳು ಲಭಿಸುತ್ತವೆ. ಬರ್ರಮುಂಡಿ ಮೀನುಗಳು ತುಂಬಾ ರುಚಿಯಾಗಿಯೂ ಇರುತ್ತವೆ. ಗೋವಾ, ಬಂಗಾಳದಲ್ಲಿ ಬರ್ರಮುಂಡಿ ಪಾನ್ ಪ್ರೈ ಮಾಡಿ ಒಂದು ವಿಧವಾದ ಮಸಾಲೆ ಹಾಕಿ ರುಚಿಕರವಾದ ರೆಸೆಪಿಯನ್ನು ತಯಾರಿಸುತ್ತಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ