ಸಿನಿಮಾ

ಕನ್ನಡದಲ್ಲಿ ಆರ್ಭಟಿಸುತ್ತಿರುವ ಕಾಲೇಜ್ ಕುಮಾರ್ ಟ್ರೈಲರ್..!ತಿಳಿಯಲು ಈ ಲೇಖನ ಓದಿ..

359

ಹೌದು ಕನ್ನಡದ ಸಿನಿಮಾ ಯಾರಿಗೇನು ಕಡಿಮೆ ಇಲ್ಲದಂತೆ ಒಂದರ ಮೇಲೊಂದು ಹಿಟ್ ಆಗುತ್ತಲೇ ಇವೆ.. ಕಿರಿಕ್ ಪಾರ್ಟಿ, ರಾಜಕುಮಾರ, ಹೆಬ್ಬುಲಿ, ತಾರಕ್, ಈಗ ಇದೇ ಲಿಸ್ಟ್ ಗೆ ಸೇರ್ಪಡೆಯಾಗಲು ಯೂತ್ಸ್ ಸಿನಿಮಾ #ಕಾಲೇಜ್ ಕುಮಾರ್ ಬರುತ್ತಿದೆ.

ಕೆಂಡಸಂಪಿಗೆಯ ಮೂಲಕ ಎಲ್ಲರ ಮನಗೆದ್ದಿದ್ದ ನಾಯಕ “ವಿಕ್ಕಿ ವರುನ್” ಹಾಗೂ ಕಿರಿಕ್ ಪಾರ್ಟಿ ಸಿನಿಮಾದ “ಸಂಯುಕ್ತ ಹೆಗ್ಡೆ” ನಟಿಸಿರುವ *#ಕಾಲೇಜ್ ಕುಮಾರ್* ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 2 ಲಕ್ಷ ವೀಕ್ಷಣೆಗಳನ್ನು ಪಡೆದು ಮುನ್ನುಗ್ಗುತಿದೆ..

ಇದಕ್ಕಿಂತ ಹೆಚ್ಚಿನದು ಏನೆಂದರೆ ಬಾಲಿವುಡ್ ನ ಮೆಗಾ ಪ್ರಾಜೆಕ್ಟ್ ಎಂದೇ ಕರೆಯುತ್ತಿರುವ “ಪದ್ಮಾವತಿ” ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಸತತವಾಗಿ ಟಾಪ್ 1 ಟ್ರೆಂಡ್ ನಲ್ಲಿ ಮುನ್ನುಗ್ಗುತಿತ್ತು.. ಆದರೆ ಈ ಓಟಕ್ಕೆ ನಮ್ಮ *”ಕಾಲೇಜ್ ಕುಮಾರ್”* ಚಿತ್ರದ ಟ್ರೈಲರ್ ಬ್ರೇಕ್ ಹಾಕಿ ನಂಬರ್ 1 ನಲ್ಲಿ ಟ್ರೆಂಡ್ ನಲ್ಲಿದೆ..

ಅಲೆಮಾರಿ ಚಿತ್ರವನ್ನು ನಿರ್ದೇಶನ ಮಾಡಿರುವ ಹರಿ ಸಂತೋಷ್ ಈ ಚಿತ್ರದ ನಿರ್ದೇಶನದ ಜವಬ್ದಾರಿಯನ್ನು ಹೊತ್ತಿದ್ದಾರೆ..ಈಗಾಗಲೇ ಜಾನ್ ಜಾನಿ ಜನಾರ್ದನ್ ಚಿತ್ರ ನಿರ್ಮಾಣ ಮಾಡಿರುವ “M R ಬ್ಯಾನರ್” ಅಡಿಯಲ್ಲಿ *L ಪದ್ಮನಾಭ* ರವರು ಈ ಸಿನಿಮಾ ವನ್ನು ನಿರ್ಮಾಣ ಮಾಡುತ್ತಿದ್ದಾರೆ.. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ರವಿಶಂಕರ್ ಹಾಗೂ ಶೃತಿ ರವರು ಕಾಣಿಸಿಕೊಂಡಿದ್ದಾರೆ.. *ಅರ್ಜುನ್ ಜನ್ಯ* ಮ್ಯೂಸಿಕ್ ನೀಡಿರುವ ಈ ಸಿನಿಮಾದ ಎಲ್ಲಾ ಹಾಡುಗಳು ಹಿಟ್ ಆಗಿ ಎಲ್ಲರ ಮನ ಗೆದ್ದಿದೆ.. ವಿಶೇಷ ಎಂದರೆ ಜೀ ಕನ್ನಡದ ಪ್ರಖ್ಯಾತ ಸಿಂಗಿಂಗ್ ಶೋ ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ.. ಈ ಮೂಲಕ *L ಪದ್ಮನಾಭ* ರವರು ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಿದ್ದಾರೆ..

ಕಿರಿಕ್ ಪಾರ್ಟಿಯ ನಂತರ ಮತ್ತೊಂದು ಕಾಲೇಜ್ ಕತೆಯುಳ್ಳ ಸಿನಿಮಾ ಇದಾಗಿರುವುದರಿಂದ ಜನರಲ್ಲಿ ಕ್ಯೂರಿಯಾಸಿಟಿ ಯನ್ನು ಕ್ರಿಯೇಟ್ ಮಾಡಿದೆ.. ಸಿನಿಮಾ ಅತಿ ಶೀಘ್ರದಲ್ಲಿ ಬಿಡುಗಡೆ ಯಾಗುವುದೆಂದು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ತಿಳಿಸಿದೆ.. ಹಾಡುಗಳು ಹಾಗೂ ಟ್ರೈಲರ್ ಮೂಲಕ ಹೊಸದೊಂದು ಹಿಟ್ ನೀಡುವ ಭರವಸೆಯ ಸಿನಿಮಾ ಎನಿಸಿಕೊಂಡಿರುವ ಕಾಲೇಜ್ ಕುಮಾರ್ ಚಿತ್ರತಂಡಕ್ಕೆ ಶುಭವಾಗಲಿ..

ಕನ್ನಡದಲ್ಲಿ ಅಂತ ಒಳ್ಳೆ ಸಿನಿಮಾ ಬರುವುದಿಲ್ಲ ಎನ್ನುವವರ ಬಾಯಿ ಮುಚ್ಚಿಸುವಂತಿದೆ “ಕಾಲೇಜ್ ಕುಮಾರ್” ಟ್ರೈಲರ್.. ಏನೇ ಆಗಲಿ ನಮ್ಮ ಕನ್ನಡದ ಸಿನಿಮಾ ಒಂದು ಬಾಲಿವುಡ್ ನವರಿಗೆ ಕಾಂಪಿಟೇಟರ್ ಆಗಿ ನಿಂತಿರುವುದು ನಮಗೆ ಹೆಮ್ಮೆಯೇ ಸರಿ..

ಸ್ಯಾಂಡಲ್ವುಡ್ ಸ್ಟಾರ್ ಗಳು ಈಗಾಗಲೇ ಟ್ರೈಲರ್ ನೋಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ..  ನೀವು ಕೂಡ ಈ ಯೂತ್ ಫುಲ್ ಕಾಲೇಜ್ ಕತೆಯುಳ್ಳ ಸಿನಿಮಾದ ಅಧ್ಬುತ ಟ್ರೈಲರ್ ಅನ್ನು ಈ ಲಿಂಕ್  ಮೂಲಕ ಒಮ್ಮೆ ನೋಡಿ..

ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ.. ಶೇರ್ ಮಾಡುವ ಮೂಲಕ ಇತರರಿಗೂ ತಿಳಿಯುವಂತೆ ಮಾಡಿ..

 

ಜೈ ಕರ್ನಾಟಕ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ