Uncategorized, ಆರೋಗ್ಯ

ಏಲಕ್ಕಿಯಲ್ಲಿರುವ ಆರೋಗ್ಯಾಕಾರಿ ಲಾಭಗಳನ್ನು ತಿಳಿಯಲು…! ತಿಳಿಯಲು ಇದನ್ನು ಓದಿರಿ…

2034

ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ.

ಕ್ಯಾನ್ಸರ್ ನಿರೋಧಕ ಶಕ್ತಿ:

ಇತ್ತೀಚೆಗೆ ಕ್ಯಾನ್ಸರ್ ನಿರೋಧಕ ಶಕ್ತಿ ಏಲಕ್ಕಿಗಿದೆ ಎಂಬುದು ಬೆಳಕಿಗೆ ಬರುತ್ತಲೇ ವೈದ್ಯಕೀಯ ಸಂಶೋಧನಾ ರಂಗಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ.

ಆದರೆ ಇದಕ್ಕೂ ಮೊದಲೇ ನಮ್ಮ ಹಿರಿಯರು ಪ್ರತಿದಿನವೂ ಏಲಕ್ಕಿಯ ಉಪಯೋಗವನ್ನು ಮನೆಗಳಲ್ಲಿ ಕಡ್ಡಾಯಗೊಳಿಸಿದ್ದಿದ್ದು ಅವರ ಆರೋಗ್ಯ ಕಾಳಜಿಯನ್ನು ತೋರಿಸುವುದು ಸುಳ್ಳಲ್ಲ. ಇಂದಿಗೂ ಉಟವಾದ ತಕ್ಷಣ ವೀಳ್ಯದೆಲೆಯ ಬದಲಾಗಿ ಕೆಲವರು ನಾಲ್ಕು ಏಲಕ್ಕಿ ಕಾಳನ್ನು ಅಗಿದು ತಿನ್ನುವ ರೂಢಿ ಇಟ್ಟುಕೊಂಡಿರುವುದನ್ನು ನೋಡಿರಬಹುದು. ಅದಕ್ಕೆ ಮುಖ್ಯ ಕಾರಣ ಏಲಕ್ಕಿಯಲ್ಲಿರುವ ಕ್ಯಾನ್ಸರ್ ನಿರೋಧಕ  ಶಕ್ತಿ.
ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದಷ್ಟೇ ಅಲ್ಲದೇ, ಏಲಕ್ಕಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ.

ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ಏಷ್ಯ ಖಂಡದ ಉಷ್ಣವಲಯವೇ ಮೂಲಸ್ಥಾನ. ಕೇರಳವನ್ನು ಪೂರ್ವಪ್ರಾಂತ್ಯದ “ಏಲಕ್ಕಿ ನಾಡು” ಎಂದು ಕರೆಯೆಲಾಗುತ್ತಿತ್ತು.

ಏಲಕ್ಕಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ. ಹಾಗೂ ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಫ್ಲೂವಿನಂತಹ ಜ್ವರಕ್ಕೆ ಇದನ್ನು ಔಷಧವಾಗಿ ಬಳಸುತ್ತಾರೆ. ದನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆಯು ಕಂಡುಬಂದಾಗಲು ಇದರ ಬಳಕೆಯನ್ನು

ಮಾಡಬಹುದಾಗಿದೆ. ಮಕ್ಕಳ ಬಿಕ್ಕಳುವಿಕೆಗೆ ಇದನ್ನು ಸಕ್ಕರೆಯೊಂದಿಗೆ ಉಪಯೋಗಿಸಬಹುದು. ಅಜೀರ್ಣ ಮತ್ತು ವಾಕರಿಕೆಗೂ ಔಷಧವಾಗಿ ಬಳಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿನ ಬಾಯಿಯ ವಾಸನೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ.

ರೋಗ ನಿರೋಧಕ ಶಕ್ತಿ

ಏಲಕ್ಕಿಯ ಹೆಚ್ಹಿನ ಉಪಯೋಗಗಳು:

  • ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಏಲಕ್ಕಿ ಸಹಕಾರಿ
  • ಉಸಿರಾಟದಲ್ಲಿ ತಾಜಾತನ ಇರಬೇಕೆಂದರೆ ಏಲಕ್ಕಿಯನ್ನು ಅಗಿಯಬಹುದು. ಇದು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನೂ ನಿವಾರಿಸುವ ಶಕ್ತಿಯನ್ನು ಹೊಂದಿದೆ. ಮೂತ್ರಸಂಬಂಧಿಕಾಯಿಲೆಗಳನ್ನೂ ಇದು ನಿವಾರಿಸುವ ಶಕ್ತಿಯನ್ನು ಹೊಂದಿದೆ.
  • ಏಲಕ್ಕಿ ಚಹ ಸೇವಿಸುವುದರಿಂದ ಖಿನ್ನತೆ ಮಾಯವಾಗುತ್ತದೆಯಂತೆ! ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ ಆಯುರ್ವೇದವಂತೂ ಇದನ್ನು ಒಪ್ಪಿಕೊಂಡಿದೆ.
  • ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದಕ್ಕಿದೆ.
  • ಸಂಶೋಧನೆಗಳ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಲಕ್ಕಿಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ.
  • ಅತೀ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಏಲಕ್ಕಿ ಸಹಕಾರಿ
  • ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ.
  • ಆ್ಯಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.
  • ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಇದು ತಡೆಗಟ್ಟುತ್ತದೆ. ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ.
  • ಹೃದಯದ ಆರೋಗ್ಯವನ್ನೂ ಸಮಸ್ಥಿತಿಯಲ್ಲಿಡಲು ಇದು ಸಹಕಾರಿ.
  • ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು.
  • ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.

ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದೂ ಸಂಶೋಧನೆಯಿಂದ ಸಾಬೀತಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿರುವ ಡಾ.ರಮಣರಾವ್..!ತಿಳಿಯಲು ಈ ಲೇಖನ ಓದಿ..

    ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  • ಕ್ರೀಡೆ

    ಐಪಿಎಲ್ 2018ರ ಸಂಪೂರ್ಣ ವೇಳಾಪಟ್ಟಿ ಕನ್ನಡದಲ್ಲಿ…ತಿಳಿಯಲು ಮುಂದೆ ಓದಿ ತಪ್ಪದೆ ಶೇರ್ ಮಾಡಿ…

    ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 2018ರ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಸಂಪೂರ್ಣ ವೇಳಾಪಟ್ಟಿ ನಿಮಗಾಗಿ ಇಲ್ಲಿದೆ.ಈ ಸಲದ ಚಾಂಪಿಯನ್‌ಶಿಪ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಆ ತಂಡಗಳ ಪಟ್ಟಿಯನ್ನು ನೀವೂ ನೋಡಬಹುದು. ಭಾಗವಹಿಸುವ ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ತಾನ ರಾಯಲ್ಸ್. ಸೂಚನೆ:- ಪಂದ್ಯಗಳ ದಿನಾಂಕ ಮತ್ತು ನಿಗದಿತ ಸ್ಥಳಗಳು ಐಪಿಎಲ್ ಸೂಚನೆಯಂತೆ ಬದಲಾಗುವ ಸಾಧ್ಯತೆಗಳು ಇರುತ್ತವೆ.  

  • ಗ್ಯಾಜೆಟ್

    ಇನ್ನು ಮುಂದೆ ಸಮುದ್ರದಾಳದಲ್ಲಿ ಕೂಡ ಫೋನ್ ಮಾಡಬಹುದು!!!

    ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(2 ಡಿಸೆಂಬರ್, 2018) ನೀವು ನಂತರ ಪಶ್ಚಾತ್ತಾಪಪಡುವಷ್ಟು ಕೆಟ್ಟದಾಗಿ ನೀವೇನಾದರೂ ಮಾಡುವಷ್ಟು ನೀವು ಕೋಪಗೊಳ್ಳುವಂತೆ ಮಾಡಲು ಯಾರಿಗೂ ಅವಕಾಶ ನೀಡಬೇಡಿ. ಮನರಂಜನೆಅಥವಾ ಹೊರನೋಟದ…

  • ಸಂಬಂಧ

    ಒಂದು ಫೋಟೋಗಾಗಿ ಮದುವೆಮನೆಯಲ್ಲೇ ಕಿತ್ತಾಡಿಕೊಂಡ ವಧು ವರರು!ಆಮೇಲೆ ಏನಾಯ್ತು ಗೊತ್ತಾ???

    ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.