ಸುದ್ದಿ

ಈ ಜಾಗದಲ್ಲಿ ವಾಸಿಸುವವರಿಗೆ ಸಿಗುತ್ತೆ ಭಾರೀ ಹಣ…!

44

ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ.

ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ.

ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ.

ಹಾಗಂತ ಇಲ್ಲಿ ಬಂದವರಿಗೆ ಪುಕ್ಕಟೆ ತಿಂಗಳಿಗೆ ಈ ಹಣವನ್ನು ಕೊಟ್ಟು ಕೂರಿಸುವುದಿಲ್ಲ. ಇದಕ್ಕೆ ಷರತ್ತುಗಳು ಅನ್ವಯಿಸುತ್ತವೆ. ಇಲ್ಲಿ ಬರುವವರು ಸ್ಟೇಷನರಿ ಅಂಗಡಿ, ರೆಸ್ಟೋರೆಂಟ್ ಇಲ್ಲವೇ ಇನ್ಯಾವುದೋ ತರಹದ ಉದ್ಯೋಗ ಅಥವಾ ವ್ಯಾಪಾರವನ್ನು ಇಲ್ಲಿ ಪ್ರಾರಂಭಿಸಬೇಕು. ಅಂದರೆ ವ್ಯಾಪಾರಕ್ಕೆ 22000 ಪೌಂಡ್ ಲಭ್ಯವಾಗುತ್ತದೆ.

ಇದು ಮೂರು ವರ್ಷಗಳ ಕಾಲ ನಿರಂತರವಾಗಿ ಲಭಿಸುತ್ತದೆ ಎಂದು ಅಲ್ಲಿನ ಸ್ಥಳೀಯ ಅಧ್ಯಕ್ಷರಾದ ಡೊನಾಟ ಟೋಮ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಒಂದೇ ಒಂದು ಮಗು ಇಲ್ಲಿ ಹುಟ್ಟಿರುವ ದಾಖಲೆ ಇಲ್ಲ ಎಂಬುದು ಸರ್ಕಾರವನ್ನು ಆತಂಕಕ್ಕೆ ದೂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    256 ವರ್ಷ ಬದುಕಿದ ವ್ಯಕ್ತಿ ಎಷ್ಟು ಪತ್ನಿಯರ ಅಂತ್ಯ ಸಂಸ್ಕಾರ ಮಾಡಿದ್ದ ಗೊತ್ತಾ? ತಿಳಿಯಲು ಈ ಲೇಖನ ಓದಿ ..

    ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ.

  • ಸಿನಿಮಾ, ಸುದ್ದಿ

    ವಿಜಯ್ ದೇವರಕೊಂಡ ಖರೀದಿಸಿದ ಮನೆ ಬೆಲೆ ಎಷ್ಟು ಗೊತ್ತಾ..? ಕೇಳಿದರೆ ಶಾಕ್ ಆಗ್ತೀರಾ,.!

    ಸೌತ್​ ಸೆನ್ಸೇಷನಲ್​ ಹೀರೋ ವಿಜಯ್​ ದೇವರಕೊಂಡ ಖರೀದಿಸಿರೋ ಹೊಸ ಮನೆ ಟಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಬರೋಬ್ಬರಿ 18 ಕೋಟಿಗೆ ವಿಜಯ್​, ಈ ಮನೆ ಖರೀದಿಸಿದ್ದಾರೆ ಅಂತ ಹೇಳಲಾಗ್ತಿದೆ ಇತ್ತೀಚೆಗೆ ವಿಜಯ್ ಅವರು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಇರುವ ತಮ್ಮ ಹೊಸಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ಗೃಹಪ್ರವೇಶದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕೇವಲ ನಾಲ್ಕೈದು ಹಿಟ್​ ಕೊಟ್ಟು, ಸೂಪರ್​ ಸ್ಟಾರ್​ ಪಟ್ಟಕ್ಕೇರಿದ…

  • ಸಿನಿಮಾ, ಸುದ್ದಿ

    ಡಾ।ರಾಜಕುಮಾರ್ ಜೊತೆ ನಟಿಸಿದ ಸರಿತಾ ದುಬೈಗೆ ಹೋಗಲು ಕಾರಣವೇನು? ಅವರ ಜೀವನದಲ್ಲಿ ಅಂಥಾದ್ದು ಏನಾಗಿತ್ತು?

    ಸಿನಿ ಲೋಕದಲ್ಲಿ ನೋಡಲು ಸುಂದರವಾಗಿದ್ದರೆ ಗ್ಲಾಮರಸ್ ಆಗಿದ್ದರೆ ಮಾತ್ರ ಬೆಳೆಯಲು ಸಾದ್ಯ! ಆಗ ಮಾತ್ರ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂದು ಮಾತನಾಡಿಕೊಳ್ಳುವ ಸಮಯದಲ್ಲಿ, ಕಪ್ಪಗಿದ್ದರೆ ವ್ಯಕ್ತಿಗೆ ಅದು ಮೈನಸ್ ಅಲ್ಲ ಪ್ಲಸ್ ಎಂದು ತೋರಿಸಿಕೊಟ್ಟವರು ನಟಿ ಸರಿತಾ.! ಆಕೆಯ ಕಣ್ಣುಗಳನ್ನು ನೋಡಿ ಸೋತವರೆಷ್ಟೋ, ಅವರ ಅಭಿನಯ ಮತ್ತು ವ್ಯಕ್ತಿತ್ವವವನ್ನು ನೋಡಿ ಈ ರೀತಿಯಾದ ಹುಡುಗಿ ನಮಗೆ ಸಿಗಬೇಕು ಎಂದು ಅದೆಷ್ಟೋ ಜನ ಕನಸು ಕಂಡಿದ್ದರು. ಕನ್ನಡ, ತೆಲುಗು, ತಮಿಳು, ಮಲೆಯಾಳ ಮುಚ್ಚಿಗೆ ಮರಗಳಲ್ಲಿ ವಿಜೃಂಭಿಸಿದ ಅವರಿಗೆ ವೈವಾಹಿಕ ಜೀವನ…

  • ಸುದ್ದಿ

    ಹಸಿದ ಜಿಂಕೆಮರಿಗೆ ಎದೆಹಾಲುಣಿಸಿದ ಮಹಾತಾಯಿ…!

    ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಬಿಷ್ಣೋಯಿ ಸಮುದಾಯದ ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಸಾಮಾಜಿ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಫೋಟೊವನ್ನು ಐಎಫ್​​​ಎಸ್​ ಅಧಿಕಾರಿ ಪ್ರವೀಣ್​​​​​​​ ಕಾಸ್ವಾನ್​​ ಎಂಬುವವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಷ್ಣೋಯಿ ಸಮುದಾಯದ ಮಹಿಳೆಯರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಸಹೃದಯವುಳ್ಳಂತವರು. ಅವರು ತಮ್ಮ ಮಕ್ಕಳಂತೆ ಪ್ರಾಣಿ ಹಾಗೂ ಪಕ್ಷಿಗಳನ್ನು ಪೋಷಣೆ ಮಾಡುತ್ತಾರೆ ಎಂದು…

  • ತಂತ್ರಜ್ಞಾನ

    ಕರ್ನಾಟಕ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಕೇವಲ ಅರ್ಧಗಂಟೆಯ ದಾರಿಯಾಗಿಬಿಡುತ್ತದೆ…!ತಿಳಿಯಲು ಈ ಲೇಖನ ಓದಿ ..

    ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್‌ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ವರ್ಜಿನ್‌ ಹೈಪರ್‌ಲೂಪ್‌ ಒನ್‌ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.

  • ಸುದ್ದಿ

    ಅರವತ್ತರ ವಯಸ್ಸದರು,ಸೂಪರ್ ಮಾಡೆಲ್….!

    ಅರವತ್ತರ ವಯಸ್ಸಿನಲ್ಲೂ ಕಟ್ಟುಮಸ್ತಾಗಿದ್ದು ಸೂಪರ್ ಮಾಡೆಲ್‌ನಂತಿರುವ ದಿನೇಶ್ ಮೋಹನ್ ಈಗ ಹಲವರ ಗಮನ ಸೆಳೆಯುತ್ತಿದ್ದಾರೆ. ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಮೋಹನ್ ಅತಿಯಾದ ತೂಕದಿಂದ ಬಳಲಿ ಹಾಸಿಗೆ ಹಿಡಿದಿದ್ದರು. ಅಲ್ಲಿಂದ ಚೇತರಿಸಿಕೊಂಡರೂ ದಢೂತಿ ದೇಹ ಇಳಿಸಿಕೊಳ್ಳಲು 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡ ಅವರು 2016ರಲ್ಲಿ ಫೋಟೋಶೂಟ್ ಮಾಡಿದ ಬಳಿಕ ಅಂಗಸೌಷ್ಠವ ರಕ್ಷಣೆ ನಿರಂತರವಾಗಿಸಿಕೊಂಡರು. ಈಗ ಅವರಿಂದ ಯುವಕರು ಮಾತ್ರವಲ್ಲ ವಯಸ್ಸಾದವರೂ ಸೆಳೆಯಲ್ಪಡುತ್ತಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಅವರು…