ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಶುಕ್ರವಾರ, 23/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಕೆಲಸದ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸದೆ ದೇಹಾಲಸ್ಯ ಉಂಟಾಗಬಹುದು. ಯಾರೊಂದಿಗೂ ಈ ವಾರ ಜಗಳ ಬೇಡ. ಇದರಿಂದ ನಿಮಗೆ ಹೆಚ್ಚು ತೊಂದರೆಯಾಗಲಿದೆ. ಹಣದ ಹರಿವು ಹೆಚ್ಚಾಗುತ್ತದೆ. ನಿಮ್ಮ ಆಶಾವಾದವೂ ಹೆಚ್ಚಲಿದೆ. ವೃತ್ತಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಮಾರ್ಗಗಳು ತೆರೆದುಕೊಳ್ಳುತ್ತವೆ. ಆಭರಣ ತಯಾರಕರಿಗೆ ಬಹಳಷ್ಟು ಅವಕಾಶ ಒದಗುತ್ತವೆ. ಆಭರಣ ನವೀಕರಿಸುವವರಿಗೆ ಉತ್ತಮ ವ್ಯಾಪಾರ ಮತ್ತು ಲಾಭ. ಮಕ್ಕಳನ್ನು ಅಲಕ್ಷಿಸಲು ಮುಂದಾಗಬೇಡಿ. ಅವರೊಡನೆ ಸ್ನೇಹದಿಂದ ಮಾತನಾಡಿ ಅವರ ವಿಶ್ವಾಸವನ್ನು ಪಡೆಯಿರಿ.
ಸಂಹವನ ವಲಯದಲ್ಲಿ ಕೆಲಸ ಮಾಡುವವರಿಗೆ ಅಭಿವೃದ್ಧಿ. ನಿರೀಕ್ಷಿತ ಮೂಲದಿಂದ ಧನಾದಾಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಒಡಹುಟ್ಟಿದವರು ಹಾಗೂ ಬಂಧುಗಳ ನಡುವೆ ಸ್ವಲ್ಪ ಮುಸುಕಿನ ಗುದ್ದಾಟ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಈ ರಾಶಿಯ ಮಕ್ಕಳ ಅಭಿವೃದ್ಧಿ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಸಿದ್ಧ ಉಡುಪು ತಯಾರಿಸುವವರಿಗೆ ವ್ಯಾಪಾರ ವೃದ್ಧಿ.
ಈ ವಾರ ಸಜ್ಜನರ ಸಹವಾಸ ದೊರೆಯುತ್ತದೆ. ನಿಮ್ಮ ಮನಸ್ಥಿತಿ ಸಾಕಷ್ಟು ಉಲ್ಲಾಸಿತವಾಗಿರುತ್ತದೆ. ಮೇಲಧಿಕಾರಿಗಳಿಂದ ನಿಮ್ಮೆ ಕೆಲಸಕ್ಕೆ ಹೊಗಳಿಕೆ ಸಿಗಲಿದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಧನಾತ್ಮಕ ಚಿಂತನೆ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ. ಶತ್ರುಗಳು ನಿಮ್ಮನ್ನು ಹೊಗಳಲಿದ್ದಾರೆ. ಎಚ್ಚರಿಕೆವಹಿಸುವುದು ಒಳಿತು.
ಉನ್ನತ ವಿದ್ಯೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ. ಅವರ ವಿದ್ಯೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ನೌಕರಿ ದೊರೆಯಲಿದೆ. ಸಂಸಾರದಲ್ಲಿ ಸುಖಮಯ ವಾತಾವರಣ ಮೂಡಿ ಬರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಜನಗಳೊಡನೆ ಹೆಚ್ಚಾಗಿ ಬೆರೆತರೆ ಗೌರವ ಹೆಚ್ಚುತ್ತದೆ. ನೊರೆಹೊರೆಯವರ ಜೊತೆಗೆ ನಿಷ್ಠುರತೆ ಬೇಡ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ದೊರೆಯುತ್ತದೆ.
ನೀವು ಆಲೋಚಿಸಿದ ಕಾರ್ಯಗಳಲ್ಲಿ ಜಯ ಲಭಿಸಲಿದೆ. ಮುಂದಿನ ಯೋಜನೆಗಳಲ್ಲಿ ಕ್ರಿಯಾಶೀಲರಾಗಲು ಸಹಕಾರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಡನೆ ನಿಷ್ಠೂರತೆ ಬೇಡ. ಈ ರಾಶಿಯ ಹಲವರಿಗೆ ನಾಯಕತ್ವದ ಗುಣ ಒಲಿದು ಜನಗಳ ನಡುವೆ ಗುರುತಿಸಲ್ಪಡುತ್ತಾರೆ. ಕಣ್ಣಲ್ಲಿ ನೋವು ಅಥವಾ ತಲೆನೋವು ಕಾಡಬಹುದು.
ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಧನದ ಒಳಹರಿವು ಹೆಚ್ಚಲಿದೆ. ಈ ವಾರ ಚುರುಕಾಗಿ ಕೆಲಸ ಮಾಡುವಿರಿ. ಈ ರಾಶಿಯ ಸ್ತ್ರೀಯರು ತಾಳ್ಮೆಯಿಂದ ಇರುವುದು ಉತ್ತಮ. ಇದರಿಂದ ನಿಮಗೆ ಬರಬೇಕಾಗಿದ್ದ ಆದಾಯ ಬರಲಿದೆ. ಒಡವೆಗಳನ್ನು ಕೊಂಡುಕೊಳ್ಳುವ ಯೋಗವಿದೆ. ಎದುರಾಳಿಗಳನ್ನು ಹಗುರವಾಗಿ ಪರಿಗಣಿಸಬೇಡಿರಿ.
ನಿಮಗೆ ಸಾಧನೆ ಮಾಡಲು ಮನಸ್ಸಾಗುತ್ತದೆ. ಸ್ಥಿರಾಸ್ತಿ ಖರೀದಿಸಲು ಯೋಜನೆ ರೂಪಿಸುತ್ತೀರಿ. ನಿಮ್ಮ ಹಠಮಾರಿ ಸ್ವಭಾವದಿಂದ ಜನರ ಬಳಿ ನಿಷ್ಠುರವಾಗುವ ಸಾಧ್ಯತೆ. ಸಂಗಾತಿಗೆ ಸ್ಥಿರಾಸ್ತಿ ಒದಗಿ ಬರುವ ಸಾಧ್ಯತೆ. ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಅವರ ವ್ಯಾಪಾರದಲ್ಲಿ ಸಾಕಷ್ಠು ಪ್ರಗತಿಯಾಗುತ್ತದೆ. ಈ ವಾರ ನೀವು ಹೆಣೆಯುವ ತಂತ್ರಗಳು ನಿಮಗೆ ಮುಳುವಾಗಲಿವೆ.
ಶ್ರಮಪಟ್ಟು ಕೃಷಿ ಮಾಡುವಿರಿ. ಕುಟುಂಬದ ಹಿರಿಯರ ಸಂಪರ್ಕ ಸಾಧಿಸಿ ಎಲ್ಲರನ್ನೂ ಒಟ್ಟು ಮಾಡಿ ಸೈ ಎನ್ನಿಸಿಕೊಳ್ಳುವಿರಿ. ಸ್ವಲ್ಪ ಪರಾಕ್ರಮ ಪ್ರದರ್ಶಿಸಿ ನಿಮ್ಮವರ ಸಹಾಯಕ್ಕೆ ಹೋಗುವಿರಿ. ಆರ್ಥಿಕ ಸ್ಥಿತಿ ಭದ್ರಗೊಳಿಸಿಕೊಳ್ಳಲು ಒತ್ತು. ನಿಮ್ಮ ಮಾತಿನಿಂದ ಎಲ್ಲರನ್ನೂ ಗೆಲ್ಲುತ್ತೀರಿ. ಆದರೆ, ಅತಿಮಾತು ಸಮಸ್ಯೆಯನ್ನು ತರಬಹುದು.
ನಿಮ್ಮ ಮೇಲಧಿಕಾರಿಗಳು ಬಹಳ ವಿಶ್ವಾಸವನ್ನು ಇಟ್ಟುಕೊಳ್ಳುವರು. ಮಕ್ಕಳು ಮತ್ತು ದಾಯಾದಿಗಳ ನಡುವೆ ಸಂಬಂಧ ವೃದ್ಧಿಯಾಗುತ್ತದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಮತ್ತೊಂದು ಗಳಿಕೆಯತ್ತ ಆಲೋಚನೆ ಮಾಡುತ್ತಾ ಅಲ್ಪಕಾಲದ ಸಂಪಾದನೆಗೆ ತೊಡಗುವಿರಿ. ಅಗತ್ಯ ವಸ್ತುಗಳ ಖರೀದಿ.
ದೇವರ ಕೃಪೆಯಿಂದ ನಿಮ್ಮ ಕಾರ್ಯಗಳು ಸುಗಮವಾಗುತ್ತವೆ. ಈ ವಾರ ಹಣದ ಕೊರತೆ ಅಷ್ಟಾಗಿ ಬಾಧಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹಿರಿಯರ ಸಹಾಯದಿಂದ ಅಧಿಕಾರದಲ್ಲಿ ಅಭಿವೃದ್ಧಿ. ವಿರಸ ಮೂಡಿದ್ದ ದಾಂಪತ್ಯದಲ್ಲಿ ತಣ್ಣನೆ ಗಾಳಿ ಬೀಸಲು ಶುರುವಾಗಲಿದೆ. ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಲಿದೆ. ಅವರ ಸಂಭಾವನೆಯಲ್ಲಿ ಏರಿಕೆ. ಶಿಕ್ಷಕರಿಗೆ ಗೌರವ ದೊರೆಯುತ್ತದೆ.
ಯುವಕರಲ್ಲಿ ಮೂಡುವ ಅನರ್ಥ ಕೋಪದಿಂದ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಇವರ ನಡುವಳಿಕೆಯಿಂದ ಹಿರಿಯರಿಗೆ ಬೇಸರವಾಗಲಿದೆ. ಹಿರಿಯರ ದೈವ ನಂಬಿಕೆಗಳು ದೃಢವಾಗಿರುತ್ತವೆ. ವ್ಯಾಪಾರದಲ್ಲಿ ಎಂದಿನಂತೆ ಲಾಭ ಬರುತ್ತವೆ. ಹಿರಿಯರಿಗೆ ನವಚೈತನ್ಯ ಬಂದು ಚುರುಕಾಗಿ ಕೆಲಸದಲ್ಲಿ ತೊಡಗುವರು. ಸಾಲ ತೆಗೆದುಕೊಂಡಿದ್ದವರಿಗೆ ಎಲ್ಲವನ್ನೂ ತೀರಿಸುವ ಅವಕಾಶ ಒದಗುತ್ತದೆ.
ವೃತ್ತಿಯ ಬಡ್ತಿ ಪಡೆಯಲು ಹಿರಿಯ ಅಧಿಕಾರಿಗಳ ಸಹಾಯ ಪಡೆಯುವಿರಿ. ಬುದ್ಧಿವಂತಿಕೆಯಿಂದ ವ್ಯವಹಾರ ವಿಸ್ತರಣೆ. ಹೊಸ ವ್ಯವಹಾರಗಳು ನಿಮ್ಮ ವ್ಯಕ್ತಿತ್ವವನ್ನು ಎತ್ತರದ ಶ್ರೇಣಿಗೆ ಒಯ್ಯುತ್ತವೆ. ಕಬ್ಬಿಣದ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಬರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆಯಲ್ಲಿ ಮದುಮಗಳಿಗೆ ತಾಳಿಯೊಂದಿಗೆ ಕಾಲುಂಗುರವನ್ನು ಸಹ ಹಾಕುತ್ತಾರೆ, ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮುತೈದೆಗೆ ತಾಳಿ, ಕುಂಕುಮ, ಹೂವು, ಬಳೆ, ಇವುಗಳೊಂದಿಗೆ ಕಾಲುಂಗುರವು ಬಹಳ ಪ್ರಮುಖ ಪಾತ್ರವಹಿಸುತ್ತದೆ, ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಕಾಲುಂಗುರ ಧರಿಸುವುದರ ಹಿಂದೆ ಅಡಗಿದೆ ವೈಜ್ಞಾನಿಕ ಕಾರಣ:- ವೇದಗಳ ಅನುಸಾರ ಎರಡು ಕಾಲು ಬೆರಳಿಗೆ ಬೆಳ್ಳಿ ಕಾಲುಂಗುರ ಧರಿಸುವುದರಿಂದ ತಿಂಗಳ ಮುಟ್ಟು ಸರಿಯಾಗಿ ಆಗುವುದಲ್ಲದೇ ಗರ್ಭಧಾರಣೆ…
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್ಸ್ಕ್ರೀನ್ನಲ್ಲಿ ಹೊಸ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ಅರಿಶಿನವು ಭಾರತೀಯ ಅಡುಗೆಮನೆಯಲ್ಲಿ ಬಳಸಲಾಗುವ ಪ್ರಸಿದ್ಧ ಮಸಾಲೆಯಾಗಿದೆ. ಆಹಾರಕ್ಕಾಗಿ ಸುವಾಸನೆಯನ್ನು ಮತ್ತು ರುಚಿಯನ್ನು ಸೇರಿಸುವುದರ ಜೊತೆಗೆ, ನಿಮಗೆ ಗೊತ್ತಿಲ್ಲದ ಅರಿಶಿನದ ಇನ್ನೂ 5 ಉಪಯೋಗಗಳಿವೆ.
ಸ್ತಂಭೇಶ್ವರ ಮಹಾದೇವ ದೇವಸ್ಥಾನವು 150 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ. ಇದು ಗುಜರಾತ್ನ ವಡೋದರಾ ಬಳಿಯ ಕವಿ ಕಾಂಬೊಯ್ ಪಟ್ಟಣದಲ್ಲಿದ್ದು, ವಡೋದರಾ ಬಳಿಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. 4 ಅಡಿ ಎತ್ತರದ ಶಿವಲಿಂಗ ಸ್ತಂಭೇಶ್ವರ ಮಹಾದೇವ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ವಾಸ್ತುಶಿಲ್ಪವು ತುಂಬಾ ಸರಳವಾಗಿದ್ದು, ದೇವಾಲಯವು ಮುಖ್ಯವಾಗಿ ಸ್ತಂಭಗಳ ಮೇಲೆ ಬೆಂಬಲಿತವಾಗಿದೆ. ಆದ್ದರಿಂದ ಇದನ್ನು ‘ಸ್ತಂಭೇಶ್ವರ ಮಹಾದೇವ’ ಎಂದು ಕರೆಯುತ್ತಾರೆ. ಕಣ್ಮರೆಯಾಗುವ ಶಿವ ದೇವಾಲಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ವಿಶಿಷ್ಟವಾಗಿದೆ. ಏಕೆಂದರೆ ಈ…
ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾದಷ್ಟು ಬಾಗಿಲಲ್ಲಿ ಸಿಲುಕಿ ಪರದಾಡುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ . ಹಸಿರು ಮಾರ್ಗದ ರೈಲಿನಲ್ಲಿ ಬಾಗಿಲ ಬಳಿ ಕಾಲು ಸಿಕ್ಕಿಕೊಂಡು ಒದ್ದಾಡುತ್ತಿರುವ ಎರಡು ದೃಶ್ಯ ಇತ್ತೀಚೆಗೆ ನಡೆದಿವೆ. ಅ.14ರಂದು ಸಂಜೆ 6.20 ರ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಹೆಣ್ಣು ಮಗುವಿನ ಕಾಲು ಬಾಗಿಲಿನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಿಲ್ದಾಣದಲ್ಲಿ ದಂಪತಿ ಮಗುವಿನೊಂದಿಗೆ ರೈಲಿನ ಒಳಗೆ ಪ್ರವೇಶಿಸುತ್ತಿದ್ದರು, ದಟ್ಟಣೆ ಹೆಚ್ಚಿದ್ದರಿಂದ ದಂಪತಿ ಹಾಗೂ ಮಗು ಬಾಗಿಲಿನ ಬಳಿಯಲ್ಲೇ ನಿಲ್ಲಬೇಕಾಯಿತು. ಈ ವೇಳೆ…
ಲೋಕಸಭಾ ಚುನಾವಣೆಯಲ್ಲಿ ತಾವು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಮಣೆ ಹಾಕಿರುವುದರಿಂದ ಹೈಕಮಾಂಡ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳದೆ ಕಳೆದ ಮೂರು ದಿನಗಳಿಂದ ಮನೆಯಲ್ಲಿಯೇ ಇದ್ದಾರೆಂದು ಹೇಳಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರ ಬದಲಿಗೆ ಅಣ್ಣಾ ಸಾಹೇಬ ಜೊಲ್ಲೆಯವರಿಗೆ ಟಿಕೆಟ್ ನೀಡಿರುವುದು ಯಡಿಯೂರಪ್ಪನವರಿಗೆ…