ಸುದ್ದಿ

ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ ಪೈಲ್ವಾನ್ ಕಿಚ್ಚ ಸುದೀಪ್…!

65

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ.

ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತಂದರೆ ನೆಮ್ಮದಿಯ ನಿದ್ರೆ ಬರುತ್ತದೆ. ಆ ಸಂದರ್ಭ ಕೆಲವು ದಿನಗಳ ಬರಲಿದೆ ಎಂದು ಬರೆದುಕೊಂಡಿದ್ದರು.ಪೈಲ್ವಾನ್ ಸಿನಿಮಾದ ಲಿಂಕ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ದಾಬಸ್‍ಪೇಟೆಯ ರಾಕೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ವಿಚಾರಣೆಯಲ್ಲಿ ತಾನೋರ್ವ ದರ್ಶನ್ ಅಭಿಮಾನಿ. ನೆಚ್ಚಿನ ನಟನ ಮೇಲಿನ ಅಭಿಮಾನದಿಂದಾಗಿ ಸಿನಿಮಾ ಲಿಂಕ್ ಶೇರ್ ಮಾಡಿದ್ದೇನೆ ಹೊರತು ಹಣಕ್ಕಾಗಿ ಅಲ್ಲ ಎಂದು ತಪ್ಪೊಪ್ಪಿಕೊಂಡಿದ್ದನು. ರಾಕೇಶ್ ಗೆ ಸಿನಿಮಾದ ಲಿಂಕ್ ಹೇಗೆ ಸಿಕ್ಕಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತೂಕ ಇಳಿಸಿಕೊಳ್ಳಬೇಕೇ ಹಾಗಾದ್ರೆ ದೋಸೆ ತಿನ್ನಿ ಸ್ಲಿಮ್ ಆಗಿರಿ…!

    ದೇಹದ ಫಿಟ್ ನೆಸ್ ಕಾಪಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಈ ವೇಗದ ಜಗತ್ತಿನಲ್ಲಿ ದೇಹದ ಸದೃಢತೆ ಕಾಪಾಡಲು ಗಂಟೆಗಳ ಕಾಲ ವ್ಯಾಯಾಮ ಮಾಡುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಹಾಗೂ ವ್ಯಾಯಾಮ ಮಾಡಿ ದೇಹ ಕರಗಿಸುವ ಪ್ರಯತ್ನ ಮಾಡಿದರೂ ವ್ಯಾಯಾಮದ ನಂತರ ಅಗತ್ಯ ಪ್ರಮಾಣದ ಪೋಷಕಾಂಶಗಳ ಆಹಾರಗಳನ್ನೇ ಸೇವಿಸುವುದು, ಇದನ್ನೇ ನಿತ್ಯ ಪಾಲಿಸುವುದು ಇನ್ನಷ್ಟು ತ್ರಾಸದಾಯಕ. ಅದರಲ್ಲೂ ಬಾಯಿಯ ರುಚಿ ಕಟ್ಟಿಹಾಕಿ ಡಯಟ್ ಮಾಡುವ ನಮ್ಮ ಯೋಜನೆ ರುಚಿಕರ ಆಹಾರ ನೋಡುತ್ತಿದ್ದಂತೆ ಮುರಿದಿರುತ್ತದೆ. ಆದರೆ ನಾವು…

  • ಸಿನಿಮಾ

    ಮುಂಬೈನ ರಸ್ತೆ ರಸ್ತೆಗಳಲ್ಲಿ ಕನ್ನಡದ KGF ಹವಾ..!

    ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್…

  • ಆರೋಗ್ಯ, ತಂತ್ರಜ್ಞಾನ

    ಜಗತ್ತಿನಲ್ಲೇ ಮೊದಲ ಬಾರಿ ‘ಡಿಜಿಟಲ್ ಮಾತ್ರೆ’ ನೀಡಲು ಮುಂದಾದ ದೇಶ ಯಾವುದು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!

  • ಸುದ್ದಿ

    ಇನ್ಮುಂದೆ ಎಟಿಎಂ ನಿಂದ ಕ್ಯಾಶ್ ವಿತ್ ಡ್ರಾ ಮಾಡಲು ಈ ನಿಯಮವನ್ನು ತಪ್ಪದೆ ಪಾಲಿಸಬೇಕು…!

    ಬ್ಯಾಂಕ್ ನಿಂದ  ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ . ನವದೆಹಲಿ ,ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಹೌದು.. ಖ್ಯಾತ…

  • ಪ್ರೇಮ, ಸ್ಪೂರ್ತಿ

    ತನ್ನ ಮರಿಗಾಗಿ ಈ ಕೋತಿ ಆಸ್ಪತ್ರೆಯ ಬಳಿ ಮಾಡಿದ ಕೆಲಸವನ್ನ ನೋಡಿದರೆ ಕಣ್ಣೀರು ಬರುತ್ತದೆ.

    ಸ್ನೇಹಿತರೆ ನಾವು ಮನುಷ್ಯತ್ವದ ಬಗ್ಗೆ ಮತ್ತು ಮನುಷ್ಯರು ಮಾಡುವ ಸಹಾಯದ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ, ಆದರೆ ಪ್ರಾಣಿಗಳು ತೋರುವ ಪ್ರೀತಿಯ ಬಗ್ಗೆ ನಾವು ನೋಡಿರುವುದು ಮತ್ತು ಕೇಳಿರುವುದು ತುಂಬಾ ಕಡಿಮೆ. ಸ್ನೇಹಿತರೆ ನಿಮ್ಮ ಹೃದಯಕ್ಕೆ ಹತ್ತಿರವಾಗುವ ಘಟನೆಯೊಂದು ನಮ್ಮ ದೇಶದಲ್ಲಿ ನಡೆದಿದ್ದು ಅದನ್ನ ಕೇಳಿದ ಜನರ ಕಣ್ಣಲ್ಲಿ ಕೂಡ ನೀರು ಬಂದಿದೆ. ತುಂಬಾ ಜನರು ಅವರ ಕಷ್ಟಗಳನ್ನ ನಿವಾರಣೆ ಮಾಡಿಕೊಳ್ಳುವುದರಲ್ಲಿಯೇ ದಿನವನ್ನ ಕಳೆಯುತ್ತಾರೆ, ತಮ್ಮ ಕಷ್ಟಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ಅವರಿಗೆ ಸಮಯ ಇರುವುದಿಲ್ಲ ಇಂತಹ ಸಮಯದಲ್ಲಿ ಬೇರೆಯವರ…

  • ಸುದ್ದಿ

    ವಿಟಮಿನ್ ‘ಡಿ’ ಮಹಿಳೆಯರಿಗೆ ಯಾಕೆ ಮುಖ್ಯ ಗೊತ್ತ…?

    ಮನೆಕೆಲಸದಲ್ಲಿ ಗೃಹಿಣಿಯರು ಬಿಝಿ ಇರುವುದರಿಂದ ಮನೆಯಿಂದ ಹೊರಬರುವುದು ಅಷ್ಟಕಷ್ಟೆ. ಹೀಗಾಗಿ ಅಂತಹವರಲ್ಲಿ ವಿಟಮಿನ್ ಡಿ ಲೋಪ ಉಂಟಾಗುತ್ತದೆ. ವಿಟಮಿನ್ ‘ಡಿ’ ಮಹಿಳೆಯರಲ್ಲಿ 30 ನಾನೋ ಗ್ರಾಂಗಳಿಗಿಂತ ಹೆಚ್ಚಾಗಿ ಇರಬೇಕು. ವಿಟಮಿನ್ ಡಿ ಮಹಿಳೆಯರಲ್ಲಿ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಹಾಗಾಗಿ ಅದರ ಲೋಪವಿದ್ದಾಗ ನಿರ್ಲಕ್ಷ್ಯ ಮಾಡಬಾರದು.ಮುಖ್ಯವಾಗಿ ಡಿ ವಿಟಮಿನ್ ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಇದರ ಲೋಪವಿದ್ದಾಗ ಶರೀರ ಕ್ಯಾಲ್ಸಿಯಂ ಅನ್ನು ಸರಿಯಾಗಿ ಗ್ರಹಿಸುವುದಿಲ್ಲ. ಇದರಿಂದ ಕ್ಯಾಲ್ಸಿಯಂ ಕೊರತೆ ಕೂಡ ಉಂಟಾಗುತ್ತದೆ. ವಿಟಮಿನ್ ಡಿ, ಆಹಾರದಿಂದ ನಮಗೆ ಸರಿಯಾಗಿ ದೊರೆಯುವುದಿಲ್ಲ….