ಸಿನಿಮಾ

ಕರಾಟೆ ಕಿಂಗ್ “ಶಂಕರ್ ನಾಗ್” ಅವರ ಬಗ್ಗೆ ನಿಮಗೆಷ್ಟು ಗೊತ್ತು ???

2372

ಕನ್ನಡ ಚಿತ್ರರಂಗ ಕಂಡ ಅನೇಕ ದಿಗ್ಗಜರಲ್ಲಿ, ಈಗಲೂ ಕೂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಕರಾಟೆ ಕಿಂಗ್”ಶಂಕರ್ ನಾಗ್ “ಅವರ ಒಂದು ಕಿರು ಪರಿಚಯ……

ಶಂಕರ್ ನಾಗ್ ಅವರ ಜನನ ಮತ್ತು ವ್ರತ್ತಿ ಬದುಕು:-

  • ನವೆಂಬರ್ 9,1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್ ನಾಗ್ ತನ್ನ ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿದರು .
  • ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು.
  • ಅಣ್ಣ ಅನಂತ ನಾಗ್ ಅವರಂತೆ ತಮ್ಮನೂ ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

  • ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಶಂಕರ್ ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ “ಗೆದ್ದ ಮಗ”. ತಮ್ಮ ಸಹೋದರ ಅನಂತ ನಾಗ್ ಅವರೊಡನೆ “ಮಿಂಚಿನ ಓಟ”, “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳನ್ನು ನಿರ್ಮಿಸಿದರು.
  • ಇದರಲ್ಲಿ “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ “ಅಂಜು ಮಲ್ಲಿಗೆ”, “ನೋಡಿ ಸ್ವಾಮಿ ನಾವಿರೋದು ಹೀಗೆ” ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
  • ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ “ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು” ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದೂ ಸಹ ಇದುವರೆಗೆ ಎಲ್ಲ ತರದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’.

ದಾಂಪತ್ಯ ಜೀವನ ಮತ್ತು ನಾಟಕ ರಂಗದ ಬದುಕು:-

  • ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್.ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.
  • ಈ ದಂಪತಿಗಳು ಸಂಕೇತ್, ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅಂಜುಮಲ್ಲಿಗೆ, ಬ್ಯಾರಿಸ್ಟರ್, ಸಂಧ್ಯಾ ಛಾಯ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಟ ಬೊಂಬಾಟ, ನಾಗಮಂಡಲ, ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು.
  • ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ.ಆ ರಂಗಮಂದಿರಕ್ಕೆ”ರಂಗಶಂಕರ” ಎಂದು ಹೆಸರಿಟ್ಟರು.”ರಂಗಶಂಕರ” ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ನಿರ್ದೇಶಕರಾಗಿ ಮಾಡಿದ ಚಿತ್ರಗಳು :-
  • ಮೇರುನಟ ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.
  • ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಸರ್ಕಾರದ ಮುಂದೆ ಇಟ್ಟಿದ್ದು ನಮ್ಮ ಶಂಕರ್ ನಾಗ್.ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ.

ನಡೆಯ ಬಾರದ್ದು ನಡೆಯಿತು ಆಕಸ್ಮಿಕ ಘಟನೆ :-

  • 30 ಸೆಪ್ಟೆಂಬರ್, 1990 ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು . ಇಡೀ ಚಿತ್ರೋಧ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರೋಧ್ಯಮ ಅನಾಥ ವಾಯಿತೆಂದರೆ ತಪ್ಪಾಗಲಾರದು. ಇದು ಕನ್ನಡ ಚಿತ್ರ ರಂಗಕ್ಕೆ ಮರೆಯಲಾರದ ದುರಂತ.

ಒಲಿದು ಬಂದವು ಪ್ರಶಸ್ತಿ, ಗೌರವಗಳು:-

  • ಇವರು ಹಲವಾರು ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಉದಾಹರಣೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಕ್ಕಾಗಿ ಎರಡು ಬಾರಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು.
  • ಆಕ್ಸಿಡೆಂಟ್’ 198889 ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು.
  • ಕನ್ನಡ ಚಿತ್ರೋಧ್ಯಮಕ್ಕೆ ಕಂಪೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಜಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್ ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು.
  • ನಿಗೂಢ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.

ಬಾಲಿವುಡ್ನಲ್ಲೂ ನಟರಾಗಿ ನಟಿಸಿದ ನಟ:-

  • ಗಿರೀಶ್ ಕಾರ್ನಾಡ್‌ ನಿರ್ದೇಶನದ ಉತ್ಸವ್ ಎಂಬ ಹಿಂದಿ ಚಿತ್ರದಲ್ಲಿಯೂ ಶಂಕರ್ ನಾಗ್ ಅಭಿನಯಿಸಿದ್ಧರು

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೊದಲ ಬಾರಿ ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ. ಇದರ ಹಿನ್ನೆಲೆಯೇನು.

    ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ…

  • ಸರ್ಕಾರಿ ಯೋಜನೆಗಳು

    ಅಂತರ್ಜಾತಿ ಮದುವೆ ಆಗಿ, ಕೇಂದ್ರ ಸರ್ಕಾರದಿಂದ ಲಕ್ಷ ಲಕ್ಷ ಹಣ ಪಡೆಯಿರಿ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

  • ಸುದ್ದಿ

    ಈ ʼಜಿಮ್ʼ ಗೆ ಹೋದವರಿಗೆ ಶಾಕಿಂಗ್‌ ಸುದ್ದಿ….ಆರೋಗ್ಯಕ್ಕೆ ತಪ್ಪಿದಲ್ಲ ಕಂಟಕ..ಇದನ್ನೊಮ್ಮೆ ಓದಿ…..!

    ಬೆಂಗಳೂರಿನಲ್ಲಿ ಜಿಮ್ ಗೆ ಬರುವವರಿಗೆ ಹಾನಿಕಾರಕ ಔಷಧ ಕೊಡುತ್ತಿದ್ದ ಜಿಮ್ ಟ್ರೈನರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಜಿಮ್ ನಲ್ಲಿ ಫಿಟ್ನೆಸ್ ಗಾಗಿ ಬರುತ್ತಿದ್ದವರಿಗೆ ದೇಹ ಹುರಿಗೊಳಿಸಲು ಮತ್ತು ತೆಳ್ಳಗಾಗಲು ಜಿಮ್ ಟ್ರೈನರ್ ನಿಷೇಧಿತ ಔಷಧ ಕೊಡುತ್ತಿದ್ದ. ನಿಷೇಧಿತ ಡ್ರಗ್ಸ್ ಗಳನ್ನು ಬೇರೆ ಕಡೆಯಿಂದ ತರಿಸಿ ಕೊಡುತ್ತಿದ್ದ. ಜಿಮ್ ಗೆ ಬರುತ್ತಿದ್ದ ಕೆಲವರಿಗೆ ಈ ನಿಷೇಧಿತ ಔಷಧ ಸೇವಿಸಿದ್ದರಿಂದ ಆರೋಗ್ಯದ ಸಮಸ್ಯೆ ಎದುರಾಗಿದೆ. ಕೆಲವರಿಗೆ ಪುರುಷತ್ವ ಕಡಿಮೆಯಾಗಿದೆ ಎನ್ನಲಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಗೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಬಾಳೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ.! ಹಲವು ಜನರಿಗೆ ತಿಳಿದಿಲ್ಲ. ಈ ಮಾಹಿತಿ ನೋಡಿ.

    ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ನಮ್ಮ ಪೂರ್ವಜರು ಏನೇ ಮಾಡಿದರೂ ಕೂಡ ಅದರ ಹಿಂದೆ ವೈಜ್ಞಾನಿಕ ಸತ್ಯ ಇದೆ ಎನ್ನುವ ವಿಷಯವನ್ನು ಹಲವು ಸಂಶೋಧನೆಗಳು ಕೂಡ ಒಪ್ಪಿಕೊಂಡಿವೆ. ಪ್ರಕೃತಿಯನ್ನು ದೇವರ ರೀತಿಯಲ್ಲಿ ಪೂಜಿಸುವ ನಮ್ಮ ಸಂಸ್ಕ್ರತಿ ಸಂಪ್ರದಾಯಗಳಲ್ಲಿರುವ ಪತಿ ಆಚರಣೆಯ ಹಿಂದೆ ಒಂದೊಂದು ಸೊಗಸಾದ ಆರೋಗ್ಯದ ಗುಟ್ಟುಗಳಿವೆ. ಹೌದು ಇಂದು ಇದೆ ವಿಷಯದ ಕುರಿತು ನಾವು ನಿಮಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ. ನಮ್ಮ ದೇಶದಲ್ಲಿ ಹಸಿರು ಹಸಿರಾದ ಬಾಳೆ ಎಲೆಯ ಊಟ ಇಂದು ನಿನ್ನೆಯದಲ್ಲ, ನಮ್ಮ ಪೂರ್ವಿಕರು ಇದರಲ್ಲಿರುವ ರೋಗ…

  • ರಾಜಕೀಯ

    ಚುನಾವಣಾ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್..!?

    ಲೋಕಸಭಾ ಚುನಾವಣೆಗೆ ಕೌಂಟ್‍ ಡೌನ್‍ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಗದಗ ರಾಜಕಾರಣದಲ್ಲಿ ಬಿಜೆಪಿಗೆ ಬಿಗ್ ಶಾಕ್‍ ಸಿಕ್ಕಿದೆ. ಗದಗದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ನಡೆಸಿದ್ದು, ಮಾಜಿ ಸಚಿವ ಹೆಚ್.ಕೆ. ಪಾಟೀಲ್‍, ಪ್ರಭಾವಿ ಲಿಂಗಾಯತ ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾಜಿ ಶಾಸಕ ಮತ್ತು ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್‍.ಕೆ. ಪಾಟೀಲ್ ಜೊತೆ ಶ್ರೀಶೈಲಪ್ಪ ಮಾತುಕತೆ ನಡೆಸಿರುವ…

  • ಸುದ್ದಿ

    9ನೇ ತರಗತಿಗೆ ನೇರ ಪ್ರವೇಶ ಪಡೆದ 8 ವರ್ಷದ ಬಾಲಕ : ಕಾರಣವೇನು ಗೊತ್ತಾ ?

    ಅಗಾಧ ಬುದ್ಧಿ ಮತ್ತೆಯ ಎಂಟು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣನಿಗೆ 9ನೇ ತರಗತಿಗೆ ನೇರವಾಗಿ ದಾಖಲಾಗಲು ಉತ್ತರಪ್ರದೇಶ ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ. 2021ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಲಕ್ನೊದ ನಖಾಸ್ ಪ್ರದೇಶದಲ್ಲಿರುವ ಎಂ.ಡಿ. ಶುಕ್ಲಾ ಇಂಟರ್ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆ ಎದುರಿಸಲು ಆತ ಸಿದ್ಧತೆ ನಡೆಸುತ್ತಿದ್ದಾನೆ.ನಿಯಮದ ಪ್ರಕಾರ ಉತ್ತರಪ್ರದೇಶ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ಆಗಿರಬೇಕು. ಆದರೆ, ರಾಷ್ಟ್ರಂಗೆ 10ನೇ ವಯಸ್ಸಿನಲ್ಲಿ…