ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಗ ಹಸ್ತಿನಾಪುರದಲ್ಲಿ ಪರೀಕ್ಷಿತನ ಮಗ ಜನಮೇಜಯನು ರಾಜ್ಯ ಆಳುತಿದ್ದ. ಅವನ ಅಸ್ತಾನಕ್ಕೆ ಉತ್ತಂಕನೆಂಬ ಮುನಿಯು ಆಗಮಿಸಿದ. ಈ ಮುನಿಗೆ ತಾನು ತಕ್ಷಕಎಂಬ ಹಾವಿನಿಂದ ಒದಗಿದ ಅನ್ಯಾಯಕ್ಕಾಗಿ ಸೇಡು ತೀರಿಸಿಕೊಳ್ಳಲು ಜನಮೇಜಯನ ಆಸ್ಥಾನಕ್ಕೆ ಬಂದಿದ್ದ. ಹಾಗಾಗಿ ತನಗೆ ನಮಸ್ಕರಿಸಿದ ರಾಜನನ್ನೂ ಅವನ ಪರಿವಾರವನ್ನು ಅಷಿರ್ವದಿಸಿದ. ರಾಜನು ನೀಡಿದ ಆಸನದಲ್ಲಿ ಕುಳಿತು ಅತಿಥ್ಯ ಸ್ವೀಕರಿಸಿದ. ಎಲ್ಲರ ಕುಶಲವನ್ನೂ ವಿಚಾರಿಸಿದ. ಅನಂತರ ರಾಜನನ್ನೂ ಕುರಿತು – ‘’ ಮಹಾರಾಜ ! ನೀನು ನಿನ್ನ ತಂದೆ ಪರಿಕ್ಷಿತನ ದುರ್ಮರಣಕ್ಕೆ ಪ್ರತೀಕಾರ ಕೈಗೊಂಡರುವೆಯ ?’’ – ಎಂದು ಪ್ರಶ್ನಿಸಿದ. ಜನುಮೆಜಯನನ್ನು – ಪ್ರತಿಕರವೇ ? ಯಾರ ಮೇಲೆ ಏಕೆ ?’’ ಎಂದ. ಉತ್ತಂಕನು – ‘’ ಜನಮೇಜಯ ! ನಿನ್ನ ತಂದೆಯನ್ನು ಅಮತ್ಯರೂ ಸೇನಾಪತಿಗಳು. ಇತರರೂ ಎಚ್ಹರಿಕೆಯಿಂದ ಕಾವಲೂ ಕಾಯುತ್ತಿದ್ದರೂ, ತಕ್ಷಕನು ಅವರ ಕಣ್ಣು ತಪ್ಪಿಸಿ ನಿಮ್ಮ ತಂದೆಯನ್ನು ಮೋಸದಿಂದ ಸಯಿಸಿಲಿಲ್ಲವೇ ? ಅದಕ್ಕೆ ನೀನು ಪ್ರತಿಕಾರ ಮಾಡಬೇಡವೇ ? – ಎಂದು ಕೇಳಿದ.
ಜನಮೇಜಯನಿಗೆ ತನ್ನ ತಂದೆಯು ಮರಣಹೊಂದಿದ ಸನ್ನಿವೇಶದ ಸ್ಮರಣೆಯಾಗಿ ದುಃಖ ಉಕ್ಕಿ ಬಂತು. ತಕ್ಷಕನ ಮೇಲೆ ಅಪಾರ ಕೋಪ ಉಂಟಾಯಿತು. ‘’ಋಷಿಕುಮಾರ ! ಕರ್ತವ್ಯ ಮರೆತಿದ್ದ ನನ್ನನ್ನು ಎಚರಿಸಿದಿರಿ. ತುಂಬ ವಂದನೆಗಳು. ಆಹಾ ನಮ್ಮ ತಂದೆಯವರ ಮರಣಕ್ಕೆ ಕಾರಣನಾದ ಆ ತಕ್ಷಕನ ವಂಶವನ್ನೇ ತೊಡೆದೂ ಹಾಕಿಬಿಡಬೇಕೆನ್ನಿಸುತ್ತದೆ. ಅದಕ್ಕಾಗಿ ನಾನೇನೂ ಮಾಡಬೇಕು, ದಯವಿಟ್ಟು ತಿಳಿಸಿ’’ – ಎಂದು ಕೇಳಿಕೊಂಡ ಆಗ ಸಮೀಪದಲ್ಲಿದ್ದ ಪುರೋಹಿತರು ‘’ಮಹಾರಾಜ ! ಸರ್ಪಸತ್ರವೆಂಬ ಮಹಾಯುಗವೊಂದಿದೆ. ಈ ಯಾಗವನ್ನು ಮಾಡಿ ಸರ್ಪಗಳೆಲ್ಲವನ್ನು ಅಗ್ನಿಗೆ ಆಹುತಿ ನೀಡಬಹುದಲ್ಲಾ !’’ ಎಂದರು. ಜನಮೇಜಯನು ಕೂಡಲೇ ರುತ್ವಿಜರನ್ನು ಕರೆಸಿದನು ‘’ನಾನು ಸರ್ಪಯಾಗ ಮಾಡಲು ನಿಶ್ಚಯಿಸಿದ್ದೇನೆ. ಅದಕ್ಕೆ ಬೇಕಾದ ಸಿದ್ದತೆಗಳನ್ನು ನಡೆಸಿ’’ – ಎಂದ ಸರ್ಪಯಾಗದ ಸಿದ್ದತೆಗಳಾರಂಬಿಸಿದವು.
ಸೌತಿಗಳು ಹೇಳುತ್ತಿದ್ದ ಕಥೆಯನ್ನು ಕೇಳುತ್ತಿದ್ದ ನೈಮಿಷಾರಣ್ಯದ ಋಷಿಗಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸಿದವು. ಅವರು ‘’ಸೌತಿಗಳೆ ! ನಮಗೆ ಕೆಲವು ಸಂಶಯಗಳು ಉಂಟಾಗಿವೆ. ಅವನ್ನು ದಯವಿಟ್ಟು ಪರಿಹರಿಸಿ. ಉತ್ತಂಕನು ತನಗೆ ತೊಂದರೆ ನೀಡಿದ ತಕ್ಷಕನೊಬ್ಬನ ಮೇಲೆ ಮಾತ್ರ ಪ್ರತೀಕಾರ ಕೈಗೊಳ್ಳದೆ ಇಡೀ ಸರ್ಪಕುಲವನ್ನೇ ನಾಶ ಮಾಡುವ ಪ್ರಯತ್ನ ಮಾಡಿದ್ದೂ ಸರಿಯೇ ಅಲ್ಲದೆ, ಆ ಯಾಗ ಮಾಡಿದ ಮೇಲೆ, ಇಡೀ ಸರ್ಪಕುಲವೇ ನಾಶವಾಗಿ ಬಿಡಬೇಕಾಗಿತ್ತಲ್ಲವೇ ? ಹಾಗಾಗದೇ ಇಗಲೂ ಸರ್ಪಕುಲ ಉಳಿದುಕೊಂಡಿದೆಯಲ್ಲಾ. ಅದಕ್ಕೆ ಕಾರಣವೇನು ?’’ – ಎಂದು ಕೇಳಿದರು. ಇಲ್ಲಿ ಓದಿ:-ಸರ್ಪಗಳ ತಾಯಿ ತನ್ನ ಮಕ್ಕಳಾದ ಸರ್ಪಗಳಿಗೆ ಕೊಟ್ಟ ಶಾಪ ಹಾಗೂ ಸರ್ಪಗಳು ಮತ್ತು ಗರುಡ ಹುಟ್ಟಿದ ಕತೆ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ…
‘’ಈಗ ನಿಮಗೆ ಎಲ್ಲವೂ ಸ್ವಷ್ಟವಾಗಿರಬೆಕಲ್ಲವೇ ? ಕದ್ರುವಿನ ಶಾಪವೇ ಸರ್ಪಯಾಗದ ಮೂಲಕಾರಣ ಉತ್ತಂಕ ಮತ್ತು ಜನಮೇಜಯರು ಬರೀ ನಿಮಿತ್ತರು ಮಾತ್ರ.
ಜನಮೇಜಯನು ತಾನು ನಿಶ್ಚಯಸಿದ್ದಂತೆ ಸರ್ಪಯಾಗವನ್ನು ಪ್ರಾರಂಬಿಸಿದರು. ಯಾಗದಲ್ಲಿ ಹೋತೃ. ಅದ್ವರ್ಯು, ಉದ್ಗಾತೃ ಬ್ರಹ್ಮ ಎಂಬ ನಾಲ್ಕು ಪ್ರಮುಕ ಪುರೋಹಿತರಿರುತ್ತಾರೆ. ಇವರಿಗೆ ಋತ್ವಿಕ್ಕುಗಳೆಂದು ಹೆಸರು. ಋಗ್ವೇದದ ಮಂತ್ರಗಳನ್ನು ಪಠಿಸಿ ಯಾಗದ ಹವಿಸ್ಸನ್ನು ತೆಗೆದುಕೊಂಡು ಹೋಗುವಂತೆ ದೇವತೆಗಳನ್ನು ಅಹ್ವಾನಿಸುವವನೇ ಹೋತೃ. ಪ್ರಾರ್ಥನಾ ನಿಯಮಗಳ ಸಂಗ್ರಹವಾದ ಯಜುರ್ವೇದದಲ್ಲಿ ಪರಿಣಿತನಾಗಿದ್ದು ದೇವತೆಗಳನ್ನೂ ಕರೆಯುವಾಗ ‘ಸ್ವಾಹಾ’ ಎನುತ್ತಾ ಅಗ್ನಿಕುಂಡದಲ್ಲಿ ತುಪ್ಪವನ್ನು ಹಾಕುವವನು ಅದ್ವರ್ಯ. ಉಚ್ಚಸ್ವರದಲ್ಲಿ ದೇವತೆಗಳನ್ನು ಕುರಿತು ಸಾಮವೇದದ ಮಂತ್ರಗಳನ್ನು ಇಂಪಾಗಿ ಹಾಡುವವನು ಉದ್ಗಾತೃ ಅಥರ್ವವೇದದಲ್ಲಿ ಪಂಡಿತನಾಗಿದ್ದು ಯಗ್ನಯಾಗದಿಗಳ ಅಧ್ಯಕ್ಷಸ್ಥಾನವನ್ನು ಅಲಂಕರಿಸುವವನು ಬ್ರಹ್ಮ. ಜನುಮೆಜಯನು ಮಾಡಿದ ಸರ್ಪಯಾಗದಲ್ಲಿ ಚ್ಯವನಮಹರ್ಶಿಯ ವಂಶಸ್ಥಾನದ ಚಂಡ ಭಾರ್ಗವನೆಂಬುವವನು ಹೋತೃವಾಗಿದ್ದನು. ವಿದ್ವಾಂಸನಾದನು ಕೌತ್ಸನು ಉದ್ಗಾತೃವಾಗಿದ್ದನು. ಶಾಙ್ಗರವ, ಪಿಂಗಲರು ಅಧ್ವರ್ಯವಾಗಿದ್ದರು. ಜೈಮಿನಿಯ ಬ್ರಹ್ಮನಾಗಿದ್ದನು.
ಆ ಸರ್ಪಯಾಗದಲ್ಲಿ ಋತ್ವಿಜರು ಸರ್ಪಗಳ ಹೆಸರನ್ನು ಹೇಳಿ ಅವುಗಳನ್ನು ಅಗ್ನಿಯ ಬಳಿಗೆ ಆಕರ್ಶಿಸಿ ‘ಸ್ವಾಹಾ’ ಎನ್ನುತ್ತಿದ್ದರು. ಕೂಡಲೇ ಆಯಾ ಸರ್ಪಗಳು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದಲ್ಲಿ ಬಂದು ಬಿಳುತಿದ್ದವು ಅಗ್ನಿಯ ಬಳಿಗೆ ಬರುವಾಗ ಅವು ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದವು. ಪರಸ್ವರ ಧೈನದಿಂದ ನೋಡುತ್ತ ನಿತ್ತುಸಿರುಬಿದುತ್ತಿದ್ದುವು. ಬೆದರಿಕೆಯಿಂದ ಬುಸುಗುಟ್ಟುತ್ತಿದ್ದವು; ದಾರುಣವಾಗಿ ಶಬ್ಧಮಾದುಡುತಿದ್ದವು ವಿಲಿವಿಲಿ ವದ್ದಾಡುತಿದ್ದವು. ಬಿಳಿಯ ಹಾವುಗಳು, ಕಾಳಿಂಗ ಸರ್ಪಗಳು ನೀಲವರ್ಣದ ದೊಡ್ಡ ಹಾವುಗಳು ಮಾರಿನಗರಗಳು, ಎಲ್ಲವೂ ಪ್ರದೀಪ್ತನಾದ ಯಜ್ಞೆಶ್ವರನಲ್ಲಿ ಬಂದು ಬೀಳುತಿದ್ದವು. ಹೀಗೆ ಲಕ್ಷೋಪಲಕ್ಷ ಸರ್ಪಗಳು ಅಗ್ನಿಯಲ್ಲಿ ಬಿದ್ದು ಪ್ರಾಣ ಬಿಟ್ಟವು.
ಜನುಮೆಜಯನು ಮಾಡುತಿದ್ದ ಯಾಗವನ್ನು ನೋಡಿ ತಕ್ಷಕನು ಭಿತನಾದನು. ತನ್ನ ಗೆಳೆಯ ದೆವೆಂದ್ರನನ್ನು ಮೊರೆ ಹೋದನು. ‘’ನನ್ನನ್ನು ಮಾಡುತಿದ್ದಾನೆ ನನ್ನನ್ನು ಅಗ್ನಿಗೆ ಆಹುತಿ ಕೊಡುವುದಕ್ಕಾಗಿ ಜನುಮಜೆಯನು ಸರ್ಪಯಾಗವನ್ನು ಮಾಡುತಿದ್ದಾನೆ. ನನ್ನ್ನನ್ನು ಕಾಪಾಡು’’ – ಎಂದು ಬೇಡಿಕೊಂಡನು ಆಗ ಇಂದ್ರನು ‘’ನೀನು ನನ್ನ ಅರಮನೆಯಲ್ಲಿ ಇದ್ದುಬಿಡು. ಇಲ್ಲಿ ಅಗ್ನಿಯ ಭಯವಿಲ್ಲ ‘’ ಎಂದು – ಎಂದು ದೈರ್ಯ ಹೇಳಿದನು. ತಕ್ಷಕನು ಇಂದ್ರನನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಯೇ ನಿಂತನು.
ಆ ಸಮಯದಲ್ಲಿ ವಾಸುಕಿ ಮೊದಲಾದ ಸರ್ಪಗಳ ತಮ್ಮ ತಂಗಿಯ ಮಗನಾದ ಆಸ್ತಿಕನ ಬಳಿಗೆ ಹೋದರು, ‘’ಆಕಸ್ಮಿಕ ! ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು’’ – ಎಂದರು ಅಸ್ಥಿಕನು ‘’ಮಾವಂದಿರ ! ನಿಮ್ಮನ್ನು ಉಳಿಸಲು ಏನು ಮಾಡಬೇಕೆಂದು ಹೇಳಿ. ಖಂಡಿತ ಮಾಡುತ್ತೇನೆ’’-ಎಂದನು. ವಾಸುಕಿಯು ‘’ಮಗೂ ! ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು ‘’-ಎಂದನು ಆಸ್ತಿಕನು ಕೂಡಲೇ ಯಜ್ಞಶಾಲೆಯ ಕಡೆ ಹೆಜ್ಜೆ ಹಾಕಿದನು.
ಇತ್ತ ಸರ್ಪಯಾಗದಲ್ಲಿ ಅನೇಕ ಸರ್ಪಗಳು ಯಜ್ಞೆಶ್ವರನಿಗೆ ಆಹುತಿಯಾದರು ತಕ್ಷಕ ಮಾತ್ರ ಕಾಣಿಸಿಕೊಂಡಿರಲಿಲ್ಲ. ಜಾನುಮಜೆಯನು ಹೊತೃವನ್ನು ಕುರಿತು ‘’ಸ್ವಾಮಿ ! ನನ್ನ ಪರಮವೈರಿಯಾದ ತಕ್ಷಕನೆ ಇನ್ನೂ ಬಂದಿಲ್ಲವಲ್ಲ. ಅವನನ್ನು ಬೇಗ ಬರ ಮಾಡಿಕೊಂಡು ಅಗ್ನಿಗೆ ಅರ್ಪಿಸಿ’’ ಎಂದ. ಹೊತೃವು ತಕ್ಷಕನನ್ನು ಆಕರ್ಷಿಸುವ ಮಂತ್ರವನ್ನು ಪಟಿಸಿದನು ಆದರೂ ತಕ್ಷಕನು ಬರಲಿಲ್ಲ. ಆಗ ರುತ್ವಿಜಯರಿಗೆ ತಕ್ಷಕನು ಇಂದ್ರನು ಆಶ್ರಯ ಪಡೆದಿರುವುದು ತಿಳಿಯಿತು. ಅವರು ‘’ ಇಂದ್ರನು ತಕ್ಷಕನಿಗೆ ಆಶ್ರಯ ಕೊಟ್ಟಿದ್ದಾರೆ ಆ ಇಂದ್ರನ ಸಹಿತ ತಕ್ಷಕನು ಬರಲಿ’’- ಎಂದು ಮಂತ್ರ ಹೇಳಿದರು. ಆಗ ಇಂದ್ರನು ಭಯಗೊಂಡು ತನ್ನನ್ನು ಬಲವಾಗಿ ಅಪ್ಪಿಕೊಂಡಿದ್ದ ತಕ್ಷಕನನ್ನು ಕೆಳಕ್ಕೆ ಕೆಡವಿಬಿಟ್ಟನು ಭ್ಯಯವಿಹ್ವಲನಾದ ತಕ್ಷಕನು ಮಂತ್ರದಿಂದ ಆಕರ್ಷಿತನಾಗಿ ಅಗ್ನಿಯ ಕಡೆಗೆ ಬೀಳತೊಡಗಿದನು.
ಇದೇ ಸಮಯಕ್ಕೆ ಸರಿಯಾಗಿ ಅಸ್ತೀಕನು ಯಜ್ಞಶಾಲೆಯ ಬಳಿಗೆ ಬಂದನು ಉಚ್ಚದ್ವನಿಯಲ್ಲಿ ಯಜ್ಞವನ್ನು ಕುರಿತು ಸ್ತೋತ್ರಮಾಡಲು ಪ್ರಾರಂಬಿಸಿದನು. ಜನಮೇಜಯ ಋತ್ವಿಜರು ಅಗ್ನಿ ಎಲ್ಲರನ್ನೂ ಪ್ರಶಂಸಿಲಾರಂಬಿಸಿದರು ಆ ಬಾಲಕನ ಗಾಂಬಿರ್ಯ ಮುಖ ಸೌಂದರ್ಯ ಕಂಠಮಾದುರ್ಯಗಳನ್ನು ಕಂಡು ಜನಮೇಜಯ ಪ್ರೀತನದನು, ಭ್ರಾಹ್ಮಣ ಕುಮಾರ ! ನಿನಗೆ ಬೇಕಾದ ವರವನ್ನು ಕೇಳಿಕೋ’’- ಎಂದ ಅಸ್ತಿಕನು ‘’ಈ ಕ್ಷಣದಿಂದಲೇ ಯಾಗವನ್ನು ನಿಲ್ಲಿಸು ಮಹಾರಾಜ!’’- ಎಂದು ಪ್ರಾರ್ಥಿಸಿದನು.
ಜನಮೇಜಯನು ದಿಗ್ಮುಡನಾದನು ಆಸ್ಥಿಕನು ‘ಭೂಮಿಯನ್ನೋ ಹಣವನ್ನೋ ದಾನವಾಗಿ ಕೇಳಬಹುದೆಂದು ಅವನು ಭಾವಿಸಿದ್ದನು ಆದರೆ ಆ ಬಾಲಕ ಯಜ್ಞ್ಯವನ್ನೇ ನಿಲ್ಲಿಸಬೇಕೆಂದು ಕೆಳುತಿದ್ದಾನೆ ಅದೂ ಈ ಕ್ಷಣದಿಂದಲೇ ತಕ್ಷಕನು ಅಗ್ನಿಕುಂಡದೊಳಗೆ ಬೀಳುವ ಮುನ್ನವೇ ಆದರೆ ಮಾಡುವುದೇನು ? ಮಾತು ಕೊಟ್ಟಾಗಿದೆ ಹಿಂದೆಗೆಯುವ ಹಾಗಿಲ್ಲ. ತನಗೆ ಅಪಾರ ಸಂಕಟವಾದರೂ ಸಹ ಜನಮೇಜಯನು ಸಮಾಧಾನತಂದುಕೊಂಡ. ‘’ಹಾಗೆಯೆ ಆಗಲಿ’’ ಎಂದ ಕೂಡಲೇ ಸರ್ಪಗಳು ಅಗ್ನಿಯಲ್ಲಿ ಬೀಳುವುದು ನಿಂತುಹೋಯಿತು. ಇನ್ನೇನು ಯಜ್ಞೆಶ್ವರನಿಗೆ ಅಹುತಿಯಗುತ್ತಾನೆ ಎಂದುಕೊಳ್ಳುವುಷ್ಟರಲ್ಲಿ ತಕ್ಷಕನು ತಪ್ಪಿಸಿಕೊಂಡು ಬಿಟ್ಟ. ಸೌತಿಗಳು ಹೇಳಿದ ಸರ್ಪಯಾಗದ ಕಥೆಯನ್ನು ಕೇಳಿ ಆಶ್ರಮವಾಸಿಗಳ ಮೈ ರೋಮಂಚನಗೊಂಡಿತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕು. ಯಾಕಂದ್ರೆ ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು ಶೇ.35ರಷ್ಟು ಕಡಿಮೆಯಾಗುತ್ತದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಮಾರ್ಚ್, 2019) ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ…
ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, ಮಚ್ಚೆಯನ್ನೇ ನೋಡಿ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ. ಸಾಮಾನ್ಯವಾಗಿ ಮನುಷ್ಯನ ಕೈ, ಕಾಲಿನ ಸೌಂದರ್ಯವನ್ನು ಉಗುರು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಉಗುರಿಗೆ ಚೆಂದದ ಆಕಾರ ನೀಡಿ, ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರಿನ ಬಗ್ಗೆ ಬೇರೆಯದೇ ನಂಬಿಕೆಯಿದೆ….
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮವೂ ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ಹೊಂದಿರುವ ಗ್ರಾಮ. ಮುಳಬಾಗಿಲು ತಾಲೂಕು ಕೇಂದ್ರದಿಂದ 14 ಕೀ.ಮೀ. ದೂರದಲ್ಲಿ ಕೊಲದೇವಿ ಗ್ರಾಮ ಸಿಗುತ್ತದೆ. ಈ ದೇವಾಲಯ ಸಾವಿರ ವರ್ಷಗಳ ಹಿಂದೆ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಆಗಿದೆ. ಹಾಗು ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇಲ್ಲಿಯ ಗರುಡ ದೇವರು ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಹೊಂದಿರುವುದನ್ನು ಕಾಣಬಹುದು. ಈ ಗ್ರಾಮ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಹಿನ್ನೆಲೆ ಹೊಂದಿರುವ…
ಕೇಂದ್ರ ಸಚಿವ ಬಿಜೆಪಿಯ ಹಿರಿಯ ಮುಖಂಡ ಅನಂತಕುಮಾರ್ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಬೆಳಗಿನ ಜಾವ ಮೂರು ಗಂಟೆಗೆ ವಿಧಿವಶವರಾಗಿದ್ದಾರೆ. ಅಗಲಿದ ರಾಜಕೀಯ ನಾಯಕನಿಗೆ ಎಲ್ಲಾ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.ಹಾಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಎಚ್.ಎನ್. ಅನಂತಕುಮಾರ್ ರವರಿಗೆ ಸಂತಾಪ ಸೂಚಿಸಿದ್ದಾರೆ. ಎಚ್.ಎನ್. ಅನಂತಕುಮಾರ್ ರವರು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೆಲವು ದಿನಗಳಿಂದ ಚಿಕಿತ್ಸೆ ಪೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ, ೫೯ ವರ್ಷದ ಅನಂತಕುಮಾರ್…
ಪಾನ್ ಕಾರ್ಡ್ಗೆ ಆಧಾರ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, 30 ಸೆಪ್ಟೆಂಬರ್ 2019 ಇದಕ್ಕೆ ಕೊನೆಯ ದಿನವಾಗಿದೆ. ಆಧಾರ್ ಜೊತೆ ಪಾನ್ ಕಾರ್ಡ್ ಅನ್ನು ನೀವೇ ಲಿಂಕ್ ಮಾಡಿಕೊಳ್ಳಲು ಇಲ್ಲಿದೆ ಎರಡು ಸುಲಭದ ಉಪಾಯ. ಮೊದಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ, ‘ಲಿಂಕಿಂಗ್ ಆಧಾರ್’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ವಿಂಡೋ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಜನ್ಮ ದಿನಾಂಕ ಇತ್ಯಾದಿ ಮಾಹಿತಿ…