ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡ_ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು.

ಗಂಡ ಕಿಟಕಿಯಿಂದ ಹೊರಗೆ ಬಾನಿನತ್ತ ನೋಡುತ್ತಾ ಅವನನ್ನು ಮಹಾ ತುಂಟನನ್ನಾಗಿ ಬೆಳೆಸುತ್ತೇನೆ. ಅವನು ಚೆನ್ನಾಗಿ ಈಜಬೇಕು. ಸೈಕಲ್ ಹೊಡೆಯ ಬೇಕು. ಮರ ಹತ್ತಬೇಕು. ಕ್ರಿಕೆಟ್ ಆಡಬೇಕು. ಕರಾಟೆ ಕಲಿಯಬೇಕು. ಬೆಟ್ಟಗುಡ್ಡ ಹತ್ತಬೇಕು. ಬೈಕ್ ಓಡಿಸಬೇಕು. ನಕ್ಷತ್ರ ವೀಕ್ಷಣೆಯನ್ನು ಮಾಡಿಸ ಬೇಕು. ಲೆಕ್ಕವನ್ನು ಚೆನ್ನಾಗಿ ಕಲಿಸಬೇಕು. ಗಿಟಾರ್ ನುಡಿಸೋಕೆ ಬರಬೇಕು. ಹಾಡೋಕ್ ಕಲಿತ್ರೆ ಇನ್ನೂ ಚೆನ್ನಾಗಿರುತ್ತೆ ಎಂದ.

ಗಂಡ ಇನ್ನೂ ಮಗನಿಗೆ ಕಲಿಸಬೇಕಾದ ಪಟ್ಟಿಯನ್ನು ಮುಂದುವರೆಸುತ್ತಿದ್ದನೋ ಏನೋ?. ಹೆಂಡತಿಯು ಮಧ್ಯೆ ತಲೆಹಾಕಿದಳು. ಸರಿ, ಹೆಣ್ಣು ಮಗು ಹುಟ್ಟಿದರೆ ಅವಳಿಗೇನು ಕಲಿಸುತ್ತೀರಿ? ಕುತೂಹಲದಿಂದ ಕೇಳಿದಳು. ಹೆಣ್ಣು ಮಗಳೆ? ಹೆಣ್ಣು ಮಗಳು ಹುಟ್ಟಿದರೆ ಅವಳಿಗೆ ನಾನ್ಯಾಕೆ ಕಲಿಸಬೇಕು? ಎಂದ ಗಂಡ. ಆಘಾತವಾಯಿತು ಹೆಂಡತಿಗೆ. ಅವಳಿಗರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಉಕ್ಕಿತು. ಯಾಕ್ರಿ ನಮಗೆ ಗಂಡು ಮಗು ಹೆಣ್ಣು ಮಗು ಎರಡೂ ಒಂದೇ ಅಲ್ವ. ಹೆಣ್ಣು ಮಗುವಿಗೆ ಯಾಕೆ ಏನನ್ನೂ ಕಲಿಸಲ್ಲ! ಎಂದಳು.

ಗಂಡನು ನಗುತ್ತಾ, ಅಯ್ಯೋ.. ಹೆಣ್ಣು ಮಕ್ಕಳಿಗೆ ನಾವು ಏನೂ ಕಲಿಸಬೇಕಾಗಿಲ್ಲ ಕಣೆ. ಅವರಿಗೆ ಅದು ದೈವದತ್ತವಾಗಿ ಬಂದಿರು ತ್ತದೆ ಎಂದನು. ಅರ್ಥವಾಗಲಿಲ್ಲ. ಬಿಡಿಸಿ ಹೇಳಿ ಎಂದಳು ಹೆಂಡತಿ. ಹೆಣ್ಣು ಮಗಳಿಗೆ ನಾವು ಕಲಿಸಬೇಕಾಗಿಲ್ಲ. ಅವಳು ನಮಗೆ ಎಲ್ಲವನ್ನೂ ಕಲಿಸುತ್ತಾಳೆ. ನಾನು ಹೇಗೆ ಬಟ್ಟೆ ಹಾಕ್ಕೋಬೇಕು, ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಏನನ್ನು ಮಾತಾಡಬೇಕು, ಏನನ್ನು ಮಾತನಾಡಬಾರದು, ಎಲ್ಲಿಗೆ ಹೋಗಬೇಕು, ಎಷ್ಟು ಹೊತ್ತಿಗೆಲ್ಲ ಮನೆಗೆ ಬರಬೇಕು. ಒಟ್ಟಿನಲ್ಲಿ ಹೇಳುವುದಾದರೆ ಅವಳು ನನಗೆ ಎರಡನೆಯ ಅಮ್ಮನಾಗಿಬಿಡುತ್ತಾಳೆ. ಮಗಳಿಗೆ ತಂದೆಯೇ ಹೀರೋ!. ನಾನು ಬದುಕಿನಲ್ಲಿ ಏನನ್ನೂ ಸಾಧಿಸದಿದ್ದರೂ ಅವಳ ಪಾಲಿಗೆ ನಾನೇ ಹೀರೊ. ಅವಳಿಗೆ ಏನನ್ನಾದರೂ ಕೊಡಿಸಲಾಗದಿದ್ದರೆ, ಅವಳೇ ನನಗೆ ಸಮಾಧಾನ ಹೇಳಿ ಮುಂದಿನ ತಿಂಗಳು ಕೊಡಿಸುವಿಯಂತೆ ಬಿಡಪ್ಪ ಎನ್ನುತ್ತಾಳೆ.

ಅವಳ ಮನಸ್ಸಿನಲ್ಲಿ ತನ್ನ ಅಪ್ಪನಂತಹ ಗಂಡ ಸಿಗಬೇಕು ಎನ್ನುವ ಆಸೆ ಸುಪ್ತವಾಗಿ ಬೆಳೆಯುತ್ತಿರುತ್ತದೆ. ಅವಳಿಗೆ ಮಕ್ಕಳು ಮೊಮ್ಮೊಕ್ಕಳಾದರೂ, ನಾನು ಮಾತ್ರ ಅವಳನ್ನು ಮುದ್ದು ಪುಟಾಣಿಯಂತೆ ಮಾತನಾಡಿಸಬೇಕು, ನೋಡಿಕೊಳ್ಳಬೇಕು, ಮುದ್ದು ಮಾಡಬೇಕು. ಅವಳು ಬೆಳೆಯುವುದೇ ಇಲ್ಲ.

ಅಪ್ಪನ ಮನಸ್ಸನ್ನು ನೋಯಿಸುವವರನ್ನು ಅವಳು ಯಾವ ಕಾರಣಕ್ಕೂ ಕ್ಷಮಿಸಲ್ಲ. ಓ ಮಗಳು ಮಾತ್ರ ನಿಮ್ಮನ್ನು ನೋಡ್ಕೋತಾಳ? ಮಗ ನೋಡ್ಕಳ್ಳಲ್ಲ ಅಂತ ನಿಮ್ಮ ಅಭಿಪ್ರಾಯಾನ? ಇಲ್ಲ ಇಲ್ಲ. ಗಂಡು ಮಕ್ಕಳೂ ನೋಡ್ಕೋತಾರೆ. ಆದರೆ ಅವರಿಗೆ ನಾವೇ ಎಲ್ಲವನ್ನೂ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಯಾರೂ ಕಲಿಸಬೇಕಾಗಿಲ್ಲ. ಎಲ್ಲ ಹುಟ್ಟಿನೊಡನೆಯೇ ಬಂದಿರುತ್ತದೆ ಎಂದನು ಗಂಡ.
ಇರಬಹುದು ರೀ, ಆದರೆ ಅವಳು ಒಂದಲ್ಲ ಒಂದು ದಿನ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋಗಲೇಬೇಕಲ್ಲವೆ? ವಿಷಾದದಿಂದ ನುಡಿದಳು ಹೆಂಡತಿ. ಹೂಂ, ಹೋಗಲೇಬೇಕು. ಆದರೆ, ನಾವು ಸದಾ ಅವಳ ಹೃದಯದಲ್ಲಿ ಬೆಚ್ಚಗೆ ಇರುತ್ತೇವೆ. ಸದಾ ಕಾಲಕ್ಕೂ! ಎಂದನು. ಗಂಡನ ಕಣ್ಣಂಚು ತುಸು ತೇವವಾಗಿತ್ತು.
ಮೂಲ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ತಿಂಡಿಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಹಾಕುವ ಮುನ್ನ ಯೋಚಿಸಿ.
ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ. ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ. ಈ ಅಧ್ಯಯನವನ್ನು ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ 2018 ರಲ್ಲಿ ಮಂಡಿಸಲಾಗಿದೆ. ಆರೋಗ್ಯಕರವಾಗಿದ್ದ ಸುಮಾರು 149…
ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು, ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…
ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅನಾರೋಗ್ಯದ ನೆಪವೊಡ್ಡಿ ಅಂತಿಮ ದರ್ಶನಕ್ಕೆ ಆಗಮಿಸದೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ಮಾಡಲು ಮಂಡ್ಯ ಬೇಕು. ಆದರೆ, ಮಂಡ್ಯ ಜನತೆಯ ಕಷ್ಟ-ಸುಖದಲ್ಲಿ ರಮ್ಯಾ ಭಾಗಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಹೆಚ್. ಗುರು ಹುತಾತ್ಮರಾಗಿದ್ದಾರೆ. ಮಂಡ್ಯದ ಮಾಜಿ ಸಂಸದರಾಗಿರುವ ರಮ್ಯಾ ಯೋಧನ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ…
ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬೇಕು. ನೀವೇ ಓದಿ.
ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.