ಸುದ್ದಿ

ಈ ಸಮ್ಮಿಶ್ರ ಸರ್ಕಾರಕ್ಕಿಂತ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು – ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಎಂ.ಬಿ ಪಾಟೀಲ್- ಇದಕ್ಕೆ ನಿಮ್ಮ ಉತ್ತರ.!

64

ಸಮ್ಮಿಶ್ರ ಸರ್ಕಾರದಲ್ಲಿ ತಪ್ಪುಗಳಾಗಿವೆ ಅದು ಜೆಡಿಎಸ್ ಸರ್ಕಾರದ ಸಚಿವರು ಹಾಗೂ ಶಾಸಕರಿಂದ ಆಗಿವೆ ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಬುಧವಾರ ಹೇಳಿದರು. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ನಿನ್ನೆ ಹದ್ದು ಗಿಣಿ ಟ್ವೀಟ್​ಗೆ ಬಗ್ಗೆ ಕಾಗವಾಡ ಮತಕ್ಷೇತ್ರದ ಮಂಗಸೂಳಿ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇದ್ದಾಗೊಂದು, ಇಲ್ಲದಾಗೊಂದು ಹೇಳಿಕೆ ಸರಿಯಲ್ಲ, 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳಬೇಳಕಿತ್ತು. ಆಗ ಹೇಳಿದರೆ ಒಂದು ಬೆಲೆ ಇರ್ತಿತ್ತು. ಆದರೆ, ಅವರು ಈಗ ಹೇಳುವುದನ್ನು ಬಿಡಬೇಕು. ನಮ್ಮ ಬೆಂಬಲದಿಂದ ಸರ್ಕಾರ ರಚಿಸಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಎಂಬಿ ಪಾಟೀಲ್​ ಅವರು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಇನ್ನು ಬಿಜೆಪಿ ಸರ್ಕಾರ ನೆರೆ ಪರಿಹಾರಕ್ಕೆ ಒಂದೇ ಒಂದು ರೂಪಾಯಿ ಹಣ ಇಲ್ಲಿತನಕ ಬಿಡುಗಡೆ ಮಾಡಿಲ್ಲ, ಈ ಸರ್ಕಾರ ನೋಡಿದ್ರೆ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು ಎಂದ ಅವರು, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಏಜೆಂಟ್ ಆಗಿ ಕಾರ್ಯ ನಿರ್ವಸುತ್ತಿರುವುದು ನಿಶ್ಚಿತವಾಗಿದೆ ಜೊತೆಗೆ ಇಡಿ, ಐಟಿ ಕೂಡ ಕೇಂದ್ರದ ಕೈಗೊಂಬೆಯಾಗಿದೆ ಎಂದರು.

ಅಂತೆಯೇ ಇತ್ತೀಚಿಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಅನುದಾನ ಬೇಡ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿ ಸೂರ್ಯ ಒಬ್ಬ ಮೂರ್ಖ ಮನುಷ್ಯ. ಸೋಸಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಹೋಗುತ್ತಾರೆ ಎಂದು ಎಂಬಿ ಪಾಟೀಲ್​ ಅವರು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರ, ವಿಪತ್ತು ಪರಿಹಾರ ಎಂದರೆ ಏನು ಗೊತ್ತಿದೆಯಾ(?) ಪ್ರಬದ್ಧತೆ ಇಲ್ಲದವರು. ರಾಜ್ಯದ ಸಂಸದರಾಗಿ ಹೆಚ್ಚಿನ ಅನುದಾನ ತರುತ್ತೇನೆ ಎಂದು ಹೇಳಬೇಕು. ಅದು ಬೆಳಗಾವಿಯಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ, ಆದಷ್ಟು ಬೇಗನೆ ಸಂತ್ರಸ್ಥರಿಗೆ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇದು ಕಪ್ಪು ಚುಕ್ಕೆಯಾಗುತ್ತದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಆಗ್ರಹಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣನ ಹವಾ ಜೋರು!ಕಾಲ್ ಶೀಟ್ ಗೆ ದಂಬಾಲು ಬಿದ್ದಿರುವ ಸ್ಟಾರ್ ನಾಯಕರು…

    ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣರ ಹವಾ ಈಗ ಟಾಲಿವುಡ್ ನಲ್ಲಿ ತುಂಬಾ ಜೋರಾಗಿದೆ.ಗೀತಾ ಗೋವಿಂದಂ ಚಿತ್ರದ ಯಶಸ್ವಿ ನಂತರ ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿವರೆಗೂ ರಷ್ಮಿಕಾರವರೆ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಹವಾ ಕ್ರಿಯೇಟ್ ಆಗಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಚಿಕನ್ ಪ್ರಿಯರೇ ಕೋಳಿಯ ಚರ್ಮ ತಿನ್ನುತ್ತೀರಾ..!ಹಾಗಾದ್ರೆ ತಿನ್ನುವ ಮೊದಲು ಈ ಲೇಖನ ಓದಿ..ಶೇರ್ ಮಾಡಿ…

    ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.

  • India, Place

    ಕೈಲಾಸ ಪರ್ವತ

    ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ  ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ , ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ ಬೌದ್ಧ, ಜೈನ ಮತ್ತು ಬಾನ್ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ. ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ…

  • ಸಿನಿಮಾ

    ಮೊದಲ ಬಾರಿಗೆ ತನ್ನ ಅಭಿಮಾನಿ ಮೇಲೆಯೇ ಗರಂ ಆದ ದಾಸ ದರ್ಶನ್..!ಕಾರಣ ಏನು ಗೊತ್ತಾ..?

    ಮಾಸ್ಟರ್ ಹಿರಣ್ಣಯ್ಯನವರ ಅಗಲಿಕೆಯ ಕಂಬನಿ ಮಿಡಿದಿರುವ ದರ್ಶನ್ ‘ಗಜ’ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗೆ ಇರುತ್ತವೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ನಿಧನದ ಹಿನ್ನೆಲೆಯಲ್ಲಿ ಸಂತಾಪಗಳ ಮಹಾಪೂರವೇ ಹರಿದು ಬಂದಿದೆ. ಅನೇಕ ಕಲಾವಿದರು ಮಾಸ್ಟರ್ ಹಿರಣ್ಣಯ್ಯ ಅವರ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತೆಯೇ ನಟ ದರ್ಶನ್ ಕೂಡ ಹಿರಣ್ಣಯ್ಯ ಅವರ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ. ಕನ್ನಡ ರಂಗಭೂಮಿಯ ಹಿರಿಯ ಕಲಾವಿದರಾದ…

  • ದೇವರು-ಧರ್ಮ

    ಶಾಸ್ತ್ರಗಳ ಪ್ರಕಾರ ಒಂದು ಸಣ್ಣ ಅಡಿಕೆಯಿಂದ ನೀವು ಸುಲಭವಾಗಿ ಶ್ರೀಮಂತರಾಗಬಹುದು..!ತಿಳಿಯಲು ಈ ಲೇಖನ ಈ ಲೇಖನ ಓದಿ..

    ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.

  • ಸುದ್ದಿ

    23 ವರ್ಷದ ಅಲೆಕ್ಸಾ ಟೆರಾಜಾ ಎಂಬುವರು ತಲೆ ಕೆಳಗಾಗಿ ಯೋಗ ಮಾಡಿ ಆರನೇ ಅಂತಸ್ತಿನಿಂದ 80 ಅಡಿ ಕೆಳಗೆ ಬಿದ್ದ ಯುವತಿ…!

    ಮೆಕ್ಸಿಕೋದ ಕಾಲೇಜು ಯುವತಿ ಬಾಲ್ಕನಿ ಮೇಲೆ ತಲೆಕೆಳಗಾಗಿ ಯೋಗ ಮಾಡಲು ಹೋಗಿ, ಆಯಾತಪ್ಪಿ 80 ಅಡಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್​ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಿ ಮತ್ತು ಪಾದದ ಕೀಲುಗಳನ್ನು ಮರುಜೋಡಣೆ ಮಾಡಿರುವುದರಿಂದ ಆಕೆ ಮೂರು ವರ್ಷ ನಡೆದಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆ ದೇಹದಲ್ಲಿ 110 ಮೂಳೆಗೆ ಮುರಿದಿವೆ. ತಲೆ, ಸೊಂಟದ ಭಾಗಕ್ಕೂ ಪೆಟ್ಟು ಬಿದ್ದಿದೆ. ಯುವತಿ ಅಪಾರ್ಟ್​ಮೆಂಟ್​ನ ಆರನೇ ಅಂತಸ್ತಿನಲ್ಲಿರುವ ತಮ್ಮ ಮನೆಯ ಬಾಲ್ಕನೆಯ ಕಂಬಿಯ ಮೇಲೆ…