ಉಪಯುಕ್ತ ಮಾಹಿತಿ

ಈ ಅಪರೂಪದ ಕಾಯಿಲೆಗೆ ಕನ್ನಡಿಗ ನಲ್ಲೆ ಗೌಡರ ಹೆಸರು..!

677

ಅಪರೂಪದ  ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ ಮಾಡಲಾಗಿದೆ.

ಮೂಲ

ಕೈ ಎಲುಬುಗಳು ನಾಪತ್ತೆಯಾಗಿರುವುದು, ಹೆಬ್ಬೆರಳು ಇಲ್ಲದಿರುವುದು, ಎರಡು ಮೂತ್ರ ವಿಸರ್ಜನಾ ನಾಳಗಳಿರುವುದು, ಕಿಡ್ನಿ ಮತ್ತು ಹೃದಯ ಅಸಹಜ ಸ್ಥಳದಲ್ಲಿರುವುದು ಮುಂತಾದ ಲಕ್ಷಣವುಳ್ಳ ಜನ್ಮದತ್ತ ಕಾಯಿಲೆಯೊಂದನ್ನು ಕರ್ನಾಟಕ ಮೂಲದ ವೈದ್ಯ ನಲ್ಲೇಗೌಡ ಅವರು ಮೊದಲ ಬಾರಿಗೆ ಪತ್ತೆ ಮಾಡಿದ್ದರು.

ಅಲ್ಲದೆ ಅದರ ಬಗ್ಗೆ ನಲ್ಲೇಗೌಡ ಅವರು ಲೇಖನ ಬರೆದಿದ್ದರು. ನಲ್ಲೇಗೌಡ ಅವರ ಈ ವಿಶಿಷ್ಠ ಲೇಖನಕ್ಕೆ ಜಾಗತಿಕ ಮನ್ನಣೆ ದೊರಕಿದ್ದು, ಇದೇ ಮೊದಲ ಬಾರಿಗೆ ಈ ರೋಗ ಲಕ್ಷಣವನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ರೋಗ ಲಕ್ಷಣವನ್ನು ‘ನಲ್ಲೇಗೌಡ ಸಿಂಡ್ರೋಮ್‌ (ಲಕ್ಷಣ)’ ಎಂದು ನಾಮಕರಣ ಮಾಡಲಾಗಿದೆ.

ಚಿತ್ರದುರ್ಗದ ಹೊಳಲ್ಕೆರೆಯ ಡಾ. ಮಲ್ಲಿಕಾರ್ಜುನ ನಲ್ಲೇಗೌಡ ಅವರು, ಪ್ರಸ್ತುತ ಅಮೆರಿಕದ ಕೊಲೊರಾಡೊದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2002ರಲ್ಲಿ ಡಾ. ನಲ್ಲೇಗೌಡ ದೆಹಲಿಯ ಎಐಐಎಂಎಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಬಾಲಕನೊಬ್ಬ ಹಲವು ಸಮಸ್ಯೆಗಳೊಂದಿಗೆ ಚಿಕಿತ್ಸೆಗೆ ಬಂದಿದ್ದ.

ಆ ಬಾಲಕನಿಗೆ ತ್ರಿಜ್ಯದ ರೀತಿಯಲ್ಲಿ ಜೋಡಿಸಲ್ಪಟ್ಟಿದ್ದ ಕೈಗಳಿದ್ದವು, ಆತನ ಕಣ್ಣುಗಳ ನಡುವೆ ದೂರ ಹೆಚ್ಚಿತ್ತು. ಆತನ ಹೃದಯ ಬಡಿತ ಎದೆಯ ಬಲಭಾಗದಲ್ಲಿ ಕೇಳಿಸುತಿತ್ತು. ಆತನಿಗೆ ಎರಡು ಮೂತ್ರ ವಿಸರ್ಜನಾ ನಾಳಗಳಿದ್ದವು. ಹೃದಯ ಬಲಭಾಗದಲ್ಲಿತ್ತು. ಈ ಬಗ್ಗೆ ಸಂಶೋಧನೆ ನಡೆಸಿದ್ದ ನಲ್ಲೇಗೌಡ, ರೋಗದ ಲಕ್ಷಣ ಪತ್ತೆ ಹಚ್ಚಿದ್ದರು.

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಇದು ಸಾಮಾನ್ಯದ ಸಾವಿನ ಕಥೆಯಲ್ಲ!ಗಂಡನಿಗೋಸ್ಕರ ಹೆಂಡತಿ!ಶಾಕ್ ಆಗ್ತೀರಾ…ಈ ಲೇಖನ ಓದಿ…

    ಪತಿ-ಪತ್ನಿ ಸಂಭಂದ ಬಿಡಿಸಲಾರದ ಅನುಭಂದ ಅಂತ ಹೇಳ್ತಾರೆ. ಅದರಲ್ಲೂ ನೀನು ಸತ್ತರೆ ನಾನು ಬದುಕಿರುವುದಿಲ್ಲ. ನಾನು ನಿಮ್ಮ ಜೊತೆ ಸಾಯುತ್ತೇನೆ ಎಂದು ಹಲವಾರು ಪತಿ ಪತ್ನಿಯರು ಹೇಳುತ್ತಾರೆ.ಆದರೆ ನಿಜವಾಗಲೂ ಅದನ್ನು ಎಷ್ಟು ಜನ ಪಾಲಿಸುತ್ತಾರೆ.

  • ಆರೋಗ್ಯ

    ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು..!ತಿಳಿಯಲು ಈ ಲೇಖನ ಓದಿ..

    ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.

  • Sports, ಕ್ರೀಡೆ

    ಪ್ರತಿಷ್ಠೆಗಾಗಿ ಭಾರತ ಮತ್ತು ಪಾಕ್ ಕೊನೆಯ ಹೋರಾಟ ಇಲ್ಲಿ ಗೆಲುವು ಯಾರದು?

    ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಭಾನುವಾರ ಎದುರಾಗುತ್ತಿವೆ.

  • ಸುದ್ದಿ

    ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ…!

    ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ…

  • ಜ್ಯೋತಿಷ್ಯ

    ಈ ರಾಶಿಯವರೂ ಮರೆತೂ ಕೂಡ ಈ ಉಂಗುರವನ್ನು ಧರಿಸಬೇಡಿ..!

    ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಶಾಸ್ತ್ರದ ಪ್ರಕಾರ, ಬೆರಳಿಗೆ ಧರಿಸುವ ಉಂಗುರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ರಾಶಿಗೆ ಅನುಗುಣವಾಗಿ ವ್ಯಕ್ತಿಗಳು ಉಂಗುರವನ್ನು ಧರಿಸಬೇಕು. ರಾಶಿಗೆ ಹೊಂದಿಕೆಯಾಗದ ಉಂಗುರ ಧರಿಸಿದ್ರೆ ಆಪತ್ತು ಎದುರಾಗುತ್ತದೆ. ಸಾಮಾನ್ಯವಾಗಿ ಬೆಳ್ಳಿ ಉಂಗುರವನ್ನು ಎಲ್ಲರೂ ಧರಿಸ್ತಾರೆ. ಆದ್ರೆ ಮೂರು ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಸೂಕ್ತ ಸಲಹೆ ಪಡೆಯದೆ ಬೆಳ್ಳಿ ಉಂಗುರ ಧರಿಸಿದ್ರೆ ಸಮಸ್ಯೆ ಎದುರಾಗುತ್ತದೆ….

  • Cinema

    ಪ್ರಥಮ್ ಈಗ ಬಿಲ್ಡಪ್ ರಾಜ!ಈ ನನ್ಮಗಂದ್ ಇದೇ ಆಯ್ತು ಗುರೂ!ಶಾಕ್ ಆಗ್ಬೇಡಿ…ಈ ಲೇಖನಿ ಓದಿ…

    ನಮ್ಮ ಹಳ್ಳಿ ಹೈದ,ಬಿಗ್‌ಬಾಸ್ ಶೋ ವಿನ್ನರ್ ಪ್ರಥಮ್ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ.  ಇತ್ತೀಚೆಗಷ್ಟೇ ತಮ್ಮ ಬಿಗ್‌ಬಾಸ್ ಸ್ನೇಹಿತ ಹಾಗೂ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಸಿರಿಯಲ್’ನಲ್ಲಿ ನಟಿಸುತ್ತಿರುವ ಭುವನ್’ರವರನ್ನು ಕಚ್ಚಿ ಸುದ್ದಿಯಾಗಿದ್ದರು.