ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿನ್ನ ಎಂದರೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ?. ಗಂಡಸರಿಗಿಂತ ಹೆಂಗಸರಿಗೇ ಚಿನ್ನದ ಮೇಲೆ ಹೆಚ್ಚಿನ ಆಸೆ ಇರುತ್ತದೆ. ಸಾಮಾನ್ಯ ದಿನಗಳಲ್ಲೇ ಅಪಾರ ಆಸಕ್ತಿ ತೋರುವ ಹೆಂಗಸರು ಮದುವೆಯಂತಹ ಶುಭಕಾರ್ಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ತೋರುತ್ತಾರೆ. ಎಲ್ಲರಿಗೂ ಆಭರಣಗಳನ್ನು ಧರಿಸಿ ಓಡಾಡಬೇಕೆಂಬ ಆಸೆ ಇದ್ದೇ ಇರುತ್ತದೆ.

ಅದರಲ್ಲೂ ಮದುಮಗಳು ಇನ್ನೂ ಹೆಚ್ಚಿನ ಆಸೆ ಹೊಂದಿರುತ್ತಾಳೆ. ಆಭರಣ ಧರಿಸುವ ಸಮಯಕ್ಕಾಗಿಯೇ ಎದುರು ನೋಡುತ್ತಿರುತ್ತಾಳೆ. ಹೀಗೆ ಆಸೆ ಪಡುವುದು ಹೆಂಗಸರಲ್ಲಿ ಸರ್ವೇಸಾಮಾನ್ಯವಾದದ್ದೇ ಆದರೂ ಈ ಯುವದಿದಕ್ಕೆ ಭಿನ್ನವೆಂದೇ ಹೇಳಬಹುದು. ವರನನ್ನು ಆಕೆ ಚಿನ್ನವೇ ತನಗೆ ಬೇಡ ಎಂದು, ತಾನು ಬಯಸಿದ್ದನ್ನು ನೀಡಿದರೆ ಸಾಕೆಂದು ಹೇಳಿದ್ದಾಳೆ. ಆಕೆ ಬಯಸಿದ್ದಾದರೂ ಏನನ್ನು …?

ಆಕೆಯ ಹೆಸರು ಸಾಹ್ಲಾ ನೆಕ್ಯುಲ್. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಪೊಲಿಟಿಕಲ್ ಸೈನ್ಸ್ ವಿದ್ಯಾಭ್ಯಾಸ ಮಾಡಿದ್ದಾಳೆ. ಮಲಯಾಳದ ಮುಸ್ಲಿಂ ಕುಟುಂಬದವರಾದರೂ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆಕೆಯ ಮದುವೆಗೆ ನಿಶ್ಚಯವಾಗಿದೆ. ಮುಸ್ಲಿಂ ಸಂಪ್ರದಾಯದಲ್ಲಿ ಮದುಮಗನು ಮದುಮಗಳಿಗೆ ಮೊಹರ್ ರೂಪದಲ್ಲಿ ಆಕೆ ಬಯಸಿದ್ದನ್ನು ಕೊಡುವ ಆಚಾರವಿದೆ.

ಸಾಮಾನ್ಯವಾಗಿ ಯಾವುದೇ ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಚಿನ್ನದ ಆಭರಣಗಳನ್ನೇ ಮೊಹರ್ ಆಗಿ ನೀಡುತ್ತಾರೆ. ಮದುಮಗಳು ತನಗೆ ಇಂತಹದ್ದೇ ಬೇಕೆಂದು ಬಯಸಿದ ಸಂದರ್ಭಗಳು ಎಲ್ಲೂ ಕಾಣಿಸಿಕೊಂಡಿಲ್ಲವಂತೆ. ಸಾಹ್ಲಾ ಎಲ್ಲರಿಗೂ ಭಿನ್ನವಾಗಿ ತನಗೆ ಚಿನ್ನದ ಆಭರಣಗಳು ಬೇಡವೆಂದು, ಬದಲಾಗಿ ಅಮೂಲ್ಯವಾದ 50 ಪುಸ್ತಕಗಳು ಬೇಕೆಂದು ಕೋರಿದ್ದಾಳೆ. ಮೊದಲು ಈ ಮಾತಿಗೆ ಎಲ್ಲರೂ ಆಶ್ಚರ್ಯಪಟ್ಟರೂ , ಸಾಹ್ಲಾ ಬಯಸಿದ್ದನ್ನು ಮೆಚ್ಚಿಕೊಂಡಿದ್ದಾರೆ.

ಸಾಧಾರಣವಾಗಿ ಮದುಮಗಳು ಮೊಹರ್ ರೂಪದಲ್ಲಿ ಏನನ್ನೂ ಬಯಸದಿದ್ದರೂ, ಸಂಪ್ರದಾಯದಂತೆ ಆಕೆ ಬಯಸಿದ್ದನ್ನು ನೀಡಲೇಬೇಕು. ಸ್ತ್ರೀಯರಿಗೆ ಸ್ವಂತಃ ಆಲೋಚಿಸುವ, ಸ್ವತಂತ್ರವಾಗಿ ಮಾತಾಡುವ ಹಕ್ಕನ್ನು ಕೊಡದೆ, ಪೂರ್ವ ಕಾಲದಿಂದಲೂ ಕೇವಲ ಚಿನ್ನದ ಆಭರಣಗಳನ್ನು ಕೊಡುತ್ತಾ ಅವರ ಹಕ್ಕನ್ನು ಕಡೆಗೆಣಿಸುತ್ತಾ ಬಂದಿದ್ದಾರೆ. ಆದರೆ ತಾನು ಹಾಗಲ್ಲ ಎಂದು, ಆದ್ದರಿಂದಲೇ ಚಿನ್ನಕ್ಕೆ ಬದಲಾಗಿ ಪುಸ್ತಕಗಳನ್ನು ಕೇಳಿದ್ದೇನೆ ಎನ್ನುತ್ತಾಳೆ.

ಇದರಿಂದ ಚಿನ್ನ ಕೊಳ್ಳಬೇಕೆಂಬ ಆತಂಕ ವರನ ಕಡೆಯವರಿಗೆ ಇರುವುದಿಲ್ಲ ಎಂದು, ಅವರು ಒತ್ತಡಕ್ಕೆ ಗುರಿಯಾಗುವ ಅವಶ್ಯಕತೆಯೂ ಇರುವುದಿಲ್ಲ ಎಂದು ಹೇಳುತ್ತಾಳೆ. ಸಾಹ್ಲಾ ಕೋರಿಕೆಯಂತೆಯೇ ವರನು ಆಕೆ ಕೇಳಿದ 50 ಪುಸ್ತಕಗಳನ್ನು ಕೊಂಡು ತಂದು ಮೆಹರ್ ರೂಪದಲ್ಲಿ ನೀಡಿದ್ದಾನೆ.

ಚಿನ್ನದ ವಿಷಯದಲ್ಲಿ ನಿರಾಸಕ್ತಿಯನ್ನು ತೋರಿರುವುದೇ ಅಲ್ಲದೆ, ಮೊಹರ್ ವಿಷಯದಲ್ಲಿ ಪ್ರತಿಯೊಬ್ಬ ಮುಸ್ಲಿಂ ಯುವತಿ ತಪ್ಪದೆ ತನ್ನ ಹಕ್ಕನ್ನು ತಿಳಿದುಕೊಳ್ಳಬೇಕು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಷ್ಟೇ ಅಲ್ಲ, ಅವರ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಂದರೂ ಭಯವಿಲ್ಲ. ಅವರನ್ನು ಸೋಲಿಸಿ ಮನೆಗೆ ಕಳುಹಿಸಲು ಕ್ಷೇತ್ರದ ಜನ ಶಪಥ ಮಾಡಿದ್ದಾರೆ! ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ವರ್ತೂರು ಪ್ರಕಾಶ್ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಹಳ್ಳಿಹಳ್ಳಿಗೂ ಹೋಗಿ ಜನರ ಕಷ್ಟ ಆಲಿಸುತ್ತಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ಕೆಲಸ ಮಾಡುವವರಿಗೆ…
“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.
ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಳಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಜಿಯೋ ಗಿಗಾ ಫೈಬರ್ ಮೂಲಕ ದೊಡ್ಡ ಮಾಡಲು ಸಜ್ಜಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಸೆಪ್ಟೆಂಬರ್ 5ರ ನಂತರ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿರುವ ಜಿಯೋ ಕಂಪನಿ ಒಡೆತನದ ಮುಖೇಶ್…
ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು ಆತಂಕ ಪಡುವಂತಹ ವಿಷಯವೊಂದನ್ನು ಹೊರಹಾಕಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದ್ರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ. 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು…
ರಿಪಬ್ಲಿಕ್ ಆಫ್ ಇಂಡಿಯಾ ಚಾನೆಲ್ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ 2019ಕ್ಕೆ ಭಾರತ ಬಿಜೆಪಿಮಯವಾಗಲಿದೆಯಾ? ಹಾಗೂ ಭಾರತದ ಜನರಿಗೆ ಜಿಯೋ ಮಾತ್ರ ಆಪ್ಷನ್ ಆಗುತ್ತಾ?
ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ. ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು…