ವಿಶೇಷ ಲೇಖನ

ಒಂದೇ ಒಂದು ಮೋದಿಯ ಫೋನ್ ಕಾಲ್’ಗೆ ಈ ದೇಶದ ಅಧ್ಯಕ್ಷ ಯೆಮನ್ ಮೇಲಿನ ಯುದ್ದ ನಿಲ್ಲಿಸಿದ..!

224

ನರೇಂದ್ರ ಮೋದಿ ಭಾರತದ ನಾಯಕರಾದ ನಂತರ ಬೇರೆ ದೇಶಗಳು ಭಾರತವನ್ನು ನೋಡುವ ರೀತಿ ಈಗ ಬದಲಾಗಿದೆ. ಭಾರತವನ್ನು ತಿರುಕರ ದೇಶ, ಹಾವಾಡಿಗರ ದೇಶ ಎಂದೆಲ್ಲಾ  ಹೀಯಾಳಿಸುತ್ತಿದ್ದ ಕಾಲವೊಂದಿತ್ತು. ಆದ್ರೆ ಈಗ ಹಾಗಿಲ್ಲ. ಏಕೆಂದ್ರೆ ಹಿಗಂತೂ  ಭಾರತ ಅಭಿವೃದ್ದಿಯತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಭಾರತದ ನಾಯಕನ ಮಾತಿಗೆ ಬೇರೆ ದೇಶಗಳು ಕೇಳುವ ಹಾಗಿದೆ.

ಒಂದು ಕಾಲದಲ್ಲಿ ನರೇಂದ್ರ ಮೋದಿಯವರಿಗೆ ವೀಸಾ ಕೊಡೋದಿಲ್ಲ ಎಂದು ಹೇಳುತ್ತಿದ್ದ ಜಗತ್ತಿನ ದೊಡ್ಡಣ್ಣ ಅಮೇರಿಕಾ, ಅದೇ ಮೋದಿಯವರನ್ನು ತಾವಾಗೆ ಅಮೆರಿಕಾಕ್ಕೆ ಬೇಟಿ ಕೊಡಿ ಎಂದು ಆಹ್ವಾನಿಸುತ್ತಾರೆ. ಹಾಗೆ ಅಲ್ಲಿಗೆ ಹೋದ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ಸಿಗುತ್ತೆ. ಮೊದಲಿಗಿಂತಲೂ ಈಗ ಭಾರತ ಅಮೆರಿಕಾದ ಭಾಂದವ್ಯ ಹೆಚ್ಚಾಗಿದೆ.

ಒಂದೇ ಒಂದು ಮೋದಿಯ ಫೋನ್ ಕಾಲ್’ಗೆ ಈ ದೇಶದ ಅಧ್ಯಕ್ಷ ಯೆಮನ್ ಮೇಲಿನ ಯುದ್ದ ನಿಲ್ಲಿಸಿದ..! 

ಬೇರೆ ದೇಶಗಳು ಹೇಗೆ ಮೋದಿ ಮಾತುಗಳನ್ನು, ಆಜ್ಞೆಯಂತೆ ಪಾಲಿಸುತ್ತವೆ ಎಂಬುದಕ್ಕೆ,  ಒಂದು ಉದಾಹರಣೆ ಹೇಳಬೇಕಂದ್ರೆ ಇತ್ತೀಚೆಗಷ್ಟೇ ಸೌದಿ ಅರೇಬಿಯಾ ದೇಶವು ಯೆಮನ್ ದೇಶದ ಮೇಲೆ ಯುದ್ದ ಸಾರಿತ್ತು. ಆಗ ಯೆಮನ್ ದೇಶದಲ್ಲಿರುವ ಭಾರತೀಯರನ್ನು ರಕ್ಷಿಸಲು ಸಚಿವೆ ಸುಶ್ಮಾಸ್ವಾರಜ್’ರವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ರು. ಭಾರತೀಯರ ರಕ್ಷಣೆಗಾಗಿ ಮೋದಿಯವರು, ಸೌದಿ ಅರೇಬಿಯಾ ಅಧ್ಯಕ್ಷ ಸಲ್ಮಾನ್ ಬಿನ್ ಅಬ್ದುಲಾಜಿಜ್’ವರೆಗೂ ಫೋನ್ ಕಾಲ್ ಮಾಡಿ, ತಕ್ಷಣವೇ ಯೆಮನ್ ಮೇಲಿನ ಯುದ್ದ ನಿಲ್ಲಿಸಿ, ನಮ್ಮವರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದಾಗ, ಮೋದಿಯವರ ಮಾತಿಗೆ ಎದುರಾಡದ ಸಲ್ಮಾನ್ ಬಿನ್ ಅಬ್ದುಲಾಜಿಜ್ ಯುದ್ದವನ್ನು ನಿಲ್ಲಿಸಿದ್ರು. ಇದು ಜಗತ್ತಿನ ರಾಷ್ಟ್ರಗಳು ಹೇಗೆ ಮೋದಿ ಮಾತಿಗೆ ಗೌರವ ಕೊಡುತ್ತವೆ ಎಂಬುದನ್ನು ಎತ್ತಿ ತೋರಿಸುತ್ತೆ.

ಇಲ್ಲಿ ಓದಿ:-2000ವರ್ಷಗಳಿಂದ ಒಬ್ಬ ಭಾರತದ ರಾಜಲಿಗಾಗಿ ಕಾಯುತ್ತಿತ್ತು ಈ ದೇಶ..!ಏಕೆ?ಯಾವ ದೇಶ?ಈ ಲೇಖನ ಓದಿ ಶಾಕ್ ಆಗ್ತೀರಾ…

ಮೋದಿಯ ತಂತ್ರಗಾರಿಕೆಯಿಂದಾಗಿ ಭಾರತ  ಚೀನಾ ಮೇಲೆ ಯುದ್ದ ಮಾಡದೆಯೇ ಗೆದ್ದಂತಾಗಿದೆ..!

ಭಾರತ ದೇಶವು ಕಳೆದೆ ವರ್ಷ ನಡೆದ ಗಡಿ ಕದನದಿಂದ ಏಷಿಯಾದಲ್ಲಿಯೇ ತಾನು ಚೀನಾಕ್ಕಿಂತ ಬಲಶಾಲಿ ಎಂಬುದನ್ನು ಹಲವಾರು ಬಾರಿ  ಸಾಬೀತು       ಪಡಿಸುತ್ತಾ ಬಂದಿದೆ.ಭಾರತವು ಪಕ್ಕದಲ್ಲಿರುವ ಪಾಪಿ ಪಾಕಿಸ್ತಾನವನ್ನು ಬಿಟ್ಟು, ಚೀನಾಕ್ಕಿಂತಲೂ ಉಳಿದೆಲ್ಲಾ ದೇಶಗಳೊಂದಿಗೆ ಬೆಳೆಸುತ್ತಿರುವ ಭಾಂದವ್ಯ,ಏಷಿಯಾದ ಹಿರಿಯಣ್ಣನಾಗಿ ಅಧಿಕಾರ ಪಡೆಯುವಲ್ಲಿ ಮುನ್ನುಗ್ಗುತ್ತಿದೆ.ಜಪಾನ್, ವಿಯೆಟ್ನಾಮ್, ಕೋರಿಯಾ, ತೈವಾನ್ಗಳನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿರುವ ಭಾರತ, ಟಿಬೆಟ್ನಲ್ಲೂ ಕೈಯ್ಯಾಡಿಸಿ ಶಕುನಿ ಚೀನಾಕ್ಕೆ ಉಸಿರುಗಟ್ಟುವಂತೆ ಮಾಡುತ್ತಿದೆ.

ಮೋದಿ ಸರ್ಕಾರ ಬಂದಾಗಿನಿಂದ ಮೋದಿಯವರು ಬರೀ ಬೇರೆ ದೇಶಗಳನ್ನು ಸುತ್ತುವುದೇ ಆಗಿದೆ ಎಂಬ ಮಾತು ಕೇಳಿಬಂದದ್ದು ಸುಳ್ಳಲ್ಲ. ಆದ್ರೆ ಜಗತ್ತಿನ ಅನೇಕ ದೇಶಗಳನ್ನು ಭೇಟಿ ಮಾಡಿದ ಮೋದಿ ಅವರೊಂದಿಗೆ ಬಹಳ ಗಟ್ಟಿಯಾದ ಬಾಂಧವ್ಯವನ್ನು ಸ್ಥಾಪಿಸಿ ಬಂದಿದ್ದಾರೆ. ಅಮೇರಿಕ, ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್ಗಳನ್ನೆಲ್ಲ ತಮ್ಮೆಡೆಗೆ ಸೆಳೆದುಕೊಂಡು, ಮುಂಗೋಲಿಯ, ಶ್ರೀಲಂಕಾ, ತೈವಾನ್ಗಳೂ ಚೀನಾ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಚೀನಾಕ್ಕೆ ಮೋದಿ  ಕಂಟಕಪ್ರಾಯವಾಗಿಬಿಟ್ಟಿದ್ದಾರೆ. ಶಕುನಿ ಚೀನಾ ದೇಶವು ಡೋಕ್ಲಾಂನಲ್ಲಿ ನಮ್ಮೆದುರಾಗಿ ನಿಂತು,1962ರ ಯುದ್ಧವನ್ನು ನೆನಪಿಸಿ ಭಾರತೀಯ ಸೈನಿಕರ ಆತ್ಮಸ್ತೈರವನ್ನಕೆಣಕಲು ಪ್ರಯತ್ನಿಸಿತ್ತು. ಆದ್ರೆ ಭಾರತವು ಇದಕ್ಕೆ ಪ್ರತಿಯಾಗಿ ಇದು ಇದು 1962 ಅಲ್ಲ, 2017 ಎಂದಾಗ ಚೀನಾ ದೇಶಕ್ಕೆ ಬಾಲ ಮುದುರಿದ ನಾಯಿಯಂತಾಗಿತ್ತು.

ಆಗ ಮೋದಿ ಅಮೇರಿಕಾ-ಇಸ್ರೇಲ್ ಪ್ರವಾಸದಲ್ಲಿದ್ದರು.ಇನ್ನೇನು ನಾವು ಭಾರತದಲ್ಲಿ ಯುದ್ದ ಮಾಡಿಯೇ ಬಿಡುತ್ತೇವೆ ಎಂಬ ಉತ್ಸಾಹದಲ್ಲಿತ್ತು.ಅದೇ ಟೈಮಿಗೆ ಸರಿಯಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಅಮೇರಿಕಾ-ಜಪಾನ್ ದೇಶದ ಹಡಗುಗಳು ಚೀನಾವನ್ನು ನಡುಗುವಂತೆ ಮಾಡಿದವು.ಈ ಹೊತ್ತಲ್ಲಿಯೇ ಭಾರತದ ಪರ ನಿಂತ ತೈವಾನ್ ದೇಶವು ಎಣ್ಣೆ ಬಾವಿ ಕೊರೆಯುವ ಒಪ್ಪಂದವನ್ನು ನವೀಕರಿಸಿ ಚೀನಾ ವಿರುದ್ದ ಸೆಟೆದು ನಿಂತಿತು.ಭಾರತವನ್ನೇ ತನ್ನ ಚಕ್ರವ್ಯೂಹದಲ್ಲಿ ಸಿಕ್ಕಿಸಲು ಹೋರಾಟ ಶಕುನಿ ಚೀನಾ, ತಾನು ಎನೆದ ಚಕ್ರವ್ಯೂಹದಲ್ಲಿ ತಾನೇ ಸಿಕ್ಕಿಹಾಕಿಕೊಂಡಿತ್ತು.

ಪಾಕೀಸ್ತಾನದ ಪ್ರಧಾನಿ ಸುಷ್ಮಾರೇ ಆದರೆ ಚೆನ್ನಾಗಿತ್ತು ..!

ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿದ್ದ ಮೋದಿ, ತಾನು ಹೋದ ಕಡೆಯೆಲ್ಲಾಲ್ಲಾ ಭಯೋತ್ಪಾದನೆಯ ಕುರಿತಂತೆ ಮಾತನಾಡಿ ಪಾಕಿಸ್ತಾನವನ್ನು ಜಗತ್ತಿನ ಶತ್ರುವನ್ನಾಗಿ ಮಾಡಿಬಿಟ್ಟಿದ್ದರು.ಆದ್ರೆ ಪಾಪಿ ಪಾಕಿಸ್ತಾನವು ತಾನು ಭಯೋತ್ಪಾದನೆಯ ಬೆಂಬಲಿಗನಲ್ಲವೆಂದು ಸಾಬೀತುಪಡಿಸಲು ಹೋಗಿ ಜಗತ್ತಿನ ಮುಂದೆ ತಲೆತಗ್ಗಿಸಬಿಟ್ಟಿತ್ತು.ಇದೆಲ್ಲಾ ಕೇವಲ ಮೋದಿ ತಂತ್ರಗಾರಿಕೆಯಿಂದ ಮಾತ್ರ ಸಾಧ್ಯವಾಯಿತು.ಪಾಕ್ ಪತ್ರಕರ್ತರು, ಟಿವಿ ಚಾನೆಲ್ಲುಗಳು ಮೋದಿ ಪರವಾದ ಮಾತುಗಳನ್ನಾಡಲಾರಂಭಿಸಿದವು. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಸಿಕ್ಕಿಹಾಕಿಕೊಂಡಿದ್ದ ಹೆಣ್ಣು ಮಗಳನ್ನು ಬಿಡಿಸಿ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅಲ್ಲಿನ ಮಕ್ಕಳ ಚಿಕಿತ್ಸೆಗಾಗಿ ವೀಸಾ ಕೊಡಿಸಿದರು. ಈ ರಾಜತಾಂತ್ರಿಕ ಸಂಗತಿಗಳನ್ನು ಎಷ್ಟು ಸೂಕ್ಷ್ಮವಾಗಿ ನಿಭಾಯಿಸಲಾಯಿತೆಂದರೆ ಚಿಕಿತ್ಸೆ ಪಡೆದ ಮಗುವಿನ ತಾಯಿ ಪಾಕೀಸ್ತಾನದ ಪ್ರಧಾನಿ ಸುಷ್ಮಾರೇ ಆದರೆ ಚೆನ್ನಾಗಿತ್ತು ಎಂದುಬಿಟ್ಟಿದ್ದರು.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ್ದ ಕಾರ್ಯದರ್ಶಿ ಯೆನಾಮ್ ಗಂಭೀರ್…

ಭಾರತದ ವಿಶ್ವಸಂಸ್ಥೆಯ ಕಾರ್ಯದರ್ಶಿ ಯೆನಾಮ್ ಗಂಭೀರ್ ಅವರು, “ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಅದೀಗ ”ಟೆರರಿಸ್ಥಾನ್” ಆಗಿದ್ದು, ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ. ಒಸಮಾ ಬಿನ್ ಲಾಡೆನ್, ಮುಲ್ಲಾ ಓವರ್ ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ” ಎಂದು ಪಾಕ್ ಮಾನ ಹರಾಜು ಹಾಕಿದ್ದರು.

ನಿಮ್ಮ ಫೋನ್ ಚಾರ್ಜ್ ಮಾಡಬೇಕಾದ್ರೆ, ನಿಮ್ಗೆ ಗೊತ್ತಿಲ್ಲದೇ ಈ ತಪ್ಪುಗಳನ್ನು ಮಾಡ್ತೀರಾ..!ಅದರಿಂದ ಹಾಗೋ ಅನಾಹುತಗಳು…ತಿಳಿಯಲು ಈ ವಿಡಿಯೋ ನೋಡಿ…

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ