ಸರ್ಕಾರದ ಯೋಜನೆಗಳು

ಕರ್ನಾಟಕ ರಾಜ್ಯದ ಈ ಗ್ರಾಮಕ್ಕೆ ಬಂದವರಿಗೆಲ್ಲಾ ಮೊಟ್ಟೆ ಫ್ರೀ ..!ತಿಳಿಯಲು ಈ ಲೇಖನ ಓದಿ….

220

ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.

ಜತೆಗೆ ಹಸುಗಳ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಶ್ವಾನ ಪ್ರದರ್ಶನ, ತಜ್ಞರೊಂದಿಗೆ ರೈತರ ಸಂವಾದ, ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಎ. ಮಂಜು ಹೇಳಿದ್ದಾರೆ.

ಪಶುಸಂಗೋಪನಾ ಇಲಾಖೆ ವತಿಯಿಂದ ಹಾಸನ ಜಿಲ್ಲೆಯ ಅರಕಲಗೂಡಿನ ತಾಲೂಕು ಕ್ರೀಡಾಂಗಣದಲ್ಲಿ ಪಶು ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈ ಮೇಳದಲ್ಲಿ ಜಾನುವಾರು ಸಾಕಾಣಿಕೆ, ಹೈನುಗಾರಿಕೆ, ಕುಕ್ಕುಟ ಸಾಕಾಣಿಕೆ, ಮೌಲ್ಯವರ್ಧಿತ ಪಶು ಉತ್ಪನ್ನಗಳು ಹಾಗೂ ಜಾನುವಾರು ಆರೋಗ್ಯದ ಬಗ್ಗೆ ಎಲ್ಲಾ ಮಾಹಿತಿ ನೀಡಲಾಗುವುದು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎ. ಮಂಜು, ಪಶುಮೇಳಕ್ಕೆ ಆಗಮಿಸುವ ಎಲ್ಲ ಜಾನುವಾರುಗಳಿಗೆ 10 ಕೇಜಿ ಉಚಿತ ಪಶು ಆಹಾರ ನೀಡಲಾಗುವುದು.

ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಉಚಿತವಾಗಿ ಬೇಯಿಸಿದ ಮೊಟ್ಟೆ, ಮಜ್ಜಿಗೆ, ಹಾಲು ನೀಡಲಾಗುವುದು ಎಂದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ