ಜೀವನಶೈಲಿ

ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಏನ್ ಗೊತ್ತಾ?ಮುಂದೆ ಓದಿ…

920

ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ.

 

ಮನೆಯಲ್ಲಿಯೇ ಅಡುಗೆ ಮಾಡಿ ತಿಂದರೆ ಮತ್ತು ಊಟ, ತಿಂಡಿ ಮಾಡುವಾಗ ಟಿವಿ, ವಿಡಿಯೋಗಳನ್ನು ವೀಕ್ಷಿಸದವರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಕಡಿಮೆ ಎನ್ನುತ್ತದೆ ಅಧ್ಯಯನವೊಂದು. ಅಮೆರಿಕಾದ ಒಹಿಯೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು 12,842 ಮಂದಿ ಮೇಲೆ ಅಧ್ಯಯನ ನಡೆಸಿದ್ದರು. ಅಧ್ಯಯನಕ್ಕೊಳಪಟ್ಟವರು ತಮ್ಮ ಸಂದರ್ಶನಕ್ಕೆ ಮುನ್ನ ವಾರಕ್ಕೊಮ್ಮೆಯಾದರೂ ಕುಟುಂಬದವರ ಜೊತೆ ಸೇರಿ ಊಟ ಮಾಡುತ್ತಿದ್ದರು.

ಸ್ಥೂಲಕಾಯ 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಲ್ಲಿ ಕಾಣುವ ಭೌತಿಕ ದ್ರವ್ಯರಾಶಿ ಸೂಚಿ .ಇದನ್ನು ವ್ಯಕ್ತಿಯ ಎತ್ತರದ ಆಧಾರದ ಮೇಲೆ ತೂಕವನ್ನು ಅಳೆಯಲಾಗುತ್ತದೆ. ಅಧ್ಯಯನಕ್ಕೊಳಪಟ್ಟ ವಯಸ್ಕರಲ್ಲಿ, ಕುಟುಂಬದವರ ಜೊತೆ ಸೇರಿ ಊಟ ಮಾಡುವಾಗ ಟಿವಿ, ವಿಡಿಯೋ ವೀಕ್ಷಣೆ ಮಾಡದೆ ಆಹಾರದ ಮೇಲೆ ಗಮನ ನೀಡಿ, ಅಕ್ಕಪಕ್ಕದವರ ಜೊತೆ ಮಾತನಾಡುತ್ತಾ ತಿಂದರೆ ಸ್ಥೂಲಕಾಯ ಸಮಸ್ಯೆ ಕಡಿಮೆ ಕಾಣಿಸಿಕೊಳ್ಳುತ್ತದೆ.

ಅಲ್ಲದೆ ಹೊರಗಿನ ಆಹಾರವನ್ನು ಆದಷ್ಟು ಕಡಿಮೆ ಮಾಡಿ ಮನೆಯಲ್ಲಿ ತಯಾರಿಸಿದ ಆಹಾರ ತಿಂದರೆ ಕೂಡ ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆ. ಕುಟುಂಬದವರ ಜೊತೆ ಎಷ್ಟು ಸಲ ತಿನ್ನುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ ಬದಲಿಗೆ ಆಹಾರ ತಿನ್ನುವಾಗ ಎಷ್ಟು ತಿನ್ನುತ್ತೀರಿ, ಏನು ತಿನ್ನುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ರಚೆಲ್ ಟುಮಿನ್ ಹೇಳುತ್ತಾರೆ.

ಹೆಚ್ಚಾಗಿ ಹೊರಗಿನ ಹೊಟೇಲ್ ಆಹಾರ ತಿನ್ನುವವರಲ್ಲಿ ಸ್ಥೂಲಕಾಯದ ಸಮಸ್ಯೆ ಅಧಿಕವಾಗಿ ಕಂಡುಬರುತ್ತದೆ. ಮನುಷ್ಯನ ಜೀವನಶೈಲಿಯೂ ಕಾರಣವಾಗುತ್ತದೆ ಎಂದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ಸರಹ್ ಆಂಡೆರ್ಸನ್ ಹೇಳುತ್ತಾರೆ. ಅಕಾಡೆಮಿ ಆಫ್ ನ್ಯೂಟ್ರಿಶನ್ ಅಂಡ್ ಡಯಟೆಟಿಕ್ಸ್ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಆಸಿಫಾ ಅತ್ಯಾಚಾರದ ಬಗ್ಗೆ ಈಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.!ಇದು ನಿಜವೋ, ಸುಳ್ಳೋ ನೀವೇ ಹೇಳಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಮನುಕುಲವನ್ನೇ ಬೆಚ್ಚಿ ಬೀಳಿಸುವ ಹೃದಯ ವಿದ್ರಾವಕ ಘಟನೆ ಕಾಶ್ಮೀರದಲ್ಲಿ ನಡೆದಿದ್ದು, ಏನೂ ತಿಳಿಯದ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದರಿಂದ ಇಡೀ ಭಾರತವೇ ತಲೆ ತಗ್ಗಿಸುವಂತಾಗಿದೆ.ಪಾಪ ಏನೂ ತಿಳಿಯದ ಮುಗ್ದ ಬಾಲಕಿ ಇವರಿಗೆ ಏನು ಮಾಡಿತ್ತು. ಅತ್ಯಾಚಾರ ನಡೆಸಿ, ಕೊಲೆ ಮಾಡಿದವರು ಯಾರೀ ಆಗಿರಲಿ ಅವರಿಗೆ ಕೊಡುವ ಶಿಕ್ಷೆ, ಬೇರೆಯವರಿಗೂ ಪಾಟವಾಗಬೇಕು. ಇದರಲ್ಲಿ ಯಾವುದೇ ಧರ್ಮ, ರಾಜಕೀಯ ದಯವಿಟ್ಟು ಮಾಡ ಬೇಡಿ.ನಮ್ಮ ಬೇಡಿಕೆ ಆರೋಪಿಗಳಿಗೆ ಕಠಿಣ ಶಿಕ್ಷೆ…

  • ಹಣ ಕಾಸು

    ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

    ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ

  • ಜ್ಯೋತಿಷ್ಯ

    ನವಿಲು ಗರಿಯನ್ನು ಮನೆಯ ಈ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

    ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಶ್ರೀಕೃಷ್ಣನ ತಲೆ ಮೇಲೂ ನವಿಲು ಗರಿಯಿರುತ್ತದೆ. ನವಿಲು ಗರಿ ಮನೆಯಲ್ಲಿದ್ದರೆ ಸಾಕಷ್ಟು ಲಾಭಗಳಿವೆ. ನವಿಲು ಗರಿ ಮನೆಯ ಸುಖ, ಶಾಂತಿ, ಸಮೃದ್ಧಿಗೆ ಕಾರಣವಾಗುತ್ತದೆ. ಶುಕ್ರವಾರದ ದಿನ ನವಿಲು ಗರಿಯನ್ನು ಮನೆಗೆ ತನ್ನಿ. ಅದನ್ನು ದೇವರ ಮನೆಯಲ್ಲಿಡಿ. ದೇವರ ಮನೆಯಲ್ಲಿ ಪೂಜೆ ವೇಳೆ ಗಣೇಶ, ಈಶ್ವರ, ಲಕ್ಷ್ಮಿ, ಸರಸ್ವತಿ ಮತ್ತು ಹನುಮಂತನ ಮೂರ್ತಿ ಅಥವಾ ಫೋಟೋ…

  • ಉಪಯುಕ್ತ ಮಾಹಿತಿ

    ಮನೆಯಲ್ಲಿ ನೀವು ಇಡಬೇಕಾದ ವಾಸ್ತು ಗಿಡಗಳು ಮತ್ತು ಅದರ ಪರಿಣಾಮಗಳು; ನೀವು ತಪ್ಪದೇ ತಿಳಿಯಬೇಕಾದ ಸಂಗತಿಗಳು….

    ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ…

  • ದೇಗುಲ ದರ್ಶನ

    ತಲಕಾವೇರಿ ತೀರ್ಥೋದ್ಭವ ಸಂಭ್ರಮ: ಬ್ರಹ್ಮ ಕುಂಡಲದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕೊಡವರ ಕುಲದೇವತೆ..!

    ಕಾವೇರಿ ಕೊಡವರ ಕುಲದೇವಿ,ಕಾವೇರಿ ಜನ್ಮಸ್ಥಳ ತಲಕಾವೇರಿಯಲ್ಲಿ  ಅರ್ಚಕರ ಮಂತ್ರಘೋಷ ,ಮಂಗಳವಾದ್ಯ  ನಡುವೆ ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕಲಗ್ನ, ರೋಹಿಣಿ ನಕ್ಷತ್ರದಲ್ಲಿ ಘಟಿಸಿದ ಪವಿತ್ರ ತೀರ್ಥೋದ್ಭವವನ್ನು ರಾಜ್ಯ ಮತ್ತು ಹೊರರಾಜ್ಯದಿಂದಬಂದ ನೂರಾರು ಭಕ್ತರು ಕಣ್ತುಂಬಿಕೊಂಡರು. 12:59ಕ್ಕೆ ತೀರ್ಥೋದ್ಭವ ಘಟಿಸಲಿದೆ ಎಂದು ಹೇಳಲಾಗಿತ್ತಾದರೂ 2 ನಿಮಿಷ ಮುನ್ನವೇ ತೀರ್ಥೋದ್ಭವಾಯಿತು. 30 ಕ್ಕೂ ಹೆಚ್ಚು ಅರ್ಚಕರ ಮಂತ್ರಘೋಷ, ಮಂಗಳವಾದ್ಯದ ನಡುವೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಈ ವಿಸ್ಮಯಕ್ಕೆ ಅಪಾರ ಭಕ್ತ…