ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ನಿರಂತರ ದಾಳಿಯಿಂದ ನಲುಗಿರೋ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ರಾತ್ರಿ ಉಗ್ರರು ನಡೆಸಿದ ಬೀಭತ್ಸ ಕೃತ್ಯಕ್ಕೆ 7 ಮಂದಿ ಅಮರನಾಥ ಯಾತ್ರಿಗಳು ಬಲಿಯಾಗಿದ್ದಾರೆ.
ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ಇರುವ ಹಿನ್ನಲೆಯಲ್ಲಿ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆಂದು ಕೆಲ ದಿನಗಳ ಹಿಂದಷ್ಟೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಸೋಮವಾರ ರಾತ್ರಿ 8.30ರ ಸುಮಾರಿಗೆ ಅನಂತನಾಗ್ ಜಿಲ್ಲೆಯ ಖನಬಾಲ್ನದಲ್ಲಿ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ 6 ಮಹಿಳೆಯರು ಸೇರಿದಂತೆ ಬಸ್ನಲಲ್ಲಿದ್ದ 7 ಮಂದಿ ಅಮರನಾಥ ಯಾತ್ರಿಕರು ಬಲಿಯಾಗಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಭದ್ರತೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜತೆಗೆ 40 ಸಾವಿರ ಅರೆ ಮಿಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಉಪಗ್ರಹ ವ್ಯವಸ್ಥೆ, ಡ್ರೋನ್ ಕಣ್ಗಾವಲು ಇಡಲಾಗಿತ್ತು. ಭಾರೀ ಭದ್ರತೆಯ ನಡುವೆಯೂ ಉಗ್ರರು ದಾಳಿ ನಡೆಸಿರುವುದು ಜನರಲ್ಲಿರುವ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಅಮರನಾಥ ಯಾತ್ರೆ ಮುಗಿಸಿ ಮರಳುತ್ತಿರುವಾಗ ಈ ಕೃತ್ಯ ನಡೆದಿದೆ. ಉಗ್ರರ ದಾಳಿಗೆ ತುತ್ತಾದ ಗುಜರಾತ್ ನೋಂದಣಿಯ ಬಸ್ ಅಮರನಾಥ ದೇಗುಲದ ಬೋರ್ಡ್ನೊಂ ದಿಗೆ ರಿಜಿಸ್ಟರ್ ಮಾಡಿಕೊಂಡಿರಲಿಲ್ಲ. ರಾತ್ರಿ 7ರ ನಂತರ ಭದ್ರತೆ ವಾಪಸ್ ಪಡೆದಿದ್ದ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಅವಕಾಶ ಇರಲಿಲ್ಲ. ಆದರೂ ಬಸ್ ಡ್ರೈವರ್ ನಿಯಮ ಮೀರಿ ಬಸ್ ಚಲಾಯಿಸಿದ್ದ.
ಜಮ್ಮುವಿನಿಂದ ಅಮರನಾಥ ದೇಗುಲ 200 ಕಿಲೋ ಮೀಟರ್ ದೂರದಲ್ಲಿದೆ. ಅಮರನಾಥ ಯಾತ್ರೆಯ ದಾರಿಯಲ್ಲಿ 40 ಸಾವಿರ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿತ್ತು. ಗುಪ್ತಚರ ಇಲಾಖೆಯ ಮಾಹಿತಿಯಂತೆ ಉಗ್ರರು ಸುಮಾರು 150 ಯಾತ್ರಿಕರು ಹಾಗೂ 200 ಪೊಲೀಸರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಇನ್ನು ಉಗ್ರರ ದಾಳಿ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಮುಂದೂಡಲಾಗಿದೆ ಎಂಬ ಗುಮಾನಿಗಳು ಕೇಳಿಬರತೊಡಗಿವೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಸರ್ಕಾರ ಮಾಹಿತಿಯನ್ನು ನೀಡಿಲ್ಲ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರಿಕರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಿಎಂ ಮೆಹಬೂಬಾ ಮುಫ್ತಿ ಅನಂತ್ನಾ7ಗ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದು ಪ್ರತಿಯೊಬ್ಬ ಕಾಶ್ಮೀರಿ ತಲೆತಗ್ಗಿಸುವಂತ ಕೃತ್ಯ. ಇದು ಕೇವಲ ನಮ್ಮ ಅತಿಥಿಗಳ ಮೇಲೆ ನಡೆದ ಭಯಂಕರ ದಾಳಿಯಲ್ಲ. ಇಡೀ ಕಾಶ್ಮೀರ ಹಾಗೂ ಕಾಶ್ಮೀರಿಯತ್ ಮೇಲೆ ನಡೆದ ಲಜ್ಜೆಗೆಟ್ಟ ದಾಳಿ. ಉಗ್ರರನ್ನ ಶಿಕ್ಷಿಸದೇ ಬಿಡೋದಿಲ್ಲ ಅಂತಾ ಗುಡುಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೇಡಿಗಳ ಪೈಶಾಚಿಕ ಕೃತ್ಯಕ್ಕೆ ಭಾರತ ತಲೆಬಾಗೋದಿಲ್ಲ ಎಂದು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಒಂದು ವೇಳೆ ಟೆನ್ಶನ್‌ನಿಂದ ತುಂಬಿದ ಜೀವನ ಸಾಗಿಸುತ್ತಿದ್ದೀರಿ ಎಂದಾದರೆ ನಿಮ್ಮ ಎಲ್ಲಾ ಆಲೋಚನೆಗಳ ಬಗ್ಗೆ ನೀವು ಮತ್ತೆ ವಿಚಾರಣೆ ನಡೆಸಬೇಕು. ಯಾಕೆಂದರೆ ನೀವು ವಿಪರೀತ ಟೆನ್ಶನ್‌ನಲ್ಲಿ ಇದ್ದರೆ , ಅದರಿಂದ ನೀವು ಹೊರ ಬರಲು ಇಷ್ಟಪಡದೆ ಇದ್ದರೆ ಮುಂದೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ.
ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ…
ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರಪ್ರದೇಶದ ಡಿಜಿಐಟಿಗಳ ನೆರವಿನೊಡನೆ ದಾಯ ತೆರಿಗೆ – ಕರ್ನಾಟಕ ಮತ್ತು ಗೋವಾದ ಆದಾಯ ತೆರಿಗೆ ನಿರ್ದೇಶನಾಲಯ (ಡಿಜಿಐಟಿ) ದ ತನಿಖಾ ವಿಭಾಗವು ರಾಜ್ಯದಾದ್ಯಂತ ಚಿನ್ನದ ಅಂಗಡಿ ಮೇಲೆ ನಡೆಸಿದ್ದ ದಾಳಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಕಳೆದ ವಾರ ಎರಡು ಪ್ರಸಿದ್ಧ ಆಭರಣ ಶೋ ರೂಂಗಳಾದ ‘ಸುಲ್ತಾನ್’ ಮತ್ತು ‘ಸಿಟಿ ಗೋಲ್ಡ್’ ಮೇಲೆ ಸರಣಿ ದಾಳಿ ನಡೆಸಲಾಗಿತ್ತು.ಎರಡೂ ಆಭರಣ ಮಾರಾಟ ಸಮೂಹವು ಸುಮಾರು 125 ಕೋಟಿ ರೂ.ಗಳ ದಾಖಲೆ ಇಲ್ಲದ ಆದಾಯವನ್ನು…
ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್. ಬಹುಭಾಷೆಯಲ್ಲಿ ಬೇಡಿಕೆ ಇರುವ ಬಹುಮುಖ ಪ್ರತಿಭೆ. ಪೈಲ್ವಾನ್ ಸಕ್ಸಸ್ ಸಂಭ್ರಮ , ಪೈರಸಿ ಸಂಗ್ರಾಮವನ್ನು ಮುಗಿಸಿಕೊಂಡು ಈಗ ಪೋಲೆಂಡ್ ದೇಶಕ್ಕೆ ಹಾರಿದ್ದಾರೆ. ಕಾರಣ ಕೋಟಿಗೋಬ್ಬ -3 ಸಿನಿಮಾದ ಶೂಟಿಂಗ್. ಕಳೆದ ಎರಡು ವರ್ಷದಿಂದ ‘ಕೋಟಿಗೊಬ್ಬ-3’ ಚಿತ್ರದ ಕಾರ್ಯಗಳು ಪ್ರಗತಿಯಲ್ಲಿವೆ. ನಾಲ್ಕೈದು ಶೆಡ್ಯೂಲ್ ಶೂಟಿಂಗ್ ಅನ್ನು ಕೂಡ ಚಿತ್ರತಂಡ ಮುಗಿಸಿಕೊಂಡಿದೆ. ಈಗ ಸೂರಪ್ಪ ಬಾಬು ನಿರ್ಮಾಣದ ಈ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ದೂರದ ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ‘ಕೋಟಿಗೊಬ್ಬ-3’ ಸಿನಿಮಾದ…
ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ.
ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಹೊಸ ಆ್ಯಪ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ಆ್ಯಪ್ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ಗೆ ಅಳವಡಿಸಬಹುದು. ನೆಟ್‌ವರ್ಕ್ ಇಲ್ಲದಿದ್ದರೂ ಈ ಆ್ಯಪ್ ಹಲವು ಕಿಲೋ ಮೀಟರ್‌ಗಳ ದೂರದವರೆಗೂ ವೈ–ಫೈ ಸಿಗ್ನಲ್ ಹೊರಸೂಸುತ್ತದೆ.