ಜಯಂತಿಗಳು

ಇಂದು ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…ಗಾಂಧಿ ಜಯಂತಿ ಸ್ವಾತಂತ್ರಕ್ಕೆ ಮುಂಚೆ ಆಚರಿಸಲಾಗಿತ್ತು!ಯಾವಾಗ ಗೊತ್ತಾ..?

1634

ಬ್ರಿಟೀಷರ ಅಟ್ಟಹಾಸ ತಾರಕಕ್ಕೇರಿದಾಗ, ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಲು ಜನಿಸಿದ ಶಾಂತಿ ಪ್ರವರ್ತಕ ಮಹಾತ್ಮಾ ಗಾಂಧಿ. ಗುಜರಾತ್ ನ ಪೋರ್ ಬಂದರ್ ನಲ್ಲಿ ಅಕ್ಟೋಬರ್ 2, 1869 ರಂದು ಮೋಹನ್ ದಾಸ್ ಕರಮ್ ಚಂದ್ ಗಾಂಧಿಯಾಗಿ ಜನಿಸಿ, ವಿದೇಶದಲ್ಲಿ ಕಾನೂನು ಪದವಿ ಪಡೆದು ದಕ್ಷಿಣ ಭಾರತದಲ್ಲೇ ಹೋರಾಟ ಆರಂಭಿಸಿ ಭಾರತಕ್ಕೆ ಬಂದರು. ಶಾಂತಿ ಮಂತ್ರದಿಂದಲೇ ಭಾರತವನ್ನು ಬಂಧಮುಕ್ತಗೊಳಿಸಿದ ಅಹಿಂಸಾವಾದಿಯ ಹುಟ್ಟು ಹಬ್ಬವನ್ನು “ಗಾಂಧೀ ಜಯಂತಿಯಾಗಿ” ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಗಾಂಧಿ ಜಯಂತಿ ರಾಷ್ಟ್ರೀಯ ಆಚರಣೆಯಾಗಿ ಆರಂಭವಾಗಿದ್ದು ಯಾವಾಗ ಗೊತ್ತಾ?

ಈ  ಪ್ರಶ್ನೆಗೆ 1987, 1948 ಅಥವಾ 1950… ಎಂದು ಬಹುತೇಕ ಜನರು ಉತ್ತರಿಸುತ್ತಾರೆ. ಮಹಾತ್ಮ ಗಾಂಧಿ ಚಿತ್ರಕ್ಕೆ  ಹಾರ ಹಾಕಿ ಮಾಡುವ ಭಾಷಣಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಆಡಿದ ಮಾತುಗಳನ್ನು ಮತ್ತೆ ಉಚ್ಚರಿಸಲಾಗುತ್ತದೆ. ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಸ್ಮರಿಸುವುದು ಅತ್ಯಗತ್ಯವೆಂದು ಎಲ್ಲರೂ ಹೇಳುತ್ತಾರೆ. ಆಚ್ಚರ್ಯವೆಂದರೆ  ಸ್ವಾತಂತ್ರ್ಯ ದೊರೆಯುವುದಕ್ಕೆ  ಮುನ್ನವೇ ಗಾಂಧಿ ಜಯಂತಿ ಆಚರಣೆ ನಮ್ಮ ದೇಶದಲ್ಲಿ ನಡೆದಿದೆ!

1930–-33 ಸಮಯದಲ್ಲಿ ಉತ್ತರ ಕನ್ನಡದ ಶಿರಸಿ–-ಸಿದ್ದಾಪುರಗಳಿಂದ ಪ್ರಕಟವಾಗುತ್ತಿದ್ದ ‘ಸತ್ಯಾಗ್ರಹ’ ಕರಪತ್ರ ಪತ್ರಿಕೆಯಲ್ಲಿ ಗಾಂಧಿ ಜಯಂತಿಯ ಸಾಕಷ್ಟು ವಿವರಗಳಿವೆ. 1931ರಲ್ಲಿ ಪ್ರಕಟವಾದ ಒಂದು ಸಂಚಿಕೆಯಲ್ಲಂತೂ ಗಾಂಧಿ ಜಯಂತಿ ಸಪ್ತಾಹ ದೇಶಾದ್ಯಂತ ಆಚರಿಸಲು ‘ರಾಷ್ಟ್ರಪತಿ’ ಸರ್ದಾರ್ ವಲ್ಲಭಭಾಯಿ ಪಟೇಲರ ಅಪ್ಪಣೆಯ ಪ್ರಸ್ತಾಪವಿದೆ!

ಭಾರತದ ಅಮೂಲ್ಯ ರತ್ನ – “ಲಾಲ್ ಬಹದ್ದೂರ್ ಶಾಸ್ತ್ರಿ” :-

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಡಾ.ಲಾಲ್ ಬಹದ್ದೂರ್ ಶಾಸ್ತ್ರಿ. ಇಂದು (ಅಕ್ಟೋಬರ್ 2) ಅವರ 108ನೇ ಜನ್ಮದಿನ.

“We would prefer to live in poverty for as long as necessary but we shall not allow our freedom to be subverted” ಎಂದಿದ್ದರು ಶಾಸ್ತ್ರಿ.

ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಸರಳ ಜೀವಿ , ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜಯಂತಿಯ ಶುಭಾಶಯಗಳು ??
ಇಂಥಹ ಪ್ರಾಮಾಣಿಕ ನಾಯಕತ್ವದ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಜೈ ಹಿಂದ್. ಜೈ ಜವಾನ್, ಜೈ ಕಿಸಾನ್.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉದ್ಯೋಗ

    ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ 2020

    ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ 2020 ರಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆ ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಪ್ರಾಧಿಕಾರವು ಜೂನಿಯರ್ ಎಂಜಿನಿಯರ್ ಉದ್ಯೋಗ ಖಾಲಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸುತ್ತದೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಆಗಸ್ಟ್ 2020 ಅಧಿಸೂಚನೆ ವಿವರಗಳು  ಜೂನಿಯರ್ ಎಂಜಿನಿಯರ್ ಬಿ.ಟೆಕ್ / ಬಿ.ಇ. ಉದ್ಯೋಗದ ಸ್ಥಳ ನವದೆಹಲಿ, ಬೆಂಗಳೂರು ಒಟ್ಟು ಖಾಲಿ ಹುದ್ದೆಗಳು 4 ದಿನಾಂಕ ಸೇರಿಸಲಾಗಿದೆ 17/08/2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/10/2020 ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ…

  • ಮನರಂಜನೆ

    ಬಿಗ್ ಬಾಸ್ ಮನೆಯಲ್ಲಿ ವಾಂಗಿಬಾತ್, ಚಿತ್ರಾನ್ನಕ್ಕಾಗಿ ದೀಪಿಕಾ ಚಂದನ್ ನಡುವೆ ಕಿತ್ತಾಟ.

    ಕನ್ನಡ ಬಿಗ್‍ಬಾಸ್ ಇನ್ನೇನು ಮೂರೂ ವಾರಗಳ ಕಾಲ ನಡೆಯಲ್ಲಿದ್ದು ಮುಕ್ತಾಯಗೊಳ್ಳಲಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಗಲಭೆ ಸೃಷ್ಟಿಯಾಗಿದೆ. ಹೌದು ಅಡುಗೆ ಮನೆಯಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ನಡುವೆ ಮಾತಿನ ಚಕಮುಕಿ ನಡೆದಿದೆ. ಅಡುಗೆ ಮನೆಯಲ್ಲಿ ಎಲ್ಲರೂ ಸೇರಿ ಅಡುಗೆ ಮಾಡುತ್ತಿದ್ದಾಗ, ದೀಪಿಕಾ ಮತ್ತು ಚಂದನ್ ನಡುವೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ಸೃಷ್ಠಿಯಾಗಿದೆ. ದೀಪಿಕಾ ದಾಸ್ ಅವರು ಚಂದನ್ ಗೆ ನಾಳೆ ನೀವು ಅಡುಗೆ ಮಾಡಿ, ನಾಳಿದ್ದು…

  • ರಾಜಕೀಯ

    ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಮಾತನಾಡಿ, ರಾಜ್ಯದಲ್ಲಿ ಹೊಸ ಮುಖಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ ಎಂದರು. 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ, 16 ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು, 32 ಒಬಿಸಿ, 9…

  • ಜ್ಯೋತಿಷ್ಯ

    ಶ್ರೀ ರಾಜ ರಾಜೇಶ್ವರಿ ದೇವಿಯನ್ನು ಸ್ಮರಿಸುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯಿರಿ.

    ಶ್ರೀ ಪಂಡಿತ್ ರಾಘವೇಂದ್ರ ಸ್ವಾಮಿಗಳು ಗುರೂಜಿ ದೈವಜ್ಞ ಭಟ್ .ಪ್ರೀತಿಯಲ್ಲಿ ನಂಬಿ ಮೋಸ ಹೋದವರು,ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತನ್ನು ಕೇಳದೆ ಇದ್ದರೆ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ಶತ್ರುಗಳಿಂದ ತೊಂದರೆ,ಗುಪ್ತ ಸಮಸ್ಯೆಗಳಿಗೆ ಕೇರಳ ಭಗವತಿ ದೇವಿಯ ಆರಾಧಕರಾದ ರಾಘವೇಂದ್ರ ಸ್ವಾಮಿಗಳು ಶಾಸ್ತ್ರಿಗಳು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 100% ಪರಿಹಾರ ಮಾಡಿಕೊಡುತ್ತಾರೆ 9901077772 ಮೇಷ: ಈ ದಿನ ರಾಶಿಯ ವ್ಯಕ್ತಿಗಳಿಗೆ ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಲಾಭ ಮಾನಸಿಕ ಒತ್ತಡ, ಋಣ ವಿಮೋಚನೆ, ಶತ್ರುಗಳಿಂದ ಜಯ.ಕೇರಳ ಭಗವತಿ…

  • ಸುದ್ದಿ

    ನಿಮ್ಮ ಅಂಗೈನಲ್ಲಿ M ರೀತಿಯ ಚಿಹ್ನೆ ಇದ್ದರೆ ನೀಮ್ಮ ವ್ಯಕ್ತಿತ್ವ ಎಂತಹದ್ದು ಗೊತ್ತಾ? ಹೇಗಿರುತ್ತೆ ಜೀವನ ನೋಡಿ…!

    ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು…

  • inspirational

    ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು

    ಸಾಮಾಜಿಕ ತಾಣಗಳಾದ ವಾಟ್ಸ್ ಅಪ್ ಮತ್ತು ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ. ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ನಮಗೆ ಹಲವು ಫಲಶ್ರುತಿಗಳನ್ನು ತಿಳಿಯಪಡಿಸಿದ್ದಾರೆ. ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ…