ಸುದ್ದಿ

‘ಕುರಿ’ ಪ್ರತಾಪ್ ಲೈಫಲ್ಲಿ ಫಸ್ಟ್‌ ಟೈಮ್ ಏನೇನೋ ಆಗ್ತಿದೆ..! ಏನೇನ್ ಆಗ್ತಿದೆ ಗೊತ್ತಾ?

51

‘ಕುರಿ’ ಪ್ರತಾಪ್‌ ಈಗ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾರಣ, ಬಿಗ್ ಬಾಸ್‌. ಅಲ್ಲದೆ, ಕನ್ನಡ ಚಿತ್ರರಂಗದ ಬೇಡಿಕೆಯ ಈ ಹಾಸ್ಯನಟನ ಬದುಕಲ್ಲಿ ಈಗ ಫಸ್ಟ್ ಟೈಮ್ ಏನೇನೋ ಆಗ್ತಿದೆಯಂತೆ! ನಟ ಕುರಿ ಪ್ರತಾಪ್ ವೃತ್ತಿಜೀನವ ಆರಂಭಿಸಿದ್ದು ಕಿರುತೆರೆ ಮೂಲಕ. ಆನಂತರ ಅವರು ಬೆಳ್ಳಿತೆರೆಯಲ್ಲಿ ಬೇಡಿಕೆಯ ಹಾಸ್ಯನಟರಾಗಿ ಮಿಂಚಿದರು. ಬಳಿಕ ಮತ್ತೆ ‘ಮಜಾ ಟಾಕೀಸ್‌’ ಮೂಲಕ ವೀಕ್ಷಕರಿಗೆ ಕಾಮಿಡಿ ಕಚಗುಳಿ ನೀಡಿದರು. ಇದೀಗ ಅವರು ‘ಬಿಗ್ ಬಾಸ್‌’ ಮನೆ ಸೇರಿಕೊಂಡಿದ್ದಾರೆ. ಜತೆಗೆ ಅವರ ಲೈಫಲ್ಲಿ ಫಸ್ಟ್ ಟೈಮ್‌ ಏನೇನೋ ಆಗ್ತಿದೆ! ಹಾಗಾದರೆ, ‘ಕುರಿ’ ಲೈಫ್‌ ಅಲ್ಲಿ ಏನಾಯ್ತು? ಇಲ್ಲಿದೆ ಮಾಹಿತಿ.

ನಿಜ ಜೀವನದಲ್ಲಿ ‘ಕುರಿ’ ಪ್ರತಾಪ್‌ಗೆ ಏನು ಆಗಿಲ್ಲ, ಆಗಿರೋದು ರೀಲ್‌ ಲೈಫ್‌ ಅಲ್ಲಿ! ‘ಬಿಗ್ ಬಾಸ್‌’ ಮನೆಗೆ ಹೋಗುವುದಕ್ಕೂ ಮೊದಲು ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಅವರು ನಟಿಸಿದ್ದರು. ಆ ಸಿನಿಮಾದಲ್ಲಿ ‘ಕುರಿ’ಗೆ ಒಂದು ಡ್ಯುಯೆಟ್‌ ಸಾಂಗ್ ಇಡಲಾಗಿದೆ. ಇದೇ ಮೊದಲ ಬಾರಿಗೆ ಅವರು ನಾಯಕಿಯೊಂದಿಗೆ ಸಖತ್ ಆಗಿ ರೊಮ್ಯಾಂಟಿಕ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಫಸ್ಟ್‌ ಟೈಮ್‌ ಲೈಫಲಿ..’ ಎಂದು ಶುರುವಾಗುವ ಈ ಹಾಡಿನಲ್ಲಿ ‘ಕುರಿ’ ಪ್ರತಾಪ್ ಜತೆಗೆ ನಟಿ ಕಾರುಣ್ಯಾ ರಾಮ್ ಹೆಜ್ಜೆ ಹಾಕಿದ್ದಾರೆ. ಯುಟ್ಯೂಬ್‌ನಲ್ಲಿ ಈ ಹಾಡಿಗೆ ಮೆಚ್ಚುಗೆ ಸಿಕ್ಕಿದೆ.

ಮಂಜು ಸ್ವರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಎಸ್‌.ವಿ. ಬಾಬು ಬಂಡವಾಳ ಹೂಡಿದ್ದಾರೆ. ವಿಶೇಷವೆಂದರೆ, ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಬರೀ ಹಾಸ್ಯ ಕಲಾವಿದರೇ ಪ್ರಮುಖ ಪಾತ್ರಗಳಲ್ಲಿದ್ಧಾರೆ. ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್‌ ಗೌಡ ಪ್ರಧಾನ ಪಾತ್ರ ಮಾಡಿದ್ದಾರೆ. ‘ಕುರಿ’ಗೆ ಈ ಚಿತ್ರದಲ್ಲಿ ‘ರಾಕ್ ಸ್ಟಾರ್’ ರಾಜ ಎಂಬ ಪಾತ್ರ ನೀಡಲಾಗಿದೆ. ಚಿತ್ರದ ನಾಯಕಿಯಾಗಿ ಶ್ರುತಿ ಹರಿಹರನ್ ನಟಿಸಿದ್ದಾರೆ.

ಇನ್ನು, ‘ಬಿಗ್‌ ಬಾಸ್’ ಮನೆಯೊಳಗೆ ಇರುವ ‘ಕುರಿ’ ಪ್ರತಾಪ್‌ ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ತಮ್ಮ ಮ್ಯಾನರಿಸಂ ಮತ್ತು ಇಂಗ್ಲಿಷ್ ಮೂಲಕ ನೋಡುಗರನ್ನು ನಗೆಗಡಲ್ಲಿ ತೇಲಿಸುತ್ತಿದ್ದಾರೆ. ಅಲ್ಲದೆ, ಈ ಬಾರಿ ಗ್ರ್ಯಾಂಡ್ ಫಿನಾಲೆ ತಲುಪುವ ಸಂಭವನೀಯ ಸ್ಪರ್ಧಿಗಳಲ್ಲಿ ಕುರಿ ಕೂಡ ಒಬ್ಬರು ಎಂಬ ಮಾತುಗಳು ಕೇಳಿಬರುತ್ತಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ