ಗ್ಯಾಜೆಟ್

ಈ ಫೋನ್ ಗಳಲ್ಲಿ ಹೊಸ ವರ್ಷಕ್ಕೆ ಕೊನೆಗೊಳ್ಳಲಿದೆ ವಾಟ್ಸಾಪ್ ಸೇವೆ..!ತಿಳಿಯಲು ಈ ಲೇಖನ ಓದಿ..

313

ಅಂತರ್ಜಾಲ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಜಾಸ್ತಿಯಾಗಿದೆ. ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಡಿಸೆಂಬರ್ 31 ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.

 

 

ಬ್ಲ್ಯಾಕ್‌ಬೆರಿ ಒಎಸ್, ಬ್ಲ್ಯಾಕ್‌’ಬೆರಿ 10 ಮತ್ತು ವಿಂಡೋಸ್ 8.0 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಕಹಿ ಸುದ್ದಿಯಿದೆ. ಈ ಎಲ್ಲಾ ಫೋನ್ ಬಳಕೆದಾರರಿಗೆ 2017, ಡಿ.31ರ ನಂತರ ವಾಟ್ಸಾಪ್ ತನ್ನ ಸೇವೆ ಕೊನೆಗೊಳಿಸಲಿದೆ. ಈ ಫೋನ್ ಗಳಿಗೆ ವಾಟ್ಸಾಪ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದಿಲ್ಲ.

ಫೇಸ್ ಬುಕ್ ಒಡೆತನದ ಮೊಬೈಲ್ ಮೆಸೇಂಜಿಂಗ್ ಆಪ್ ಆಗಿರುವ ವಾಟ್ಸಾಪ್ ಕೆಲವೊಂದು ಸ್ಮಾರ್ಟ್ ಫೋನ್ ಗಳಲ್ಲಿ ಡಿಸೆಂಬರ್ 31 ರಿಂದ ಕೆಲಸ ಮಾಡುವುದಿಲ್ಲ.ಈ ಸಂಬಂಧ ವಾಟ್ಸಾಪ್ ಬ್ಲಾಗ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿದೆ. ನೋಕಿಯಾ ಎಸ್‌40ಯಿಂದಲೂ ತಮ್ಮ ಸೇವೆ 2018, ಡಿ.31ರಿಂದ ಕೊನೆಯಾಗಲಿದೆ ಎಂದು ತಿಳಿಸಿತ್ತು.

ಅಲ್ಲದೆ, ಆ್ಯಂಡ್ರಾಯ್ಡ್ 3.3.7 ಮತ್ತು ಅದಕ್ಕಿಂತ ಹಳೆಯ (ಜಿಂಜರ್‌ಬ್ರೆಡ್) ಫೋನ್‌ಗಳಲ್ಲಿ 2020, ಫೆ.1ರಿಂದ ಕಾರ್ಯ ಸ್ಥಗಿತಗೊಳಿಸುವುದಾಗಿ ಆ್ಯಪ್ ತಿಳಿಸಿತ್ತು.

ವಾಟ್ಸಾಪ್ ನ ಹಲವು ಫೀಚರ್ ಗಳನ್ನು(ವೈಶಿಷ್ಟ್ಯಗಳನ್ನು) ಭವಿಷ್ಯದಲ್ಲಿ ಬದಲಾವಣೆ ಮಾಡಲಾಗ್ತಿದೆ. ಭವಿಷ್ಯದ ಫೀಚರ್ ಗಳಿಗೆ ಈ ಸ್ಮಾರ್ಟ್ ಫೋನ್ ಗಳು ಸಪೋರ್ಟ್ ಮಾಡುವುದಿಲ್ಲ.

ಇಂತಹ ಫೋನ್ ಗಳಲ್ಲಿ ವಾಟ್ಸಾಪ್ ಬಳಕೆ ಮಾಡಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಸ ಒ.ಎಸ್. ವರ್ಷನ್ ಗೆ ಬದಲಿಸಿಕೊಳ್ಳಬೇಕಿದೆ. ಅಂಡ್ರಾಯಿಡ್ OS 4.0+ , ಐಫೋನ್ iOS 7+, ವಿಂಡೋಸ್ ಫೋನ್ 8.1+ ಅಪ್ ಗ್ರೇಡ್ ಮಾಡಿಕೊಳ್ಳಬೇಕಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬೇಲದ ಹಣ್ಣಿನಲ್ಲಿರುವ ಈ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

    ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉತ್ತಮವಾದ ಔಷಧಿ. ಬೇಸಿಗೆ ಕಾಲದಲ್ಲಿ ಈ ಹಣ್ಣಿನ ಸೇವನೆ ಉತ್ತಮ. ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಗ್ಯಾಸ್ಟ್ರಿಕ್, ಅಲ್ಸರ್, ಮೂತ್ರಪಿಂಡದ ಸಮಸ್ಯೆ, ಮಲಬದ್ಧತೆ, ಅಜೀರ್ಣ ಸಮಸ್ಯೆಯಿದ್ದರೆ ಈ ಹಣ್ಣನ್ನು ತಿನ್ನಬಹುದು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಲಾಗುತ್ತದೆ. ತೂಕ ಇಳಿಸಲು ಬಯಸುವವರು ಈ ಹಣ್ಣನ್ನು…

  • ಆರೋಗ್ಯ

    ಯುವಜನರು ಕುಡಿತದ ಪ್ರಮಾಣ ಸಾಕು ಎಂದು ನಿರ್ಧರಿಸುತ್ತಾರೆ, ಹೇಗೆ ಗೊತ್ತಾ???

    ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.

  • ಜ್ಯೋತಿಷ್ಯ

    `ಜೈ ಶ್ರೀರಾಮ್’ ಹೇಳುವಂತೆ ಸತತ 7 ಗಂಟೆ ಥಳಿಸಿ ಯುವಕ ದುರ್ಮರಣ……!

    ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಜಾರ್ಖಂಡ್ ನಲ್ಲಿ ನಡೆದಿದೆ.ಸಾರ್ವಜನಿಕರು 24 ವರ್ಷದ ಶಾಮ್ಸ್ ತಬ್ರೆಜ್ ಗೆ ಜಾರ್ಖಂಡ್ ನ ಸೀರೈಕೆಲ- ಖರ್‍ಸವಾನ್ ಹಾಗೂ ಸಿಂಘ್ಬುಮ್ ಜಿಲ್ಲೆಯಲ್ಲಿ ಥಳಿಸಿದ್ದಾರೆ. ಮಂಗಳವಾರ ಸಂಜೆ ಸಾರ್ವಜನಿಕರು ಶಾಮ್ಸ್ ನನ್ನು ಕಂಬಕ್ಕೆ ಕಟ್ಟಿ ಸುಮಾರು 7 ಗಂಟೆಗಿಂತಲೂ ಹೆಚ್ಚು ಕಾಲ ಚೆನ್ನಾಗಿ ಥಳಿಸಿದ್ದರು. ಅಲ್ಲದೆ ಇದೇ ವೇಳೆ ಶ್ರೀರಾಮ್’,ಜೈ ಹನುಮಾನ್’ ಎಂದು ಪಠಿಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಅಂದರೆ ಬುಧವಾರ ಬೆಳಗ್ಗೆ…

  • ಸಿನಿಮಾ

    ನುಡಿದಂತೆ ನಡೆದ “ಹಳ್ಳಿ ಹುಡುಗ ಪ್ರಥಮ್”.

    ನಮ್ಮ ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿರೋ ರಾಜಕಾರಣಿಗಳೇ ಸಾವಿರಾರೂ ಭರವಸೆಗಳನ್ನು ಕೊಡ್ತಾ ಇನ್ನೂ ಜೀವಂತವಾಗಿ ಸನ್ಮಾನ ಮಾಡಿಸಿಕೊಂಡು ಓಡಾಡುತ್ತಿರುವಾಗ, ಕನ್ನಡದ ಬಿಗಬಾಸ್ ಸಂಚಿಕೆ-4ರ ವಿಜೇತರಾದ ಒಳ್ಳೆ ಹುಡುಗ “ಪ್ರಥಮ್” ರವರು ಆ ದಿನ ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

  • ಸಿನಿಮಾ

    ರಿತೇಶ್‌ಗೆ ಐಶಾರಾಮಿ ಕಾರ್‌ ಬರ್ತಡೇ ಗಿಫ್ಟ್ ನೀಡಿದ ಪತ್ನಿ,ಕಾರಿನ ಬೆಲೆ ಎಷ್ಟು ಗೊತ್ತಾ..?ತಿಳಿಯಲು ಇದನ್ನು ಓದಿ..

    ಎಲೊನ್ ಮಸ್ಕ್ ಅವರ ಟೆಸ್ಲಾ ಮೋಟಾರ್ಸ್ ಸದ್ಯದಲ್ಲೇ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಭಾರತದ ರಸ್ತೆಗಿಳಿಸುವುದಾಗಿ ಹೇಳಿದೆ. ಇನ್ನೊಂದ್ಕಡೆ ನಟ ರಿತೇಶ್ ದೇಶ್ಮುಖ್ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯು ವಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ದೇಶ-ವಿದೇಶ

    ಇತಿಹಾಸ ನಿರ್ಮಿಸಿದ ಇಸ್ರೋ…..

    ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ