ಸುದ್ದಿ

ಹೊರಬಿತ್ತು ರಾಮ ಸೇತುವಿನ ನಿಗೂಡ ರಹಸ್ಯ..!ಅಮೇರಿಕಾದ ನಾಸಾ ವಿಜ್ಞಾನಿಗಳು ಹೇಳಿದ ಸತ್ಯ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

2232

ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.

 

ಹಾಗಾಗಿ ರಾಮಾಯಣಕ್ಕೆ ತಳುಕು ಹಾಕಿಕೊಂಡಿರುವ ರಾಮ ಸೇತುವೆ ಈಗ ಮತ್ತೆ ಚರ್ಚೆಯ ವಿಷಯವಾಗಿದ್ದು, ಅಮೆರಿಕಾ​ದ ಸೈನ್ಸ್​ ಚಾನೆಲ್​ ಬಿತ್ತರಿಸುತ್ತಿರುವ ಕಾರ್ಯಕ್ರಮವೊಂದರ ಪ್ರೋಮೋ​ ಬಿಡುಗಡೆಯಾಗಿದ್ದು ರಾಮ ಸೇತುವೆ ಮಾನವ ನಿರ್ಮಿತವಿರಬಹುದು ಎಂದು ಅದರಲ್ಲಿ ಹೇಳಲಾಗಿದೆ.

ಸೈನ್ಸ್ ಚಾನೆಲ್ ಈ ಕಾರ್ಯಕ್ರಮದ ಪ್ರೋಮೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಈ ಸೇತುವೆ ನೈಸರ್ಗಿಕವಾಗಿ ನಿರ್ಮಾಣವಾಗಿಲ್ಲ. ಇದು ಮಾನವ ನಿರ್ಮಿತ ಎಂದು ಹೇಳಿದೆ.ನಾಸಾದ ಸೆಟಲೈಟ್​ ಮೂಲಕ ಸೆರೆ ಹಿಡಿಯಲಾಗಿರುವ ಚಿತ್ರಗಳು ಭಾರತ ಹಾಗೂ ಶ್ರೀಲಂಕಾ ಮಧ್ಯ ಸಮುದ್ರದಲ್ಲಿ 30 ಮೈಲಿ ಬಂಡೆಗಲ್ಲುಗಳ ಸಾಲಿರುವುದನ್ನ ತೋರಿಸುತ್ತದೆ.

ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 50 ಕಿ.ಮೀ. ಅಂತರದಲ್ಲಿ ಈ ಸೇತುವೆ ಚಾಚಿಕೊಂಡಿದೆ. ಇದು ಮಾನವನಿರ್ಮಿತ ಎಂದು ಅಮೆರಿಕದ ಪುರಾತತ್ವ ತಜ್ಞರು ಹೇಳಿದ್ದು, ಈ ಪ್ರೋಮೋವನ್ನು 11 ಲಕ್ಷ ಜನ ವೀಕ್ಷಿಸಿದ್ದಾರೆ.

ಸಮುದ್ರದಲ್ಲಿ ಹೆಚ್ಚಿನ ಆಳದವರೆಗೆ ನೀರಿಲ್ಲದ ಕಡೆ ಮರಳಿನಪಟ್ಟಿ ಉಂಟಾಗುತ್ತದೆ ಅಂತಹ ಪಟ್ಟಿಯ ಮೇಲೆ ಈ ಬಂಡೆಗಲ್ಲುಗಳು ಕುಳಿತಿವೆ ಎಂದು ಭೂವಿಜ್ಞಾನಿ ಎರಿನ್​ ಆರಗಿಲನ್​ ಹೇಳಿದ್ದಾರೆ. 7,000 ವರ್ಷದಷ್ಟು ಹಳೆಯದಾದ ಬಂಡೆಗಲ್ಲುಗಳು 4,000 ವರ್ಷದಷ್ಟು ಹಳೆಯ ಮರಳಿನ ಪಟ್ಟಿಯ ಮೇಲೆ ಇವೆ ಎನ್ನಲಾಗಿದೆ.

ಮರಳಿನ ಮೇಲಿರುವ ಕಲ್ಲುಗಳು ಮರಳಿಗಿಂತ ಹಿಂದಿನ ಕಾಲದ್ದಾಗಿರುವುದರಿಂದ, ಕಥೆಯಲ್ಲಿ ಹೆಚ್ಚಿನದ್ದೇನೋ ಇದೆ ಎಂದು ಪ್ರೋಮೋದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರೊಬ್ಬರು ಹೇಳೋದನ್ನ ಕೇಳಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಮರಳು ನೈಸರ್ಗಿಕವಾಗಿ ರಚನೆಯಾಗಿದ್ದು, 7 ಸಾವಿರ ವರ್ಷಗಳಷ್ಟು ಹಳೆಯದ್ದು ಎನ್ನಲಾದ ಕಲ್ಲುಗಳನ್ನು ಅದರ ಮೇಲೆ ಇರಿಸಲಾಗಿದೆ ಎಂದು ಹೇಳಿದ್ದಾರೆ.

ರಾಮ ಸೇತು ಬಗ್ಗೆ ತಿಳಿಯಬೇಕಾದ, ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳು:-

  • ರಾಮಾಯಣದ ಪ್ರಕಾರ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರುವ ಸಲುವಾಗಿ ರಾಮ ಸೇತು ನಿರ್ಮಾಣವಾಯಿತು.
  • ಈ ಸೇತುವೆ ನಿರ್ಮಾಣ ಮಾಡಿರುವುದು ನಳ ಮತ್ತು ನೀಲ.ವಾಸ್ತುಶಿಲ್ಪಿ ನಳನ  ಅಧಿಪತ್ಯದಲ್ಲಿ ಹತ್ತು ದಶ ಲಕ್ಷ ವಾನರರು ಇದನ್ನು ಐದು ದಿನಗಳಲ್ಲಿ ನಿರ್ಮಾಣ ಮಾಡಿದ್ದಾರೆ.

  • ಇದನ್ನು ಸುಣ್ಣದ ಕಲ್ಲುಗಳ ರಾಶಿಯಿಂದ ನಿರ್ಮಾಣ ಮಾಡಲಾಗಿದ್ದು,ಇದು 30 ಕಿ.ಮೀ ಉದ್ದ ಹಾಗೂ 3 ಕಿಮೀ ಅಗಲ ಇದೆ.
  • ಇದು ಭಾರತದ ಪಂಬನ್‌ ದ್ವೀಪ, ಧನುಷ್ಕೋಟಿಯಲ್ಲಿ ಆರಂಭವಾಗಿ ಶ್ರೀಲಂಕಾದ ಮನ್ನರ್‌ ದ್ವೀಪದಲ್ಲಿ ಕೊನೆಗೊಳ್ಳುತ್ತದೆ.
  • ಈ ಸೇತುವೆ ನಿರ್ಮಾಣ ಮಾಡಲು ತೇಲುವ ಕಲ್ಲುಗಳನ್ನು ಬಳಸಲಾಯಿತು ಎಂದು ಹೇಳಲಾಗಿದೆ. ಇದು ನಿಜವೆಂದು ತ್ಸುನಾಮಿ ಸಮಯದಲ್ಲಿ ತಿಳಿದು ಬಂದಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ