ಉಪಯುಕ್ತ ಮಾಹಿತಿ

ಈಗ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಹೈ ಸ್ಪೀಡ್ ಬ್ರಾಡ್ ಬಾಂಡ್ ಸೇವೆ..!ತಿಳಿಯಲು ಈ ಲೇಖನ ಓದಿ ..

406

 ಭಾರತ್ ನೆಟ್ ಯೋಜನೆಯ ಎರಡನೇ ಹಾಗೂ ಅಂತಿಮ ಹಂತವನ್ನು ಇಂದು ದೂರಸಂಪರ್ಕ ಇಲಾಖೆ ಸಚಿವ ಮನೋಜ್ ಸಿನ್ಹಾ, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಉದ್ಘಾಟಿಸಲಿದ್ದಾರೆ.

ಈ ಯೋಜನೆಯಡಿ ಮಾರ್ಚ್ 2019ರ ವೇಳೆಗೆ ಎಲ್ಲಾ ಪಂಚಾಯತ್ ಗಳಲ್ಲಿ ಅತಿ ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲಾಗುತ್ತದೆ. ರಿಲಯನ್ಸ್ ಜಿಯೊ, ಭಾರ್ತಿ ಏರ್ ಟೆಲ್, ಐಡಿಯಾ ಸೆಲ್ಯುಲರ್ ಮತ್ತು ವೊಡಫೋನ್ ಕಂಪೆನಿಗಳು ಭಾರತ್ ನೆಟ್ ಯೋಜನೆಯಡಿ ಜನತೆಗೆ ಸೇವೆಗಳನ್ನು ಒದಗಿಸಲು ಆಸಕ್ತಿ ತಳೆದಿವೆ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರರಾಜನ್ ತಿಳಿಸಿದ್ದಾರೆ. ಭಾರತ್ ನೆಟ್ ಯೋಜನೆಗೆ ಒಟ್ಟು ವೆಚ್ಚ 45,000 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಅದರಲ್ಲಿ 11,200 ಕೋಟಿ ರೂಪಾಯಿ ಮೊದಲ ಹಂತಕ್ಕೆ ವೆಚ್ಚವಾಗಿದೆ.

ಯೋಜನೆಯ ಮೊದಲನೇ ಹಂತದಲ್ಲಿ 1 ಲಕ್ಷ ಗ್ರಾಮ ಪಂಚಾಯತ್ ಗಳನ್ನು ಸಂಪರ್ಕಿಸಲಾಗಿದ್ದು, ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ದೂರ ಸಂಪರ್ಕ ನಿರ್ವಾಹಕರು ಗ್ರಾಮಾಂತರ ಪ್ರದೇಶದ ಮನೆಗಳಿಗೆ ಕನಿಷ್ಠ 2 ಮೆಗಾಬೈಟ್ ಪ್ರತಿ ಸೆಕೆಂಡ್ ಗೆ ಇಂಟರ್ ನೆಟ್ ಸೇವೆಯನ್ನು ಒದಗಿಸಲಿದ್ದಾರೆ ಎಂದು ಸುಂದರರಾಜನ್ ಹೇಳಿದರು.

ಅಸ್ಸಾಂ, ಹರ್ಯಾಣ, ಮಧ್ಯ ಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ ಮತ್ತು ಸಿಕ್ಕಿಂ ರಾಜ್ಯಗಳು  ಬಿಎಸ್ಎನ್ಎಲ್ ನ ಆಪ್ಟಿಕಲ್ ಫೈಬರ್ ನಡಿ ಸೇರ್ಪಡೆಯಾಗಲಿವೆ. ಮೊದಲ ಹಂತದಲ್ಲಿ ಈ ರಾಜ್ಯಗಳು ಸೇರ್ಪಡೆಯಾಗಿರಲಿಲ್ಲ.  ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ ಬ್ಯಾಂಡ್ ಸೇವೆ ದರ ಬಹಳಷ್ಟು ಕಡಿಮೆಯಾಗಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ