ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಳ್ಳೆ ಹುಡುಗ ಪ್ರಥಮ್ ಹಾಗೂ ನಟ ಭುವನ್ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ ಜಗಳವಾಗಿದ್ದು, ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆಂದು ಭುವನ್ ಆರೋಪ ಮಾಡಿದ್ದಾರೆ.
ಚಿತ್ರೀಕರಣದ ವೇಳೆ ಪ್ರಥಮ್ ಅವರು ಸಂಜನಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡಿರುವ ಭುವನ್ ಅವರು ಆ ರೀತಿ ಮಾತನಾಡದಂತೆ ತಾಕೀತು ಮಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಜಗಳ ವಿಕೋಫಕ್ಕೆ ತಿರುಗಿದೆ. ನಂತರ ಪ್ರಥಮ್ ಅವರು ಭುವನ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಚಿತ್ರೀಕರಣದ ಸಿಬ್ಬಂದಿಗಳು ಮಧ್ಯೆ ಪ್ರವೇಶ ಮಾಡಿದ್ದಾರೆ. ಆದರೂ ಸುಮ್ಮನಾಗದ ಪ್ರಥಣ್ ಅವರು ಭುವನ್ ಅವರ ತೊಡೆಗೆ ಕಚ್ಚಿದ್ದಾರೆಂದು ವರದಿಯಾಗಿದೆ.
ಪ್ರಥಮ್ ಮತ್ತು ಭುವನ್ ನಡುವೆ ಜಗಳ ನಡೀತಾಯಿದ್ದಾಗ ನಾನು ಅಲ್ಲಿರಲಿಲ್ಲ, ಸೆಟ್ ಒಳಗಡೆ ನಾನು ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೆ ಹಾಗಾಗಿ ನಾನು ಜಗಳ ನೋಡಿಲ್ಲ. ನಾನು ಹೊರ ಬಂದಾಗ ಭುವನ್ ಪ್ರಥಮ್ ಕತ್ತನ್ನು ಹಿಡಿದಿದ್ರು. ಇಬ್ಬರ ನಡುವೆ ಗಲಾಟೆ ನಡೆಯುತಿತ್ತು, ಕೂಡಲೇ ಪಕ್ಕದ ರೂಮಿನಲ್ಲಿ ಕರೆದುಕೊಂಡು ಹೋಗಿ ನೋಡಿದಾಗ ಭುವನ್ ತೊಡೆಯ ಭಾಗದಲ್ಲಿ ಹಲ್ಲಿನ ಗುರುತುಗಳಿದ್ದವು. ಈ ವೇಳೆ ನಾನು, ಭುವನ್ ಹಾಗೂ ವಿಶಾಲಮ್ಮ ಎಂಬವರು ಸಹ ಇದ್ದರು. ಭುವನ್ ಗೆ ಯಾವ ನಾಯಿಯೂ ಕಚ್ಚಿಲ್ಲ. ಪ್ರಥಮ್ ಕಚ್ಚಿದ್ದು ಎಂದು ಸೆಟ್‍ನಲ್ಲಿ ಎಲ್ರೂ ಹೇಳ್ತಾಯಿದ್ರು. ಪ್ರಥಮ್ ಯಾವಗಲೂ ಕೆಟ್ಟದಾಗಿ ಕಮೆಂಟ್, ಟಾಂಟ್ ಮಾಡ್ತಾಯಿದ್ದ ಎಂದು ನಟಿ ಸಂಜನಾ ಹೇಳಿದ್ದಾರೆ.
ಇನ್ನು ಭುವನ್ ಅವರ ಆರೋಪಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಥಮ್ ಅವರು, ನಾನು ಅಪ್ಪಟ ಸಸ್ಯಹಾರಿ, ನಾನು ಯಾರಿಗೂ ಕಚ್ಚಿಲ್ಲ. ಮೊದಲು ಭುವನ್ ಅವರೇ ನನ್ನ ಮೇಲೆ ಕೈ ಮಾಡಿದ್ದು, ಅಲ್ಲಿದ್ದ ಸಿಬ್ಬಂದಿಗಳು ನಮ್ಮ ಜಗಳ ಬಿಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.
ಪ್ರತಿದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು ತಡೆಯುತ್ತದೆ.
ತಲೆ ಹೊಟ್ಟಿನ (Dandruff) ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ವೇಳೆ ಕಾಡಿಯೇ ಕಾಡುತ್ತೆ. ಇದಕ್ಕಿದೆ ಸರಳ ಪರಿಹಾರ. ಮೆಂತ್ಯಪುಡಿಯನ್ನು ತುಸು ಕಾಲ ನೆನೆಸಿಟ್ಟು, ನೆಲ್ಲಿಕಾಯಿ ಪುಡಿಯೊಂದಿಗೆ ಕಲೆಸಿ, ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಲೋಳೆಸರದ ಬಿಳಿ ತಿರುಳನ್ನು ನೆನೆಸಿ, ದಾಸವಾಳದ ಎಲೆಯೊಂದಿಗೆ ರುಬ್ಬಿ ಹಚ್ಚಿಕೊಳ್ಳಿ. ಮೊಸರಿನೊಂದಿಗೆ ಹಚ್ಚಿಕೊಂಡರೆ ಮೆಹಂದಿಯೂ ಪರಿಣಾಮಕಾರಿ. ಕಡಲೆಹಿಟ್ಟು ಸೀಗೆಯೊಂದಿಗೆ ನಂತರ ತಲೆ ತೊಳೆದುಕೊಳ್ಳಬೇಕು. ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ಸುಟ್ಟು, ತಿರುಳನ್ನು ತೆಗೆದು ರುಬ್ಬಿ ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಕೊಬ್ಬರಿ ಎಣ್ಣೆ…
ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಐಆರ್‌ಸಿಟಿಸಿ ಜೊತೆಗೆ ಪ್ರಯೋಗ: ರೈಲುಗಳನ್ನು ಖಾಸಗಿಗೆ ನಿರ್ವಹಣೆಗಾಗಿ ನೀಡುವುದಕ್ಕೂ ಮುನ್ನ…
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್‌ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ….
ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…