ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡಾಕ್ಟರ್ ಅಂದ್ರೆ ಸಾಕು ಜನ ಮೂಗು ಮುರಿತಾರೆ. ಆಸ್ಪತ್ರೆಗಳು ಸುಮಸುಮ್ಮನೆ ಇಲ್ಲ ಸಲ್ಲದ ಟಾರ್ಜ್ ಹಾಕಿ ಟ್ರೀಟ್ಮೆಂಟ್ ಹೆಸರಲ್ಲಿ ಹಣ ಪೀಕುತ್ತಾರೆ. ಇನ್ನು ವೈದ್ಯರೋ ಹೇಳಂಗಿಲ್ಲ. ಒಂದಲ್ಲ ಒಂದು ರೋಗದ ಬಗ್ಗೆ ಹೇಳಿ ಹೆದರಿಸ್ತಾರೆ. ಧನರಾಕ್ಷಸರಾಗಿದ್ದಾರೆ ಅಂತ ಜನರಲ್ಲಿ ಅಚ್ಚಾಗಿದೆ. ಆದರೆ ಈ ಅಭಿಪ್ರಾಯಗಳಿಗೆ ತದ್ವಿರುದ್ಧವಾಗಿದ್ದಾರೆ ಡಾ.ರಮಣರಾವ್.
700-1200 ಜನ ರೋಗಿಗಳು ಆಗಮಿಸಿ ಫ್ರೀ ಟ್ರಿಟ್ಮೆಂಟ್ ತಗೊಳ್ತಾರೆ. ಡಾ.ರಮಣರಾವ್ ಅವರ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯಲು ಬೆಂಗಳೂರಿನ 100 ಕಿಲೋಮೀಟರ್ ಆಲುಪಾಸಿನಲ್ಲಿರುವವರು ಬರುತ್ತಾರೆ. ಅದೂ ಕೂಡಾ ಶನಿವಾರ ರಾತ್ರಿಯಿಂದಲೇ ಇವರ ಕ್ಲಿನಿಕ್ ಎದುರು ಕ್ಯೂ ಆರಂಭವಾಗಿರುತ್ತದೆ. ಇನ್ನು ಡಾ.ರಮಣರಾವ್, ಶಾಲೆಗಳಿಗೂ ತೆರಳಿ ಮಕ್ಕಳಿಗಾಗಿ ಉಚಿತ ಆರೋಗ್ಯ ಸೇವೆ ಕಲ್ಪಿಸುತ್ತಿದ್ದಾರೆ.
1974 ರಲ್ಲಿ ಬಡವರಿಗೆಂದೇ ಬೆಂಗಳೂರಿನ ಬೇಗುರ್ ನಲ್ಲಿ ಉಚಿತ ಕ್ಲಿನಿಕ್ ಓಪನ್ ಮಾಡಿರುವ ಡಾ.ರಮಣರಾವ್, ಸತತ 43 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದಾರೆ. ಈ ಕ್ಲಿನಿಕ್ ನಡೆಸಲು ಡಾ.ರಮಣರಾವ್, ವಾರಕ್ಕೆ 2 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಇವರ ಪುತ್ರರಾದ ಡಾ.ಚರಿತ್ ಭೋಜರಾಜ್ ಮತ್ತು ಡಾ.ಅಭಿಜಿತ್ ಭೋಜರಾಜ್ ಕೂಡಾ ಗ್ರಾಮೀಣ ಜನರ ಸೇವೆ ಮಾಡುತ್ತಿದ್ದಾರೆ.
ಈ ಉಚಿತ ಕ್ಲಿನಿಕ್ ನಲ್ಲಿ 10 ಜನ ಡೆಂಟಿಸ್ಟ್, ಚರ್ಮ ರೋಗ ತಜ್ಞರು ಸೇರಿದಂತೆ ಒಟ್ಟು 25 ಜನ ಸಿಬ್ಬಂದಿಯಿದ್ದಾರೆ. ಅಲ್ಲದೇ ಡಾ.ರಮಣರಾವ್, ಕ್ಲಿನಿಕ್ ಗೆ ಆಗಮಿಸುವ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಟ್ಟಿದ್ದಾರೆ. ಸಧ್ಯ ಡಾ.ರಮಣರಾವ್ ಅವರ ಕಾರ್ಯಕ್ಕೆ ಹಿಮಾಲಯ ಮತ್ತು ಮೈಕ್ರೋಲ್ಯಾಬ್ ಸಹಾಯ ಮಾಡುತ್ತಿದೆ.
ಸುತ್ತಮುತ್ತಲ ಪ್ರದೇಶದಲ್ಲಿ 7000 ಶೌಚಾಲಯ ನಿರ್ಮಿಸಿದ್ದಾರೆ. 60 ಹಳ್ಳಿಗಳಿಗೆ ಸಹಾಯವಾಗುವಂತೆ ನಾಲ್ಕು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ. ನಗರದಲ್ಲಿ 50 ಶಾಲೆಗಳನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಯೂನಿಫಾರ್ಮ್, ಬುಕ್ಸ್ ಅನ್ನು ನೀಡುತ್ತಿದ್ದಾರೆ. ಡಾ.ರಮಣರಾವ್ ಅವರ ವೈದ್ಯಕೀಯ ಸೇವೆಗೆ ಮೆಚ್ಚಿ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.
ರಾಘವ ಲಾರೆನ್ಸ್ ಈಗ ಟಾಲೀವುಡ್, ಕೋಲೀವುಡ್ ನಲ್ಲಿ ಉತ್ತಮ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರು ನಿರ್ದೇಶಕರಾಗುವ ಮೊದಲು ಕೊರಿಯಾಗ್ರಾಫರ್ ಆಗಿ ತನ್ನ ಜೀವನವನ್ನು ಆರಂಭಿಸಿದ್ದರು. ಪ್ರಭುದೇವಾ ಟ್ರೂಪ್ ನಲ್ಲಿ ಒಬ್ಬನಾಗಿದ್ದು..ಎಲ್ಲರನ್ನೂ ಆಕರ್ಷಿಸುವಂತೆ ನೃತ್ಯ ಅಭಿನಯಿಸಿ ಮೆಗಾಸ್ಟಾರ್ ಗಮನ ಸೆಳೆದಿದ್ದೇ ತಡ ಮೆಗಾಸ್ಟಾರ್ ರವರ ಹಿಟ್ಲರ್ ಚಿತ್ರದಲ್ಲಿ ಅವಕಾಶ ನೀಡಿದರು.
ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ. ಮೌತ್ ಅಲ್ಸರ್ ಅಥವಾ ಬಾಯಿಯಲ್ಲಾಗುವ ಉಷ್ಣದ ಗುಳ್ಳೆಗಳನ್ನೂ ಕೊತ್ತಂಬರಿ ಸೊಪ್ಪು…
ಪ್ರಾಯದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಗುಳ್ಳೆಗಳು ಮೂಡುವುದು ಸಹಜ. ಕೇವಲ ಒಂದು ಅಥವಾ ಎರಡು ಗುಳ್ಳೆಗಳು ಬಂದರೆ ಪರವಾಗಿಲ್ಲ ಎನ್ನಬಹುದು. ಆದರೆ ಇಡೀ ಮುಖದ ತುಂಬಾ ತುಂಬಿಕೊಂಡು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತವೆ. ಮತ್ತು ವಾಸಿಯಾದ ನಂತರವೂ ಸಹ ಅವುಗಳ ಕಲೆಗಳು ಮುಖದ ಚರ್ಮದ ಮೇಲೆ ದೀರ್ಘಕಾಲ ಹಾಗೆಯೇ ಉಳಿದು ಮುಖದ ಮೇಲೆ ಕಪ್ಪು ಬಣ್ಣ ಚುಕ್ಕೆಗಳ ರೀತಿಯಲ್ಲಿ ಮೆತ್ತಿಕೊಂಡಂತೆ ಕಾಣುತ್ತದೆ. ಇಷ್ಟೇ ಅಲ್ಲದೆ ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವವರು ಸಹ ಮುಖದ ಮೇಲೆ…
ನಮ್ಮ ಇಂದಿನ ಕ್ಷೇತ್ರ ಮಾಲೂರು (ಕೋಲಾರದ ಮಾಲೂರು). ಬರದನಾಡು ಒಂದು ಕಾಲದ ಕೃಷಿ ಪ್ರಧಾನ ನಾಡು, ಅತಿ ಹೆಚ್ಚು ಕೃಷಿ ಪ್ರಧಾನ ಜಾತಿ ಒಕ್ಕಲಿಗರನ್ನು ಒಂದಿರುವ ಕ್ಷೇತ್ರ. ಆದರೆ ಇಂದು ರಾಜಕೀಯ ಗಾಳಕ್ಕೆ ಸಿಲುಕಿ ತಾಲೂಕಿನ ಚಿತ್ರಣವೇ ಬದಲು
ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್ಗಳನ್ನು ಮಾಡುವ ಕನಸು ಹೊಂದಿದ್ದನು. ಅದು…