ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂದು ಸೈಕಲ್ ನಲ್ಲಿ ಹಳ್ಳಿ ಹಳ್ಳಿ ತಿರುಗಿ ರೈತರಿಂದ ಹಾಲು ಸಂಗ್ರಹಿಸುತ್ತಿದ್ದ ಇವರು, ಇಂದು 255 ಕೋಟಿ ವಹಿವಾಟಿನ ಒಡೆಯನಾಗಿದ್ದು ಹೇಗೆ ಗೋತ್ತಾ? ಓದಿ ಈ ಸ್ಪೂರ್ತಿದಾಯಕ ಸ್ಟೋರಿಯನ್ನು..!
ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ತಮ್ಮ ಜೀವನ ನಡೆಸಲು ಆಗದ ಪರಿಸ್ಥಿತಿಯಲ್ಲಿದ್ದ ಇವರು ತನ್ನ ಗ್ರಾಮದಲ್ಲಿ ರೈತರಿಂದ ಹಾಲು ಸಂಗ್ರಹಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಂದು ಆ ಕೆಲಸವನ್ನು ಮಾಡಲು ಶುರು ಮಾಡಿದ್ದ ಇವರು ೨ದಶಕಗಳ ನಂತರ ೨೫೫ ಕೋಟಿಯ ಒಡೆಯನಾಗಿದ್ದರೆ.
ಹೆಸರು ನಾರಾಯಣ ಮಜುಂದಾರ್ ಇವರು ತಮ್ಮದೇಯಾದ ರೆಡ್ ಕೌ ಡೈರಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಸರಬರಾಜುದಾರರಲ್ಲಿ ಒಂದಾಗಿದೆ.
ಇವರ ಕಂಪನಿಯು ಮೊಸರು, ತುಪ್ಪ, ಪನೀರ್ ಮತ್ತು ರಾಸುಗುಲ್ಲಾ ಹೊರತುಪಡಿಸಿ ಐದು ವಿಧದ ಹಾಲುಗಳನ್ನು ಮಾರಾಟ ಮಾಡುತ್ತದೆ.
ಹಾಗು ಇವರ ಕಂಪನಿಯಲ್ಲಿ 1.8 ಲಕ್ಷ ಲೀಟರ್ ಪ್ಯಾಕ್ಡ್ ಹಾಲು, 1.2 ಮೆಟ್ರಿಕ್ ಟನ್ಗಳಷ್ಟು ಪನೀರ್, 10 ಮೆಟ್ರಿಕ್ ಟನ್ಗಳಷ್ಟು ಮೊಸರು , 10-12 ಮೆಟ್ರಿಕ್ ಟನ್ಗಳಷ್ಟು ತುಪ್ಪ, 1,500 ಕ್ಯಾನ್ಗಳ ರಾಸಗುಲ್ಲಾಸ್ ಮತ್ತು 500 ಕ್ಯಾನುಗಳ ಗುಲಾಬ್ ಜಾಮೂನ್ಗಳನ್ನು ಪ್ರತಿ ದಿನವೂ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ 2017-18ರಲ್ಲಿ ಇವರು 300 ಕೋಟಿ ರೂಪಾಯಿ ವಹಿವಾಟಿನ ಗುರಿ ಹೊಂದಿದ್ದಾರೆ. ಪ್ರಸ್ತುತ ದಿನದಲ್ಲಿ ಆರ್ಥಿಕವಾಗಿ ಅಷ್ಟೆಲ್ಲ ಬೆಳೆದಿದ್ದರು ಸರಳವಾದ ಜೀವನವನ್ನು ನಡೆಸುತ್ತಿದ್ದಾರೆ.
ಜುಲೈ 25, 1958 ರಂದು ಪಶ್ಚಿಮ ಬಂಗಾಳದ ನಾಧಿಯ ಜಿಲ್ಲೆಯ ಫುಲಿಯಾ ಗ್ರಾಮದಲ್ಲಿ ಜನಿಸಿದ ನಾರಾಯಣ್ ಅವರು ಮೂರು ಸಹೋದರರನ್ನು ಹೊಂದಿದ್ದಾರೆ ಮತ್ತು ಇಬ್ಬರು ಸಹೋದರಿಯರಿದ್ದಾರೆ. ಅವರ ತಂದೆ, ಬಿಮಾಂಡು ಮಜುಂದಾರ್ ರೈತರಾಗಿದ್ದರು, ಅವರ ತಾಯಿ ಬಸಂತಿ ಮಜುಂದಾರ್ ಗೃಹಿಣಿಯಾಗಿದ್ದರು.ಇವರ ತಂದೆ ಹಳ್ಳಿಯಲ್ಲಿ ಒಂದು ಎಕರೆ ಭೂಮಿಯನ್ನು ಹೊಂದಿದ್ದನು ಆದರೆ ಕುಟುಂಬವನ್ನು ಚಲಾಯಿಸಲು ಅದು ಸಾಕಾಗಲಿಲ್ಲ” ಎಂದು ನಾರಾಯಣ್ ಹೇಳುತ್ತಾರೆ. ಇವರ ತಂದೆ ಕೆಲವೊಮ್ಮೆ ಚಿಕ್ಕ ಪುಟ್ಟ ಉದ್ಯೋಗವನ್ನು ಮಾಡುತ್ತಿದ್ದರು, ಆದರೆ ನಾನು ಹುಟ್ಟಿದ ಸಮಯದಲ್ಲಿ ಅವರು ತಿಂಗಳಿಗೆ ರೂ 100 ಅಥವಾ ಅದಕ್ಕೂ ಹೆಚ್ಚಿನ ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ. ಹಣಕಾಸಿನ ಪರಿಸ್ಥಿತಿ ಒತ್ತಡದಿಂದ ಕೂಡಿತ್ತು.
ಇಷ್ಟೆಲ್ಲ ಕಷ್ಟದ ನಡುವೆಯೂ ನಾರಾಯಣ್ ಅವರು ವಿದ್ಯಾಭ್ಯಾಸವನ್ನು ಮಾಡಲು ಮುಂದಾಗುತ್ತಾರೆ. ರಣಘಾಟ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪ್ರಾರಂಭಿಸಿದರು ಆದರೆ ಒಂದು ವರ್ಷದಲ್ಲಿ ಆಸಕ್ತಿ ಕಳೆದುಕೊಂಡರು. ನಾನು ಉದ್ಯೋಗವನ್ನು ಮಾಡಬೇಕೆಂದು.ಇವರ ಊರಿನ ಜಾನುವಾರು ಅಧಿಕಾರಿ ಒಬ್ಬರು ರಸಾಯನಶಾಸ್ತ್ರ ಪದವಿಗೆ ಬದಲಾಗಿ ಡೈರಿ ಫಾರ್ಮ್ನಲ್ಲಿ ಕೋರ್ಸ್ ಮಾಡಿದರೆ ಬಹು ಬೇಗ ಕೆಲಸವನ್ನು ಪಡೆಯ ಬಹುದು ಎಂದು ಸಲಹೆ ನೀಡುತ್ತಾರೆ. ಅವರ ಸಲಹೆಯನ್ನು ಇಷ್ಟ ಪಟ್ಟು ಆ ಕೋರ್ಸನ್ನು ಮಾಡಲು ನಿರ್ಧರಿಸುತ್ತಾರೆ.
1975 ರಲ್ಲಿ, ಅವರು ಡೈರಿ ಟೆಕ್ನಾಲಜಿಯಲ್ಲಿ ಬಿ.ಟೆಕ್ ಅನ್ನು ಹರಿಯಾಣದ ಕರ್ನಾಲ್ನ ರಾಷ್ಟ್ರೀಯ ಡೈರಿ ಇನ್ಸ್ಟಿಟ್ಯೂಟ್ನಲ್ಲಿ ಪ್ರಾರಂಭಿಸಿದರು. ಇದು ನಾಲ್ಕು ವರ್ಷಗಳ ಕೋರ್ಸ್ ಆಗಿತ್ತು. ತಮ್ಮ ಜೀವನ ವೆಚ್ಚಗಳಿಗೆ ಹಣ ಬೇಕಾಗುವ ಸಲುವಾಗಿ 5 ರಿಂದ 7 ರವರೆಗೆ ಹಾಲಿನಡೈರಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ನಾರಾಯಣ್ ಅವರು ತಮ್ಮ ಜೀವನದ ಹಾದಿಯ ಕುರಿತು ಹೇಳುವ ಮಾತುಗಳು
“ನನ್ನ ತಂದೆ ಸುಮಾರು 12,000 ರೂಪಾಯಿಗಳ ಕೋರ್ಸ್ ಶುಲ್ಕವನ್ನು ಪಾವತಿಸಲು ತನ್ನ ಭೂಮಿಯನ್ನು ಈಗಾಗಲೇ ಮಾರಾಟ ಮಾಡಿದ್ದರಿಂದ ನನ್ನ ದಿನನಿತ್ಯದ ಖರ್ಚುಗಳಿಗಾಗಿ ನಾನು ಕೆಲಸ ಮಾಡಲು ಪ್ರಾರಂಭಿಸಿದ್ದೆ.”
ಬೇರೆ ಬೇರೆ ಕಂಪೆನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಅನುಬವನ್ನು ಪಡೆದರು ಕಾಲ ಕ್ರಮೇಣ ತಿಂಗಳಿಗೆ ರೂ 50,000 ರ ವೇತನದೊಂದಿಗೆ ಜನರಲ್ ಮ್ಯಾನೇಜರ್ ಆಗಿ ಮತ್ತೊಂದು ಡೈರಿ ಸಂಸ್ಥೆಯೊಂದನ್ನು ಸೇರಿಕೊಂಡರು. ಈ ಕಂಪನಿಯು ಹಾಲು ಮತ್ತು ಹಾಲು ಉತ್ಪನ್ನಗಳನ್ನು ತಯಾರಿಸಿತು, ಮತ್ತು ಅವರು 2005 ರವರೆಗೆ 10 ವರ್ಷಗಳವರೆಗೆ ಅವರೊಂದಿಗೆ ಕೆಲಸ ಮಾಡಿದರು.
ಆ ಕಂಪನಿಯ ಮಾಲೀಕರು ಇವರಿಗೆ ಸ್ವಂತ ವ್ಯವಹಾರವನ್ನು ಆರಂಭಿಸಲು ಪ್ರೋತ್ಸಾಹಿಸಿದರು. ಮುಖ್ಯವಾಗಿ ಅವರ ಪ್ರೋತ್ಸಾಹ ಮತ್ತು ಪ್ರೇರಣೆ ಇವರ ಯಶಸ್ಸಿಗೆ ಕಾರಣ ಅನ್ನುತ್ತಾರೆ. ಹಾಗೆ ತಮ್ಮ ಸ್ವಂತ ವ್ಯವಹಾರವನ್ನು ಪ್ರಾಂಭಿಸಿ ಮಾರುಕಟ್ಟೆಯಲ್ಲಿ ಇವ್ರ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಕಷ್ಟ ಪಟ್ಟರೆ ಆ ಭಗವಂತ ಅದಕ್ಕೆ ಸರಿಯಾದ ಪ್ರತಿ ಫಲ ಕೊಡುತ್ತಾನೆ ಅನ್ನೋದಕ್ಕೆ ಇವರು ಉದಾಹರಣೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಓಂ ಕಾಳು ಅಡುಗೆಗೆ ರುಚಿ ನೀಡುವುದಲ್ಲದೆ ತನ್ನಲ್ಲಿ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ಇಂದಿನ ಒತ್ತಡದ ಬದುಕಿನಲ್ಲಿ ಜನರು ತಾವೇ ಅಡುಗೆ ಮಾಡಿ ತಿನ್ನಲು ಸಮಯವಿಲ್ಲದ ಕಾರಣ ಹೊರಗಡೆ ಅಥವಾ ಹೋಟೆಲ್ ಗಳಲ್ಲಿ ಹಾಗೇನೇ ರಸ್ತೆ ಬದಿಗಳಲ್ಲಿ ಸಿಗುವಂತಹ ಮತ್ತೆ ಬೇಕರಿ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನುತ್ತಾರೆ ಆದರೆ ಇವುಗಳು ಅವರ ಬಾಯಿಗೆ ರುಚಿಯನ್ನು ನೀಡುತ್ತವೆ ಆದರೆ ಅದರಿಂದ ಆರೋಗ್ಯ ಖಂಡಿತ ಹಾಳಾಗುತ್ತದೆ ಏಕೆಂದರೆ ಹೋಟೆಲ್ ಗಳಲ್ಲಿ ಹೆಚ್ಚಾಗಿ ಹೊರಗಿನ ತಿನಿಸುಗಳಲ್ಲಿ ಸೋಡ ಬಳಸುತ್ತಾರೆ. ಏಕೆಂದರೆ ಈ…
ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಏನಿದು ಪ್ರಕರಣ? ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು….
ನೀರಜ್ ಜಾರ್ಜ್ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್…
ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಗುರುವಾರ ನರೇಂದ್ರ ಮೋದಿಯವರು ಸಾಯಂಕಾಲ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ಯೋಧರಿಗೆ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ನರೇಂದ್ರ ಮೋದಿಯವರ ಜೊತೆ ನಿರ್ಗಮಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಆರ್…
ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ
ಚಿಕ್ಕಮಗಳೂರು: ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದ ಜ್ಯೋತಿಷಿಯೊಬ್ಬನ ಮಾತು ಕೇಳಿ 1.5 ತಿಂಗಳ ಹೆಣ್ಣು ಹಸುಗೂಸನ್ನು ಸ್ವತಃ ತಂದೆಯೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ನಲ್ಲಿ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. 27 ವರ್ಷದ ಮಂಜುನಾಥ್ ನವಜಾತ ಕಂದಮ್ಮನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣು ಮಗು ಭವಿಷ್ಯಕ್ಕೆ ಕಂಟಕ ಎಂದು ಜ್ಯೋತಿಷಿ ಹೇಳಿದ್ದರಿಂದ ಅದನ್ನು ಕುರುಡಾಗಿ ನಂಬಿದ ತಂದೆ ಮಗುವನ್ನು ಕತ್ತು…