ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೆವ್ವ -ಭೂತಗಳ ಇರುವಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ದೆವ್ವಗಳ ಬಗ್ಗೆ ಕೆಲವರು ನಂಬಿದ್ರೆ, ಇನ್ನೂ ಕೆಲವರು ನಂಬೋದಿಲ್ಲ.ಆದ್ರೆ ನಾವು ಆಗಾಗ ದೆವ್ವಗಳ ಇರುವಿಕೆ ಬಗ್ಗೆ ಕೇಳುತ್ತಲೇ ಇರುತ್ತೇವೆ.ಆದ್ರೆ ಈ ಗ್ರಾಮದಲ್ಲಿ ಹೆಣ್ಣು ದೆವ್ವ ಇದೆ ಎಂಬ ಕಾರಣಕ್ಕೆ ಇಡೀ ಊರಿನ ಜನ ಭಯಗೊಂಡು ಊರನ್ನೇ ಬಿಟ್ಟಿರುವ ಘಟನೆ ನಡೆದಿದೆ.
ಹೌದು, ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಾಶಿಗುಡ್ ಎಂಬ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಆ ಊರಿನ ಜನ ಭಯಗೊಂಡು ಊರನ್ನೇ ಬಿಟ್ಟಿದ್ದಾರಂತೆ.
ಕಾಶಿಗುಡ್’ನ ಈ ಗ್ರಾಮದಲ್ಲಿ ಕತ್ತಲಾದ ಮೇಲೆ ಹೆಣ್ಣು ಪ್ರೇತಾತ್ಮಗಳು ಪುರುಷರ ಮೇಲೆ ದಾಳಿ ಮಾಡುತ್ತಿವೆಯಂತೆ. ಹಾಗಾಗಿ ಪುರುಷರೆಲ್ಲರು ಹೆಣ್ಣು ದೆವ್ವ ಕಾಡುತ್ತದೆ ಎಂಬ ಭೀತಿಯಲ್ಲಿ ಹೈರಾಣಾಗಿದ್ದಾರೆ. ಅಲ್ಲಿ ಕುಟುಂಬಗಳು ಊರೇ ಬಿಟ್ಟು ಹೋಗುತ್ತಿವೆ. ಇನ್ನು ಊರಲ್ಲಿ ಹೆಣ್ಮಕ್ಕಳು ವಾಸಿಸಲು ದೈರ್ಯ ತೋರುತ್ತಿಲ್ಲ.
ಇನ್ನು ಪುರುಷರು ಊರಲ್ಲಿ ಸಂಜೆಯ ಹೊತ್ತು ಮನೆ ಸೇರಿದ್ರೆ, ಮತ್ತೆ ಹೊರ ಬರುವುದು ಮರುದಿನ ಬೆಳಿಗ್ಗೆ. ಆದ್ದರಿಂದ ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುಳಿಯುತ್ತಿದ್ದಾರೆ. ಆದ್ದರಿಂದ ಪುರುಷರು ಗ್ರಾಮದಲ್ಲಿ ಇರಲು ಭಯಬೀತರಾಗಿ ಜೀವ ಉಳಿದರೆ ಸಾಕು ಎಂದು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:-ಕನ್ನಡದ ಈ ದೆವ್ವದ ಸಿನಿಮಾ ನೋಡಿದ ವ್ಯಕ್ತಿಗೆ ಥಿಯೇಟರ್’ನಲ್ಲಿ ಹಾಗಿದ್ದಾದರೂ ಏನು ಗೊತ್ತಾ..?
ಕಾಶಿಗುಡ ಗ್ರಾಮದಲ್ಲಿ ಸುಮಾರು ಕುಟುಂಬಗಳು ವಾಸ ಮಾಡುತ್ತಿದ್ದು . ಗ್ರಾಮದ ಸಮೀಪ ಕಲ್ಲು ಕ್ಯಾರಿ ಇದ್ದು ಹೆಚ್ಚಿನವರು ಅಲ್ಲಿಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ.ಆದರೆ ಈಗ ಕೆಲವು ದಿನಗಳಿಂದ ನಮ್ಮ ಮೇಲೆ ಯಾರೋ ದಾಳಿ ಮಾಡಿದಂತೆ ಭಾಸವಾಗುತ್ತಿದೆ. ಹೀಗಾಗಿ ಭಯಗೊಂಡು ನಾವು ಊರನ್ನು ತೊರೆಯುತ್ತಿದ್ದೇವೆ ಎಂದು ಈ ಗ್ರಾಮದ ಪುರುಷರು ಹೇಳಿದ್ದಾರೆ.
ಈ ಗ್ರಾಮದ ಜನರು ಊರನ್ನು ತೊರೆಯುತ್ತಿರುವ ಕಾರಣ ಗ್ರಾಮದಲ್ಲಿರುವ ಮನೆಗಳೆಲ್ಲಾ ಬೀಗ ಹಾಕಿದ್ದಾರೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಈ ಗ್ರಾಮ ಈಗ ದೆವ್ವಗಳ ಕೊಂಪೆಯಾಗಿದೆ.ಸ್ವಲ್ಪ ಜನ ಕತ್ತಲಾಗುವ ಮುನ್ನವೇ ಮನೆಗೆ ಬಂದು ಸೇರುತ್ತಿದ್ದು ಮುಂಜಾನೆ ಆಗುವವರೆಗೂ ಯಾರೂ ಆಚೆ ಹೊರ ಬರಲು ಧೈರ್ಯ ತೋರುತ್ತಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ, 20ಕ್ಕೂ ಅಧಿಕ ವಿದ್ಯುತ್ ಕಂಬ, ಟಿಸಿ ಜಖಂಗೊಂಡಿದೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗೋವೇನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದ್ದು, ಇಂದು ಬೆಳಗ್ಗೆ ಕ್ಲಾಸ್‍ಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಕ್ ಆಗಿದ್ದಾರೆ. ಶಾಲೆಯಿಂದ ಹೊರಗೆ ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಕಟ್ಟಡ ವೀಕ್ಷಿಸುತ್ತಿದ್ದಾರೆ. ತಾಳೇಕೆರೆ, ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ 20ಕ್ಕೂ ಅಧಿಕ…
ಸ್ಮಾರ್ಟ್ ವಿದ್ಯಾರ್ಥಿಯೊಬ್ಬ ಸ್ಮಾರ್ಟ್ ಆಗಿ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಎಂಐಟಿ ಕಾಲೇಜು ಎಂಜಿನಿಯರ್ ವಿದ್ಯಾರ್ಥಿ ಸ್ಮಾರ್ಟ್ ವಾಚ್ ಕಟ್ಟಿಕೊಂಡು ಹೋಗಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ. ಸ್ಮಾರ್ಟ್ ವಾಚ್ ಕಟ್ಟಿದ್ದ ವಿದ್ಯಾರ್ಥಿಯನ್ನು ಪರೀಕ್ಷೆ ಹಾಲ್ ನಿಂದ ಎಬ್ಬಿಸಿ ಹೊರಗೆ ಕಳುಹಿಸಿದ್ದಾರೆ. ಈ ಸ್ಮಾರ್ಟ್ ವಾಚ್ ಎಷ್ಟು ತಂತ್ರಜ್ಞಾನದಿಂದ ಕೂಡಿದೆ ಎಂದರೆ ಇಡೀ ಪುಸ್ತಕವನ್ನು ಇದರೊಳಗೆ ಅಪ್ಲೋಡ್ ಮಾಡಬಹುದು. ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರೋಗ್ರಾಂಗಳು, ಅದರ ಸೂತ್ರಗಳು, ಕೆಲ ಉತ್ತರಗಳು ಮೆಮೋರಿ…
ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ.ಅತ್ಯಾಚಾರ ಹಾಗೂ ಬಲವಂತ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಹಾಯವಾಗುವಂತಹ ಮಾಡೆಲ್ ಒಂದು ತಯಾರಾಗಿದೆ.
ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.
ನವದೆಹಲಿ, ಕೊಡಗುಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನುಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ. ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ. ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ…
ತೀವ್ರ ಕುತೂಹಲ ಕೆರಳಿಸಿರುವ ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕವನ್ನು ಪ್ರಕಟಿಸಲಾಗಿದೆ. ಮಹೂರ್ತ ಫಿಕ್ಸ್… ಮೇ 12 ರಂದು ಮತದಾನ ನಡೆಯಲಿದೆ.ತದನಂತರ ಮೇ 15 ರಂದು ಮತಎಣಿಕೆ ನಡೆಯಲಿದೆ. ಮೇ 28ಕ್ಕೆ ಪ್ರಸಕ್ತ ವಿಧಾನಸಭೆಯ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು,ನಂತರ ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನೀತಿ ಸಂಹಿತೆ ಜಾರಿ… ದೆಹಲಿಯ ಕೇಂದ್ರ ಚುನಾವಣಾ ಆಯೋಗದಲ್ಲಿ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಮತ್ತು…