ಮನರಂಜನೆ

ಆಫೀಸ್ ಗೆ ಸ್ಪೈಡರ್ ಮ್ಯಾನ್ ವೇಷದಲ್ಲಿ ಬಂದ ಭೂಪ..!ಆಮೇಲೆ ಏನಾಯ್ತು ಗೊತ್ತಾ?ಈ ವಿಡಿಯೋ ನೋಡಿ

154

ಯಾವುದೇ ಒಂದು ಕಂಪನಿಯಲ್ಲಿ ನೌಕರಿ ಮಾಡುತ್ತಿರುವವರು ನಿವೃತ್ತಿ ಹೊಂದುವ ವೇಳೆ ಅಥವಾ ಮತ್ತೊಂದು ಕಂಪನಿಗೆ ಸೇರ್ಪಡೆಗೊಳ್ಳಲು ರಾಜೀನಾಮೆ ನೀಡುವ ಸಂದರ್ಭ ಎದುರಾದಾಗ ತಮ್ಮ ಸಹೋದ್ಯೋಗಿಗಳನ್ನು ನೆನಪಿಸಿಕೊಂಡು ಭಾವುಕರಾಗುವುದು ಸಹಜ.ಆದರೆ ಇಲ್ಲೊಬ್ಬ ಬ್ಯಾಂಕ್ ಉದ್ಯೋಗಿ ತನ್ನ ಕೆಲಸದ ಕಡೆ ದಿನ ಸ್ಪೈಡರ್ ಮ್ಯಾನ್ ವೇಷ ಧರಸಿ ಆಫೀಸ್ ಗೆ ಹೋಗಿದ್ದಾರೆ.

ಈ ಘಟನೆ ಬ್ರೆಜಿಲ್ ನ ಸಾವೋ ಪಾಲೊದಲ್ಲಿ ನಡೆದಿದ್ದು,ಇಡೀ ದಿನ ಸ್ಪೈಡರ್ ಮ್ಯಾನ್ ವೇಷದಲ್ಲಿ ತನ್ನ ಕೆಲಸ ಮಾಡಿದ್ದಾನೆ. ಈ ದೃಶ್ಯಗಳನ್ನು ಸೆರೆ ಹಿಡಿದ ಸಹೋದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅದೀಗ ವೈರಲ್ ಆಗಿದೆ. ಉದ್ಯೋಗಿ ತನ್ನ ಕಡೆಯ ಕೆಲಸದ ದಿನ ಜೀವತಾವಧಿಯಲ್ಲಿ ಸದಾ ನೆನಪಿರಬೇಕು ಎಂದು ಈ ರೀತಿಯ ವೇಷದಲ್ಲಿ ಹೋಗಿದ್ದಾನೆ.

ಫೋಟೋ ಮತ್ತು ವಿಡಿಯೋದಲ್ಲಿ, ಉದ್ಯೋಗಿ ತನ್ನ ಜಾಗದಲ್ಲಿ ಕುಳಿತು ಅದೇ ವೇಷದಲ್ಲಿ ಕೆಲಸ ಮಾಡುತ್ತಿರುವುದು. ಜೊತೆಗೆ ಕಿವಿಗೆ ಹೆಡ್‍ಫೋನ್ ಹಾಕಿರುವುದು ಮತ್ತು ತನ್ನ ಸಹೋದ್ಯೋಗಿಗೆ ಸಲಹೆ ಕೊಡುತ್ತಿರುವುದನ್ನು ನೋಡಬಹುದಾಗಿದೆ. ಇನ್ನೂ ವಿಡಿಯೋದಲ್ಲಿ ತನ್ನ ಸಹೋದ್ಯೋಗಿಗಳಿಗೆ ಕಡೆದ ದಿನದ ಹಿನ್ನೆಲೆಯಲ್ಲಿ ಸ್ವೀಟ್ ನೀಡುತ್ತಿರುವುದನ್ನು ನೋಡಬಹುದಾಗಿದೆ.

ಸ್ಪೈಡರ್ ಮ್ಯಾನ್ ವೇಷ ಧರಸಿ ಆಫೀಸ್ ನಲ್ಲಿ ಕೆಲಸ ಮಾಡಿದ ಈ ವಿಡಿಯೋ ನೋಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ