ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿನ್ನ ಎಂದರೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ?. ಗಂಡಸರಿಗಿಂತ ಹೆಂಗಸರಿಗೇ ಚಿನ್ನದ ಮೇಲೆ ಹೆಚ್ಚಿನ ಆಸೆ ಇರುತ್ತದೆ. ಸಾಮಾನ್ಯ ದಿನಗಳಲ್ಲೇ ಅಪಾರ ಆಸಕ್ತಿ ತೋರುವ ಹೆಂಗಸರು ಮದುವೆಯಂತಹ ಶುಭಕಾರ್ಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ತೋರುತ್ತಾರೆ. ಎಲ್ಲರಿಗೂ ಆಭರಣಗಳನ್ನು ಧರಿಸಿ ಓಡಾಡಬೇಕೆಂಬ ಆಸೆ ಇದ್ದೇ ಇರುತ್ತದೆ.
ಅದರಲ್ಲೂ ಮದುಮಗಳು ಇನ್ನೂ ಹೆಚ್ಚಿನ ಆಸೆ ಹೊಂದಿರುತ್ತಾಳೆ. ಆಭರಣ ಧರಿಸುವ ಸಮಯಕ್ಕಾಗಿಯೇ ಎದುರು ನೋಡುತ್ತಿರುತ್ತಾಳೆ. ಹೀಗೆ ಆಸೆ ಪಡುವುದು ಹೆಂಗಸರಲ್ಲಿ ಸರ್ವೇಸಾಮಾನ್ಯವಾದದ್ದೇ ಆದರೂ ಈ ಯುವದಿದಕ್ಕೆ ಭಿನ್ನವೆಂದೇ ಹೇಳಬಹುದು. ವರನನ್ನು ಆಕೆ ಚಿನ್ನವೇ ತನಗೆ ಬೇಡ ಎಂದು, ತಾನು ಬಯಸಿದ್ದನ್ನು ನೀಡಿದರೆ ಸಾಕೆಂದು ಹೇಳಿದ್ದಾಳೆ. ಆಕೆ ಬಯಸಿದ್ದಾದರೂ ಏನನ್ನು …?
ಆಕೆಯ ಹೆಸರು ಸಾಹ್ಲಾ ನೆಕ್ಯುಲ್. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಪೊಲಿಟಿಕಲ್ ಸೈನ್ಸ್ ವಿದ್ಯಾಭ್ಯಾಸ ಮಾಡಿದ್ದಾಳೆ. ಮಲಯಾಳದ ಮುಸ್ಲಿಂ ಕುಟುಂಬದವರಾದರೂ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆಕೆಯ ಮದುವೆಗೆ ನಿಶ್ಚಯವಾಗಿದೆ. ಮುಸ್ಲಿಂ ಸಂಪ್ರದಾಯದಲ್ಲಿ ಮದುಮಗನು ಮದುಮಗಳಿಗೆ ಮೊಹರ್ ರೂಪದಲ್ಲಿ ಆಕೆ ಬಯಸಿದ್ದನ್ನು ಕೊಡುವ ಆಚಾರವಿದೆ.
ಸಾಮಾನ್ಯವಾಗಿ ಯಾವುದೇ ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಚಿನ್ನದ ಆಭರಣಗಳನ್ನೇ ಮೊಹರ್ ಆಗಿ ನೀಡುತ್ತಾರೆ. ಮದುಮಗಳು ತನಗೆ ಇಂತಹದ್ದೇ ಬೇಕೆಂದು ಬಯಸಿದ ಸಂದರ್ಭಗಳು ಎಲ್ಲೂ ಕಾಣಿಸಿಕೊಂಡಿಲ್ಲವಂತೆ. ಸಾಹ್ಲಾ ಎಲ್ಲರಿಗೂ ಭಿನ್ನವಾಗಿ ತನಗೆ ಚಿನ್ನದ ಆಭರಣಗಳು ಬೇಡವೆಂದು, ಬದಲಾಗಿ ಅಮೂಲ್ಯವಾದ 50 ಪುಸ್ತಕಗಳು ಬೇಕೆಂದು ಕೋರಿದ್ದಾಳೆ. ಮೊದಲು ಈ ಮಾತಿಗೆ ಎಲ್ಲರೂ ಆಶ್ಚರ್ಯಪಟ್ಟರೂ , ಸಾಹ್ಲಾ ಬಯಸಿದ್ದನ್ನು ಮೆಚ್ಚಿಕೊಂಡಿದ್ದಾರೆ.
ಸಾಧಾರಣವಾಗಿ ಮದುಮಗಳು ಮೊಹರ್ ರೂಪದಲ್ಲಿ ಏನನ್ನೂ ಬಯಸದಿದ್ದರೂ, ಸಂಪ್ರದಾಯದಂತೆ ಆಕೆ ಬಯಸಿದ್ದನ್ನು ನೀಡಲೇಬೇಕು. ಸ್ತ್ರೀಯರಿಗೆ ಸ್ವಂತಃ ಆಲೋಚಿಸುವ, ಸ್ವತಂತ್ರವಾಗಿ ಮಾತಾಡುವ ಹಕ್ಕನ್ನು ಕೊಡದೆ, ಪೂರ್ವ ಕಾಲದಿಂದಲೂ ಕೇವಲ ಚಿನ್ನದ ಆಭರಣಗಳನ್ನು ಕೊಡುತ್ತಾ ಅವರ ಹಕ್ಕನ್ನು ಕಡೆಗೆಣಿಸುತ್ತಾ ಬಂದಿದ್ದಾರೆ. ಆದರೆ ತಾನು ಹಾಗಲ್ಲ ಎಂದು, ಆದ್ದರಿಂದಲೇ ಚಿನ್ನಕ್ಕೆ ಬದಲಾಗಿ ಪುಸ್ತಕಗಳನ್ನು ಕೇಳಿದ್ದೇನೆ ಎನ್ನುತ್ತಾಳೆ.
ಇದರಿಂದ ಚಿನ್ನ ಕೊಳ್ಳಬೇಕೆಂಬ ಆತಂಕ ವರನ ಕಡೆಯವರಿಗೆ ಇರುವುದಿಲ್ಲ ಎಂದು, ಅವರು ಒತ್ತಡಕ್ಕೆ ಗುರಿಯಾಗುವ ಅವಶ್ಯಕತೆಯೂ ಇರುವುದಿಲ್ಲ ಎಂದು ಹೇಳುತ್ತಾಳೆ. ಸಾಹ್ಲಾ ಕೋರಿಕೆಯಂತೆಯೇ ವರನು ಆಕೆ ಕೇಳಿದ 50 ಪುಸ್ತಕಗಳನ್ನು ಕೊಂಡು ತಂದು ಮೆಹರ್ ರೂಪದಲ್ಲಿ ನೀಡಿದ್ದಾನೆ.
ಚಿನ್ನದ ವಿಷಯದಲ್ಲಿ ನಿರಾಸಕ್ತಿಯನ್ನು ತೋರಿರುವುದೇ ಅಲ್ಲದೆ, ಮೊಹರ್ ವಿಷಯದಲ್ಲಿ ಪ್ರತಿಯೊಬ್ಬ ಮುಸ್ಲಿಂ ಯುವತಿ ತಪ್ಪದೆ ತನ್ನ ಹಕ್ಕನ್ನು ತಿಳಿದುಕೊಳ್ಳಬೇಕು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ ಸೀಸನ್ ನಲ್ಲಿ ತುಂಬಾ ವಿಚಿತ್ರವಾದ ಸ್ಪರ್ದಿ ಎಂದರೆ ಅವರು ಚೈತ್ರಾ ಕೋಟೂರ್ .ಚೈತ್ರಾ ಕೋಟೂರ್ಗೆ ಈ ನವೆಂಬರ್ ಬಂದರೆ ಮದುವೆಯಾಗಿ ಮೂರು ವರ್ಷ ಆಗುತ್ತಂತೆ. ಆ ಹುಡುಗ ಸೊಪ್ಪು ಮಾರುತ್ತಿದ್ದಾನಂತೆ. ಶಾಸ್ತ್ರೋಕ್ತವಾಗಿ ಮದುವೆಯಾಗಿಲ್ವಂತೆ, ಸೈನ್ ಮಾಡಿ ಮದುವೆಯಾಗಿದ್ದಾರಂತೆ. ವ್ಯಕ್ತಿತ್ವ ನೋಡಿ ಮದುವೆಯಾಗಬೇಕು. ಸೊಪ್ಪು ಮಾರುವವರಿಗೆ, ತರಕಾರಿ ಮಾರುವವರಿಗೂ ಕೂಡ ಓದಿರುವವರನ್ನು ಮದುವೆಯಾಗಬೇಕು ಎಂಬ ಆಸೆ ಇರತ್ತೆ ಎಂದಿದ್ದಾರೆ ಚೈತ್ರಾ ಕೋಟೂರ್. ಸೊಪ್ಪು ಮಾರುವವನ ಮೇಲೆ ಚೈತ್ರಾಗೆ ಲವ್ ಆಗಿದ್ದೇಗೆ?ಮಾರ್ಕೆಟ್ ವಿಚಾರವಾಗಿ ಚೈತ್ರಾರಿಗೆ ಶೈನ್ ಶೆಟ್ಟಿ, ಸುಜಾತಾ…
ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.
ಈ ಗೃಹೋಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.
ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ.
ನನ್ನ ಹೆಸರು ಅಶ್ವಥ್ ಕುಮಾರ್ 42 ವರ್ಷ ವಯಸ್ಸು,ನಾನು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ವಾಸವಾಗಿರುವುದು. ನಾನು ಲೈಬ್ರರಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದು, 2016 ರಲ್ಲಿ ನನಗೆ ಸೊಂಟ ನೋವು ವಿಪರೀತ ಬರುತ್ತಿತ್ತು,ಮೂತ್ರ ಹೋಗಲೂ ಕಷ್ಟ ಆಗುತ್ತಿತ್ತು, ನಂತರ ಕೋಲಾರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದೆ ಆಗ ತಿಳಿಯಿತು …..
ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು…