ಗ್ಯಾಜೆಟ್

ಇನ್ನು ಮುಂದೆ ಸಮುದ್ರದಾಳದಲ್ಲಿ ಕೂಡ ಫೋನ್ ಮಾಡಬಹುದು!!!

368

ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.

ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆ “ಇನ್‌ಮಾರ್‌ಸ್ಯಾಟ್’ ಸಹಾಯದಿಂದ ಬಿಎಸ್ಎನ್ಎಲ್ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡಲಿದೆ. ಸಾಮಾನ್ಯ ಮೊಬೈಲ್ ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಸ್ಯಾಟಿಲೈಟ್ ಫೋನ್ ಸೇವೆ ಇರಲಿದೆ. ಇದಕ್ಕಾಗಿ ಇನ್‌ಮಾರ್‌ಸ್ಯಾಟ್ ಒಟ್ಟು 14 ಉಪಗ್ರಹಗಳನ್ನು ಹೊಂದಿದೆ.

ಇಲ್ಲಿ ಓದಿರಿ :- ರೂ 799ಕ್ಕೆ ನೋಕಿಯಾ !!!

ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆ:- 1979ರಲ್ಲಿ ಯುನಿಟೆಡ್ ನೇಷನ್ ನಲ್ಲಿ ಆರಂಭವಾದ ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆಯಲ್ಲಿ ಭಾರತ ಸಂಸ್ಥಾಪಕ ಸದಸ್ಯವನ್ನು ಹೊಂದಿದೆ. ಭಾರತ ಸದ್ಯ ಪುಣೆಯಲ್ಲಿ ಸ್ಯಾಟಿಲೈಟ್ ಫೋನ್ ಸೇವೆಗೆ ಅಗತ್ಯವಿರುವ ಭೂ ವಿನಿಮಯ ಕೇಂದ್ರವನ್ನು ಸ್ಥಾಪಿಸಿದೆ.

ವಿಮಾನದಲ್ಲಿ, ಹಡಗಿನಲ್ಲೂ ಸೇವೆ ಇರಲಿದೆ:- ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡುತ್ತಿದ್ದು, ಇದು ವಿಮಾನದಲ್ಲಿ ಪ್ರಯಾಣಿಸುವವರಿಗೆ ಮತ್ತು ಹಡಗಿನಲ್ಲಿ ಪ್ರಯಾಣಿಸುವರಿಗೆ ಸಹಾಯಕಾರಿಯಾಗಲಿದ್ದು, ಎಲ್ಲಿಂದ ಬೇಕಾದರು ಕರೆ ಮಾಡುವ ಮತ್ತು ಸ್ವೀಕರಿಸುವ ಅವಕಾಶ ಇರಲಿದೆ.

ವಾಯ್ಸ್ ಮತ್ತು ಎಸ್‌ಎಂಎಸ್ ಮಾತ್ರ ಸಾಧ್ಯ:-  ಬಿಎಸ್ಎನ್‌ಎಲ್ ಸ್ಯಾಟಿಲೈಟ್ ಫೋನ್ ಸೇವೆಯಲ್ಲಿ ಬಳಕೆದಾರರು ಕೇವಲ ವಾಯ್ಸ್ ಕರೆ ಮತ್ತು ಎಸ್‌ಎಂಎಸ್ ಗಳನ್ನು ಮಾತ್ರವೇ ಮಾಡಲು ಸಾಧ್ಯವಿರಲಿದೆ. ಇದನ್ನು ಬಳಕೆ ಮಾಡಬೇಕಾಗದರೆ ನೆಟ್‌ವರ್ಕ್ ಇಲ್ಲ ಎನ್ನುವ ಮಾತೇ ಇಲ್ಲ.

ಟಿಸಿಎಲ್ ಸೇವೆ ಅಂತ್ಯ:- ಇದುವರೆಗೂ ದೇಶದಲ್ಲಿ ಸ್ಯಾಟಲೈಟ್ ಫೋನ್‌ ಸೇವೆಯನ್ನು ನೀಡುತ್ತಿದ್ದ ಟಾಟಾ ಕಮ್ಯುನಿಕೇಷನ್ಸ್ ಲಿ ಜೂನ್ ಅಂತ್ಯದಿಂದ ತನ್ನ ಸೇವೆಯನ್ನು ನಿಲ್ಲಿಸಲಿದ್ದು, ಅದನ್ನು ಬಿಎಸ್ಎನ್ಎಲ್ ಮುಂದುವರೆಸಿಕೊಂಡು ಹೋಗಲಿದೆ ಎನ್ನಲಾಗಿದೆ.

ಮೊಬೈಲ್ ನಂತೆಯೇ ಇರಲಿದೆ:- ಬಿಎಸ್ಎನ್‌ಎಲ್ ಸ್ಯಾಟಿಲೈಟ್ ಫೋನ್ ಬಳಕೆಗೆ ಮೊಬೈಲ್‌ ಫೋನ್‌ ಮಾದರಿಯ ಉಪಕರಣ ದೊರೆಯಲಿದೆ. ಇದಕ್ಕಾಗಿ ದೊಡ್ಡ ಗ್ರಾತದ ಉಪಕರಣ ಬಳಕೆಯ ಅವಶ್ಯಕತೆ ಇರುವುದಿಲ್ಲ.

ಶೀಘ್ರವೇ ಜನ ಸಾಮಾನ್ಯರಿಗೂ ಈ ಸೇವೆ:- ಸದ್ಯ ಭಾರತದಲ್ಲಿ ಸ್ಯಾಟಿಲೈಟ್ ಫೋನ್ ಸೇವೆಯನ್ನು ಪೊಲೀಸ್‌ ವ್ಯವಸ್ಥೆ, ರೈಲ್ವೆ ಇಲಾಖೆ, ಗಡಿ ಭದ್ರತಾ ಪಡೆ ಮತ್ತು ಹಡಗುಗಳಲ್ಲಿ ಮಾತ್ರವೇ ಬಳಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಆದರೆ ಮುಂದೇ ಜನರಿಗೆ ಈ ಸೇವೆ ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ.

ಆದರೆ ದುಬಾರಿ ಬೆಲೆ:- ಸ್ಯಾಟಿಲೈಟ್ ಫೋನ್ ಪೋನ್‌ನಲ್ಲಿ ಒಂದು ಕರೆ ಮಾಡಬೇಕಾಗಿದರೆ ಪ್ರತಿ ನಿಮಿಷಕ್ಕೆ ರೂ.35 ರಿಂದ ರೂ. 45 ಪಾವತಿಸಬೇಕಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health

    ಬಾಯಿ ಹುಣ್ಣಾಗಿ ಏನೂ ತಿನ್ನೋಕೆ ಆಗ್ತಿಲ್ವಾ..? ಇಲ್ಲಿದೆ ನೋಡಿ ಮನೆಮದ್ದು.

    ಬಾಯಿ ಹುಣ್ಣು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಆಹಾರ ಸೇವನೆಗೂ ಇದು ಅವಕಾಶ ನೀಡುವುದಿಲ್ಲ. ಇದು ಕೆಲವೊಮ್ಮೆ ಹಲವಾರು ದಿನಗಳ ಕಾಲ ಬಾಯಿಯಲ್ಲಿ ನೋವುಂಟು ಮಾಡುತ್ತ ಲಿರುತ್ತದೆ. ಇಂತಹ ಸಮಯದಲ್ಲಿ ಇದನ್ನು ನಿವಾರಣೆ ಮಾಡಲು ನೀವು ತುಂಬಾ ಶ್ರಮ ಪಟ್ಟಿರಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿ ಬಾಯಿಯ ಹುಣ್ಣು ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆ : ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು…

  • ಕಾನೂನು

    ನಿಮ್ಮ ಜಮೀನು ವ್ಯವಹಾರಕ್ಕೆ ಇದು ಕಡ್ಡಾಯವಲ್ಲ..?ಇದು ಕೇವಲ ವದಂತಿ ಎಂದ ಕೇಂದ್ರ ಸರ್ಕಾರ..!

    ಆಸ್ತಿ ವಹಿವಾಟಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

  • inspirational

    ಗ್ರೀನ್ ಟೀ ಆರೋಗ್ಯಕರ ಪ್ರಯೋಜನಗಳು

    ಗ್ರೀನ್ ಟೀ ಅನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬದಲಾಗುತ್ತಿರುವ ಜೀವನಶೈಲಿಯ ಪರಿಣಾಮದಿಂದಾಗಿ ಒತ್ತಡ ಹೆಚ್ಚಾಗುತ್ತಿದ್ದು, ಗ್ರೀನ್ ಟೀ ಕುಡಿಯುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪ್ರತಿದಿನ ನಿಗದಿತ ಪ್ರಮಾಣದ ಗ್ರೀನ್ ಟೀ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.  ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ಹಲವು ಸಂಶೋಧನೆಗಳು ಪತ್ತೆ ಹಚ್ಚಿವೆ. ಆದರೆ ಎಚ್ಚರ! ಅತಿಯಾದ ಗ್ರೀನ್ ಟೀ ಸೇವನೆ ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಬಹುದು. ಆದ್ದರಿಂದ ನೀವು ಹೆಚ್ಚು ಟೀ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಊಟವನ್ನ ಗಬ-ಗಬ ಅಂತ ತಿನ್ನುವ ಮುಂಚೆ ಈ ಲೇಖನ ಓದಿ…ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಈಗ ಏನಿದ್ದರೂ ಎಲ್ಲವೂ ಪಾಸ್ಟ್ ಪಾಸ್ಟ್.   ಹೇಗಾಗಿದೆ ಎಂದರೆ ನೆಮ್ಮದಿಯಾಗಿ ಊಟ ಮಾಡಲು ಸಹ ಸಮಯವಿಲ್ಲದಂತಾಗಿದೆ. ಇದು ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಊಟವನ್ನ ತಟ್ಟೆಗೆ ಹಾಕಿದ ಕೂಡಲೇ ಗಬ-ಗಬ ತಿಂದು ಕೈ ತೊಳೆಯುವವರೇ ಹೆಚ್ಚಾಗಿದ್ದಾರೆ. ಆದರೆ ಹೀಗೆ ಊಟವನ್ನ ಅಥವಾ ಆಹಾರವನ್ನ ತಿನ್ನುವುದರಿಂದ ಹಲವು ತೊಂದರೆಗಳನ್ನ ಎದುರಿಸ ಬೇಕಾಗುತ್ತದೆ. ಅವಸರ ಅವಸರವಾಗಿ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಇತ್ತೀಚೆಗೆ ಹೊರಬಂದ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(10 ಫೆಬ್ರವರಿ, 2019) ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ನೀವು ಅಪರೂಪಕ್ಕೆಭೇಟಿ ಮಾಡುವ…