ಮನರಂಜನೆ

ಕೊನೆಗೂ ಕಾಮನ್ ಮ್ಯಾನ್’ಗೆ ಸಿಗದ ಬಿಗ್ ಬಾಸ್ ಪಟ್ಟ..!ಕೇವಲ ಒಂದು ಲಕ್ಷ ಕೊಟ್ಟಿದ್ದು ಸರಿಯೇ..?ಏನಾಯ್ತು ಮುಂದೆ ನೋಡಿ…

545

ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ ಸುಮಾರು ವಾರಗಳು ಬಿಗ್ ಬಾಸ’ನಲ್ಲಿ ಇದ್ದು ಕಾಮಾನ್ ಮ್ಯಾನ್’ಗೂ ಕೂಡ ಜನ ಪ್ರೀತಿ ತೋರಿಸ್ತಾರೆ ಅನ್ನೋದರ ಬಗ್ಗೆ ಸಾಧಿಸಿ ತೋರಿಸಿದ್ದಾರೆ.

ಈ ಸಲದ ಬಿಗ್ ಬಾಸ್ ಶೋ ಕಾಮನ್ ಮ್ಯಾನ್ ಮತ್ತು ಸೆಲೆಬ್ರೆಟಿಗಳ ನಡುವಿನ ಸಮರ ಎಂದು ಬಿಂಬಿಸಲಾಗಿತ್ತು.ಬಿಗ್ ಬಾಸ್ ನಲ್ಲಿ ನಡೆದ ಕೆಲವೊಂದು ಸನ್ನಿವೇಶಗಳು ಜನರಲ್ಲಿ ಉಂಟು ಮಾಡಿದ್ದು ಸಹಜ.

ನೆನ್ನೆ ಬಿಡದಿ ಹತ್ತಿರವಿರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ, ತನ್ನ ವಿಶಿಷ್ಟ ಗಾಯನದಿಂದಲೇ, ಕರ್ನಾಟಕದ ಜನರಲ್ಲಿ ಮನೆ ಮಾತಾಗಿರುವ  ಚಂದನ್ ಶೆಟ್ಟಿಯನ್ನು ಸುದೀಪ್ ಅವರು ವಿಜೇತ ಎಂದು ಘೋಷಣೆ ಮಾಡಿದರು. ತುಂಬಾ ಕಷ್ಟದಲ್ಲಿ  ಜೀವನಸಾಗಿಸುತ್ತಿದ್ದ, ಸೇಲ್ಸ್ ಮ್ಯಾನ್ ಆಗಿದ್ದ, ಕಾಮಾನ್ ಮ್ಯಾನ್ ದಿವಾಕರ್ ರನ್ನರ್ ಅಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು.ಹಾಗೂ ನಟ ಕಾರ್ತಿಕ್ ಜಯರಾಂ ಮೂರನೇ ಸ್ಥಾನ ಗಳಿಸಿಕೊಂಡರು.

ಗ್ರಾಂಡ್ ಪಿನಾಲೆ ವೇದಿಕೆಯಲ್ಲೇ ಕಾಮಾನ್ ಮ್ಯಾನ್’ಗೂ ಸೆಲೆಬ್ರೆಟಿಗೂ ನಡುವೆ ಇರುವ ಸಾಮ್ಯತೆ ಬಗ್ಗೆ ವಾಗ್ವಾದ…

ಜಗನ್ ಮಾತನಾಡುತ್ತಾ ಹೊರಗಡೆ ಸೆಲೆಬ್ರೆಟಿಗಳ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ.ನಾವು ಅಂದ್ರೆ ಸೆಲೆಬ್ರೆಟಿಗಳು ಕಾಮಾನ್ ಮ್ಯಾನ್’ಗಳನ್ನು ತುಳಿತಾ ಇದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬಣ್ಣಿಸಲಾಗುತ್ತಿದೆ.ನಿಜ ಹೇಳೆಬೇಕಂದ್ರೆ ಆತರ ಏನೂ ನಡೆದಿಲ್ಲ.ನಾವೆಲ್ಲಾ ಒಂದೇ, ಮನೆಯಲ್ಲಿ ಒಂದೇ ತರ ಇದ್ದೆವು ಎಂದು ಹೇಳಿದ್ರು ಇವರ ಮಾತಿಗೆ ಮಾತು ಜೋಡಿಸಿದ ಸಿಹಿ ಕಹಿ ಚಂದ್ರುರವರು ಸಹ ಹೊರಗಡೆ ಸೆಲೆಬ್ರೆಟಿಗಳನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ರು.

ಈ ಸೆಲೆಬ್ರೆಟಿಗಳು ಏನೇ ಹೇಳಿದ್ರು, ಕಾಮಾನ್ ಮ್ಯಾನ್ ಗಳನ್ನು ಅವರು ನೋಡೋದು ಹಾಗೆಯೇ ಬಿಡಿ.ಏಕೆಂದರೆ ಒಬ್ಬ ಕಾಮಾನ್ ಮ್ಯಾನ್ ಸೆಲೆಬ್ರೆಟಿಯನ್ನು ಅವರ ಹತ್ತಿರ ಹೋಗಿ ಮಾತನಾಡಿಸೋದು ಅಷ್ಟೊಂದು ಸುಲಭ ಇಲ್ಲ.ಇದಕ್ಕೆ ನೀವೇ ನೋಡಿದಂತೆ ತುಂಬಾ ನಿದರ್ಶನಗಳಿವೆ.

ಚಂದನ್ ಶೆಟ್ಟಿ ಗೆಲ್ಲಬಾರದಿತ್ತು..!ಯಾಕೆ ಗೊತ್ತಾ..?

ತನ್ನ ವಿಶಿಷ್ಟ ಗಾಯನದಿಂದಲೇ ಕರ್ನಾಟಕದ ಜನರ ಮನೆಮಾತಾಗಿರುವ ರ್ಯಾಪರ್ ಚಂದನ್ ಶೆಟ್ಟಿ, ಈಗಾಗಲೇ ಅವರು ಕರುನಾಡಿನ ಕೋಟ್ಯಾಂತರ ಜನರ ಮನವನ್ನು ಗೆದ್ದಿದ್ದಾರೆ. ಇವರಿಗಿರುವ ಟ್ಯಾಲೆಂಟ್’ಗೆ ಬಿಗ್ ಬಾಸ್ ತರದ ನೂರಾರು ವೇದಿಕೆಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಸೆಲೆಬ್ರೆಟಿಗಳು ಹೇಳಿದ ಹಾಗೆ ಇವರ ಒಂದು ಹಾಡನ್ನು youtubeನಲ್ಲಿ ಬಿಟ್ರೆ ಕೆಲವೇ ನಿಮಿಷಗಳಲ್ಲಿ ಕೋಟ್ಯಾಂತರ ಜನ ನೋಡುತ್ತಾರೆ.ಇವರಿಗಿರುವ ಟ್ಯಾಲೆಂಟ್’ಗೆ ಹಣ ಸಂಪಾದನೆ ಮಾಡುವುದು ಇವರಿಗೆ ಕಷ್ಟವೇನಲ್ಲ. ಇವರು ಟ್ರೋಪಿ ಗೆಲ್ಲುವುದಕ್ಕೆ ಅರ್ಹರು ಅದರಲ್ಲಿ ಬೇರೆ ಮಾತಿಲ್ಲ. ಆದರೆ ಇವರ ಜೊತೆ ಇದ್ದಿದ್ದು ಕಷ್ಟ ಜೀವಿ ಸೇಲ್ಸ್  ಮ್ಯಾನ್ ದಿವಾಕರ್. ಈ ಎಲ್ಲಾ ಕಾರಣಗಳಿಂದ ಚಂದನ್ ಶೆಟ್ಟಿ ಗೆಲ್ಲಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಅಷ್ಟೆ.

ಸೇಲ್ಸ್ ಮ್ಯಾನ್ ದಿವಾಕರ್ ಗೆಲ್ಲಲೇ ಬೇಕಿತ್ತು ಯಾಕೆ ಗೊತ್ತಾ..?

ಕಾಮಾನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದ ಸೇಲ್ಸ್ ಮ್ಯಾನ್ ದಿವಾಕರ್ ತುಂಬಾ ಕಷ್ಟ ಜೀವನದಿಂದ ಬಂದವರು. ಆದ್ರು ಬಿಗ್ ಬಾಸ್’ನಲ್ಲಿ ಕೊನೆಯವರೆಗೂ ಘಟಾನು ಘಟಿಗಳ ಜೊತೆ ಆಟ ಆಡಿ ಎಲ್ಲರ ಮನ ಗೆದ್ದದ್ದು ಸುಳ್ಳಲ್ಲ.ನೆನ್ನೆ ಗ್ರಾಂಡ್ ಪಿನಾಲೆ ವೇದಿಕೆಯಲ್ಲಿ ಯಾರೂ ಗೆಲ್ಲ ಬೇಕು ಎಂಬ ಸುದೀಪ್ ಪ್ರಶ್ನೆಗೆ ಅಲ್ಲಿದ್ದ ಸೇಲೆಬ್ರೆಟಿಗಳೇ ಕಾಮಾನ್ ಮ್ಯಾನ್ ದಿವಾಕರ್ ಗೆಲ್ಲಬೇಕು.ಏಕೆಂದರೆ ಅವರಿಗೆ ಈ ತರದ ಬೇರೆ ವೇದಿಕೆಗಳು ಸಿಗುವುದು ಕಷ್ಟ. ಅವರಿಗೆ ಹಣದ ಅವಶ್ಯಕತೆ ತುಂಬಾ ಇದೆ.ಒಂದು ವೇಳೆ ಬಿಗ್ ಬಾಸ್ ಗೆದ್ರೆ ಬರುವ ಹಣ ಅವರ ಕುಟುಂಬಕ್ಕೆ ಮತ್ತು ಮಗನ ಮುಂದಿನ ಜೀವನಕ್ಕೆ ತುಂಬಾ ಅನುಕುಲವಾಗುತ್ತೆ, ಹಾಗಾಗಿ ದಿವಾಕರ್ ರವರೆ ಬಿಗ್ ಬಾಸ್ ಗೆಲ್ಲಬೇಕು ಎಂದು ಹೇಳಿದ್ರು.

ಕೇವಲ ಒಂದು ಲಕ್ಷ…ಯಾಕೆ?

ಆದ್ರೆ ಕೊನೆಯಲ್ಲಿ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ್ರು.ಆದ್ರೆ ದಿವಾಕರ್ ರವರಿಗೆ ಕೇವಲ ಒಂದು ಲಕ್ಷ ಹಣ ಮಾತ್ರ ಕೊಟ್ಟಿದ್ದು, ಯಾಕೋ ಮೋಸ ಅನಿಸ್ತು.ಈ ಕಾರಣಗಳಿಂದ ಚಂದನ್ ಶೆಟ್ಟಿ ರವರಿಗೆ ಹೋಲಿಸಿದರೆ ಕಾಮಾನ್ ಮ್ಯಾನ್ ದಿವಾಕರ್ ರವರೇ ಗೆಲ್ಲಬೇಕಿತ್ತು ಎಂಬುದು ನಮ್ಮ ಅಭಿಮತ ಅಷ್ಟೆ.ಇದಕ್ಕೆ ನೀವೇನ್ ಹೇಳ್ತೀರಾ ಕಾಮೆಂಟ್ ಮೂಲಕ ತಿಳಿಸಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೀನಿಗಾಗಿ ಬಲೆ ಬೀಸಿದವನಿಗೆ ಸಿಕ್ಕಿದ್ದು ಬರೋಬ್ಬರಿ 20 ಕೋಟಿ, ಅದೇಗೆ ಗೊತ್ತೆ

    ಇತ್ತೀಚಿಗೆ ಗೋಲ್ಡ್ ಜಾತಿಯ ಮೀನು ಹಿಡಿದ್ದಿದ್ದ ಮೀನುಗಾರ 5 ಲಕ್ಷ ಸಂಪಾದನೆ ಮಾಡಿರುವ ಬಗ್ಗೆ ಸುದ್ದಿ ಆಗಿತ್ತು. ಈಗ ಮೀನುಗಾರನೊಬ್ಬ 20 ಕೋಟಿ ಗಳಿಸಿದ್ದಾನೆ ಎಂದು ತಿಳಿದು ಬಂದಿದೆ. ಅದೇಗೆ ಅಂತೀರಾ. ಓಮನ್ ದೇಶಕ್ಕೆ ಸೇರಿದ ಖಾಲಿದ್ ತನ್ನ ಇಬ್ಬರು ಗೆಳೆಯರೊಡನೆ ಹೋಗಿ ಹಗಲೆಲ್ಲ ಮೀನು ಹಿಡಿದು ಕುಟುಂಬಕ್ಕೆ ಪೋಷಣೆ ಮಾಡುತ್ತಿದ್ದ, ಈತ ಬಡತನದಲ್ಲಿ ಬೆಂದು ಹೋಗಿದ್ದ ಆದರೆ ಅವತ್ತು ಆತನ ಅದೃಷ್ಟದ ದಿನವಾಗಿತ್ತು. ಒಂದು ದಿನ ಹೀಗೆ ಮೀನು ಹಿಡಿಯಲು ಹೋದಾಗ ಅಷ್ಟೊಂದು ಮೀನು ಸಿಗಲಿಲ್ಲ….

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ…ಈ ಶುಭದಿನದಂದು ನಿಮ್ಮ ರಾಶಿಯ ಶುಭಫಲಗಳು ಹೇಗಿವೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಹಲವಾರು ಯೋಜನೆಗಳನ್ನು ಕೈಬಿಟ್ಟು ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಸಿದ್ಧಿಗೆ ಅನುಕೂಲವಾಗುವುದು. ಪರಾಕ್ರಮ ರಾಹು ಸಂಚಾರದಿಂದಾಗಿ ಸಂವಹನ ಕಾರ್ಯದಲ್ಲಿ ಹಿನ್ನಡೆ ಉಂಟಾಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು.   .ನಿಮ್ಮ ಸಮಸ್ಯೆ.ಏನೇ…

  • ಉಪಯುಕ್ತ ಮಾಹಿತಿ

    ಉಪ್ಪನ್ನು ಹಾಕಿ ಮನೆ ಒರೆಸಿದ್ರೆ ನಿಮ್ಮ ಮನೆಯಲ್ಲಿ ಏನೇನಾಗುತ್ತೆ ಗೊತ್ತಾ! ಈ ಮಾಹಿತಿ ನೋಡಿ.

    ಉಪ್ಪು ಇದರ ಬಗ್ಗೆ ನಿಮಗೆ ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇನೆ ಉಪ್ಪನ್ನು ನಾವು ಅಡುಗೆಗೆ ಮಾತ್ರ ಬಳಸುತ್ತೇವೆ ಎಂದು ತಿಳಿದುಕೊಂಡಿರುತ್ತೇವೆ ಅದು ತಪ್ಪು ಉಪ್ಪಿನ ಋಣವನ್ನು ನಾವು ಯಾವತ್ತೂ ತಿಳಿಸಲು ಸಾಧ್ಯವಿಲ್ಲ ನೀವು ನೋಡಿರಬಹುದು ಅಂಗಡಿಯ ಆಚೆ ಉಪ್ಪನ್ನು ಇಟ್ಟಿರುತ್ತಾರೆ ಆದರೆ ಅದನ್ನು ಯಾರು ಕಲಿಯುವುದಿಲ್ಲ ಏಕೆಂದರೆ ಉಪ್ಪಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಇಲ್ಲಿ ಒಂದು ವಿಷಯ ಏನಂದರೆ ಉಪ್ಪಿನಿಂದ ಆಗುವ ಉಪಯೋಗಗಳು ಯಾವುವು ಎಂಬುದನ್ನು ತಿಳಿಸುತ್ತೇನೆ ನೋಡಿ ಮತ್ತು ಯಾವುದಕ್ಕೆ ಬಳಕೆ ಮಾಡುತ್ತಾರೆ…

  • inspirational

    ಹನುಮಂತ ದೇವರನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ ಮಂಗಳವಾಗಿದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಮಾರ್ಚ್, 2019) ಇಂದು ನಿಮ್ಮ ಹೊಸ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ…

  • ದಿನಕ್ಕೊಂದು ನೀತಿ ಕಥೆ

    ಬ್ರಹ್ಮದತ್ತನ ಗುಣ ಮತ್ತು ದೋಷ…..ಓದಿ ದಿನಕ್ಕೊಂದು ನೀತಿ ಕಥೆ…..

    ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .

  • ಸುದ್ದಿ

    ಬಸ್ ಕಂದಕಕ್ಕೆ ಬಿದ್ದು 6 ಮಂದಿ ಸಾವು, 39 ಜನರಿಗೆ ತೀವ್ರ ಗಾಯ….!

    ಬಸ್ ಕಂದಕಕ್ಕೆ ಉರುಳಿ 6 ಮಂದಿ ಮೃತಪಟ್ಟು, 39 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಜಾರ್ಖಂಡ್‍ನ ಗಹ್ರ್ವಾದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರವಾದ ಗಹ್ರ್ವಾದಿಂದ ಅಂಬಿಕಾಪುರ ರಸ್ತೆಯ 14 ಕಿ.ಮೀ ದೂರದಲ್ಲಿ ಇರುವ ಅನ್ನಜ್ ನವೀದ್ ಕಣಿವೆಯಲ್ಲಿ ಬಸ್ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ 6 ಮಂದಿ ಮೃತಪಟ್ಟಿದ್ದು, 39 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಅಂಬಿಕಾಪುರದಿಂದ ಸಾಸಾರಾಮ್ ಕಡೆಗೆ ಹೋಗುತ್ತಿತ್ತು. ನಸುಕಿನ ಜಾವ ಸುಮಾರು 2.30ಕ್ಕೆ ಈ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ…