ಆರೋಗ್ಯ, ಉಪಯುಕ್ತ ಮಾಹಿತಿ

ಕಪ್ಪು ಕೋಳಿ ತಿಂದರೆ ಲೈಂಗಿಕ ಬಯಕೆ ವೃದ್ಧಿಯಾಗುತ್ತದೆ ..! ಕಪ್ಪು ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ, ಕೋಳಿ ಪಾರಂ ಶೀಘ್ರದಲ್ಲೆ ಆರಂಭಗೊಳ್ಳಲಿದೆ ..!

1032

ಈ ಕಪ್ಪು ಬಣ್ಣದ ಕೋಳಿಗಳು  ಶುಭ ಸೂಚಕ ಹಾಗೂ ಲೈಂಗಿಕ ಬಯಕೆ ವೃದ್ಧಿ.? ಜತೆಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಭಾವನೆ ಜನರಲ್ಲಿದೆ. ರಕ್ತ, ಮಾಂಸ
ಸೇರಿದಂತೆ ಪ್ರತಿಯೊಂದೂ ಕಪ್ಪು ಬಣ್ಣದಿಂದ ಕೂಡಿರುವ ಖಡಕನಾತ ಕೋಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೆಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಕೇಂದ್ರ (ಸಿಪಿಡಿಒ)ವು ಖಡಕನಾತ ಕೋಳಿಯ ಫಾರಂ ತೆರೆಯಲು ಉದ್ದೇಶಿಸಿದೆ.

ರಾಜ್ಯದಲ್ಲಿ ಈ ಖಡಕನಾತ ಕೋಳಿ ಪಾರಂಗಳಿಲ್ಲ  ಮಧ್ಯಪ್ರದೇಶ ಮೂಲದ  ಈ ಜಾತಿಯ ಕೋಳಿಗಳ ಮೂರು ನಾಲ್ಕು ಪಾರಂಗಳನ್ನು  ಕಾಣಬಹುದು. ಆದರೆ, ಇತ್ತೀಚೆಗೆ
ರೈತರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಆದ್ದರಿಂದ ಸಿಪಿಡಿಒ ಕನಿಷ್ಟ ಸಾವಿರ ಖಡಕನಾತ ಕೋಳಿಗಳ ಫಾರಂ ಶೀಘ್ರದಲ್ಲೆ ಪ್ರಾರಂಭಿಸಿ , ರಾಜ್ಯದಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ.

ಈ ಸಂಬಂಧ ಈಗಾಗಲೇ ಪಶು ಸಂಗೋಪನ ಇಲಾಖೆಗೆ  ಪತ್ರ ವ್ಯವಹಾರ ನಡೆದಿದೆ. ಇದಕ್ಕೆ ಕೇಂದ್ರದ ಅನುಮೋದನೆ ದೊರೆತು, ಹಣ ಮಂಜೂರಾಗಬೇಕು . ಮುಂಬೈನಲ್ಲಿರುವ ಸಿಪಿಡಿಒ ಕೇಂದ್ರದಿಂದ ಇಲ್ಲಿಗೆ ಖಡಕನಾತ ಕೋಳಿಗಳು ಪೂರೈಕೆ ಆಗಲಿವೆ.ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ಕೃಷಿ ಮೇಳದಲ್ಲಿ ಈ ವಿಶಿಷ್ಠ ಜಾತಿಯ ಕೋಳಿಗಳನ್ನು ಸ್ವತಃ ಹೆಸರಘಟ್ಟದ ಸಿಪಿಡಿಒ ದರ್ಶನಕಿಡಲಿದೆ ಎಂದು ಕೇಂದ್ರದ ುಪ ನಿರ್ದೇಶಕರು ತಿಳಿಸಿದ್ದಾರೆ.

ಖಡಕನಾತ ಕೋಳಿಯು ಕಪ್ಪು ರಕ್ತ ಮತ್ತು ಕಪ್ಪು ಮಾಂಸವನ್ನು ಹೊಂದಿದೆ. ಇದನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಇದೇ ಕಾರಣಕ್ಕೆ ಕಪ್ಪುರಕ್ತ ಹೊಂದಿರುವ ಕೋಳಿಗಳಿಗೆ ಬೇಡಿಕೆ ಇದೆ. ಇದು ಮೌಡ್ಯವಾದರೂ, ಜನ ಕೇಳುತ್ತಿರುವುದರಿಂದ  ಪೂರೈಸಬೇಕಾಗಿದೆ ಎಂದು ಮತ್ತೋರ್ವ ಅಧಿಕಾರಿ
ತಿಳಿಸಿದ್ದಾರೆ. ವರ್ಷಕ್ಕೆ 2೦೦ ಮೊಟ್ಟೆ ಕೂಡುವ ಕೋಳಿ ಅಭಿವೃದ್ಧಿ ಇಲ್ಲದಂತೆ  ಹೆಚ್ಚು ಮೊಟ್ಟೆ ಕೊಡುವ ಹಿತ್ತಲಲ್ಲಿ ಸಾಕುವ ಕಾವೇರಿ ಸಾಮರ್ಥ್ಯ ವೃದ್ಧಿಸುವ ಸಂಶೋಧನೆಯಲ್ಲಿ
ಸಿಪಿಡಿಒ ವಿಜ್ಞಾನಿಗಳು ತೊಡಗಿದ್ದು, ಶೀಘ್ರದಲ್ಲೇ ಕಾವೇರಿ ಕೋಳಿ ವಾರ್ಷಿಕ ಕನಿಷ್ಠ 2೦೦ ಮೊಟ್ಟೆಗಳನ್ನು ನೀಡಲಿದೆ.

ಪ್ರಸ್ತುತ 150ರಿಂದ 160 ಮೊಟ್ಟೆಗಳನ್ನು ಈ ಜಾತಿಯ ಕೋಳಿ ನೀಡುತ್ತಿದೆ. ಇದರ ಸಾಮರ್ಥ್ಯವನ್ನು ಈಗ ಕನಿಷ್ಠ 2೦೦ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆದಿದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ