ಕಾನೂನು

ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಭಾರತದ ಸಂಸತ್‌ಗಿಲ್ಲ.!ಈ ರಾಜ್ಯದವರು ತೆರಿಗೆ ಕಟ್ಟೋ ಆಗಿಲ್ಲ!ಯಾಕೆ ಗೊತ್ತಾ?ಮುಂದೆ ಓದಿ ಎಲ್ಲರಿಗೂ ಶೇರ್ ಮಾಡಿ…

654

ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು 1947 ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ.

ಭಾರತದ ರಾಜ್ಯವಾಗಿ ಕಾಶ್ಮೀರ ಗುರುತಿಸಿಕೊಂಡಿದ್ದರೂ, ಈ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ಭಾರತದ ಬೇರೆ ರಾಜ್ಯಗಳಿರುವ ಕಾನೂನು ಈ ರಾಜ್ಯಕ್ಕೆ ಸಂಭಂದಪಡುವುದಿಲ್ಲ.

ಅಷ್ಟಕ್ಕೂ ಈ ಕಾನೂನು ರಚನೆಯಾದದ್ದು ಏಕೆ ಗೊತ್ತಾ? ತಿಳಿಯಲು ಮುಂದೆ ಓದಿ…

ನಿಮಗೆ ಗೊತ್ತಾ 370ನೇ ವಿಧಿ ಕಾನೂನು ಏನು ಹೇಳುತ್ತೆ ಅಂತ ?

 ಯಾವುದೇ ಒಂದು ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸಲು ಭಾರತದ ಸಂವಿಧಾನದ 21ನೇ ಪರಿಚ್ಛೇದ ಅನ್ವಯವಾಗುತ್ತದೆ. ಪ್ರಾಂತೀಯ ಸರಕಾರಕ್ಕೆ ಸಾಕಷ್ಟು ಅಧಿಕಾರವನ್ನು ದಯಪಾಲಿಸುವ ವಿಧಿಯೇ 370. ಇದರ ಪ್ರಕಾರ ಒಂದು ಪ್ರಾಂತ್ಯಕ್ಕೆ ತಾತ್ಕಾಲಿಕವಾಗಿ (ಆ ಸಂದರ್ಭಕ್ಕೆ ಅಗತ್ಯವಿದ್ದಂತೆ) ವಿಶೇಷ ಸ್ಥಾನಮಾನವನ್ನು ಕಲ್ಪಿಸಬಹುದು. ಅಂತಹ ಸ್ಥಾನ ಪಡೆದ ರಾಜ್ಯ, ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ಕಾನೂನಿನಿಂದ ಮುಕ್ತ. ಕೆಲವು ಕ್ಷೇತ್ರಗಳ ಹೊರತಾಗಿ ಉಳಿದೆಲ್ಲ ವಿಚಾರಗಳನ್ನು ಅಲ್ಲಿನ ವಿಧಾನಸಭೆಗೇ ಬಿಡಬೇಕು.

ಈ ಸೌಲಭ್ಯ ಜಾರಿಗೆಯಾಗಿದ್ದು ಯಾವಾಗ ?

ಈ ಸೌಲಭ್ಯ ಜಾರಿಗೆ ಬಂದಿದ್ದು, 1947ರಲ್ಲಿ. ಆಗ ಶೇಖ್ ಅಬ್ದುಲ್ಲಾ ಎಂಬುವರನ್ನು ಜಮ್ಮು ಕಾಶ್ಮೀರದ ಪ್ರಧಾನಿಯಾಗಿ ಮಹಾರಾಜಾ ಹರಿಸಿಂಗ್ ಹಾಗೂ ಜವಾಹರಲಾಲ್ ನೆಹರು ನೇಮಿಸಿದ್ದರು. ಅಂದು ರಾಜ್ಯದ ಪ್ರಧಾನಿಯಾಗಿ ಹೊಂದಿದ್ದ ಸ್ವಾಯತ್ತತೆಯನ್ನು ಎಲ್ಲ ಸಮಯಕ್ಕೂ ಉಳಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಬ್ದುಲ್ಲಾ 370ನೇ ವಿಧಿಯನ್ನು ಶಾಶ್ವತಗೊಳಿಸಬೇಕೆಂದು ವಾದಿಸಿದ್ದ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿರಲಿಲ್ಲ.

ಜಮ್ಮು ಕಾಶ್ಮೀರಕ್ಕೆ ನೀಡಲಾಯಿತು?

1947ರ ಆಗಸ್ಟ್ 14, 15ರಂದು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರಗೊಂಡವು. ಆ ವೇಳೆ ಕಾಶ್ಮೀರವನ್ನು ಒಂದು ಸ್ವತಂತ್ರ ರಾಜ್ಯವನ್ನಾಗಿ ಘೋಷಿಸಲಾಗಿತ್ತು. ಆ ರಾಜ್ಯದ ಮೇಲೆ ಎರಡೂ ದೇಶಗಳು ದಾಳಿ ಮಾಡಬಾರದೆಂಬ ನಿರ್ಣಯ ಕೈಗೊಳ್ಳಲಾಯಿತು. ಆದರೆ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕೆಂಬ ಪ್ರಯತ್ನವನ್ನು ಕೈಬಿಡಲಿಲ್ಲ.

1947 ಅ. 6ರಂದು ಪಾಕ್ ಬೆಂಬಲಿತ ‘ಆಜಾದ್ ಕಾಶ್ಮೀರ್’ ಎಂಬ ಪಡೆಯು ಪಾಕ್ ಮೇಲೆ ಮುಗಿಬಿತ್ತು. ಆಗ ಕಾಶ್ಮೀರವನ್ನು ಆಳುತ್ತಿದ್ದ ಮಹಾರಾಜ ಹರಿಸಿಂಗ್ ತಮ್ಮ ರಾಜ್ಯವನ್ನು ರಕ್ಷಿಸುವಂತೆ ಭಾರತವನ್ನು ಕೋರಿದರು. ಕಾಶ್ಮೀರವನ್ನು ಭಾರತಕ್ಕೆ ಸಂಪೂರ್ಣವಾಗಿ ಒಪ್ಪಿಸಿದರೆ ನೆರವು ನೀಡುವುದಾಗಿ ಆಗ ಭಾರತ ಸರಕಾರ ಹೇಳಿತ್ತು. ಇದಕ್ಕೆ ಹರಿಸಿಂಗ್ ಸುತರಾಂ ಒಪ್ಪಲಿಲ್ಲ.

ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ಅಂದಿನ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರೂ ಒಂದು ಒಪ್ಪಂದಕ್ಕೆ ಬಂದರು. ”ಭಾರತದೊಂದಿಗೆ ಜಮ್ಮು ಕಾಶ್ಮೀರ ವಿಲೀನವಾಗಬೇಕು, ಭಾರತದ ಸಂವಿಧಾನದ 370ನೇ ವಿಧಿ ಪ್ರಕಾರ ರಕ್ಷಣೆ, ವಿದೇಶಾಂಗ ಮತ್ತು ಸಂವಹನ ಕ್ಷೇತ್ರಗಳ ಹೊರತಾಗಿ ಇನ್ಯಾವುದೇ ವಿಷಯದಲ್ಲಿ ಭಾರತದ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.” ಆ ಕರಾರುಗಳಿಗೆ ಸಹಿ ಬಿದ್ದಾಗಿನಿಂದ ಜಮ್ಮು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯವಾಗಿದೆ.

ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಭಾರತದ ಸಂಸತ್‌ಗಿಲ್ಲ..?

ಪ್ರತಿ ವಿಷಯದಲ್ಲಿಯೂ ಪ್ರತ್ಯೇಕ ಹೆಜ್ಜೆ ತುಳಿಯಲು ಕಾನೂನುಬದ್ಧ ಅಧಿಕಾರ ಹೊಂದಿರುವ ಕಾಶ್ಮೀರ ಈಗ ಕೈಲಿದ್ದರೂ ಇಲ್ಲದ ಸ್ಥಿತಿ. ಏಕೆಂದರೆ ಸಂವಿಧಾನದ 238ನೇ ವಿಧಿ ಬೇರೆಲ್ಲಾ ರಾಜ್ಯಗಳಿಗೆ ಅನ್ವಯವಾದರೂ ಜಮ್ಮು- ಕಾಶ್ಮೀರಕ್ಕಲ್ಲ. ಆ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಸಂಸತ್‌ಗಿಲ್ಲ.

ಒಂದು ವೇಳೆ ಸಂಸತ್ ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸಲೇಬೇಕೆಂದಿದ್ದರೆ ಅದನ್ನು ರಾಷ್ಟ್ರಪತಿ ಮೂಲಕ ರಾಜ್ಯ ಸರಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು. ಜತೆಗೆ ಕೆಲವು ಕಾನೂನುಗಳನ್ನು ಅಲ್ಲಿನ ಸರಕಾರದ ಅನುಮತಿ ಪಡೆದು ಸಂಸತ್‌ನಲ್ಲಿ ಮಂಡನೆ ಮಾಡಬಹುದು.

ಭಾರತದ ಸಂವಿಧಾನವೇ ಒಂದಾದರೆ ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ..!

ಅಂದರೆ, ಭಾರತದ ಸಂವಿಧಾನವೇ ಒಂದಾದರೆ ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ. ಅದರ ತಿದ್ದುಪಡಿಯಾಗುವುದೂ ಆ ರಾಜ್ಯದ ವಿಧಾನಸಭೆಯಲ್ಲಿ. ಅಲ್ಲಿ ಕೈಗೊಳ್ಳಲಾಗವ ನಿರ್ಧಾರಗಳನ್ನು ಆ ರಾಜ್ಯ ಸರಕಾರದ ಅನುಮತಿ ಪಡೆದು ರಾಷ್ಟ್ರಪತಿ ಸಹಿ ಹಾಕಬೇಕಾಗುತ್ತದೆ. ಈ ರೀತಿ ಪ್ರತ್ಯೇಕ ಸಂವಿಧಾನ ಹೊಂದಿರುವ ಏಕೈಕ ರಾಜ್ಯ ಜಮ್ಮು ಕಾಶ್ಮೀರ. 1957ರ ಜನವರಿ 26ರಂದು ಅಲ್ಲಿನ ವಿಧಾನಸಭೆ ಪ್ರತ್ಯೇಕ ಸಂವಿಧಾನವನ್ನು ಅಂಗೀಕರಿಸಿತು.

ಕಾಶ್ಮೀರಕ್ಕೆ ತುರ್ತು ಪರಿಸ್ಥಿತಿಯೂ ಅನ್ವಯವಾಗುವುದಿಲ್ಲ…

ಸಂವಿಧಾನದ ವಿಧಿ 360ರ ಪ್ರಕಾರ ಕೇಂದ್ರ ಸರಕಾರ ದೇಶಾದ್ಯಂತ ಆರ್ಥಿಕ ತುರ್ತುಸ್ಥಿತಿ ಘೋಷಿಸುವ ವಿಶೇಷ ಅಧಿಕಾರ ಹೊಂದಿರುತ್ತದೆ. ಆದರೆ, ಆರ್ಥಿಕ ತುರ್ತುಸ್ಥಿತಿಯನ್ನು ಈ ರಾಜ್ಯದಲ್ಲಿ ಘೋಷಿಸುವಂತಿಲ್ಲ. ಹೊರ ದೇಶಗಳು ಅತಿಕ್ರಮಣ ನಡೆಸಿದಾಗ ಇಲ್ಲವೇ ಯುದ್ಧದ ಸಮಯದಲ್ಲಿ ಮಾತ್ರ ತುರ್ತುಸ್ಥಿತಿ ಘೊಷಿಸಬಹುದು.

ದೇಶದಲ್ಲಿ ಆಂತರಿಕ ಸಮಸ್ಯೆಗಳು ತಲೆದೋರಿದ ಸಮಯದಲ್ಲಿ ಜಮ್ಮು ಕಾಶ್ಮೀರ ತುರ್ತುಸ್ಥಿತಿಯಂತಹ ಸನ್ನಿವೇಶದಿಂದ ಮುಕ್ತವಾಗಿರುತ್ತದೆ. ಹಾಗೊಂದು ವೇಳೆ ಈ ರಾಜ್ಯದಲ್ಲಿ ತುರ್ತುಸ್ಥಿತಿ ಘೋಷಣೆಯಾಗಲೇಬೇಕೆಂದರೆ ಅದಕ್ಕೆ ಅಲ್ಲಿನ ರಾಜ್ಯ ಸರಕಾರದ ಅನುಮತಿ ಬೇಕು. ರಾಷ್ಟ್ರಪತಿಯಾದವರು ಆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಅಲ್ಲಿನ ಸರಕಾರಕ್ಕೆ ಕೋರಿಕೆ ಸಲ್ಲಿಸಬೇಕು.

ಇಲ್ಲಿನ ನಿಯಮಗಳಿಂದ ಈ ರಾಜ್ಯದವರು ಅನುಭವಿಸುತ್ತಿರುವ ಸಮಸ್ಯಗಳೇನು?

ಬೇರೆ ರಾಜ್ಯದಿಂದ ಬಂದವರು ಈ ರಾಜ್ಯದಲ್ಲಿ ಆಸ್ತಿ ಖರೀದಿಸುವಂತಿಲ್ಲ. ಆದರೆ, ಈ ರಾಜ್ಯದವರು ಭಾರತದ ಬೇರೆ ರಾಜ್ಯಗಳಲ್ಲಿ ಆಸ್ತಿ ಖರೀದಿಸಬಹುದು.ಈ ನಿಯಮವೇ ಜಮ್ಮು ಕಾಶ್ಮೀರವು ಭಾರತದಿಂದ ಬೇರೆ ಎಂಬ ಭಾವನೆ ಬೆಳೆಯಲು ಕಾರಣವಾಗಿದೆ. ಅಲ್ಲಿನವರಿಗೆ ಕೂಡ ತಾವು ಸಂಪೂರ್ಣ ಭಾರತೀಯರು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ರಾಜ್ಯದ ಹೊರತಾಗಿ ಬೇರೆಯವರು ಬಂಡವಾಳ ತೊಡಗಿಸಲು ಅವಕಾಶವಿಲ್ಲದ ಕಾರಣ ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದಕ್ಕಾಗಿಯೇ ಸ್ಥಳೀಯರು ಶಸ್ತ್ರ ಕೈಗೆತ್ತಿಕೊಂಡು ಉಗ್ರರಾಗುತ್ತಿದ್ದಾರೆಂದು ವರದಿ ಹೇಳುತ್ತದೆ.

ಸ್ವಾತಂತ್ರ್ಯ ಬಂದಾಗಿನಿಂದ ಶಿಕ್ಷಣದ ಹಕ್ಕನ್ನು ಬಿಟ್ಟರೆ ಇನ್ಯಾವ ಹಕ್ಕೂ ಈ ರಾಜ್ಯದಲ್ಲಿ ಜಾರಿಯಾಗಿಲ್ಲ. ಮತ್ತೊಂದು ವಿಚಾರವೆಂದರೆ ಈ ರಾಜ್ಯದ ನಾಗರಿಕನಾದವನು ತೆರಿಗೆ ಕಟ್ಟಬೇಕಾಗಿಲ್ಲ. ದೇಶದ ಎಲ್ಲಾ ಹೈಕೋರ್ಟುಗಳು ಸಂವಿಧಾನದ ವಿಧಿ 226ರ ಪ್ರಕಾರ ಕಾನೂನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿವೆ. ಆದರೆ, ಜಮ್ಮು ಕಾಶ್ಮೀರ ಹೈಕೋರ್ಟ್ ಮಾತ್ರ ಇದರಿಂದ ಮುಕ್ತ.

ಯಾವ ಕಾನೂನುಗಳನ್ನೂ ಅಸಾಂವಿಧಾನಿಕ ಎಂದು ಘೋಷಿಸುವ ಹಕ್ಕೇ ಇಲ್ಲಿನ ಕೋರ್ಟ್‌ಗೆ ಇಲ್ಲ. ಈ ರಾಜ್ಯದ ಶಾಶ್ವತ ನಾಗರಿಕರು ಮಾತ್ರ ರಾಜ್ಯ ಸರಕಾರದ ಸೇವೆಗಳಿಗೆ ಅರ್ಹರು. ಶಾಶ್ವತ ನಾಗರಿಕರಿಗೆ ಮಾತ್ರ ಆಸ್ತಿ ಖರೀದಿಸುವ ಹಕ್ಕಿದೆ. ವಿದ್ಯಾರ್ಥಿವೇತನ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಈ ಎಲ್ಲ ವಿಚಾರದಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆ ನಿರ್ಣಯವೇ ಅಂತಿಮ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಬೇಕೆಂದರೂ, ರಾಷ್ಟ್ರಪತಿ ಜಮ್ಮು ಕಾಶ್ಮೀರದ ಗವರ್ನರ್ ಅನುಮತಿ ಪಡೆಯಬೇಕು.

ಮೂಲ:

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಈ ದೇಶ 2000 ವರ್ಷಗಳಿಂದ ಭಾರತದ ರಾಜನಿಗಾಗಿ ಕಾಯುತ್ತಿತ್ತು!ಯಾವ ದೇಶ ಗೊತ್ತಾ?ಈ ಲೇಖನಿ ಓದಿ…

    ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲ್’ಗೆ ಭೇಟಿ ಕೊಟ್ಟರೆ, ಎಲ್ಲಿ ತಮ್ಮ ದೇಶದ ಮುಸಲ್ಮಾನರ ಹಾಗೂ ಅರಬ್ ದೇಶಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಲ್ಲಿಯವರೆಗೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ.

  • ಜ್ಯೋತಿಷ್ಯ

    ಮಾತೆ ಅನ್ನಪೂರ್ಣಾ ದೇವಿಯ ಕೃಪೆಯಿಂದ ಶುಭಯೋಗ, ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(17 ಮಾರ್ಚ್, 2019) ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ಪ್ರಣಯದ…

  • ಸಿನಿಮಾ

    ಕನ್ನಡಕ್ಕೆ ಬಾಹುಬಲಿಯ “ಬಲ್ಲಾಳದೇವ”

    ಜಗತ್ತಿನಾದ್ಯಂತ ದಾಖಲೆ ಕಲೆಕ್ಷನ್ ಮಾಡುತ್ತಿರುವ ಬಾಹುಬಲಿ ಚಿತ್ರದ ಖಳನಟ ಬಲ್ಲಾಳದೇವ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

  • ಫ್ಯಾಷನ್

    ಗಡ್ಡ ಬಿಟ್ಟ ಗಂಡಸರನ್ನೇ ಹುಡುಗಿಯರು ತುಂಬಾ ನಂಬುತ್ತಾರಂತೆ..!ಯಾಕೆ ಹೀಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..ಶೇರ್ ಮಾಡಿ

    ಕೆಲವು ಮಹಿಳೆಯರಿಗೆ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ಸರಿದರು ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು.

  • ವಿಚಿತ್ರ ಆದರೂ ಸತ್ಯ

    ಈ ವಿಮಾನದಲ್ಲಿ ಪ್ರಯಾಣಿಸಲು ಬಟ್ಟೆ ಬಿಚ್ಚಿ ಹೋಗ ಬೇಕು..!ತಿಳಿಯಲು ಈ ಲೇಖನ ಓದಿ..

    ನೀವು ಹೊಟೇಲುಗಳಲ್ಲಿ ಹೆಸರಿಗೆ ತೋರಿಸಿಕೊಳ್ಳಲು ಬಟ್ಟೆ ಧರಿಸಿದವರನ್ನು ನೀವು ನೋಡಿರಬಹುದು. ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್‌ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 22 ಜನವರಿ, 2019 ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು…