ರೆಸಿಪಿ

ಆಲೂಗಡ್ಡೆ ದೋಸೆ ಹೇಗೆ ತಯಾರಿಸುವುದು ಎಂದು ನಿಮಗೆ ಗೊತ್ತಾ….?ತಿಳಿಯಲು ಈ ಲೇಖನ ಓದಿ….

874

ಆಲೂಗಡ್ಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು:-

ಆಲೂಗಡ್ಡೆ  – 1 ದೊಡ್ಡ ಆಲೂಗಡ್ಡೆ

ಮೈದ  ಹಿಟ್ಟು – 1 ಕಪ್

ಹಸಿಮೆಣಸು – 1-2

ಕೊತ್ತಂಬರಿ ಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ

ತಯಾರಿಸುವ ವಿಧಾನ:-

ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ತುರಿಯಿರಿ . ಅದಕ್ಕೆ ಮೈದ ಹಿಟ್ಟು ಸೇರಿಸಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ  ಕಲಸಿ. ಹಸಿಮೆಣಸು , ಕೊತ್ತಂಬರಿ ಸೊಪ್ಪನು ಸಣ್ಣದಾಗಿ ಹೆಚ್ಚಿ ಹಿಟ್ಟಿಗೆ ಸೇರಿಸಿ. ರುಚಿಗೆ ತಕ್ಕಸ್ಟು ಉಪ್ಪು ಹಾಕಿ. ದೋಸೆ ಕಾವಲಿಗೆಯನ್ನು ಬಿಸಿ ಮಾಡಲು ಇಡಿ, ಅದಕ್ಕೆ ತುಪ್ಪ, ಇಲ್ಲವೆ ಎಣ್ಣೆ ಹಾಕಿ ಸವರಬೇಕು, ನಂತರ ದೋಸೆ ಹಿಟ್ಟನ್ನು ಕಾವಲಿಗೆ ಮೇಲೆ ಹದವಾಗಿ ಎರೆಯಿರಿ. ಉರಿಯನ್ನು ಸಣ್ಣದಾಗಿರಿಸಿ. ದೋಸೆ ಒಂದು ಬದಿ ಕಾದ ಮೇಲೆ ಇನ್ನೊಂದು ಬದಿಗೆ ತಿರುವಿ ಹಾಕಿ. ಈಗ ಬಿಸಿ ಬಿಸಿ ಆಲೂಗಡ್ಡೆ ದೋಸೆ ಸವಿಯಲು ಸಿದ್ಧ.

ಸೂಚನೆ: ಒಂದು ವೇಳೆ ಕುರುಕುರು (crispy) ದೋಸೆ ಬೇಕಾದಲ್ಲಿ 3-4 ನಿಮಿಷ ಬೇಯಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘2020ರ ಮಾರ್ಚ್ ಒಳಗೆ ಏರ್ ಇಂಡಿಯಾ ಹಾಗು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಮಾರಾಟಕ್ಕೆಂದು ಕೇಂದ್ರ ಸರಕಾರದ ನಿರ್ಧಾರ..!

    ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮಾರಾಟ ಪ್ರಕ್ರಿಯೆ 2020ರ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾಗಿ ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ. ನಿರ್ಮಲಾ ಸೀತಾರಾಮನ್ ಮಾತನಾಡಿ, ಸರ್ಕಾರದಿಂದ ನಡೆದ ಅಂತರರಾಷ್ಟ್ರೀಯ ರೋಡ್ ಷೋಗಳಲ್ಲಿ ಏರ್ ಇಂಡಿಯಾ ಖರೀದಿಗೆ ಹೂಡಿಕೆದಾರರು ‘ಸಾಕಷ್ಟು ಆಸಕ್ತಿ’ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಏರ್ ಇಂಡಿಯಾ ಮಾರಾಟಕ್ಕೆ ಮುಂದಾದಾಗ ಹೂಡಿಕೆದಾರರಿಂದ ಸಕಾರಾತ್ಮಕವಾದ ಸ್ಪಂದನೆ ಬಂದಿರಲಿಲ್ಲ….

  • ಸುದ್ದಿ

    ಮದುವೆಯಾದ ಕೇವಲ ಮೂರೇ ನಿಮಿಷಕ್ಕೆ ಡಿವೋರ್ಸ್..!ಶಾಕ್ ಆಗ್ತೀರಾ ಕರಣ ಕೇಳಿದ್ರೆ..?

    ಸ್ಟುಪಿಡ್ ಎಂದು ಹೇಳಿದಕ್ಕೆ ಮದುವೆ ಆಗಿ ಮೂರೇ ನಿಮಿಷಕ್ಕೆ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಘಟನೆ ಕುವೈಟ್‍ನಲ್ಲಿ ನಡೆದಿದೆ. ನಗರದ ನ್ಯಾಯಾಲಯದಲ್ಲಿ ವರ ಹಾಗೂ ವಧು ಮದುವೆ ಆಗಲು ತೆರಳಿದ್ದರು. ಮದುವೆ ಪತ್ರದ ಮೇಲೆ ಸಹಿ ಹಾಕಿ ಹೊರಗೆ ಬರುವಾಗ ವಧು ಕಾಲು ಜಾರಿ ಕೆಳಗೆ ಬಿದಿದ್ದಾಳೆ. ಮಹಿಳೆ ಕೆಳಗೆ ಬಿದ್ದಿದ್ದನ್ನು ನೋಡಿದ ವರ ಆಕೆಗೆ ಸಹಾಯ ಮಾಡುವ ಬದಲು ಸ್ಟುಪಿಡ್ ಎಂದು ಬೈದಿದ್ದಾನೆ. ವರ ಈ ರೀತಿ ಬೈದಿದ್ದರಿಂದ ವಧು ಮನನೊಂದಿದ್ದಳು. ಅಲ್ಲದೇ ಮದುವೆ…

  • ಆರೋಗ್ಯ

    ಫ್ಲೋರೋಸಿಸ್ ದುಷ್ಪರಿಣಾಮ

    ಫ್ಲೋರೋಸಿಸ್ ಎಂಬದು ಅತಿಯಾದ ಫ್ಲೋರೈಡ್ ಸೇವನೆಯಿಂದ ಬರುತ್ತದೆ. ದುಷ್ಪರಿಣಾಮಕಾರಿ ಫ್ಲೋರೈಡ್ ಅಂತರ್ಜಲದಲ್ಲಿ ಕಂಡುಬರುತ್ತದೆ. ಕಲ್ಲುಬಂಡೆಗಳಲ್ಲಿರುವ ನೀರಿನಲ್ಲಿ ಹೆಚ್ಚಾಗಿ ಫ್ಲೋರೈಡ್ ಅಂಶ ದೃಢಪಟ್ಟಿರುತ್ತದೆ. ಜೀವರಾಶಿಗಳು ಫ್ಲೋರೈಡ್‌ಯುಕ್ತ ನೀರನ್ನು ಸೇವನೆ ಮಾಡುವುದರಿಂದ, ಫ್ಲೋರೋಸಿಸ್ ನಿಂದ ಬಳಲುತ್ತಾರೆ. ಸಂಶೋಧಕಗಳ ಪ್ರಕಾರ ಫ್ಲೋರೈಡ್ ಮಕ್ಕಳ ಬುದ್ಧಿಮತ್ತೆಯ ಪ್ರಮಾಣದಲ್ಲಿ ಪ್ರಭಾವ ಬೀರಿರುವುದನ್ನು ದಾಖಲಿಸಿದ್ದಾರೆ. ದೀರ್ಘಕಾಲ ಫ್ಲೋರೈಡ್ ಸೇವನೆ ಮಾಡುವುದರಿಂದ ದಂತ ಮತ್ತುಮೂಳೆಗಳಲ್ಲದೆ, ಇತರೆ ಭಾಗದಲ್ಲೂ ದುಃಷ್ಪರಿಣಾಮಗಳು ಬೀರುತ್ತಿವೆ. ಸಕಲ ಅಂಗಾAಗಗಳ ಮೇಲೆಫ್ಲೋರೈಡ್ ಪ್ರಭಾವ ಬೀರುತ್ತದೆ ಹಾಗೂ ಪ್ರಮುಖವಾಗಿ ಹೃದಯ, ಸ್ವಾಶಕೊಶ, ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಮತ್ತು…

  • Health

    ಕಡಲೆ ಹಿಟ್ಟಿನ ರೊಟ್ಟಿಯಿಂದ ನಿಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂದು ಓದಿ ತಿಳಿಯಿರಿ…?

    ಮಧುಮೇಹ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ ಕಡಲೆ ಹಿಟ್ಟಿನ ರೊಟ್ಟಿ ಬೆಸ್ಟ್. ಮಧುಮೇಹಿಗಳಿಗೆ ಮಾತ್ರವಲ್ಲ ರಕ್ತದೊತ್ತಡ, ದೈಹಿಕ ದೌರ್ಬಲ್ಯ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್. ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ.ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತದೆ.ಇದಕ್ಕಾಗಿಯೇ ಇದು ತೂಕ ನಷ್ಟ ಮಾಡುವ ಜೊತೆಗೆ ಮಧುಮೇಹ ನಿಯಂತ್ರಿಸುತ್ತದೆ. ಮಸಲ್ಸ್ ಬೆಳೆಸಲು ಆಸಕ್ತಿ ಹೊಂದಿರುವವರು ಕೂಡ ಕಡಲೆ…

  • ಸುದ್ದಿ

    ಭಾರತದೊಂದಿಗೆ ಪಾಕ್ ವ್ಯಾಪಾರ ಬಂದ್…..!

    ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…

  • ಆಧ್ಯಾತ್ಮ

    ರೋಗಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ ಮಾಡಿ

    ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ…