ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಸಾಲೆಗಳ ರಾಣಿಯಂದೇ ಖ್ಯಾತಿ ಪಡೆದಿರುವ ಕಾಳು ಕರಿ ಮೆಣಸು. ಅಡುಗೆ ಮನೆಯಲ್ಲಿ ಇದರದ್ದೇ ಕಾರು ಬಾರು, ಸಾಮಾನ್ಯವಾಗಿ ಇದನ್ನ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನ ಹೆಚ್ಚಿಸುತ್ತದೆ. ಇದು ಬಹಳ ಕಾರವಾಗಿದ್ದು ಇದರ ಸೇವನೆ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ. ಕಾಳು ಮೆಣಸು ನಮ್ಮ ದೇಹದ ಅನೇಕ ರೋಗಗಳನ್ನ ಕಡಿಮೆ ಮಾಡುತ್ತದೆ.
2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ. ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು, ತಲೆನೋವು ನಿಯಂತ್ರಣಕ್ಕೆ ಬರುತ್ತದೆ.
ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಿಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.
ಕಾಳುಮೆಣಸಿನಲ್ಲಿ ಇರುವ ಜೀವವಿರೋಧಿ ಅಂಶ ತಲೆಹೊಟ್ಟು ಹೋಗಲಾಡಿಸಲು ಸಹಕರಿಸುತ್ತದೆ.ಒಂದು ಚಮಚ ಪುಡಿಮಾಡಿದ ಕಾಳುಮೆಣಸನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿ.ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಸರಿಯಾಗಿ ತೊಳೆಯಿರಿ. ಸೂಚನೆ: ಹೆಚ್ಚು ಕಾಳುಮೆಣಸು ಬಳಸಬೇಡಿ. ಇದರಿಂದ ತಲೆ ಸುಡುವ ಸಾಧ್ಯತೆ ಇದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿದ್ರೆ ಒಳ್ಳೆಯದು.
ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.
ಕಾರ್ಮಿನೆಟಿವ್ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಗೆ ಸಂಬಂಧಿಸಿದ ನೋವು ಕಡಿಮೆ ಆಗುವುದಲ್ಲದೆ ಹೊಟ್ಟೆ ಉಬ್ಬರ ಸಹ ಕಡಿಮೆಯಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…
‘ಸಾಯಿಪಲ್ಲವಿ’ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ ‘ಪ್ರಜ್ವಲ್ ದೇವರಾಜ್’ ಜೊತೆಯಲ್ಲಿ ‘ಪ್ರೇಮಂ’ ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ.
ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು. ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.
ಯೆಮೆನ್ ನಲ್ಲಿ ಮದುವೆಯಾದ ಮೊದಲ ರಾತ್ರಿಯೇ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ವಿಶ್ವದಾದ್ಯಂತ ಮಹಿಳಾ ಸಂಘಟನೆಗಳು ಇದರ ವಿರುದ್ಧ ತಿರುಗಿ ಬಿದ್ದಿವೆ. ಯೆಮೆನ್ ಕೆಟ್ಟ ಪದ್ಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಜಾರ್ಖಂಡ್ ನಲ್ಲಿ ನಡೆದಿದೆ.ಸಾರ್ವಜನಿಕರು 24 ವರ್ಷದ ಶಾಮ್ಸ್ ತಬ್ರೆಜ್ ಗೆ ಜಾರ್ಖಂಡ್ ನ ಸೀರೈಕೆಲ- ಖರ್ಸವಾನ್ ಹಾಗೂ ಸಿಂಘ್ಬುಮ್ ಜಿಲ್ಲೆಯಲ್ಲಿ ಥಳಿಸಿದ್ದಾರೆ. ಮಂಗಳವಾರ ಸಂಜೆ ಸಾರ್ವಜನಿಕರು ಶಾಮ್ಸ್ ನನ್ನು ಕಂಬಕ್ಕೆ ಕಟ್ಟಿ ಸುಮಾರು 7 ಗಂಟೆಗಿಂತಲೂ ಹೆಚ್ಚು ಕಾಲ ಚೆನ್ನಾಗಿ ಥಳಿಸಿದ್ದರು. ಅಲ್ಲದೆ ಇದೇ ವೇಳೆ ಶ್ರೀರಾಮ್’,ಜೈ ಹನುಮಾನ್’ ಎಂದು ಪಠಿಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಅಂದರೆ ಬುಧವಾರ ಬೆಳಗ್ಗೆ…
ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ…