inspirational, ಜ್ಯೋತಿಷ್ಯ

ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಶುಭವೋ ಅಶುಭವೋ, ಹೇಗಿದೆ ನೋಡಿ ತಿಳಿಯಿರಿ

372

ಭಾನುವಾರ , 1/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ.

ವೃಷಭ:-

ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗವಾಗಲಿದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಮನೆಯವರೊಂದಿಗೆ ಉತ್ತಮ ಸಂಬಂಧ. ವಿದ್ಯಾರ್ಥಿಗಳಿಗೆ ಆಗಾಗ ಆಲಸ್ಯ ಇರುತ್ತದೆ. ವಾಹನ ಖರೀದಿಗೆ ಸಕಾಲವಲ್ಲ. ಶುಭಮಂಗಲ ಕಾರ್ಯಗಳಿಗೆ ವಿಳಂಬವಾಗುತ್ತದೆ.

 

 

ಮಿಥುನ:

ಕಾರ್ಯಕ್ಷೇತ್ರದಲ್ಲಿ ಸ್ನೇಹ, ವಿಶ್ವಾಸಗಳು ಮೂಡಿ ಮುನ್ನಡೆಗೆ ನಾಂದಿಯಾಗಲಿದೆ. ನೂತನ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಸಿಗದು. ಯೋಗ್ಯ ವಯಸ್ಕರು ಉತ್ತಮ ಸಂಬಂಧಿಗಳ ಪ್ರಸ್ತಾವಕ್ಕೆ ಕಂಕಣಬಲವನ್ನು ಹೊಂದಲಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಮುಂಭಡ್ತಿ ಇರುತ್ತದೆ. ಗುರಿ ಸಾಧನೆಗೆ ಹೊಸ ಹಾದಿ ಕ್ರಮಿಸಬೇಕು. ನಿರಾಶರಾಗದೆ ಮುನ್ನುಗ್ಗುವುದರಿಂದ ಕಾರ್ಯ ಸಾಧನೆ.

 

ಕಟಕ :-

ಆರ್ಥಿಕವಾಗಿ ಲಾಭವಾದರೂ ವಂಚನೆಗೆ ಗುರಿಯಾಗಲಿದ್ದೀರಿ. ಕಲಾವಿದರಿಗೆ ಹೆಚ್ಚಿನ ಸ್ಥಾನಮಾನಗಳು ಲಭ್ಯವಾಗಲಿದೆ. ಕೃಷಿಕರಿಗೆ ಉತ್ತಮ ಆದಾಯ. ಆಸ್ತಿ ಖರೀದಿಯ ಸಾಧ್ಯತೆ. ದೈನಂದಿನ ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ. ಆಗಾಗ ಸಂಚಾರದಿಂದ ದೇಹಾಯಾಸಕ್ಕೆ ಕಾರಣವಾಗಲಿದೆ. ಸಾಂಸಾರಿಕವಾಗಿ ಮನದನ್ನೆಯ ಮಾತನ್ನು ನಡೆಸಬೇಕಾಗುತ್ತದೆ. ದಿನಾಂತ್ಯ ಶುಭ.

 

 ಸಿಂಹ:

ಹಿತೈಷಿಗಳ ಭೇಟಿ ಸಾಧ್ಯತೆ. ವ್ಯವಹಾರದಲ್ಲಿ ಲಾಭ. ಸಿದ್ಧಿಯಾಗಲಿದೆ. ಶ್ರೀದೇವತಾದರ್ಶನ ಭಾಗ್ಯದಿಂದ ಶಾಂತಿ ಸಿಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಬಹುದಿನಗಳ ಬಳಿಕ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆಗಾಗ ಧನವ್ಯಯವಾದರೂ ಕಾರ್ಯ ಸ್ನೇಹಿತರು ಮತ್ತು ಕೌಟುಂಬಿಕ ಸದಸ್ಯರಿಂದ ಉತ್ತಮ ನೆರವು. ದಿನದ ಮಟ್ಟಿಗೆ ಪ್ರಯಾಣ ಬೇಡ. ಸ್ತ್ರೀಯರ ಇಷ್ಟಾರ್ಥಗಳು ನೆರವೇರಲಿವೆ.

ಕನ್ಯಾ :-

ವೃದ್ಧಿಯಾಗಲಿದೆ. ಹಣಕಾಸಿನ ಬಗ್ಗೆ ಹಿಡಿತ ಇರಲಿ. ಅನಾವಶ್ಯಕವಾಗಿ ದುಂದುವೆಚ್ಚಗಳಾಗಬಹುದು. ಬಾಧ್ಯತೆಗಳ ನಿರ್ವಹಣೆಯಲ್ಲಿ ಸ್ಪಷ್ಟ ನಿಲುವು ತಳೆಯುವಿರಿ. ಸಂಶೋಧನೆಗೆ ಪ್ರೋತ್ಸಾಹ ಸಾಧ್ಯತೆ. ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರಕಲಿದೆ. ಕಾರ್ಮಿಕ ವರ್ಗದವರ ಮನೋಕಾಮನೆ ನೆರವೇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ

 

ತುಲಾ:

ವಾಹನ ವಹಿವಾಟುಗಳಲ್ಲಿ ನಿರೀಕ್ಷೆಯಂತೆ ಲಾಭ. ಔದ್ಯೋಗಿಕ ವಿಷಯಗಳಲ್ಲಿ ಅನುಕೂಲ. ಸಂಚಾರದಲ್ಲಿ ದೇಹಾಯಾಸ ತಂದೀತು. ಯೋಗ್ಯ ವಯಸ್ಕರು ಕಂಕಣಬಲಕ್ಕೆ ಪೂರಕವಾದಾರು. ಹೂಡಿಕೆಗಳು ಆದಾಯವನ್ನು ಹೆಚ್ಚಿಸಲಿವೆ. ವೃತ್ತಿರಂಗದಲ್ಲಿ ಕಾರ್ಯಒತ್ತಡಗಳಿರುತ್ತವೆ. ದಿನಾಂತ್ಯ ಶುಭವಿದೆ. ವಿವಾಹ ಸಂಬಂಧಿ ಮಾತುಕತೆಗಳು ಅನುಕೂಲಕರವಾಗಿ ಪರಿಣಮಿಸಲಿವೆ. ಸಾಮಾಜಿಕ ಬದುಕಿನಲ್ಲಿ ಉಲ್ಲಾಸ.

ವೃಶ್ಚಿಕ :-

ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಿಸಬೇಕು. ಅನಗತ್ಯವಾದ ವಿವಾದಗಳಿಂದ ಕಿರಿಕಿರಿ ತಂದೀತು. ಮನೆಯಲ್ಲಿ ಚೋರ ಭೀತಿ ತಂದೀತು. ದೇಹಾರೋಗ್ಯದ ಬಗ್ಗೆ ಗಮನ ವಿರಬೇಕು. ಅಧಿಕ ಧನಾಗಮನದಿಂದ ಮನೋಲ್ಲಾಸ. ಬಂಧುಗಳ ಸತ್ಕಾರಕ್ಕಾಗಿ ಅಪಾರ ವೆಚ್ಚ ಭರಿಸಬೇಕಾದೀತು.

 

ಧನಸ್ಸು:

ಉದ್ಯೋಗದಲ್ಲಿ ಸ್ಥಾನ ಅಥವಾ ಹುದ್ದೆಯಲ್ಲಿ ಬದಲಾವಣೆ ಕುರಿತು ಚರ್ಚಿಸಿಲಿದ್ದೀರಿ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಶ್ರೀದೇವರ ಅನುಗ್ರಹದಿಂದ ಮನಸ್ಸಿಗೆ ಶಾಂತಿ ಸಮಾಧಾನ ವಿರುತ್ತದೆ. ಹಿರಿಯ ಅಧಿಕಾರಿಗಳಿಗೆ ಮುಂಭಡ್ತಿ ಹಾಗೂ ಶ್ರೀದೇವರ ದರ್ಶನ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸುದ್ದಿ ಕೇಳಿಬರಲಿದೆ. ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ.

ಮಕರ :-

ಬಂಡವಾಳ ಕರಗಲಿದೆ ಜಾಗ್ರತೆ ವಹಿಸಿರಿ. ದೂರದೂರಿಗೆ ಪ್ರಯಾಣ. ಸಾಮಾಜಿಕ ಗೌರವಕ್ಕೆ ಪಾತ್ರರಾಗಲಿದ್ದೀರಿ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ಮನಸ್ಸಿಗೆ ನೆಮ್ಮದಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ ನಿರೀಕ್ಷಿತ ಕೆಲಸಕಾರ್ಯಗಳು ಎಣಿಸಿದಂತೆ ನಡೆಯಲಾರವು. ವಿದ್ಯಾರ್ಥಿಗಳು ಅಧಿಕ ಪ್ರಯತ್ನಬಲದಿಂದ ಮುಂದುವರಿಯಬೇಕಾಗುತ್ತದೆ. ದಿನಾಂತ್ಯ ಶುಭವಿದೆ.

 

ಕುಂಭ:-

ಮನಸ್ಸಿನಂತೆ ಒಂದೊಂದೇ ಕಾರ್ಯಗಳು ನಡೆಯಲಿವೆ. ಸಾಮಾಜಿಕ ಕಾರ್ಯ ಚಟುವಟಿಕೆ, ಮನರಂಜನೆ, ಸಪತ್ನಿಕರಾಗಿ ಭೋಜನ ಕೂಟಗಳಲ್ಲಿ ಭಾಗವಹಿಸಲಿದ್ದೀರಿ. ದೈವರಕ್ಷೆ ಇರುವುದರಿಂದ ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ದೇಹಾರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ವೃತ್ತಿರಂಗದಲ್ಲಿ ಹೊಂದಿಕೊಂಡು ಹೋಗುವ ದಿನಗಳಿವು. ಧೈರ್ಯದಿಂದ ಮುಂದುವರಿಯಿರಿ.

 

ಮೀನ:-

ಪರಿಶ್ರಮದಿಂದ ದುಡಿಮೆ. ನಿತ್ಯದ ಕೆಲಸಗಳಿಂದ ತುಸು ವಿಶ್ರಾಂತಿಯ ಅಗತ್ಯ. ಸಾಂಸಾರಿಕವಾಗಿ ಸಂತಸದ ದಿನ. ಎಣಿಸಿದ ಕೆಲಸಕಾರ್ಯಗಳು ಹಂತ ಹಂತವಾಗಿ ನಡೆಯಲಿವೆ. ಹೊಸ ಕೆಲಸಕಾರ್ಯಗಳು ವಿಳಂಬವಾದಾವು. ಅಧ್ಯಾಪಕರಿಗೆ ಸ್ಥಾನ ಬದಲಾವಣೆ ತೋರಿ ಬಂದೀತು. ಪ್ರೀತಿಪಾತ್ರರು ಹಾಗೂ ಗೆಳೆಯರ ಜತೆ ಸಂತಸದ ಸಮಯ ಕಳೆಯಲಿದ್ದೀರಿ. ಹಿತೈಷಿಗಳ ಆಗಮನ ಸಂತಸ ನೀಡಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಡಿಕೆಶಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಆಫರ್ ನೀಡಿದ ಹೈಕಮಾಂಡ್‍….!

    ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಕೇವಲ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಆರಂಭವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಕೆಪಿಸಿಸಿಯ ಜವಾಬ್ದಾರಿ ಹೊರಲು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿವಕುಮಾರ್ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9 663218 892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9 66321 8892 ಮೇಷ(18 ಫೆಬ್ರವರಿ, 2019) ನಿಮ್ಮ ಕುಟುಂಬದ ಸದಸ್ಯರ ಭಾವನೆಗಳನ್ನು ನೋಯಿಸುವುದನ್ನು ತಪ್ಪಿಸುವ ಮೂಲಕ ನಿಮ್ಮ…

  • ವಿಜ್ಞಾನ

    ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್, ರೋಚಕ ಮಾಹಿತಿ ಬಹಿರಂಗ,.!

    ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದುಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗಚಂದ್ರನ ಮೇಲೆ ಲ್ಯಾಂಡ್ ಆಗಿದೆ.ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದುತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದುವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ಜತೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿರುವ ಚಂದ್ರಯಾನ-2 ನೌಕೆಯ ‘ಲ್ಯಾಂಡರ್‌’ ಛಿದ್ರವಾಗಿಲ್ಲ. ಆದರೆ ವಾಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್‌ ಜತೆ ಸಂಪರ್ಕವನ್ನು ಮರುಸ್ಥಾಪಿಸಲು ಭಾರತೀಯ ಬಾಹ್ಯಾಕಾಶ…

  • Sports

    2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

    2ನೇ ಟೆಸ್ಟ್ ಪಂದ್ಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ.  ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ  ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…

    Loading

  • ಸುದ್ದಿ

    ಸಹಕಾರಿ ಬ್ಯಾಂಕ್ ಗಳಿಂದ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ‘ಬಿಗ್ ಶಾಕ್’

    ಹೊಸ ಬೆಳೆ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಬ್ರೇಕ್ ಹಾಕಲಾಗಿದೆ. ಸಂಪನ್ಮೂಲ ಕೊರತೆ ಕಾರಣದಿಂದ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ ಎನ್ನಲಾಗಿದ್ದು, ಇದರಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಸಂಕಷ್ಟ ಎದುರಾಗಿದೆ. ಪರಿಣಾಮ ರೈತರು ಹೊಸದಾಗಿ ಬೆಳೆ ಸಾಲ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಹಣಕಾಸು ಇಲಾಖೆ ತಡೆಹಿಡಿದಿದೆ. ಸಹಕಾರ…

  • ಆರೋಗ್ಯ

    ಪಿರಿಯಡ್ಸ್ ಸಮಯದಲ್ಲಿ ಆಗುವ ನೋವುಗಳಿಗೆ ಇಲ್ಲಿದೆ ಪರಿಹಾರ…ತಿಳಿಯಲು ಈ ಲೇಖನ ಓದಿ…

    ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು.