ವಿಸ್ಮಯ ಜಗತ್ತು

ಕಾರ್ ಖರೀದಿಸಲು ಚೀಲಗಳಲ್ಲಿ ಹಣ ತುಂಬಿಕೊಂಡು ಬಂದ ಮಹಿಳೆ..! ಆ ಚೀಲಗಳಲ್ಲಿ ಎಷ್ಟು ಹಣ ಇತ್ತು ಗೊತ್ತಾ? ತಿಳಿಯಲು ಈ ಲೇಖನಿ ಓದಿ…

527

ಜಗತ್ತಿನಲ್ಲಿ ಎಂತಹ ವಿಚಿತ್ರ ಜನಗಳಿರುತ್ತಾರೆ ಎಂದ್ರೆ ಯಾವಾಗ ಏನ್ ಮಾಡ್ತಾರೆ ಅಂತ ಸ್ವತಃ ಅವರಿಗೆ ಗೊತ್ತಿರುವುದಿಲ್ಲ. ಯಾಕೆಂದ್ರೆ ನಮ್ಮ ದೇಶದಲ್ಲಿ ಈಗಾಗಲೇ ಕ್ಯಾಶ್ ಲೆಸ್ ವ್ಯವಹಾರ  ನಡೆಯುತ್ತಿದೆ. ಆದರೆ ಚೀನಾದಲ್ಲಿ ಮಹಿಳೆಯೊಬ್ಬರು ಕಾರೊಂದೊನ್ನು ಖರೀದಿಸಲು ಚೀಲದ ತುಂಬಾ ಹಣ ತುಂಬಿಕೊಂಡು ಹೋಗಿದ್ದಾರೆ.

ಹೌದು, ಚೀನಾದಲ್ಲಿ ಮಹಿಳೆಯೊಬ್ಬರು ನಾಲ್ಕು ಚೀಲದ ತುಂಬ ಹಣ ತುಂಬಿಕೊಂಡು ಕಾರ್ ಖರೀದಿಸಲು ಹೋಗಿ ಶೋರೂಂನಲ್ಲಿ ಕೆಲಸ ಮಾಡೋ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

ಕಳೆದ ವಾರ ಚೀನಾದ  ಶಾಂಡಾಂಗ್ ಪ್ರಾಂತ್ಯದ ನಿನ್‍ಝೋನಲ್ಲಿನ ಹೋಂಡಾ ಕಾರ್ ಡೀಲರ್‍ಶಿಪ್ ಶೋರೂಮಿನಲ್ಲಿ ಈ ಘಟನೆ ನಡೆದಿದೆ. ಮಹಿಳೆ ತಂದಿದ್ದ ಚೀಲಗಳ ತುಂಬಾ 1 ಯುವಾನ್ ಮುಖಬೆಲೆಯ ನೋಟುಗಳಿದ್ದು ಒಟ್ಟು 130,000 ಯುವಾನ್(ಅಂದಾಜು 12.50 ಲಕ್ಷ ರೂ.) ಹಣವಿತ್ತು. ಆದ್ರೆ ಚೀಲದಲ್ಲಿ ಎಷ್ಟು ಹಣ ಇದೆ ಎಂದು ಗೊತ್ತಾಗಬೇಕಲ್ಲ?

 

ಹಾಗಾಗಿ ಶೋರೂಮಿನಲ್ಲಿ ಕೆಲಸ ಮಾಡುವ ಸುಮಾರು 20 ಜನ ಚೀಲದಲ್ಲಿರುವ   ಹಣವನ್ನು ಗಂಟೆಗಟ್ಟಲೆ ಎಣಿಸಿದ್ದಾರೆ.

ಶೋರೂಮ್‍ನಲ್ಲಿ ಸಣ್ಣ ಮೊತ್ತದ ನೋಟುಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಸಂದೇಶವಿತ್ತು. ಆಗ ಕನ್‍ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದ   ಮಹಿಳೆ ಕಾರ್ ಖರೀದಿಸಲು ಚೀಲಗಳ ತುಂಬಾ ಹಣವನ್ನು ತೆಗೆದುಕೊಂಡು ಬಂದಿದ್ದಾರೆ.

ಶೋರೂಮಿನಲ್ಲಿ ಕೆಲಸ ಮಾಡುವ ನೌಕರನ ಮಾಹಿತಿ ಮೇರೆಗೆ, ಗ್ರಾಹಕರೊಬ್ಬರು ಕರೆ ಮಾಡಿ ಸಣ್ಣ ನೋಟುಗಳಿಂದ ಹಣ ನೀಡಬಹುದಾ ಎಂದು ಕೇಳಿದ್ರು.

ನಾನು ಖಂಡಿತವಾಗಿಯೂ ನೀಡಬಹುದು ಎಂದೆ. ನಂತರ ಆಕೆ ಹಣವನ್ನು ತೆಗೆದುಕೊಂಡು ಹೋಗಿ ಬನ್ನಿ ಎಂದು ಕರೆದರು. ನಾನು ಹೋಗಿ ಕಾರ್‍ನ ಡಿಕ್ಕಿ ತೆಗೆದಾಗ 1 ಯುವಾನ್ ನೋಟುಗಳ ನಾಲ್ಕು ಚೀಲಗಳನ್ನ ನೋಡಿದೆ ಎಂದು ನೌಕರರೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹಣ ಎಣಿಸಲು ಪಜೀತಿ ಪಟ್ಟ ನೌಕರರು:-

ಹಣ ಎಣಿಸುವ ಕೆಲಸ ಜಾಸ್ತಿಯಾಗಿದ್ದರಿಂದ ಶೂರೂಮ್‍ನವರು ಕೊನೆಗೆ ಮೆಕ್ಯಾನಿಕ್‍ಗಳನ್ನೂ ಸಹಾಯಕ್ಕೆ ಕೆರೆದಿದ್ದಾರೆ. ಮಹಿಳೆ 200,000 ಯುವಾನ್(ಅಂದಾಜು 19.0 ಲಕ್ಷ ರೂ.) ಮೊತ್ತದ ಕಾರ್ ಖರೀದಿ ಮಾಡಿದ್ದು ಉಳಿದ ಹಣವನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು

    ದೇವರ ನೈವೇದ್ಯಕ್ಕೆ ಅರ್ಪಿಸುವ ಹಣ್ಣುಗಳಲ್ಲಿ ಬಾಳೆಹಣ್ಣಿಗೆ  ಮೊದಲ ಸ್ಥಾನ. ಬಾಳೆ ಹಣ್ಣು ಎಲ್ಲಾ ಕಾಲಕ್ಕೂ ಎಲ್ಲಾ ಕಡೆ, ಎಲ್ಲಾ ವರ್ಗದವರಿಗೆ ಸುಲಭವಾಗಿ ಸಿಗುವ ಫಲ. ಅದರಂತೆ ನಿಮ್ಮ ಜೀವನ ಕ್ರಮದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ ನಿಮ್ಮ ಬಾಳು ಬಂಗಾರ ಆಗುತ್ತದೆ ಹಲವು ಪ್ರಬೇಧ ಹೊಂದಿರುವ ಬಾಳೆ ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿವೆ. ಬಾಳೆ ನಿಯಮಿತವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು ಹೈ ಫೈಬರ್ ಬಾಳೆಹಣ್ಣನ್ನು ಕರಗಬಲ್ಲ ಮತ್ತು ಕರಗದಂತಹ ನಾರಿನಿಂದ ತುಂಬಿಸಲಾಗುತ್ತದೆ. ಕರಗಬಲ್ಲ ಫೈಬರ್…

  • ತಂತ್ರಜ್ಞಾನ

    ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

    ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.

  • Uncategorized

    ಬಾಳೆಹಣ್ಣಿನ ಉಪಯೋಗ ಕೇಳಿದ್ರೇ ನೀವು ಮರೆಯದೆ ದಿನಾ ಬಾಳೆಹಣ್ಣು ತಿಂತೀರ…

    ಬುದ್ಧಿಮತ್ತೆ :
    ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ.

    ಮಲಬದ್ಧತೆ :
    ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.

    ಈ‌ ಸಮಸ್ಯೆ ಇದ್ದವರು ತಪ್ಪಿಯೂ ಬಾಳೆಹಣ್ಣು ತಿನ್ನಬಾರದು…!!!

    ಅಸಿಡಿಟಿ ಸಮಸ್ಯೆ ಇರುವವರು ಇದನ್ನು ತಿನ್ನಬಾರದು.

    ಹೃದಯ ಸಂಬಂಧಿತ ಖಾಯಿಲೆ ಇದ್ದವರು ಇದನ್ನು ಸೇವಿಸಬಾರದು

    ಮಧುಮೇಹ ರೋಗಿಗಳಿಗೂ ಇದರ ಸೇವನೆ ಒಳ್ಳೆಯದಲ್ಲ.

    ಹೆಚ್ಚು ತಲೆನೋವು ಸಮಸ್ಯೆ ಎದುರಿಸುವವರು. ಅಜೀರ್ಣತೆ ಸಮಸ್ಯೆಯಿಂದ ಬಳಲುತ್ತಿರುವವರು..

    ಕಿಡ್ನಿ ಅಲರ್ಜಿ ಸಮಸ್ಯೆ ಇದ್ದವರು ಬಾಳೆಹಣ್ಣು ತಿನ್ನಬಾರದು.

  • ಸುದ್ದಿ

    ತರಕಾರಿ ವ್ಯಾಪಾರಿಯಾ ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರಿ ದುರಂತ….!

    ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ. ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ. ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನು…

  • ಆರೋಗ್ಯ

    ಶುದ್ದೀಕರಿಸಿದ ನೀರನ್ನು ಕುಡಿಯುವುದಕ್ಕೆ ಮುಂಚೆ ಈ ಲೇಖನಿ ಓದಿ….

    ಶುದ್ದಿಕರಿಸಿದ ಈ ನೀರನ್ನು ಕುಡಿಯುವುದರಿಂದ ಮನುಷ್ಯರ ಡಿಏನ್ ಗೆ ಹಾನಿಯುಂಟಾಗುವ ಸಾದ್ಯತೆಗಳಿವೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.