ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಪ್ಯೂಟರ್ಗಳು, ಕಂಪನಿಯ ಸರ್ವರ್ಗಳನ್ನು ಹ್ಯಾಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಟೀವಿಯನ್ನು ಹ್ಯಾಕ್ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್ಲೈನ್ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ.

ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ ದಂಪತಿ, ಖಾಸಗಿ ಸೈಬರ್ ತಜ್ಞರ ಸಹಾಯದಿಂದ ಅಶ್ಲೀಲ ವೆಬ್ ತಾಣದಿಂದ ವಿಡಿಯೋವನ್ನು ಅಳಿಸಿ ಹಾಕುವಲ್ಲಿ ಸಫಲವಾಗಿದೆ.ಸೂರತ್ನಲ್ಲಿರುವ, ಹೆಚ್ಚಾಗಿ ಸಿರಿವಂತರು ವಾಸಿಸುವ ಬಡಾವಣೆಯ ನಿವಾಸಿಯಾಗಿರುವ ರಾಜೇಶ್ (ಹೆಸರು ಬದಲಿಸಲಾಗಿದೆ) ಎಂಬುವರಿಗೆ ಸ್ಮಾರ್ಟ್ ಟೀವಿ ಮೂಲಕ ಅಶ್ಲೀಲ ವೆಬ್ಸೈಟ್ಗಳನ್ನು ಸಂದರ್ಶಿಸಿ, ವಿಡಿಯೋ ನೋಡುವ ಅಭ್ಯಾಸವಿದೆ. ಒಂದು ದಿನ ಇದೇ ರೀತಿಯ ವಿಡಿಯೋ ನೋಡುತ್ತಿರುವಾಗ,

ರಾಜೇಶ್ ಅವರು ತಮ್ಮ ಪತ್ನಿ ಜತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ವೆಬ್ಸೈಟ್ನಲ್ಲಿ ಗೋಚರವಾಗಿದೆ. ಇದನ್ನು ನೋಡಿ ದಂಗಾದ ಅವರು ಪೊಲೀಸರಿಗೆ ದೂರು ನೀಡಲು ಮುಜುಗರವಾಗಿದೆ. ಹೀಗಾಗಿ ಖಾಸಗಿ ಸೈಬರ್ ತಜ್ಞರ ಮೊರೆ ಹೋಗಿದ್ದಾರೆ.ಆ ತಜ್ಞರು ರಾಜೇಶ್ ಮಲಗುವ ಕೋಣೆಯಲ್ಲೆಲ್ಲಾ ಜಾಲಾಡಿದ್ದಾರೆ. ಯಾವುದೇ ಕ್ಯಾಮೆರಾ ಸಿಕ್ಕಿಲ್ಲ. ವಿಡಿಯೋ ಯಾವ ರೀತಿ ಸೆರೆಯಾಯಿತು ಹಾಗೂ ಅಪ್ಲೋಡ್ ಆಯಿತು ಎಂಬ ವಿಚಾರಕ್ಕಾಗಿ ಸಾಕಷ್ಟುತಲೆಕೆಡಿಸಿಕೊಂಡಿದ್ದಾರೆ. ಕೊನೆಗೆ ಕೋಣೆಯಲ್ಲಿದ್ದ ಟೀವಿ ಮೇಲೆ ಅನುಮಾನ ಬಂದಿದೆ.

ರಾಜೇಶ್ ಅವರು ಅಶ್ಲೀಲ ವೆಬ್ಸೈಟ್ಗಳಿಗೆ ಭೇಟಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಹ್ಯಾಕರ್ ಟೀವಿಯನ್ನು ಕಂಪ್ಯೂಟರ್ ರೀತಿ ಹ್ಯಾಕ್ ಮಾಡಿದ್ದಾನೆ. ಅದರಲ್ಲಿದ್ದ ಕೆಮೆರಾವನ್ನು ನಿಯಂತ್ರಿಸಿ, ತನಗೆ ಬೇಕಾದಾಗ ವಿಡಿಯೋ ಸೆರೆ ಹಿಡಿದಿದ್ದಾನೆ. ಆ ಟೀವಿ ವೈಫೈ ಜತೆ ಸಂಪರ್ಕ ಹೊಂದಿದ್ದ ಕಾರಣ ದೃಶ್ಯಗಳು ನೇರವಾಗಿ ಆತನಿಗೆ ಸಿಕ್ಕಿವೆ. ಬಳಿಕ ಆತ ವಿಡಿಯೋವನ್ನು ಆನ್ಲೈನ್ಗೆ ಅಪ್ಲೋಡ್ ಮಾಡಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ.ರಾಜೇಶ್ ಅವರು ಸೈಬರ್ ತಜ್ಞರ ಸಹಾಯದಿಂದ ಆ ವಿಡಿಯೋವನ್ನು ಅಳಿಸಿ ಹಾಕುವಲ್ಲಿ ಸಫಲರಾಗಿದ್ದಾರೆ.
ಟೀವಿ ತಯಾರಿಕಾ ಕಂಪನಿಗಳು ಹಲವು ಭದ್ರತಾ ಅಂಶಗಳನ್ನು ಅಳವಡಿಸಿರುವುದಾಗಿ ಹೇಳಿದರೂ, ಆನ್ಲೈನ್ ಭದ್ರತೆಯ ಖಾತ್ರಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಗಳ ಮಂಗಳ ಗ್ರಹವು ಸೊರ್ಯನಿಂದ ನಾಲ್ಕನೇ ಗ್ರಹವಾಗಿದ್ದು , ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ ಮರಕ್ಯೊರಿಯ ನಂತರ. ಇಂಗ್ಲೀಷ್ ನಲ್ಲಿ ಇದನ್ನು ಮಾರ್ಸ್ ಎಂದು ಕರೆಯಲಾಗುತ್ತದೆ. ಮಾರ್ಸ ಇದು ರೋಮನ್ನರ್ ದೇವರ ಯುಧದ್ದ ದೇವತೆ ಮಾಡಿದೆ.ಇದನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ.[ಭೂಮಿ]]ಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ.ಆಂಗ್ಲ ಭಾಷೆಯಲ್ಲಿ ‘ಮಾರ್ಸ್'(Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು…
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದ ಗೊಂದಲಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಮಾಹಿತಿ ತಿಳಿದುಕೊಳ್ಳಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿದ್ದಾರೆ ನಮಗೆ ರಾತ್ರಿ 9.30 ಕ್ಕೆ ಪ್ರಚಾರ ನಿಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ….
ತನ್ನ ಪ್ರಿಯತಮೆಯ ಸಾವಿನಿಂದ ನೊಂದಿದ್ದ ಪ್ರಿಯಕರ ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಬಳಿಕ ಮನೆಗೆ ಬಂದು ತಾನೂ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 22 ವರ್ಷದ ವಿತೀಶ್ವರನ್ ಆತ್ಮಹತ್ಯೆಗೆ ಶರಣಾದ ಪ್ರಿಯತಮ. ಈತ ಬಾಲ್ಯದಲ್ಲಿರುವಾಗಲೇ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸಿಸುತ್ತಿದ್ದನು. ವಿತೀಶ್ವರನ್ ವಿದ್ಯಾಭ್ಯಾಸ ಮುಗಿದ ಬಳಿಕ ಬೇರೆ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗಿದ್ದನು. ಅಲ್ಲಿಂದ ಕೆಲವು ತಿಂಗಳ ನಂತರ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದನು. ಕೊಡಲು ಜಿಲ್ಲೆಯ ಪರಮೇಶ್ವಾನಲ್ಲೂರು ಗ್ರಾಮದಲ್ಲಿ ಈ ಹೃದಯ ವಿದ್ರಾವಕ…
21,091 ಕೋಟಿ ರೂ. ವೆಚ್ಚದ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಬಾಕಿ
73 ಕಿ.ಮೀ ಉದ್ದದ 8 ಪಥದ ಪೆರಿಫೆರಲ್ ರಿಂಗ್ ರಸ್ತೆ
ಸುಮಾರು 38,000 ಮರಗಳ ಹನನ..!
ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿ.ಆರ್.ಪಿ.ಎಫ್. ಯೋಧರಿದ್ದ ವಾಹನದ ಮೇಲೆ ಉಗ್ರರ ಆತ್ಮಾಹುತಿ ದಾಳಿ ನಡೆದು 42 ಮಂದಿ ವೀರ ಯೋಧರು ಹುತಾತ್ಮರಾದ ಘಟನೆ ಬಳಿಕ ಉಗ್ರಗಾಮಿಗಳು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಭಾರತದಾದ್ಯಂತ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರವು ಕೂಡ ಈಗಾಗಲೇ ಇದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರಗಳ ಪಟ್ಟಿಯಿಂದ ಕೈಬಿಟ್ಟಿದೆಯಲ್ಲದೆ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡ 200 ರಷ್ಟು ಸುಂಕ ವಿಧಿಸುವ…