ಗ್ಯಾಜೆಟ್

ಈ 6 ವಿಷಯ ನಿಮ್ಗೆ ಗೊತ್ತಿದ್ರೆ ನಿಮ್ಮ ಮೊಬೈಲ್ ನಲ್ಲಿ ಡಿಲೀಟ್ ಆದ ಫೋಟಗಳು ಮತ್ತೆ ಸಿಗುತ್ತೆ. ತಿಳಿಯಲು ಈ ಲೇಖನ ಓದಿ….

565

ಈಗಂತೂ ಸೇಲ್ಫಿ ಫೋಟೋ ಯುಗ. ಎಲ್ಲರೂ ಎಲ್ಲೆಂದರಲ್ಲೇ ತಮಗಿಷ್ಟ ಬಂದಂತೆ ಫೋಟೋಗಳನ್ನು ತೆಗೆಯುತ್ತಾರೆ.   ಆ ಫೋಟೋಗಳಲ್ಲಿ ತಮಗಿಷ್ಟವಾದ ಕೆಲುವು ಫೋಟೋಗಳನ್ನು ತಮ್ಮ ಮೊಬೈಲ್  ಗ್ಯಾಲರಿಯಲ್ಲಿ ಸೇವ್ ಮಾಡಿರುತ್ತಾರೆ. ತಮ್ಮ ಸವಿ ನೆನುಪು ಗಳಿಗೋಸ್ಕರ ಆ ಫೋಟೋಗಳನ್ನು ತುಂಬಾ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿರುತ್ತಾರೆ.

ಒಂದು ವೇಳೆ ಅಷ್ಟು ಜಾಗರೂಕತೆಯಿಂದ ಕಾಪಾಡಿಕೊಂಡು ಬಂದರೂ ಫೋಟೋಗಳು ದುರಾದೃಷ್ಟವಶಾತ್ ಅಳಿಸಿ ಹೋದಲ್ಲಿ ತುಂಬಾ ಬೇಜಾರು ಮಾಡಿಕೊಳ್ಳೋದು ಸಹಜ.

ಆದರೆ ಅದಕ್ಕಾಗಿ ನೀವು ದುಃಖ ಪಡಬೇಕಾಗಿಲ್ಲ. ಏಕೆಂದರೆ ಈ ಫೋಟೋಗಳನ್ನು ಮರುಪಡೆದುಕೊಳ್ಳುವುದು ಹೇಗೆ ಅಂತೀರ, ಹಾಗಾದರೆ  ಈ ಕೆಳಗಿನ 6 ಕ್ರಮಗಳನ್ನು ಓದಿ ಅದರಂತೆ ಅನುಸರಿಸಿ.

  1. ಆಂಡ್ರಾಯ್ಡ್ ಡೇಟಾ ರಿಕವರಿ ಡೌನ್‌ಲೋಡ್ ಮಾಡಿ ಆಂಡ್ರಾಯ್ಡ್ ಡೇಟಾ ರಿಕವರಿಯ ಫ್ರಿ ಟ್ರಯಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಕಳೆದು ಹೋದ ಫೋಟೋಗಳನ್ನು ಮರಳಿ ಪಡೆದುಕೊಳ್ಳಲು ಇದು ಸಹಾಯಕವಾಗಲಿದೆ.
  2. ಬ್ಯಾಟರಿ ಬ್ಯಾಕಪ್ ಪರಿಶೀಲನೆ. ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಬ್ಯಾಟರಿ ಇದೆ ಎಂಬುದನ್ನು ಕಂಡುಕೊಳ್ಳಿ. ಈ ಪ್ರಕ್ರಿಯೆಯನ್ನು ನಿರ್ವಹಿಸಲು ನಿಮ್ಮ ಡಿವೈಸ್‌ನಲ್ಲಿ 20% ರಷ್ಟು ಬ್ಯಾಟರಿ ಇರಬೇಕು
  3. ನಿಮ್ಮ ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಸಂಪರ್ಕಪಡಿಸಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ನಂತರ, ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿ ಮತ್ತು ಚಾಲನೆ ಮಾಡಿ. ಕಂಪ್ಯೂಟರ್‌ಗೆ ಆಂಡ್ರಾಯ್ಡ್  ಡಿವೈಸ್ ಅನ್ನು ಸಂಪರ್ಕಪಡಿಸಿ.
  4. ಕಂಪ್ಯೂಟರ್‌ನಲ್ಲಿ ಡ್ರೈವರ್ ಇನ್‌ಸ್ಟಾಲ್ ಕಂಪ್ಯೂಟರ್‌ ಡ್ರೈವರ್ ಅಪ್ಲಿಕೇಶನ್ ಚಾಲನೆ ಮಾಡಲು ನಿಮ್ಮ ಕಂಪ್ಯೂಟರ್‌ನಲ್ಲಿ ಡ್ರೈವರ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಇದು ಫೋನ್ ಅನ್ನು ಪತ್ತೆ ಹಚ್ಚುವುದಿಲ್ಲ.
  5. ನಿಮ್ಮ ಫೋನ್ ಸಾಫ್ಟ್‌ವೇರ್ ಅನ್ನು ಪತ್ತೆಹಚ್ಚಿದ ನಂತರ ನೀವು ಸ್ಕ್ಯಾನ್ ಮಾಡಬೇಕೆಂದಿರುವ ಫೈಲ್ ಅನ್ನು ಆರಿಸಿ. ಗ್ಯಾಲರಿ ಆಪ್ಶನ್‌ಗೆ ಕ್ಲಿಕ್ ಮಾಡಿ. ಸ್ಟ್ಯಾಂಡರ್ಡ್ ಅಥವಾ ಅಡ್ವಾನ್ಸ್‌ಡ್ ಮೋಡ್ ಅನ್ನು ಆಯ್ಕೆಮಾಡುವ ಮೂಲಕ ಫೋನ್ ಅನ್ನು ಸ್ಕ್ಯಾನ್ ಮಾಡಿ. ನಿಮ್ಮ ಫೋನ್‌ಗೆ ಸ್ಕ್ಯಾನ್ ಅನ್ನು ನೀವು ಆರಿಸಿಕೊಂಡ ನಂತರ, ನಿಮ್ಮ ಫೋನ್ ಕಳೆದು ಹೋದ ಡೇಟಾವನ್ನು ಸ್ಕ್ಯಾನ್ ಮಾಡಲು ಪ್ರೊಗ್ರಾಮ್‌ಗೆ ಅನುಮತಿಯನ್ನು ನೀಡಿ.
  6. ಆಂಡ್ರಾಯ್ಡ್‌ನಿಂದ ಪೂರ್ವವೀಕ್ಷಣೆ ಮತ್ತು ಫೋಟೋಗಳ ರೀಸ್ಟೋರ್ ಸ್ಕ್ಯಾನ್ ಮಾಡಿದ ಡೇಟಾವನ್ನು ವಿಂಡೊ ತೋರಿಸಿದ ನಂತರ, ರಿಕವರಿ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರಿವ್ಯೂ ಮತ್ತು ಕಳೆದು ಹೋದ ಡೇಟಾವನ್ನು ರೀಸ್ಟೋರ್ ಮಾಡಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ