ದೇವರು-ಧರ್ಮ

ಈ ದೇವಸ್ಥಾನದಲ್ಲಿ ದೇವರಿಗೆ ಕೊಡೋ ಕಾಣಿಕೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..?ಏನದು..?ಮುಂದೆ ಓದಿ…

279

ಹಿಂದೂ ರಾಷ್ರ ಭಾರತದಲ್ಲಿ ದೇವಾಲಯಗಳು, ಭಾರತದ ಜನರ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಭಾರತದಲ್ಲಿ ಎಲ್ಲಿ ಹೋದರು ದೇವಾಲಯಗಳ ಕಾಣಸಿಗುತ್ತವೆ. ಜನ ಎಷ್ಟೇ ಕಷ್ಟ ಸುಖಗಳಿದ್ದರೂ ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ಹೋಗುತ್ತಾರೆ.

ಇಲ್ಲಿ ಎಷ್ಟೋ ದೇವಾಲಯಗಳಲ್ಲಿ ಎಷ್ಟೋ ವಿಚಿತ್ರಗಳು ನಡೆಯುತ್ತವೆ.ಇದೇ ತರ ಉತ್ತರಾಖಂಡ್ ನ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯದಲ್ಲಿ ವಿಚಿತ್ರ ಸಂಪ್ರದಾಯವೊಂದು ನಡೆಯುತ್ತದೆ.

ಈ ದೇವಾಲಯದ ವಿಶೇಷತೆ ಮತ್ತು ಆ ವಿಚಿತ್ರ ಸಂಪ್ರದಾಯ ಏನು ಗೊತ್ತಾ..?

ಎಲ್ಲಾ ದೇವಾಲಯಗಳಲ್ಲಿ ದೇವರ ಪೂಜೆಗಾಗಿ, ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ಅರ್ಪಿಸುವುದರ ಜೊತೆಗೆ, ಹರಕೆಗಳನ್ನು ಹೊರುವುದು ಸಾಮಾನ್ಯ.ಆದರೆ ಈ ದೇವಾಲಯದಲ್ಲಿ ವಿಚಿತ್ರ ಏನಪ್ಪಾ ಅಂದ್ರೆ, ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ಈಡೇರಲು ಹರಕೆ ಹೊತ್ತು ಕುಡಗೋಲನ್ನು ಅರ್ಪಿಸುತ್ತಾರೆ!

ದಟ್ಟ ಕಾಡಿನ ನಡುವೆ ಇರುವ ಈ ದೇವಾಲಯದ ಬಗ್ಗೆ ಸ್ಥಳೀಯರಿಗೆ ಅಪಾರ ಶ್ರದ್ಧೆ ಮತ್ತು ಭಕ್ತಿ ಇದೆ. ಭಕ್ತಾದಿಗಳು ಏನೇ ಕೋರಿದರೂ ಈ ದೇವರು ಅದನ್ನು ಈಡೇರಿಸುತ್ತಾನೆ ಎಂಬುವುದು ಇಲ್ಲಿರುವ ಸ್ಥಳೀಯರ ನಂಬಿಕೆ.

ಈ ದೇವಾಲಯಕ್ಕೆ ಬರುವ ಹೆಚ್ಚಿನ ಭಕ್ತಾದಿಗಳು ತಮ್ಮ ದನ ಕರುಗಳು, ಹಾಗೂ ವ್ಯವಸಾಯದ ಭೂಮಿಯನ್ನು ರಕ್ಷಿಸುವಂತೆ ದೇವಾಲಯದಲ್ಲಿ ಪ್ರಾರ್ಥಿಸಿ ಕುಡಗೋಲು ಅರ್ಪಿಸುವುದು ಇಲ್ಲಿ ಸಾಮಾನ್ಯದ ಸಂಗತಿಯಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನಿಮ್ಮ ಮನೆ ಒಡೆಯದೇ ಈ ಸರಳ ಕ್ರಮಗಳಿಂದ ವಾಸ್ತುದೋಷ ನಿವಾರಣೆ ಮಾಡಿಕೊಳ್ಳಿ…ಹೇಗೆಂದು ತಿಳಿಯಲು ಈ ಲೇಖನ ಓದಿ…

    ವಾಸ್ತುದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತುದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ… ಕೆಲ ಸರಳ ಉಪಾಯಗಳನ್ನು ಅನುಸರಿಸಿ ವಾಸ್ತು ದೋಷವನ್ನು ಕಡಿಮೆ ಮಾಡಬಹುದು… *ದೇವರ ಪೂಜೆ ಮಾಡಿದ ಹೂವನ್ನು ದೇವರ ಮನೆಯಲ್ಲಿಡಬೇಡಿ. *ಈಶಾನ್ಯ ಮೂಲೆಯಲ್ಲಿ ಅಧಿಕ ತೂಕದ ವಸ್ತುಗಳನ್ನು ಇಡಬೇಡಿ. *ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನಿಡಿ. *ಮನೆಯ ಗೋಡೆ ಮೇಲೆ ಹಸಿರು, ಸುಂದರ ಫೋಟೋಗಳನ್ನು ಹಾಕಿ. *ನೀರಿಗೆ ಅರಿಶಿನವನ್ನು ಬೆರೆಸಿ ವೀಳ್ಯದೆಲೆ ಸಹಾಯದಿಂದ ಮನೆಗೆಲ್ಲ ಸಿಂಪಡಿಸಿ….

  • ಕ್ರೀಡೆ, ಸಿನಿಮಾ

    ನೆನ್ನೆ RCB ಮ್ಯಾಚ್ ನೋಡಲು ಹೋಗಿದ್ದ ಕನ್ನಡಗರಿಗೆ ಕಾದಿತ್ತು ಸರ್ಪ್ರೈಸ್..!

    ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಪಂದ್ಯ ನಡೆಯಿತು. ಅಲ್ಲದೆ ಬುಧವಾರ ವರನಟ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಆಗಿದ್ದರಿಂದ ಕ್ರೀಡಾಂಗಣದ ಸ್ಕ್ರೀನ್‍ನಲ್ಲಿ ಅವರ ಫೋಟೋ ಹಾಕಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ಬುಧವಾರ ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ ಕ್ರೀಡಾಂಗಣದ ಎಲ್‍ಇಡಿ ಸ್ಕ್ರೀನ್‍ನಲ್ಲಿ ಅವರ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು. ಫೋಟೋ ಕೆಳಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕೂಡ ಬರೆದಿತ್ತು. ಇದನ್ನು ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಾಯಲ್…

  • ಸಿನಿಮಾ

    ದೊಡ್ಮನೆ ಅಮ್ಮ “ಪಾರ್ವತಮ್ಮ ರಾಜ್ ಕುಮಾರ್” ವಿಧಿವಶ

    ವರನಟ ಡಾ. ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ (77)ಅವರು ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

  • ಸುದ್ದಿ

    ಬಸ್ ನ ಚಕ್ರ ಸ್ಫೋಟಗೊಂಡು 34 ಮಂದಿ ಪ್ರಯಾಣಿಕರಿದ್ದ ಬಸ್ ಪಲ್ಟಿ…!

    ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್‍ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…

  • ದೇವರು

    ‘ಉಗ್ರ ಹನುಮಂತ’ಚಿತ್ರದ ಹಿಂದಿರುವ ರೋಚಕ ಸ್ಟೋರಿ ಗೊತ್ತಾ ನಿಮ್ಗೆ!ಈ ಚಿತ್ರ ಹೇಗೆ ಬಂತು ಗೊತ್ತಾ?

    ಯುವ ಜನರಿಗೆ ಟ್ಯಾಟೂ, ಹಚ್ಚೆಗಳು ಅಂದ್ರೆ ಸ್ವಲ್ಪ ಹೆಚ್ಚೇ ಹುಚ್ಚಿದೆ. ವಾಹನಗಳ ಮೇಲೆ ವಿಭಿನ್ನವಾದ ಸ್ಟಿಕ್ಕರ್ಗಳು ಪ್ರಯೋಗಿಸುವ ಬಗ್ಗೆಯೂ ಆಸಕ್ತಿ ಇರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರು ಮತ್ತು ಬೈಕ್ಗಳ ಮೇಲೆ ಉಗ್ರ ಸ್ವರೂಪಿ ಆಂಜನೇಯನ ಚಿತ್ರ ರಾರಾಜಿಸುತ್ತಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ಓಡಾಡುತ್ತಿದ್ದಾನೆ.