ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕ ಜನತೆಗೆ ಟ್ವೀಟ್ ಮಾಡುವುದರ ಮೂಲಕ ಧನ್ಯವಾದ ತಿಳಿಸಿದ್ದಾರೆ.ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಕುರುಕ್ಷೇತ್ರ ಚಿತ್ರಕ್ಕೆ 50 ದಿನಗಳ ಸಂಭ್ರಮ. ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ ಅವರ ಆಸೆಗೆ ಬೆನ್ನೆಲುಬಾಗಿ ನಿಂತ ಇಡೀ ಚಿತ್ರತಂಡಕ್ಕೆ
ಕೊನೆಯದಾಗಿ ಪ್ರೀತಿಯಿಂದ ಚಿತ್ರಮಂದಿರಗಳತ್ತ ಧಾವಿಸಿ ಆಶೀರ್ವದಿಸಿದ ಅಭಿಮಾನಿಗಳು ಕರ್ನಾಟಕ ಜನತೆಗೆ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ದಾಸ ದರ್ಶನ್” ಎಂದು ಟ್ವೀಟ್ ಮಾಡಿದ್ದಾರೆ.
ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್, ಹರಿಪ್ರಿಯಾ ಸೇರಿದಂತೆ ನೂರಾರು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇತ್ತ ಸಾರಥಿ ಚಿತ್ರ ಬಿಡುಗಡೆಯಾಗಿ 8 ವರ್ಷಗಳಾಗಿದ್ದು, ಈ ಬಗ್ಗೆ ದರ್ಶನ್ ಅವರು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. “ಇಂದಿಗೆ ಕನ್ನಡದ ಅಪೂರ್ವ ಮೈಲಿಗಲ್ಲಿನ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ – ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಕಾಂಬಿನೇಶನ್ನ ಮೆಗಾ ಬ್ಲಾಕ್ಬಸ್ಟರ್ `ಸಾರಥಿ’ ಬಿಡುಗಡೆಯಾಗಿ ಸರಿಯಾಗಿ 8 ವರ್ಷಗಳು ತುಂಬಿವೆ. ಮತ್ತೆ ಈ ಸೂಪರ್ ಕಾಂಬಿನೇಶನ್ ಅನ್ನು ನೋಡಲು ಕಾತುರದಲ್ಲಿರುವ ಕನ್ನಡ ಜನತೆ” ಎಂದು ಟ್ವೀಟ್ ಮಾಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬೇಕು. ನೀವೇ ಓದಿ.
ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು…
ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…
ಹಣ್ಣುಗಳ ಬೀಜಗಳಲ್ಲಿ ಪೋಷಕಗಳಿರುತ್ತವೆ ಎಂದು ಎಲ್ಲಾ ಹಣ್ಣಿನ ಬೀಜಗಳನ್ನು ತಿನ್ನುವುದು ಸರಿಯಲ್ಲ. ಏಕೆಂದರೆ ಕೆಲ ಹಣ್ಣಿನ ಬೀಜಗಳು ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಸೇಬು ಹಣ್ಣಿನ ಬೀಜಗಳನ್ನು ಮರೆತೂ ತಿನ್ನಬಾರದು. ಒಂದು ವೇಳೆ ಹಲ್ಲಿಗೆ ಸಿಕ್ಕಿಹಾಕಿಕೊಂಡರೆ ಗಾಬರಿ ಪಡದೆ ತಕ್ಷಣವೇ ಬಿಸಾಡಬೇಕು. ಏಕೆಂದರೆ ಈ ಬೀಜಗಳಲ್ಲಿ ಅಮೈಡಾಲಿನ್ ಎಂಬ ಪದಾರ್ಥ ಇರುತ್ತದೆ. ಇದು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಬೀಜಗಳನ್ನು ತಿಂದರೆ ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ ತಲೆನೋವು, ವಾಂತಿ, ಬಲಹೀನತೆ, ತಲೆಸುತ್ತು ಇತ್ಯಾದಿ ಲಕ್ಷಣಗಳು ಉಂಟಾಗಬಹುದು….
ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣ ವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ ಮಿಳ್ಳೆ ಎಂಬ ಉಪ ಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿ ದ್ದಾರೆ. ಇದರ ಆಳ ಕಡಿಮೆ ಇದ್ದು, ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ!
ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.