ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸ ವರ್ಷದ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ತತ್ತಿಗೆ ಒಂದು ದಿನ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಮುತ್ತತ್ತಿಯು ಒಂದು ಪ್ರೇಕ್ಷಣಿಯ ಸ್ಥಳ. ಇಲ್ಲಿ ಸುತ್ತಮುತ್ತಲು ಕಾವೇರಿ ನದಿ ಹರಿಯುವುದರಿಂದ ಬೆಂಗಳೂರು, ಕನಕಪುರ, ಮಳವಳ್ಳಿ ಸೇರಿದಂತೆ ಹಲವೆಡೆಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಪ್ರವಾಸಿಗರು ಬಂದು ಆಚರಣೆ ಮಾಡುತ್ತಾರೆ.
ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ಮಾಡಿ ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ ಹಲವು ಅಹಿತಕರ ಘಟನೆಗಳು ಕೂಡ ಈ ಹಿಂದೆ ಸಂಭವಿಸಿದೆ. ಅಲ್ಲದೆ ಪ್ರದೇಶದಲ್ಲಿ ಹೊಸ ವರ್ಷ ಆಚರಣೆಗೆಂದು ಬರುವ ಪುಂಡ ಪೋಕರಿಗಳಿಗೆ ಕಡಿವಾಣ ಹಾಕಬೇಕೆಂದು ಇಲ್ಲಿನ ಆಡಳಿತ ಮಂಡಳಿ ಹೊಸ ತೀರ್ಮಾನವನ್ನು ತೆಗೆದುಕೊಂಡಿದೆ.
ಈ ಬಾರಿ ಮುತ್ತತ್ತಿಯಲ್ಲಿ ಪ್ರವಾಸಿಗರು ಹೊಸ ವರ್ಷ ಆಚರಣೆಗೆ ಬರುವಂತಿಲ್ಲ. ಹೌದು, ಡಿಸೆಂಬರ್ 31 ರ ಬೆಳಗ್ಗೆ 6 ಗಂಟೆಯಿಂದ 2019 ಜನವರಿ 1ರ ಮಧ್ಯರಾತ್ರಿವರೆಗೂ ಪ್ರವಾಸಿಗರ ಪ್ರವೇಶವನ್ನು ಮುತ್ತತ್ತಿಯಲ್ಲಿ ನಿಷೇಧಿಸಲಾಗಿದೆ.
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಕಳೆದ ಕೆಲವು ವರ್ಷಗಳಿಂದ ಹಲವು ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದನ್ನು ತಡೆಯಬೇಕು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಮುತ್ತತ್ತಿಯಲ್ಲಿ ಪ್ರವಾಸಿಗರನ್ನು ಹೊಸ ವರ್ಷ ಆಚರಣೆಗೆ ಬಿಡಬಾರದು ಎಂದು ಅಲ್ಲಿನ ಅಧಿಕಾರಗಳ ಬಳಿ ಮನವಿ ಮಾಡಿಕೊಂಡಿದ್ದರು.
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಮೋಜು ಮಸ್ತಿ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಪ್ರವಾಸಿಗರ ಹಿತದೃಷ್ಟಿಗಾಗಿ ಮುತ್ತತ್ತಿಗೆ ಹೊಸ ವರ್ಷದ ವೇಳೆ ಪ್ರವಾಸಿಗರಿಗೆ ನಿಷೇಧ ಹೇರಿ ಮಳವಳ್ಳಿ ತಹಶೀಲ್ದಾರ್ ಕೆ.ಚಂದ್ರಮೌಳಿ ಅವರು ಪೊಲೀಸರ ಮನವಿಗೆ ಸಮ್ಮತಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿನಿಮಾದಲ್ಲಿ ಸೂಪರ್ ಸ್ಟಾರ್ ಎನಿಸಿಕೊಳ್ಳುವುದು ನಿಜವಾಲೂ ಕಷ್ಟದ ವಿಚಾರ. ಪರಿಶ್ರಮ, ಟ್ಯಾಲೆಂಟ್, ಲುಕ್ ಎಲ್ಲದರ ಜೊತೆ ಲಕ್ ಕೂಡಾ ಅಷ್ಟೇ ಮುಖ್ಯ.ಬಿಹಾರ ರಾಜಧಾನಿ ಪಾಟ್ನಾದಲ್ಲಿ ಹುಟ್ಟಿ ಬೆಳೆದ ಪ್ರಭಾಕರ್ ಶರಣ್‌ಗೆ ಬಾಲಿವುಡ್‌ನಲ್ಲಿ ವಿಲನ್ ಪಾತ್ರದಲ್ಲಿ ಹೆಸರು ಮಾಡಬೇಕೆಂದು ಮೊದಲಿನಿಂದಲೂ ಆಸೆ ಇತ್ತು.
ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ. ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್…
ಈ ಹಣ್ಣನ್ನು ಸಾಮಾನ್ಯವಾಗಿ ಕೆಲವರು ತಿನ್ನುತ್ತಿರುತ್ತಾರೆ, ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಚಿರಪರಿಚಿತ, ಸಾಮಾನ್ಯವಾಗಿ ಈ ಹಣ್ಣು ಇದರ ಹೆಸರು ಚಳ್ಳೆಹಣ್ಣು ಎಂಬುದಾಗಿ ಇದನ್ನು ಅಡುಗೆಗೆ ಹಾಗೂ ಮತ್ತಿತರ ಕೆಲಸಕ್ಕೆ ಹಾಗೂ ಮನೆಮದ್ದುಗಳಿಗೆ ಔಷಧಿಯಾಗಿ ಕೂಡ ಬಳಸಲಾಗುತ್ತದೆ. ಅದ್ರಲ್ಲೂ ಇದರ ಉಪ್ಪಿನ ಕಾಯಿ ಸೇವನೆ ಅತಿ ಹೆಚ್ಚು ಬಳಕೆಯಲ್ಲಿದೆ ಕೆಲವು ಕಡೆ. ಈ ಚಳ್ಳೆಹಣ್ಣು ಯಾವೆಲ್ಲ ಉಪಯೋಗಕಾರಿ ಅಂಶಗಳನ್ನು ಹೊಂದಿದೆ ಹಾಗೂ ಇದರಿಂದ ದೇಹಕ್ಕೆ ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಪಡೆಯಬಹುದಾಗಿದೆ,ಹಾಗೂ ಇದರ ಬಳಕೆಯನ್ನು ಹೇಗೆ ಮಾಡಬಹುದು ಯಾವ…
ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು…
ದೇಶದಲ್ಲಿ ರಾಜ್ಯದಲ್ಲಿ ಕೊರೋನ ಹೆಚ್ಚಳವಾಗಿದೆ.ಕಳೆದ 4 ವಾರಗಳಲ್ಲಿ ವೈರಸ್ ಉತ್ತುಂಗಕ್ಕೆ ತಲುಪಿದೆ.ದೇಶದಲ್ಲಿ ಬುಧವಾರ ಬೆಳಿಗ್ಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ ಮಂಗಳವಾರ ಕ್ಕಿಂತ ಶೇ.55% ಹೆಚ್ಚಳಗೊಂಡಿದೆ. ದೇಶದಲ್ಲಿ ಸುಮಾರು 90ಸಾವಿರ ಪ್ರಕರಣ ದಾಖಲಾಗಿದೆ.ರಾಜ್ಯದಲ್ಲೂ ಶೇ.3.33ರಷ್ಟು ಪ್ರಕರಣ ದಾಖಲಾಗಿದೆ.ಈ ರೀತಿಯ ಹೆಚ್ಚಳದಿಂದಾಗಿ 3ನೇ ಅಲೆ ಖಚಿತವಾದಂತೆ ಆಗಿದೆ. ದೇಶದಲ್ಲಿ ಒಟ್ಟಾರೆ ಕೋವಿಡ್ ಪ್ರಕರಣಗಳು 3,50,18,358ಕ್ಕೆ ಏರಿದೆ.ಮರಣ ಪ್ರಮಾಣ 4,82,551ಕ್ಕೆ ಮುಟ್ಟಿದೆ.8 ದಿನಗಳಿಂದ ಶೇ.6.3ಪಟ್ಟು ಏರಿದೆ.ಡಿ. 29ರಂದು 0.79 ಇದ್ದ ಪಾಸಿಟಿವಿಟಿ ದರ ಜ.5ಕ್ಕೆ ಶೇ.5.03ಕ್ಕೆ ಹೆಚ್ಚಳವಾಗಿದೆ.ಒಟ್ಟು 3,43,21,803ಮಂದಿ…
ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.