Uncategorized, ಕರ್ನಾಟಕ

ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 07 ಸಾಕ್ಷಿ..!ತಿಳಿಯಲು ಈ ಲೇಖನ ಓದಿ..

2429

ನವೆಂಬರ್ 1 ಬಂದರೆ ಮತ್ತೊಮ್ಮೆ ಶಿಕ್ಷಕರ ದಿನಾಚರಣೆ ಬಂದಷ್ಟೇ ಖುಷಿಯಾಗುತ್ತದೆ. ಕನ್ನಡ ಹೇಳಿಕೊಟ್ಟ ಮೇಷ್ಟ್ರುಗಳು, ಅವರು ಪಾಠ ಮಾಡುತ್ತಿದ್ದ ರೀತಿ ನೆನಪಾಗುತ್ತದೆ.. 


2500 ವರ್ಷಗಳ :-

ಇತಿಹಾಸ ಕನ್ನಡ ಭಾಷೆ ಎರಡೂವರೆ ಸಹಸ್ರಮಾನದಷ್ಟು ಹಳೆಯದು! 2500 ವರ್ಷಗಳ ಹಿಂದೇ ಕನ್ನಡ ಭಾಷೆಯ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ.

ಕಾಲದಲ್ಲಿ ಅಂದರೆ ಕ್ರಿ.ಪೂ.4 ನಾಲ್ಕನೇ ಶತಮಾನದಲ್ಲಿ ಸಿಕ್ಕ ತಾಳೆಗರಿಯೊಂದರಲ್ಲಿ ಕನ್ನಡದ ‘ಊರಲ್ಲಿ’ ಎಂಬ ಶಬ್ದ ಪತ್ತೆಯಾಗಿ ಅಚ್ಚರಿ ಮೂಡಿಸಿತ್ತಾದರೂ ಆ ತಾಳೆಗರಿಗಳನ್ನು ಸುಟ್ಟಿದ್ದರಿಂದ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯವೊಂದು ನಾಶವಾಗಿತ್ತು.

ಹಿಂದಿ ಹುಟ್ಟಿಲ್ಲದ ಕಾಲದಲ್ಲಿ ಕನ್ನಡ ಮುಗಿಲಲ್ಲಿತ್ತು!

ಅಮೋಘವರ್ಷ, ‘ಕವಿರಾಜಮಾರ್ಗ’ ರಚಿಸುವಾಗ ಇಂಗ್ಲೀಷ್ ಭಾಷೆಯಿನ್ನೂ ತೊಟ್ಟಿಲೊಳಗಿನ ಕೂಸಾಗಿತ್ತು. ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ!

ಪರಿಪೂರ್ಣ ಭಾಷೆ

ಕನ್ನಡ ಭಾಷೆ ಮತ್ತು ವರ್ಣಮಾಲೆ ತಾರ್ಕಿಕ ಮತ್ತು ವೈಜ್ಞಾನಿಕವಾಗಿಯೂ 99.99 ಪ್ರತಿಶತ ಪರಿಪೂರ್ಣವಾದುದು ಎಂಬುದು ಸಾಬೀತಾಗಿದೆ.

ಲಿಪಿಗಳ ರಾಣಿ ಕನ್ನಡ

 ವಿಶ್ವದ ಲಿಪಿಗಳ ರಾಣಿ ಎಂದರೆ ಕನ್ನಡ ಲಿಪಿ ಎಂದು ಶ್ರೀ ವಿನೋಭಾ ಭಾವೆಯವರೇ ಹೇಳಿದ್ದರು ಎಂಬುದು ಕನ್ನಡದ ಶ್ರೇಷ್ಠತೆಗೆ ಸಾಕ್ಷಿ.

ಅತೀ ಹೆಚ್ಚು ಪ್ರಶಸ್ತಿ

ಸಾಹಿತ್ಯಕ್ಕಾಗಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಭಾರತೀಯರೆಂದರೆ ಅದು ಕುವೆಂಪು. ಅಂದರೆ ಕನ್ನಡ ಸಾಹಿತ್ಯದಿಂದಾಗಿಯೇ ಜಗದ ಕವಿ, ಯುಗದ ಕವಿ ಕುವೆಂಪು ಅವರು ಈ ಗೌರವ ಪಡೆದರು.


ಎಂಟು ಜ್ಞಾನಪೀಠದ ಹೆಗ್ಗಳಿಕೆ

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಎಂದರೆ ಕನ್ನಡ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಈ ಎಂಟು ಜನ ಸಾಹಿತ್ಯದ ಬೇರೆ ಬೇರೆ ಪ್ರಾಕಾರಗಳಲ್ಲಿ ಕೃಷಿ ಮಾಡಿ ಕನ್ನಡಕ್ಕೆ ಗರಿಷ್ಠ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು.

ಗ್ರೀಕ್ ನಾಟಕದಲ್ಲಿ ಕನ್ನಡ ಸಾಲು

ಚಾರಿಯಟ್ ಮೈಮ್ ಎಂಬ ಎರಡನೇ ಶತಮಾನದ ಗ್ರೀಕ್ ನಾಟಕವೊಂದು ಕನ್ನಡ ಸಾಲನ್ನು ಉಪಯೋಗಿಸಿದೆ. ಅಂದರೆ ಎರಡನೇ ಶತಮಾನದಷ್ಟು ಹಿಂದೆಯೇ ಕನ್ನಡ ಭಾಷೆ ಗ್ರೀಸ್ ದೇಶದವರೆಗೂ ಲಗ್ಗೆಯಿಟ್ಟಿತ್ತು ಎಂದಾಯ್ತು!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ